ಪಂಪಭಾರತ ತ್ರಯೋದಶಾಶ್ವಾಸಂ

  • (XXIII.VII.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ತ್ರಯೋದಶಾಶ್ವಾಸಂ ಸಂಪಾದಿಸಿ

ಕುರುಕ್ಷೇತ್ರ ಯುದ್ಧದಲ್ಲಿ ಶಲ್ಯನಿಗೆ ವೀರ ಪಟ್ಟ
ಕಂ|| ಶ್ರೀ ದಯಿತನ ಹರಿಗನ ಸಂ
ಪಾದಿತಭೂಜವೀರ್ಯಮೞ್ಕೞಂ ತನಗೆರ್ದೆಯೊಳ್|
ಚೋದಿಸೆ ಪರಸಿದನಾಶೀ
ರ್ವಾದಪರಂಪರೆಯಿನಾಗಳಂತಕತನಯಂ|| ೧ ||
ಪದ್ಯ-೧:ಪದವಿಭಾಗ-ಅರ್ಥ:ಶ್ರೀ ದಯಿತನ (ಜಯಲಕ್ಷ್ಮೀಪತಿಯಾದ) ಹರಿಗನ ಸಂಪಾದಿತ ಭೂಜವೀರ್ಯಂ (ಅರ್ಜುನನು ಗಳಿಸಿದ ಭುಜಪರಾಕ್ರಮವು) ಅೞ್ಕೞಂ (ಪ್ರೀತಿಯನ್ನು) ತನಗೆ ಎರ್ದೆಯೊಳ್ ಚೋದಿಸೆ (ತನ್ನ ಹೃದಯದಲ್ಲಿ ಸಂತೋಷವನ್ನು ಹೆಚ್ಚಿಸುತ್ತಿರಲು ) ಪರಸಿದನು ಆಶೀರ್ವಾದ ಪರಂಪರೆಯಿಂ ಆಗಳ್ ಅಂತಕತನಯಂ (ಯಮನ ಮಗ) (ಆಗ ಅವನನ್ನು ಹರಕೆಯ ಪರಂಪರೆಯಿಂದ ಧರ್ಮರಾಯನು ಆಶೀರ್ವದಿಸಿದನು.)
ಪದ್ಯ-೧:ಅರ್ಥ:ಜಯಲಕ್ಷ್ಮೀಪತಿಯಾದ ಅರ್ಜುನನು ಗಳಿಸಿದ ಭುಜಪರಾಕ್ರಮವು ತನ್ನ ಹೃದಯದಲ್ಲಿ ಸಂತೋಷವನ್ನು ಹೆಚ್ಚಿಸುತ್ತಿರಲು ಆಗ ಅವನನ್ನು ಹರಕೆಯ ಪರಂಪರೆಯಿಂದ ಧರ್ಮರಾಯನು ಆಶೀರ್ವದಿಸಿದನು.
ಪರಸಿ ಸಕಳಾವನೀತಳ
ಭರಮಿನಸುತನೞಿಯೆ ಹರಿಗನಿಂದೆನಗೀಗಳ್|
ದೊರೆಕೊಂಡುದೆಂದೊಡೇ ಬಿ
ತ್ತರಿಸಿದನೋ ರಿಪುಕುರಂಗಕಂಠೀರವನಂ|| ೨ ||
ಪದ್ಯ-೨:ಪದವಿಭಾಗ-ಅರ್ಥ:ಪರಸಿ (ಹರಸಿ) ಸಕಳ ಅವನೀತಳಭರಂ (ಸಮಸ್ತ ಭೂಮಂಡಲದ ಭಾರವು) ಇನಸುತನು ಅೞಿಯೆ (ಕರ್ಣನು ಸಾಯಲು) ಹರಿಗನಿಂದ ಎನಗೆ ಈಗಳ್ ದೊರೆಕೊಂಡುದು (ತನಗೆ ಈಗ ಅರ್ಜುನನಿಂದ ಲಭಿಸಿತೆಂದು) ಎಂದೊಡೆ ಏ ಬಿತ್ತರಿಸಿದನೋ ರಿಪುಕುರಂಗಕಂಠೀರವನಂ (ಅರ್ಜುನನ್ನು) ( ಹೇಳಿ ಧರ್ಮರಾಯನು ಅರ್ಜುನನನ್ನು ಎಷ್ಟುಹೊಗಳಿದನೊ! ವಿಶೇಷವಾಗಿ ಹೊಗಳಿದನು)
ಪದ್ಯ-೨:ಅರ್ಥ: ೨. ಕರ್ಣನು ಸಾಯಲು ಸಮಸ್ತ ಭೂಮಂಡಲದ ಭಾರವು ತನಗೆ ಈಗ ಅರ್ಜುನನಿಂದ ಲಭಿಸಿತೆಂದು ಹೇಳಿ ಧರ್ಮರಾಯನು ಅರ್ಜುನನನ್ನು ವಿಶೇಷವಾಗಿ ಹೊಗಳಿದನು!
