ಬಾಲ್ಯ ಪ್ರೇಮ ಸಂಪಾದಿಸಿ

(12 ಪ್ರಾಯದ ಹುಡುಗನ ಬಾಲಿಶ ಪ್ರೇಮ ಕಥೆ- ಕವಿ ಎಚ್.ಕ್ಯಾರಿ)

ಹುಡುಗಿಯರೊಳೆಲ್ಲರೊಳು ಅವಳು ಬಹು ಚದುರೆ,
     ಹುಡುಕಿದರು ಸಿಗಲಾರಳಂಥ ಚಲುವೆ;
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ,
     ನಾನಿರುವ ಬೀದಿಯೊಳಗವಳ ವಸತಿ
ರತುನದಂಥವ ಳವಳು ಸಿಹಿ ಮುದ್ದು ಹುಡುಗಿ,
    ಹುಡುಕಿದರು ಸಿಗಲಾರ ಳವಳ ಸರಿ ಜಗದಿ;
ಅವಳೆನ್ನ ಹೃದಯಕ್ಕೆ ಮೆ ಚ್ಚಿ ನೊ ಡ ತಿ,
    ನಾನಿರುವ ಬೀದಿಯೊಳಗವಳ ವಸತಿ. || 1 ||

ಬುಟ್ಟಿಗಳ ನೇಯುವನು ಅವಳ ತಂದೆ
    ಮತ್ತದನು ಕೂಗುವನು ಬೀದಿ ಬೀದಿಯಿಂದೆ;
ತಾಯಿ ಮಾರುವಳು ಸಿಹಿಯ ತಿನಸುಗಳನು;
   ಆಸೆ ಮೂಡುವ ತೆರದಿ ಕೊಳ್ಳಲವುಗಳನು;
ಆದರವರಲ್ಲದಿನ್ನಾವ ಜೋಡಿ, ಪಡೆಯಲಾರರು
    ಇವಳ ಸರಿ-ಸಮ ಸಿಹಿ-ಮುದ್ದು ಕುವರಿ.
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ
   ನಾನಿರುವ ಬೀದಿಯೊಳಗವಳ ವಸತಿ. || 2 ||


ನಾ ಬಿಡುವೆ ಕೆಲಸವನು ಅವಳು ಬಳಿ ಇರಲು,
        ಅವಳಲ್ಲಿ ಎನಗಿರುವ ಪ್ರೀತಿ ಯಷ್ಟೊಂದು;
ಬರುವನೆನ್ನೊಡೆಯ ಶುದ್ಧ ತಿಗುಳನಂತೆ,
        ಹೊಡೆಯುವನೆನಗೆ ದನವ ಬಡಿಯುವಂತೆ-
ಹೊಡೆದುಕೊಳಲವನು ಅವನ ಕೈಲಾಗುವಷ್ಟು ,
        ಆಕೆ ಯೊಬ್ಬಳಿಗಾಗಿ ತಾಳಿಕೊಳುವೆ ನಷ್ಟು.
ಅವಳೆನ್ನ ಹೃದಯಕ್ಕೆ ಮೆಚ್ಚಿನೊಡತಿ,
        ನಾನಿರುವ ಬೀದಿಯೊಳಗವಳವಸತಿ. || 3 ||

ಏಳು ದಿನಗಳು ತಾನೆ ಒಂದು ವಾರದೊಳಗೆ,
        ಹೇಳುವೆನು ಸತ್ಯವನೆ ಗುಟ್ಟೇನು ನಿಮ್ಮೊಳೆನಗೆ-
ಇರುವುದೊಂದೇ ದಿನದಿ ಪ್ರೀತಿ ಅವುಗಳಲ್ಲೆನಗೆ,
       ಅದು ಬಹುದು ಶನಿ-ಸೋಮವಾರಗಳ ನಡುವೆ;
ಅಂದು ನಾ ಸೊಗಸಿನಲಿ ತೋಟಗಳ ನಡುವೆ,
       ಆಕೆ ಯೊಡಗೂಡಿ ಬಲು ಮೋಜಿನಲಿ ನೆಡೆವೆ.
ಅವಳೆನ್ನ ಹೃದಯಕ್ಕೆ ಮ ಚ್ಚಿನೊಡತಿ,
       ನಾನಿರುವ ಬೀದಿ ಯೊಳಗವಳ ವಸತಿ. || 4 ||


ಕರೆದೊಯ್ವ ಎನ್ನೊಡೆಯ ನೆನ್ನ ಗುಡಿಯ ಬಳಿಗೆ,
       ಮತ್ತೆನಗೆ ಸಿಕ್ಕೀತು ತೆಗಳಿಕೆಯೆ ಕಡೆಗೆ,
ಕಾರಣವು, ಜಾರುವೆನು ನಾನವನನುಳಿದು,
        ಆರತಿಯು ನೆಡೆದಿರಲು, ಚಾವಡಿಯನಿಳಿದು;
ಸಂಭ್ರಮದಿ ನಡೆದಿರಲು ಪೂಜೆ ಗುಡಿಯಲ್ಲಿ,
         ನುಸುಳಿ ನಾ ನೆಡೆದಿರುವೆನವಳು ಇರುವಲ್ಲಿ.
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ ,
         ನಾನಿರುವ ಬೀದಿಯೊಳಗವಳ ವಸತಿ. || 5 ||

