೭ ಒ' ಕ್ಲಾಕ್ ಸಂಜೆ ಸೂರ್ಯನೆ

ಚಿತ್ರ: ೭ ಒ' ಕ್ಲಾಕ್
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಎಂ.ಎಸ್.ಮಧುಕರ್
ಗಾಯನ: ಅನುರಾಧ ಶ್ರೀರಾಮ್


ಸಂಜೆ ಸೂರ್ಯನೆ ನನದೊಂದು ಬೇಡಿಕೆ..
ಬೇಗ ಮುಳುಗಿ ಬೇಗ ಎದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಏತಕೆ..
ಬೇಗ ಬೆಳಗಿ ಬೇಗ ಹೋಗು ಬಾ

ಹೇ ಹೇ ಹೇ ಬಿಸೊ ಗಾಳಿ.. ಈಗ ಬೇಗ ಬೇಗ ಹೆಜ್ಜೆ ಹಾಕು
ಹೇ ಹೇ ಹೇ ಓಡೊ ಕಾಲ.. ನಿಂತು ನಿಂತು ಹೊಗೊದು ಸಾಕು
ನನ್ನವನಿಗೆ ಕಾಯುತಿರುವೆ ನಿಮಗೆ ಕಾಣದೆ!

ಸಂಜೆ ಸೂರ್ಯನೆ ನನದೊಂದು ಬೇಡಿಕೆ..
ಬೇಗ ಮುಳುಗಿ.. ಬೇಗ ಎದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಏತಕೆ..
ಬೇಗ ಬೆಳಗಿ ಬೇಗ ಹೋಗು ಬಾ

ನನ್ನ ಗೆಳೆಯ ನಡೆಯುವಾಗ.. ದಾರಿ ಉದ್ದ ಹೂವ ಹಾಸಿ ಹೂಗಳೆ
ಅತ್ತಾ-ಇತ್ತಾ ತಿರುಗುವಾಗ.. ಚಾಮರಾನ ಬೀಸ ಬೇಕು ಎಲೆಗಳೆ

ಆಸೆಯ ಕಣ್ಗಳಲ್ಲಿ
ರೆಪ್ಪೆಯಾ ಕಾವಲಲ್ಲಿ
ಪ್ರೀತಿಯಾ ಕನಸನಿಟ್ಟು
ಕಾದಿರೊ ಹುಡುಗಿಗಿಲ್ಲಿ
ಸ್ವಲ್ಪವಾದ್ರು ಮನಸು ಮಾಡಿ ಮಾತು ಕೇಳಿರಿ!

ಸಂಜೆ ಸೂರ್ಯನೆ ನನದೊಂದು ಬೇಡಿಕೆ..
ಬೇಗ ಮುಳುಗಿ.. ಬೇಗ ಎದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಏತಕೆ..
ಬೇಗ ಬೆಳಗಿ ಬೇಗ ಹೋಗು ಬಾ

ಮೈನ ಕೋಗಿಲೆ ಗಿಳಿಗಳೆ..
ಪ್ರೀತಿ ಇಂದ ಸುಪ್ರಭಾತ ಹಾಡಿ
ಅವನ ನೆನಪೆ ಮಾಡಿಕೊಂಡು..
ಊಟ ನಿದಿರೆ ಮರೆತೆ ಅಂತ ಹೇಳಿ

ಅವನಾ ಮಾತಿಗಾಗಿ..
ಎಲ್ಲಾ ಮೀಸಲಿಟ್ಟೆ
ಅವನಾ ಪ್ರೀತಿಗಾಗಿ..
ನನ್ನೆ ಬರೆದು ಕೊಟ್ಟೆ
ಇದೆ ನಮ್ಮ ಮೊದಲ ಭೇಟಿ ಶುಭವ ಕೋರಿರಿ!

ಸಂಜೆ ಸೂರ್ಯನೆ ನನದೊಂದು ಬೇಡಿಕೆ..
ಬೇಗ ಮುಳುಗಿ.. ಬೇಗ ಎದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಏತಕೆ..
ಬೇಗ ಬೆಳಗಿ ಬೇಗ ಹೋಗು ಬಾ

ಹೇ ಹೇ ಹೇ ಬಿಸೊ ಗಾಳಿ.. ಈಗ ಬೇಗ ಬೇಗ ಹೆಜ್ಜೆ ಹಾಕು
ಹೇ ಓಡೊ ಕಾಲ.. ನಿಂತು ನಿಂತು ಹೊಗೊದು ಸಾಕು
ನನ್ನವನಿಗೆ ಕಾಯುತಿರುವೆ ನಿಮಗೆ ಕಾಣದೆ!

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