ವ|| ಅನ್ನೆಗಮತ್ತ ದುರ್ಯೋಧನನತಿ ಸಂಭ್ರಮಾಕುಳಿತ ಪರೀತ ಪರಿವಾರಜನೋಪನೀತ ಚಂದನಕರ್ಪೂರುಮಿಶ್ರಿತ ಹಿಮಶಿಶಿರಧಾರಾಪರಿಷೇಕದಿಂದೆಂತಾನುಂ ಮೂರ್ಛೆಯಿಂದೆೞ್ಚತ್ತು ಕರ್ಣನಂ ನೆನೆದು ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗಣ್ಮೆ ಸೈರಿಸಲಾಱದೆ-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಇತ್ತ ದುರ್ಯೋಧನನು (ಅಷ್ಟರಲ್ಲಿ ಆ ಕಡೆ ದುಯೋಧನನು) ಅತಿ ಸಂಭ್ರಮಾಕುಳಿತ ಪರೀತ (ತನ್ನನ್ನು ಸುತ್ತುವರಿದಿದ್ದು ಅತ್ಯಂತ ಸಂಭ್ರಮದಿಂದ ವ್ಯಾಕುಳಿತರಾದ/ ದುಃಖದಿಂದ ಕೂಡಿದ) ಪರಿವಾರಜನ ಉಪನೀತ (ಸೇವಕಜನರಿಂದ ತರಲ್ಪಟ್ಟ) ಚಂದನಕರ್ಪೂರುಮಿಶ್ರಿತ ಹಿಮಶಿಶಿರಧಾರಾ ಪರಿಷೇಕದಿಂದೆ ಎಂತಾನುಂ (ಶ್ರೀಗಂಧ ಮತ್ತು ಪಚ್ಚಕರ್ಪೂರ ಮಿಶ್ರಿತವಾದ ಮಂಜಿನಷ್ಟು ತಣ್ಣಗಿರುವ ನೀರಿನಿಂದ ಸಿಂಪಿಸಲ್ಪಟ್ಟು ಹೇಗೋ ) ಮೂರ್ಛೆಯಿಂದ ಎೞ್ಚತ್ತು ಕರ್ಣನಂ ನೆನೆದು (ಮೂರ್ಛೆಯಿಂದ ಎಚ್ಚೆತ್ತು, ಕರ್ಣನನ್ನು ಜ್ಞಾಪಿಸಿಕೊಂಡು) ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗೆ ಅಣ್ಮೆ (ನೆನೆಸಿದ ಮಾತ್ರಕ್ಕೆ ದುಖಸಮುದ್ರವು ದಡವನ್ನು ಮೀರಿ ಉಕ್ಕಲು) ಸೈರಿಸಲಾಱದೆ (ಸೈರಿಸಲಾರದೆ)-
ವಚನ:ಅರ್ಥ:ಅಷ್ಟರಲ್ಲಿ ಆ ಕಡೆ ದುಯೋಧನನು ತನ್ನನ್ನು ಸುತ್ತುವರಿದಿದ್ದು ಅತ್ಯಂತ ಸಂಭ್ರಮದಿಂದ ವ್ಯಾಕುಳಿತರಾದ ಸೇವಕಜನರಿಂದ ತರಲ್ಪಟ್ಟ ಶ್ರೀಗಂಧ ಮತ್ತು ಪಚ್ಚಕರ್ಪೂರ ಮಿಶ್ರಿತವಾದ ಮಂಜಿನಷ್ಟು ತಣ್ಣಗಿರುವ ನೀರಿನಿಂದ ಸಿಂಪಿಸಲ್ಪಟ್ಟು ಹೇಗೋ ಮೂರ್ಛೆಯಿಂದ ಎಚ್ಚೆತ್ತನು. ಕರ್ಣನನ್ನು ಜ್ಞಾಪಿಸಿಕೊಂಡು ನೆನೆಸಿದ ಮಾತ್ರಕ್ಕೆ ದುಖಸಮುದ್ರವು ದಡವನ್ನು ಮೀರಿ ಉಕ್ಕಲು ಸೈರಿಸಲಾರದೆ- ದುಃಖಿಸಿದನು;

ದುರ್ಯೋಧನನ ವಿಲಾಪ ಸಂಪಾದಿಸಿ

ಉ|| ನೀನುಮಗಲ್ದೆಯಿನ್ನೆನಗೆ ಪೇೞ್ ಪೆಱರಾರೆನಗಾಸೆ ನಿನ್ನನಿ
ನ್ನಾನುಮಗಲ್ವೆನೇ ಕೆಳೆಯ ಬೆನ್ನನೆ ಬಂದಪೆನಾಂತರಂ ಯಮ|
ಸ್ಥಾನಮನೆಯ್ದಿಸುತ್ತಿದುವೆ ದಂದುಗಮೆಂತೆರ್ದೆಮುಟ್ಟಿ ಕೂರ್ತು ಪೇೞು
ಮಾನಸವಾೞನಂಗವಿಷಯಾಧಿಪ ನೀಂ ಪೊಱಗಾಗೆ ಬಾೞ್ವೆನೇ|| ೩ ||
ಪದ್ಯ-೩:ಪದವಿಭಾಗ-ಅರ್ಥ:ನೀನುಂ ಅಗಲ್ದೆ ಯಿನ್ನೆನಗೆ ಪೇೞ್ ಪೆಱರ್ ಆರೆf ಎನಗೆ ಆಸೆ (ನೀನು ಕೂಡ ನನ್ನನ್ನು ಅಗಲಿ ಹೋದೆ. ನನಗೆ ಆಸೆಯಾಗಿರುವವರು ಬೇರೆ ಯಾರು?) ನಿನ್ನನು ಇನ್ನಾನುಂ ಅಗಲ್ವೆನೇ (ನಿನ್ನನ್ನು ಬಿಟ್ಟು - ಅಗಲಿ ನಾನು ಇರಬಲ್ಲೆನೆ?) ಕೆಳೆಯ ಬೆನ್ನನೆ ಬಂದಪೆನು ಆಂತರಂ (ಎದುರಿಸಿದವರನ್ನು) ಯಮಸ್ಥಾನಮಂ ಎಯ್ದಿಸುತ್ತ (ಸ್ನೇಹಿತನೇ ಪ್ರತಿಭಟಿಸಿದವರನ್ನು ಯಮನ ಮನೆಗೆ ಸೇರಿಸುತ್ತ ನಿನ್ನ ಬೆನ್ನಿನ ಹಿಂದೆಯೇ ಬರುತ್ತೇನೆ,) ಇದುವೆ ದಂದುಗಂ (ದು‍ಃಖ, ಕರ್ತವ್ಯ) ಅಂತೆ ಎರ್ದೆಮುಟ್ಟಿ ಕೂರ್ತು (ಇದೇ ನನಗಿರುವ ಕರ್ತವ್ಯ. ಹೃದಯದಂತರಾಳದಿಂದ ಪ್ರೀತಿಸಿದ) ಪೇೞು- ಹೇಳು, ಮಾನಸವಾೞಂ (ಮನುಷ್ಯ ಬಾಳನ್ನು) ಅಂಗವಿಷಯಾಧಿಪ ನೀಂ ಪೊಱಗಾಗೆ (ನೀನು ಹೊರಗಾಗೆ- ಅಗಲಿದ ಮೇಲೆ ) ಬಾೞ್ವೆನೇ (ಹೃದಯದಂತರಾಳದಿಂದ ಪ್ರೀತಿಸಿದ ನೀನು ಅಗಲಿದ ಮೇಲೆ ಕರ್ಣ, ನಾನು ಮನುಷ್ಯ ಬಾಳನ್ನು ಬಾಳಬಲ್ಲೆನೆ? )
ಪದ್ಯ-೩:ಅರ್ಥ:ನೀನು ಕೂಡ ನನ್ನನ್ನು ಅಗಲಿ ಹೋದೆ. ನನಗೆ ಆಸೆಯಾಗಿರುವವರು ಬೇರೆ ಯಾರು? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ? ಸ್ನೇಹಿತನೇ ಪ್ರತಿಭಟಿಸಿದವರನ್ನು ಯಮನ ಮನೆಗೆ ಸೇರಿಸುತ್ತ ನಿನ್ನ ಬೆನ್ನಿನ ಹಿಂದೆಯೇ ಬರುತ್ತೇನೆ, ಇದೇ ನನಗಿರುವ ಕರ್ತವ್ಯ. ಹೃದಯದಂತರಾಳದಿಂದ ಪ್ರೀತಿಸಿದ ನೀನು ಅಗಲಿದ ಮೇಲೆ ಕರ್ಣ, ನಾನು ಮನುಷ್ಯ ಬಾಳನ್ನು ಬಾಳಬಲ್ಲೆನೆ?