ಸುಗ್ಗಿ ಬರುವುದು ಸಂತಸವ ತರಲು ಮನಕೆ,
        ಅಂದು ನಾ ದುಡಿದ ಹಣವೆಲ್ಲದರ ಎಣಿಕೆ,
ಕೂಡಿಡುವೆನದನೆಲ್ಲ ಪೆಟ್ಟಿಗೆಯ ಒಳಗೆ,
         ಕೊಂಡೊಯ್ವೆ ನೆಲ್ಲವನು ನನ್ನ ರಗಿಣಿಯ ಬಳಿಗೆ;
ಹತ್ತು ಸಾವಿರವಿರಲಿ ನಾದುಡಿದ ಹೊನ್ನು,
         ಹೃದಯದರಸಿಗೆ ಕೊಡುವೆ ನದನೆಲ್ಲವನ್ನು;
ಅವಳೆನ್ನ ಹೃದಯಕ್ಕೆ ಮೆಚ್ಚಿ ನೊಡತಿ ,
       ನಾನಿರುವ ಬೀದಿಯಳಗವಳ ವಸತಿ. || 6 ||


ಎನ್ರ್ನೆಡೆಯನೂ ನೆರೆಯವರು ಎಮ್ಮ ನೋಡಿ,
        ಮಾಡುವರು ಹಾಸ್ಯವನೆಮಗೆ ಕೈಯ ತೋರಿ
 ಆದರೇ ನೆನಗೆ , ಮತ್ತೆ ನಾನನವಳಿಗಾಗಿ
        ಸಂತಸದಿ ಇದ್ದೇನು ಅವಳ ದಾಸನಾಗಿ;
ಕಳೆದರಿನ್ನೇಳು ವರುಷ (ಅಯ್ಯೋ) ಬಹಳ ಸಮಯ,
       ಓ! ಆದರೇನಂದವಳು ಎನ್ನ ಕುಸುಮ,
ಓ! ಅಂದು ನಮಗಿಬ್ಬರಿಗು ಮದುವೆ-ಯೊಂದೆ ಶಯ್ಯೆ ,
       ಆದರೀ ಊರಿನೊಳಗಲ್ಲ ಆ ಸುಖದ ಶಯ್ಯೆ ! || 7 ||

(18ನೇ ಶತಮಾನದ ಕವಿ ಹೆಚ್..ಕ್ಯಾರಿ ಯ ‘ಸ್ಯಾಲಿ ಇನ್ ಅವರ್
(ಯ್ಯಾಲಿ)ವ್ಯಾಲಿ” ಕವನದ ಭಾವಾನುವಾದ (ಅನಾಮಿಕ- ಕಾಪಿರೈಟ್ ಮುಕ್ತ)

ಇಂಗ್ಲಿಷ್ ಮೂಲ ಸಂಪಾದಿಸಿ


SALLY IN OUR ALLEY

Of all the girls that are so smart
      There’s none like pretty Sally;
She is the darling of my heart,
      And she lives in our alley.
There is no lady in the land
      Is half so sweet as Sally;
She is the darling of my heart,
  And she lives in our alley. ( 1

Her father he makes cabbage-nets
         And through the streets does cry ‘em;
Her mother she sells laces long
      To such as please to buy them:
But sure such folks could ne’er beget
      So sweet a girl as sally!
She is the darling of my heart,
     And she lives in our alley 2

When she is by, I leave my work,
   I love her so sincerely;
My master comes like any ‘Turk,
   And bangs me most severely –
But let him bang his bellyful,
   I‘ll bear it all for Sally.
She is the darling of my heart
  And she lives in our alley. 3

Of all the days that ‘s in a week
  I dearly love but one day –
And that is the day that comes betwixt
  A Saturday and Monday;
For then I ‘m drest all in my best
   To walk abroad with Sally;
She is the darling of my heart
     And she lives in our alley. 4

My master carries me to church,
    And often am I blamed
Because I leave him in the lurch
   As soon as text is named;
I leave the church in sermon-time
  And slink away tosally;
She is the darling of my heart
   And she lives in our alley. 5

When Christmas comes again
      O then I shall have money;
I will hoard it up, and box it all,
      I‘ll give to my honey;
I would it were ten thousand pound,
    I would give it allto Sally;
She is the darling of my heart
   And she lives in our alley . 6

My master and the neighbours all
   Make game of me and Sally,
And, but for her, I‘d better be
    A slave and row a galley;
But when my sevenlong years are out
   O then I ‘ll marry Sally,-
O then we‘ll wed and then we’ll bed,
     But not in our alley! 7
[೧] [೨]

  • H. Carry,( Carey, Henry, English poet)(18th C. Poet )
  • (Taken from the book ‘Golden Treasury’

Poem cxxI (121), page-124, 1874 edition
Edited by F.T. Palgrave.

  • Text is available under the Creative Commons Attribution-Share Alike License:
  • ಮೂಲ ಕವನಕ್ಕೆ ಕೊಂಡಿ:Sally in Our Alley

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. H. Carry,( Carey, Henry, English poet)(18th C. Poet )(Taken from the book ‘Golden Treasury’Poem cxxI (121),page-124, 1874 edition-Edited by F.T. Palgrave.
  2. https://en.wikisource.org/wiki/Sally_in_Our_Alley_(1729)