ನೈಜ ಸೌಂದರ್ಯ
ಸಂಪಾದಿಸಿಕೋಮಲೆಯ ಕೋಮಲದ ಕದಪುಗಳ ನುಣ್ಪಿಂದೆ ,
ಕಾಮಿನಿಯ ಕಮನೀಯ ಅಧರಗಳ ರಸದಿಂದೆ
ಕಾಮಾಕ್ಷಿಯರ ಕಮಲಪತ್ರಾಯ ತಾಕ್ಷಿಗಳೆಸವ
ಬೇಟ ಭಾವದಿಂದೆ. ||1||
ಪಾಮರನೆ ಜೀವನವ ಬೆಳಗಿಪಲು ಬಯಸುವರೆ
ಸಮನಿಸಲು ಜರೆಯು ತಾನಿವುಗಳುರೆ ನಶಿಸುವುವು
ಹೇ ಮರುಳ ನಿನ್ನಾತ್ಮನನಡರಿಪುದು ಕಗ್ಗತ್ತಲೆಯ
ಕತ್ತಲೆಯೆ ಕಡೆಗೆ. ||2||
ಆದೊಡನುನಯದ ನೆಡತೆ, ವಿವೇಕ ದೃಢ ಮನವು,
ಸದ್ವಿಚಾರ ಶಾಂತತೆ, ಸರಳಜೀವನ ಬಯಕೆ,
ತೃಪ್ತಿ ಸಚ್ಚರಿತೆ ಮತ್ತದರೊಡನೆ ಹೃದಯಗಳ ಸಮಾನತೆಯ
ಸಾನುರಾಗದ ಸೊಡರ ಕುಡಿಯು. ||3||
ಇವಿಲ್ಲದನು ನಾನೊಲ್ಲೆ ಆ ನಿನ್ನ ಅಧರ ರಸವನು,
ಕೊಮಲದ ಕದಪುಗಳ, ಮತ್ತೆ ಆ ನಿನ್ನ
ಹವಳ ತುಟಿಯ. ||4||
~~♣♣♣--
- ಇಂಗ್ಲಿಷ್ ಕವಿ:ಥಾಮಸ್ ಕೇರ್ವ್-ನ(1594-1640)
- ಕವಿ:ಥಾಮಸ್ ಕೇರ್ವ್-ನ(1594-1640):"ತಿರಸ್ಕಾರವ ಮರಳಿಸಿದೆ" ಕವನದ ಕನ್ನಡ ಅನುವಾದ- ಅನಾಮಿಕ)
- 'ಗೋಲ್ಡನ್ ಟ್ರಜರಿ' ಕವನ ಸಂಗ್ರಹದಲ್ಲಿ 'ಟ್ರು ಬ್ಯೂಟಿ' ಹೆಸರಿನಲ್ಲಿ ಮೊದಲ ಮೂರು ಪದ್ಯಗಳು ಮಾತ್ರಾ ಇವೆ. ಅವನ್ನು ಮಾತ್ರಾ ಅನುವಾದಿಸಿದೆ.(ಅದರಲ್ಲಿ ಕವನದ ಮೂಲ ಭಾವ ಬದಲಾವಣೆ ಆಗಿದೆ).
- ಇದು ಇಂಗ್ಲಿಷ್ ಭಾಷೆಯಲ್ಲಿನ ನೂರು ಅತ್ಯುತ್ತಮ ಕವನಗಳು (ಭಾವಗೀತಾತ್ಮಕ) - ಎರಡನೇ ಸರಣಿಯಲ್ಲಿ ಸೇರಿದೆ. Disdain Returned.
THE TRUE BEAUTY
ಸಂಪಾದಿಸಿ
He that loves a rosy cheek
Or a coral lip admires,
Or from star-likeeyes admires,
Fuel to maitain his fires;
As old Time makes these decay,
So his flames must waste away.
But smooth and steadfast mind,
Gentle thoughts, and calm desires,
Hearts with equal love combined,
Kindle never dying fires:-
Where these are not, I despise
Lovely cheeks or lips or eyes.
(No tears, Celia, now shall win
My resolv'd heart to return;
I have search'd thy soul within,
And find nought but pride and scorn:
I have learn'd thy arts, and now
Can disdain as much as thou.
Some pow'r, in my revenge, convey
That love to her I cast away. )
T.Carew. (A17th.C .Poet )
(Golden Treasury -'THE TRUE BEAUTY'- poem 87, page74)
( 1874 Edition, Edited by Mr. F.T.Palgrave.
Published by Macmillan and company
London and New York )
ನೋಡಿ
ಸಂಪಾದಿಸಿ- ಇಂಗ್ಲಿಷ್ ಸಾಹಿತ್ಯ
- ಒಂದು ಬಯಕೆ
- ಪ್ರಿಯತಮೆಗೆ
- ಪ್ರಿಯತಮೆ ಆಂಥಿಯಾಳಿಗೆ
- ನ್ಯೂಮನನ `ಲೀಡ್, ಕೈಂಡ್ಲಿ ಲೈಟ್: ಕರುಣಾಳು ಬಾ ಬೆಳಕೆ
- Sally in Our Alley: ಬಾಲ್ಯ ಪ್ರೇಮ - (12 ಪ್ರಾಯದ ಬಾಲಿಶ ಪ್ರೇಮ)
- THE TRUE BEAUTY;-ಥಾಮಸ್ ಕೇರ್ವ್(1594-1640)- ನೈಜ ಸೌಂದರ್ಯ
ಮೂಲ
ಸಂಪಾದಿಸಿ- ಕವನ: Disdain Returned.
- The text comes under creative commons.
- Text is available under the Creative Commons Attribution-ShareAlike License
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ- ↑ Disdain Returned.
- ↑ (Golden Treasury -'THE TRUE BEAUTY'- poem 87, page74)