ಚಂ|| ಒಡಲೆರಡೊಂದೆ ಜೀವಮಿವರ್ಗೆಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಯಾಯ್ತು ನಿನ್ನಸು ಕಿರೀಟಯ ಶಾತಶರಂಗಳಿಂದೆ ಪೊ|
ಪೊಡಮೆನಗಿನ್ನು ಮೀಯೊಡಲೊಳಿರ್ದುದು ನಾಣಿಲಿ ಜೀವಮೆಂದೊಡಾ
ವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಮೞ್ಕಱುಮಂಗವಲ್ಲಭಾ|| ೪ ||
ಪದ್ಯ-೪:ಪದವಿಭಾಗ-ಅರ್ಥ:ಒಡಲು ಎರಡು ಒಂದೆ ಜೀವಂ ಇವರ್ಗೆ ಎಂಬುದನೆ ಎಂಬುದು ಲೋಕಂ (ಶರೀರ ಎರಡು- ಒಂದು ಪ್ರಾಣ ಎಂದು ಲೋಕವು ಹೇಳುತ್ತಿದ್ದಿತು.) ಈಗಳ್ ಆ ನುಡಿ ಪುಸಿಯಾಯ್ತು (ಈಗ ಆ ಮಾತು ಸುಳ್ಳಾಯಿತು.) ನಿನ್ನಸು ಕಿರೀಟಯ ಶಾತಶರಂಗಳಿಂದೆ ಪೊಪೊಡಂ ಎನಗಿನ್ನುಂ ಈ ಒಡಲೊಳು ಇರ್ದುದು ನಾಣಿಲಿ ಜೀವಂ (ನಿನ್ನ ಪ್ರಾಣವು ಅರ್ಜುನನ ಹರಿತವಾದ ಬಾಣಗಳಿಂದ ಹೋದರೂ ನನ್ನ ನಾಚಿಕೆಯಿಲ್ಲದ ಜೀವವು ಇನ್ನೂ ಶರೀರದಲ್ಲಿದೆ ಇದು ನಾಚಿಕೆ.) ಎಂದೊಡೆ ಆವೆಡೆಯೊಳೆ ನಿನ್ನೊಳು ಎನ್ನ ಕಡುಗೂರ್ಮೆಯುಂ (ಕಡು ಕೂರ್ಮೆ - ಪ್ರೀತಿ) ಅೞ್ಕಱುಂ ಅಂಗವಲ್ಲಭಾ (ನಿನ್ನ ನನ್ನ ಅತಿಶಯವಾದ ಪ್ರೀತಿಯೂ ಸ್ನೇಹವೂ ಆವೆಡೆಯಲ್ಲಿದೆ? ಕರ್ಣಾ)
ಪದ್ಯ-೪:ಅರ್ಥ: ದುಯೋಧನ ಕರ್ಣರಲ್ಲಿ ಶರೀರ ಎರಡು- ಒಂದು ಪ್ರಾಣ ಎಂದು ಲೋಕವು ಹೇಳುತ್ತಿದ್ದಿತು. ಈಗ ಆ ಮಾತು ಸುಳ್ಳಾಯಿತು. ನಿನ್ನ ಪ್ರಾಣವು ಅರ್ಜುನನ ಹರಿತವಾದ ಬಾಣಗಳಿಂದ ಹೋದರೂ ನನ್ನ ನಾಚಿಕೆಯಿಲ್ಲದ ಜೀವವು ಇನ್ನೂ ಶರೀರದಲ್ಲಿದೆ ಎಂದರೆ ಇದು ನಾಚಿಕೆ. ನಿನ್ನ ನನ್ನ ಅತಿಶಯವಾದ ಪ್ರೀತಿಯೂ ಸ್ನೇಹವೂ ಆವೆಡೆಯಲ್ಲಿದೆ? ಕರ್ಣಾ!
ಮ|| ಅಱಿಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನಾ
ನಱಿವೆಂ ಮುನ್ನಱಿದಿರ್ದುಮೆನ್ನರಸನಾನೇಕಿತ್ತೆನಿಲ್ಲೇಕೆ ಪೇ
ೞಱಿಪಲ್ಕೊಲ್ದೆನುಮಿಲ್ಲ ಕಾರ್ಯವಶದಿಂ ಕೂರ್ಪಂತವೋಲ್ ನಿನ್ನನಾಂ
ನೆರೆ ಕೊಂದೆಂ ಮುಳಿಸಿಂದಮಂಗನೃಪತೀ ಕೌಂತೇಯರೇಂ ಕೊಂದರೇ|| ೫ ||
ಪದ್ಯ-೫:ಪದವಿಭಾಗ-ಅರ್ಥ:ಅಱಿಯಂ ಸೋದರನೆಂದು ಧರ್ಮತನಯಂ (ಧರ್ಮರಾಯನು ನೀನು ಅವನ ಜೊತೆಯಲ್ಲಿ ಹುಟ್ಟಿದವನೆಂಬುದನ್ನು ತಿಳಿಯನು) ನಿರ್ವ್ಯಾಜದಿಂ ನಿನ್ನನು ಆನು ಅಱಿವೆಂ (ಸಹಜವಾಗಿಯೇ ನೀನು ಯಾರೆಂಬುದನ್ನು ನಾನು ಬಲ್ಲೆ;) ಮುನ್ನಱಿದಿರ್ದುಂ ಎನ್ನ ಅರಸಂ ಆನು ಏಕೆ ಇತ್ತೆನಿಲ್ಲ (ಮೊದಲು ತಿಳಿದಿದ್ದರೂ ನನ್ನ ದೊರೆತನವನ್ನು ನಾನು ನಿನಗೇಕೆ ಕೊಡಲಿಲ್ಲ?) ಏಕೆ ಪೇೞ್ ಅಱಿಪಲ್ಕೆ ಒಲ್ದೆನುಮಿಲ್ಲ (ನಿನಗೆ ತಿಳಿಯಪಡಿಸುವುದಕ್ಕೂ ಇಷ್ಟಪಡಲಿಲ್ಲ? ಏಕೆ? ಏಕೆಂದರೆ-) ಕಾರ್ಯವಶದಿಂ ಕೂರ್ಪಂತವೋಲ್ ನಿನ್ನನು ಆಂ ನೆರೆ ಕೊಂದೆಂ (ಸ್ವಕಾರ್ಯಸಾಧನೆಗಾಗಿ ಪ್ರೀತಿಸುವ ಹಾಗೆ ನಟಿಸಿ ನಿನ್ನನ್ನು ನಾನೇ ಕೊಂದೆನು.) ಮುಳಿಸಿಂದಂ (ಪಾಂಡವರ ಮೇಲಿನ ಕೋಪದಿಂದ ನ್ನನ್ನು ನಾನೇ ಕೊಂದೆನು.) ಅಂಗನೃಪತೀ ಕೌಂತೇಯರೇಂ ಕೊಂದರೇ (ಪಾಂಡವರು ನಿನ್ನನ್ನು ಕೊಂದರೇ? ಇಲ್ಲ!)
ಪದ್ಯ-೫:ಅರ್ಥ: ಧರ್ಮರಾಯನು ನೀನು ಅವನ ಜೊತೆಯಲ್ಲಿ ಹುಟ್ಟಿದವನೆಂಬುದನ್ನು ತಿಳಿಯನು. ಸಹಜವಾಗಿಯೇ ನೀನು ಯಾರೆಂಬುದನ್ನು ನಾನು ಬಲ್ಲೆ; ಮೊದಲು ತಿಳಿದಿದ್ದರೂ ನನ್ನ ದೊರೆತನವನ್ನು ನಾನು ನಿನಗೇಕೆ ಕೊಡಲಿಲ್ಲ? ನಿನಗೆ ತಿಳಿಯಪಡಿಸುವುದಕ್ಕೂ ಇಷ್ಟಪಡಲಿಲ್ಲ? ಏಕೆ ಎಂದರೆ, ಸ್ವಕಾರ್ಯಸಾಧನೆಗಾಗಿ ಪ್ರೀತಿಸುವ ಹಾಗೆ (ನಟಿಸಿ) ಪಾಂಡವರ ಮೇಲಿನ ಕೋಪದಿಂದ ನಿನ್ನನ್ನು ನಾನೇ ಕೊಂದೆನು. ಪಾಂಡವರು ನಿನ್ನನ್ನು ಕೊಂದರೇ? ಇಲ್ಲ!
ಚಂ|| ಉದಧಿತರಂಗತಾಟಿತಧರಾತಳಮಂ ನಿನಗಿತ್ತು ನಿನ್ನ ಕೊ
ಟ್ಟುದನೆ ಪಸಾದಮೆಂದು ಪೊಡೆವಟ್ಟು ಮನೋಮುದದಿಂದೆ ಕೊಂಡು ಬಾ|
ೞ್ವಿದುವೆ ಬಯಕ್ಕೆ ಮುಂ ನಿನಗದಂ ಕಿಡಿಪಂದೆಲೆ ಕರ್ಣ ಕೇತುವಾ
ದುದು ನಿನಗಾ ವೃಕೋದರನ ಕಾಯ್ಪನೆ ಪೊತ್ತಿಸಿದೆನ್ನ ಕಾಳೆಗಂ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಉದಧಿತರಂಗತಾಟಿತಧರಾತಳಮಂ (ಉದಧಿ + ತಾಟಿತ + ಧರಾತಲ: ಸಮುದ್ರದ ಅಲೆಗಳ ಹೊಡೆತವುಳ್ಳ ಈ ಭೂಮಂಡಲವನ್ನು) ನಿನಗಿತ್ತು ನಿನ್ನ ಕೊಟ್ಟುದನೆ ಪಸಾದಮೆಂದು (ನಿನಗೆ ಕೊಟ್ಟು ನೀನು ಕೊಟ್ಟುದನ್ನೇ ಪ್ರಸಾದವೆಂದು) ಪೊಡೆವಟ್ಟು ಮನೋಮುದದಿಂದೆ ಕೊಂಡು (ನಮಸ್ಕರಿಸಿ ಮನಸ್ಸಂತೋಷದಿಂದ ಸ್ವೀಕರಿಸಿ) ಬಾೞ್ವಿ ಅದುವೆ ಬಯಕ್ಕೆ ಮುಂ- ಮೊದಲಿನ (ಬಾಳಬೇಕೆಂಬುದೇ ನನ್ನ ಮೊದಲಿನ ಆಸೆ.) ನಿನಗೆ ಅದಂ ಕಿಡಿಪಂದು ಎಲೆ ಕರ್ಣ ಕೇತುವಾದುದು (ನನಗೆ ಅದನ್ನು ಕೆಡಿಸುವಾಗ, ಅದನ್ನು ಬಿಟ್ಟಾಗ) ನಿನಗೆ ಆ ವೃಕೋದರನ ಕಾಯ್ಪನೆ ಪೊತ್ತಿಸಿದ ಎನ್ನ ಕಾಳೆಗಂ (ಆ ಭೀಮನ ಬಗೆಗೆ ಕೋಪವನ್ನು ಹೊತ್ತಿಸಿದ ನನ್ನ ಯುದ್ಧವು ನಿನಗೆ ಧೂಮಕೇತುವಾಯಿತು- ಕೆಡುಕು ತಂದಿತು.)
ಪದ್ಯ-೬:ಅರ್ಥ: ಎಲೆ ಕರ್ಣಾ, ಸಮುದ್ರದ ಅಲೆಗಳ ಹೊಡೆತವುಳ್ಳ ಈ ಭೂಮಂಡಲವನ್ನು ನಿನಗೆ ಕೊಟ್ಟು ನೀನು ಕೊಟ್ಟುದನ್ನೇ ಪ್ರಸಾದವೆಂದು ನಮಸ್ಕರಿಸಿ ಮನಸ್ಸಂತೋಷದಿಂದ ಸ್ವೀಕರಿಸಿ ಬಾಳಬೇಕೆಂಬುದೇ ನನ್ನ ಮೊದಲಿನ ಆಸೆಯಾಗಿತ್ತು. ನನಗೆ ಅದನ್ನು ಕೆಡಿಸುವಾಗ, ಅದನ್ನು ಬಿಡವಾಗ, ಆ ಭೀಮನ ಬಗೆಗೆ ಕೋಪವನ್ನು ಹೊತ್ತಿಸಿದ ನನ್ನ ಯುದ್ಧವು ನಿನಗೆ ಧೂಮಕೇತುವಾಯಿತು- ಕೆಡುಕು ತಂದಿತು.
ವ|| ಎಂದು ಕರ್ಣನೊಳಾದ ಶೋಕಾನಲನೊಳ್ ಬಾಯೞಿದು ಮೆಯ್ಮೞಿದು ಪಳಯಿಸುವ ನಿಜತನೂಜನ ಶೋಕಮನಾೞಿಸಲೆಂದು ಧೃತರಾಷ್ಟ್ರನುಂ ಗಾಂಧಾರಿಯುಂ ಬರೆವರೆ ಬರವಂ ಗೆಂಟೞೊಳ್ ಕಂಡು ದುಶ್ಯಾಸನನ ಸಾವಂ ನೆನೆದು ತಾಯ್ತಂದೆಯ ಮೊಗಮಂ ನೋಡಲ್ ನಾಣ್ಚಿ-
ವಚನ:ಪದವಿಭಾಗ-ಅರ್ಥ:ಎಂದು ಕರ್ಣನೊಳು ಆದ ಶೋಕ ಅನಲನೊಳ್ ಬಾಯೞಿದು ಮೆಯ್ಮೞಿದು (ಹೀಗೆ ಕರ್ಣನ ಸಾವಿನಿಂದ ಆದ ದುಃಖದ ಬೆಂಕಿಯಲ್ಲಿ ಅತ್ತು ಆಯಾಸಪಟ್ಟು ಮೂರ್ಛೆಹೋಗಿ) ಪಳಯಿಸುವ ನಿಜತನೂಜನ ಶೋಕಮನು ಆೞಿಸಲೆಂದು ಧೃತರಾಷ್ಟ್ರನುಂ ಗಾಂಧಾರಿಯುಂ ಬರೆವರೆ (ಎಚ್ಚರಾದಾಗ ಹಳಹಳಿಸುವ ಮಗನ ದುಖವನ್ನು ಸಮಾಧಾನಪಡಿಸಬೇಕೆಂಬದು ಧೃತರಾಷ್ಟ್ರನೂ ಗಾಂಧಾರಿಯೂ ಬರುವಾಗ,) ಬರವಂ ಗೆಂಟೞೊಳ್ ಕಂಡು (ಬರುತ್ತಿರುವುದನ್ನು ದೂರದಿಂದಲೇ ನೋಡಿ) ದುಶ್ಯಾಸನನ ಸಾವಂ ನೆನೆದು ತಾಯ್ತಂದೆಯ ಮೊಗಮಂ ನೋಡಲ್ ನಾಣ್ಚಿ (ದುಶ್ಯಾಸನನ ಸಾವನ್ನು ನೆನೆದು ತಾಯಿತಂದೆಗಳ ಬರವನ್ನು ನೋಡಲು ನಾಚಿಕೆಪಟ್ಟು,)-
ವಚನ:ಅರ್ಥ:ಹೀಗೆ ಕರ್ಣನ ಸಾವಿನಿಂದ ಆದ ದುಃಖದ ಬೆಂಕಿಯಲ್ಲಿ ಅತ್ತು ಆಯಾಸಪಟ್ಟು ಮೂರ್ಛೆಹೋಗಿ ಎಚ್ಚರಾದಾಗ ಹಳಹಳಿಸುವ ಮಗನ ದುಖವನ್ನು ಸಮಾಧಾನಪಡಿಸಬೇಕೆಂಬದು ಧೃತರಾಷ್ಟ್ರನೂ ಗಾಂಧಾರಿಯೂ ಬರುತ್ತಿರುವುದನ್ನು ದೂರದಿಂದಲೇ ನೋಡಿ, ದುಶ್ಯಾಸನನ ಸಾವನ್ನು ನೆನೆದು ತಾಯಿತಂದೆಗಳ ಬರವನ್ನು ನೋಡಲು ನಾಚಿಕೆಪಟ್ಟು,
ಕಂ|| ಆನುಂ ದುಶ್ಯಾಸನನುಂ
ಕಾನೀನನುಮೊಡನೆ ಪೋಗಿ ಬೀೞ್ಕೊಂಡು ರಣ|
ಸ್ಥಾನಕ್ಕೆ ಪೋದೆವಿಮ್ಮಗು
ೞ್ದೇ ನೆಂದಾಂ ನಾಣ್ಚದಿವರ ಮೊಗಮಂ ನೋೞ್ಪೆಂ || ೭ ||
ಪದ್ಯ-೭:ಪದವಿಭಾಗ-ಅರ್ಥ:ಆನುಂ ದುಶ್ಯಾಸನನುಂ ಕಾನೀನನುಂ ಒಡನೆ ಪೋಗಿ (ನಾನೂ ದುಶ್ಯಾಸನನೂ ಕರ್ಣನೂ ಜೊತೆಯಲ್ಲಿ ಹೋಗಿ ) ಬೀೞ್ಕೊಂಡು ರಣಸ್ಥಾನಕ್ಕೆ ಪೋದೆವು (ಅಪ್ಪಣೆ ಪಡೆದು ಯುದ್ಧರಂಗಕ್ಕೆ ಹೋದೆವು.) ಇಂ ಮುಗುೞ್ದು (ಹಿಂದಕ್ಕೆ ಬಂದು) ಏನೆಂದು ಆಂ ನಾಣ್ಚದೆ ಇವರ ಮೊಗಮಂ ನೋೞ್ಪೆಂ (ಏನೆಂದು ಹೇಳಿ ನಾಚದೆ ಇವರ ಮುಖವನ್ನು ನೋಡಲಿ?)
ಪದ್ಯ-೭:ಅರ್ಥ:ನಾನೂ ದುಶ್ಯಾಸನನೂ ಕರ್ಣನೂ ಜೊತೆಯಲ್ಲಿ ಹೋಗಿ ಅಪ್ಪಣೆ ಪಡೆದು ಯುದ್ಧರಂಗಕ್ಕೆ ಹೋದೆವು. ಇನ್ನು ಹಿಂದಕ್ಕೆ ಬಂದು ನಾನು ಏನೆಂದು ಹೇಳಿ ನಾಚದೆ ಇವರ ಮುಖವನ್ನು ನೋಡಲಿ?
ಚಂ|| ಪವನಜನಂತು ಪೂಣ್ದು ಯುವರಾಜನ ನೆತ್ತರನಾರ್ದು ಪೀರ್ದನಿಂ
ತವಗಡದಿಂ ದಿನೇಶಜನನಂಕದ ಗಾಂಡಿವಿ ಕೊಂದನೆಂತು ಪಾಂ|
ಡವರನಿದಿರ್ಚಿ ಸಾಧಿಸುವೆ ಸಂಧಿಯನೊಲ್ವುದೆ ಕಜ್ಜಮೀಗಳೆಂ
ಬವರ್ಗಳ ಮಾತುಗೇಳ್ವನಿತನಿನ್ನೆನಗಂ ಬಿದಿ ಮಾಡಿತಾಗದೇ|| ೮ ||
ಪದ್ಯ-೮:ಪದವಿಭಾಗ-ಅರ್ಥ:ಪವನಜನು ಅಂತು ಪೂಣ್ದು (ಭೀಮನು ಹಾಗೆ ಪ್ರತಿಜ್ಞೆ ಮಾಡಿ) ಯುವರಾಜನ ನೆತ್ತರನಾರ್ದು ಪೀರ್ದನು (ಯುವರಾಜನು ರಕ್ತವನ್ನು ಆರ್ಭಟಮಾಡಿ ಕುಡಿದನು.) ಇಂತು ಅವಗಡದಿಂ ದಿನೇಶಜನನು ಅಂಕದ ಗಾಂಡಿವಿ ಕೊಂದನು (ಇಲ್ಲಿ 'ಅವಗಡಕ್ಕೆ -ಸಾಹಸ,: ಡಿಎಲ್ಎನ್.) (ಹೀಗೆ ಸಾಹಸದಿಂದ ಕರ್ಣನನ್ನು ಶೂರನಾದ ಅರ್ಜುನನು ಕೊಂದನು.) ಎಂತು ಪಾಂಡವರನು ಇದಿರ್ಚಿ ಸಾಧಿಸುವೆ (ಪಾಂಡವರನ್ನು ಹೇಗೆ ಎದುರಿಸಿ ಗೆಲ್ಲುತ್ತೀಯೇ?) ಸಂಧಿಯನು ಒಲ್ವುದೆ ಕಜ್ಜಂ ಈಗಳೆಂಬ ಅವರ್ಗಳ ಮಾತುಗೇಳ್ವನಿತಂ (ಈಗ ಸಂಧಿಗೆ ಒಪ್ಪುವುದೇ (ಸರಿಯಾದ) ಕಾರ್ಯವೆಂದು ಹೇಳುವವರ ಮಾತನ್ನು ಕೇಳುವಷ್ಟನ್ನು) ಇನ್ನು ಎನಗಂ ಬಿದಿ ಮಾಡಿತಾಗದೇ (ಇನ್ನು/ ಈಗ ನನಗೆ ವಿಧಿ ಮಾಡಿದೆಯಲ್ಲವೇ?)
ಪದ್ಯ-೮:ಅರ್ಥ: ಭೀಮನು ಹಾಗೆ ಪ್ರತಿಜ್ಞೆ ಮಾಡಿ ಯುವರಾಜನು ರಕ್ತವನ್ನು ಆರ್ಭಟಮಾಡಿ ಕುಡಿದನು. ಹೀಗೆ ಸಾಹಸದಿಂದ ಕರ್ಣನನ್ನು ಶೂರನಾದ ಅರ್ಜುನನು ಕೊಂದನು. ಪಾಂಡವರನ್ನು ಹೇಗೆ ಎದುರಿಸಿ ಗೆಲ್ಲುತ್ತೀಯೇ? ಈಗ ಸಂಧಿಗೆ ಒಪ್ಪುವುದೇ (ಸರಿಯಾದ) ಕಾರ್ಯವೆಂದು ಹೇಳುವವರ ಮಾತನ್ನು ಕೇಳುವಷ್ಟನ್ನು ಇನ್ನು ನನಗೆ ವಿಧಿ ಮಾಡಿದೆಯಲ್ಲವೇ?
ವ|| ಎಂಬೆನ್ನಗಮೆಯ್ದೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ ನಾದನನಿರ್ವರುಂ ಪರಸಿ ತಡವರಿಸಿಯುಂ ತೆಬ್ಬರಿಸಿಯುಮೞ್ಕಳಪ್ಪಿಕೊಂಡಮೃತವರ್ಷಿ ಕರ ಪರಿಷೇಕದಿಂದೆ ಪುತ್ರಸ್ಪರ್ಶನಮಾಪ್ಯಾಯನಕೋಟಯಾಗೆ ಪುಳಕಿತಗಾತ್ರರುಮಾನಂದ ಬಾಷ್ಟವಾರಿ ಧಾರಾಪರಿಕಲಿತನೇತ್ರರುಮಾಗಿ ಕಿಱಿದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ ಕೇಳಲೆಂದು ಮಹೀಭುಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬೆನ್ನಗಂ ಎಯ್ದೆ ವಂದ ಪಿತೃದ್ವಂದ್ವ ಚರಣಕ್ಕೆ (ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಾಯಿ ತಂದೆಗಳ ಪಾದಕ್ಕೆ) ವಿನಯ ವಿನಮಿತ ಉತ್ತಮಾಂಗನಾದನಂ (ವಿನಯದಿಂದ ತಲೆಬಗ್ಗಿಸಿ ನಮಸ್ಕಾರಮಾಡಿದವನನ್ನು) ಇರ್ವರುಂ ಪರಸಿ ತಡವರಿಸಿಯುಂ ತೆಬ್ಬರಿಸಿಯು ಅೞ್ಕಳ್ ಅಪ್ಪಿಕೊಂಡು (ಇಬ್ಬರೂ ಹರಿಸಿದರು. ಮೈಯನ್ನು ಮುಟ್ಟಿನೋಡಿಯೂ ಸಮಾಧಾನಮಾಡಿಯೂ ಪ್ರೀತಿಯಿಂದ ಅಪ್ಪಿಕೊಂಡು) ಅಮೃತವರ್ಷಿ ಕರ ಪರಿಷೇಕದಿಂದೆ ಪುತ್ರಸ್ಪರ್ಶನಂ ಆಪ್ಯಾಯನಕೋಟಯಾಗೆ (ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಶವು ಹೆಚ್ಚಿನ ಸಂತೋಷವನ್ನುಂಟುಮಾಡಿತು. ಹಾಗೆ ಆಗಲು) ಪುಳಕಿತ ಗಾತ್ರರುಂ ಆನಂದ ಬಾಷ್ಟವಾರಿ ಧಾರಾ ಪರಿಕಲಿತ ನೇತ್ರರುಮಾಗಿ ( ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದರೂ) ಕಿಱಿದಾನುಂ ಬೇಗಮಿರ್ದು ಅಲ್ಲಿ (ಅಲ್ಲಿ ಸ್ವಲ್ಪ ಕಾಲವಿದ್ದು ) ಕಾರ್ಯವ್ಯಗ್ರ ಪಾಪಿ ಪಾಶಾಶ್ರಿತರೆಲ್ಲರುಂ ಕೇಳಲೆಂದು (ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು) ಮಹೀಭುಜನು ಇಂತೆಂದಂ (ದೃತರಾಷ್ಟ್ರನು ಹೀಗೆಂದನು)-
ವಚನ:ಅರ್ಥ:ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಾಯಿ ತಂದೆಗಳ ಪಾದಕ್ಕೆ ವಿನಯದಿಂದ ತಲೆಬಗ್ಗಿಸಿ ನಮಸ್ಕಾರಮಾಡಿದವನನ್ನು ಇಬ್ಬರೂ ಹರಿಸಿದರು. ಮೈಯನ್ನು ಮುಟ್ಟಿನೋಡಿಯೂ ಸಮಾಧಾನಮಾಡಿಯೂ ಪ್ರೀತಿಯಿಂದ ಅಪ್ಪಿಕೊಂಡು, ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಶವು ಹೆಚ್ಚಿನ ಸಂತೋಷವನ್ನುಂಟುಮಾಡಿತು.ಆಗ ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದರೂ ಅಲ್ಲಿ ಸ್ವಲ್ಪ ಕಾಲವಿದ್ದು ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ದೃತರಾಷ್ಟ್ರನು ಹೀಗೆಂದನು.

ದುರ್ಯೋಧನನಿಗೆ ಸಂಧಿಗಾಗಿ ದೃತರಾಷ್ಟ್ರನ ಹಿತವಚನ- ಅದಕ್ಕೆ ದುರ್ಯೋಧನನ ಸಮಾಧಾನ ಸಂಪಾದಿಸಿ

ಮ|| ಎನಗಂ ಪಾಂಡುಗಮಿಲ್ಲ ಭೇದಮೆಳೆಯಂ ಪಚ್ಚಾಳ್ವಮಾ ಪಾಂಡುನಂ
ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ|
ಮುನಿವೈ ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಂಗಸಾ
ಧ್ಯನೊಳಾ ಗಾಂಡಿವಿಯೊಳ್ ಕಱುತ್ತಿಱಿವರಾರಿಂ ಮಾಡುವಂ ಸಂಧಿಯಂ|| ೯ ||
ಪದ್ಯ-೯:ಪದವಿಭಾಗ-ಅರ್ಥ:ಎನಗಂ ಪಾಂಡುಗಂ ಇಲ್ಲ ಭೇದಂ ( ನನಗೂ ಪಾಂಡುವಿಗೂ ಭೇದವಿಲ್ಲ;) ಎಳೆಯಂ ಪಚ್ಚಿ ಆಳ್ವಂ (ರಾಜ್ಯವನ್ನು ಭಾಗಮಾಡಿಕೊಂಡು ಆಳೋಣ.) ಆ ಪಾಂಡುನಂದನರುಂ ಸೈದರೆ ನಿನ್ನೊಳು (ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿ ನಡೆದುಕೊಳ್ಳುವವರೇ ಆಗಿದ್ದಾರೆ.) ಈ ಕಲಹಮುಂ ನಿನ್ನಿಂದಂ ಆಯ್ತೆಂದೊಡಿಂ ಮುನಿವೈ (ಈ ಜಗಳವು ನಿನ್ನಿಂದ ಆಯಿತು ಎಂದರೆ ಇನ್ನು ನೀನು ಕೋಪಿಸಿಕೊಳ್ಳುತ್ತೀಯೆ.) ಗಂಗೆಯ ಪೆರ್ಮಗಂಗೆ (ಗಂಗೆಯ ಹಿರಿಮೆಯ ಮಗ; ಭೀಷ್ಮನಿಗೆ,) ಘಟಸಂಭೂತಂಗೆ (ಘಟದಲ್ಲಿ ಹುಟ್ಟಿದವ; ದ್ರೋಣನಿಗೆ) ಕರ್ಣಂಗೆ ಅಸಾಧ್ಯನೊಳು (ಭೀಷ್ಮನಿಗೆ, ದ್ರೋಣನಿಗೆ, ಕರ್ಣರಿಗೆ ಅಸಾಧ್ಯವಾದ) ಆ ಗಾಂಡಿವಿಯೊಳ್ ಕಱುತ್ತು ಇಱಿವರು ಆರು (ಆ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ಧ ಮಾಡುವವರು ಯಾರಿದ್ದಾರೆ?) ಇಂ ಮಾಡುವಂ ಸಂಧಿಯಂ (ಇನ್ನು ಸಂಧಿಯನ್ನು ಅವರೊಂದಿಗೆ ಮಾಡಿಕೊಳ್ಳೋಣ.)
ಪದ್ಯ-೯:ಅರ್ಥ: ನನಗೂ ಪಾಂಡುವಿಗೂ ಭೇದವಿಲ್ಲ; ರಾಜ್ಯವನ್ನು ಭಾಗಮಾಡಿಕೊಂಡು ಆಳೋಣ. ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿ ನಡೆದುಕೊಳ್ಳುವವರೇ ಆಗಿದ್ದಾರೆ. ಈ ಜಗಳವು ನಿನ್ನಿಂದ ಆಯಿತು ಎಂದರೆ ಇನ್ನು ನೀನು ಕೋಪಿಸಿಕೊಳ್ಳುತ್ತೀಯೆ. ಭೀಷ್ಮನಿಗೆ, ದ್ರೋಣನಿಗೆ, ಕರ್ಣರಿಗೆ ಅಸಾಧ್ಯವಾದ ಆ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ಧ ಮಾಡುವವರು ಯಾರಿದ್ದಾರೆ? ಇನ್ನು ಸಂಧಿಯನ್ನು ಅವರೊಂದಿಗೆ ಮಾಡಿಕೊಳ್ಳೋಣ. ಎಂದನು ದೃತರಾಷ್ಟ್ರ.
ಹರಿಣಿ|| ಪಗೆಗೆ ಕಣಿಯೊಂದುಂಟೇ ನಣ್ಪಿಂಗಮಾಗರಮುಂಟೆ ನೀಂ
ಬಗೆಯ ಪಗೆಯುಂ ನಣ್ಪುಂ ಕೆಯ್ಕೊಂಡ ಕಜ್ಜದಿನಲ್ತೆ ಪು|
ಟ್ಟುಗುಮರಸುಗಳ್ಗೆಂದೀ ಸಂದರ್ಥಶಾಸ್ತ್ರದೊಳೇಕೆ ಪೇೞ್
ಮಗನೆ ನೆಗಳ್ವೈ ಕಾರ್ಯಂ ಮಿತ್ರಾದಿ(ರಿ) ಕಾರಕಮೆಂಬುದಂ|| ೧೦ ||
ಪದ್ಯ-೧೦:ಪದವಿಭಾಗ-ಅರ್ಥ:ಪಗೆಗೆ ಕಣಿಯೊಂದುಂಟೇ ನಣ್ಪಿಂಗಂ ಆಗರಮುಂಟೆ (ಹಗೆತನಕ್ಕೆ ಒಂದು ಗಣಿಯಿದೆಯೇನು? ನಂಟಿಗೆ ಒಂದು ಮನೆಯಿದೆಯೇನು?) ನೀಂ ಬಗೆಯ, ಪಗೆಯುಂ ನಣ್ಪುಂ ಕೆಯ್ಕೊಂಡ ಕಜ್ಜದಿಂ ಅಲ್ತೆ,(ನೀನು ಯೋಚಿಸಪ್ಪ; ದ್ವೇಷ, ನೆಂಟನೆಂಬುದು ಎರಡೂ ಅವರು ಮಾಡಿದ ಕಾರ್ಯದಿಂದಲ್ಲವೇ ಹುಟ್ಟುವುದು?) ಪುಟ್ಟುಗುಂ ಅರಸುಗಳ್ಗೆ ಎಂದು ಈ ಸಂದ ಅರ್ಥಶಾಸ್ತ್ರದೊಳು(ರಾಜರಿಗೆ ಪ್ರಸಿದ್ಧವಾದ ಅರ್ಥಶಾಸ್ತ್ರದಲ್ಲಿ ಹೇಳಿರುವ ‘ಕಾರ್ಯವೇ ಸ್ನೇಹ ಶತ್ರುಗಳಿಗೆ ಕಾರಣವಾದುದು) ಏಕೆ ಪೇೞ್ಮಗನೆ ನೆಗಳ್ವೈ ಕಾರ್ಯಂ ಮಿತ್ರಾದಿ ಕಾರಕಮೆಂಬುದಂ (ಕಾರ್ಯಂ ಮಿತ್ರಾರಿ ಕಾರಕಂ; ಮಿತ್ರ ಅರಿಗೆ ಕಾರಣ; ಎಂಬ ಈ ನೀತಿವಾಕ್ಯದಂತೆ ತಿಳಿದು ಏಕೆ ಮಾಡುವುದಿಲ್ಲ ಹೇಳು ಮಗನೇ?)
ಪದ್ಯ-೧೦:ಅರ್ಥ: ಹಗೆತನಕ್ಕೆ ಒಂದು ಗಣಿಯಿದೆಯೇನು? ನಂಟಿಗೆ ಒಂದು ಮನೆಯಿದೆಯೇನು? ನೀನು ಯೋಚಿಸಪ್ಪ; ದ್ವೇಷ, ನೆಂಟನೆಂಬುದು ಎರಡೂ ಅವರು ಮಾಡಿದ ಕಾರ್ಯ ದಿಂದಲ್ಲವೇ ಹುಟ್ಟುವುದು? ರಾಜರಿಗೆ, ಪ್ರಸಿದ್ಧವಾದ ಅರ್ಥಶಾಸ್ತ್ರದಲ್ಲಿ ಹೇಳಿರುವ ‘ಕಾರ್ಯವೇ ಸ್ನೇಹ ಶತ್ರುಗಳಿಗೆ ಕಾರಣವಾದುದು’ (ಕಾರ್ಯಂ ಮಿತ್ರಾರಿ ಕಾರಕಂ; ಮಿತ್ರ ಅರಿ) ಎಂಬ ಈ ನೀತಿವಾಕ್ಯದಂತೆ ತಿಳಿದು ಏಕೆ ಮಾಡುವುದಿಲ್ಲ ಹೇಳು ಮಗನೇ?
ಕಂ|| ನೀನುಳ್ಳೊಡೆಲ್ಲರೊಳರೆಮ
ಗೇನುಮೞಲ್ ಮನದೊಳಿಲ್ಲದೆಂತೆನೆ ಮಗನೇ|
ಭಾನುವೆ ಸಾಲದೆ ಪಗಲೆನಿ
ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ|| ೧೧ ||
ಪದ್ಯ-೧೧:ಪದವಿಭಾಗ-ಅರ್ಥ:ನೀನು ಉಳ್ಳೊಡೆ ಎಲ್ಲರು ಒಳರ್ ಎಮಗೆ (ಮಗನೆ ನಮಗೆ ನೀನಿದ್ದರೆ ಎಲ್ಲರೂ ಇದ್ದಂತೆಯೇ) ಏನುಮ್ ಅೞಲ್ ಮನದೊಳು ಇಲ್ಲ (ಮಗನೆ ನಮಗೆ ಮನಸ್ಸಿನಲ್ಲಿ ಯಾವ ದುಃಖವೂ ಇಲ್ಲ.- ನಿನ್ನ ನಡತೆಯ ಬಗ್ಗೆ ) ಅದೆಂತೆನೆ ಮಗನೇ ಭಾನುವೆ ಸಾಲದೆ (ಅದು ಹೇಗೆಂದರೆ ಸೂರ್ಯನಿದ್ದರೆ ಸಾಲುವುದಿಲ್ಲವೇ? ) ಪಗಲ್ ಎನಿತಾನುಂ ದೀವಿಗೆಗಳು ಉರಿದೊಡೇಂ ನಂದಿದೊಡೇಂ (ಹೇಗೆಂದರೆ ಹಗಲಿನಲ್ಲಿ ಒಬ್ಬ ಸೂರ್ಯನಿದ್ದರೆ ಸಾಲದೇ? ಎಷ್ಟೋ ದೀವಿಗೆಗಳು ಉರಿದರೇನು, ಆರಿಹೋದರೇನು?) ತಮ್ಮ ಜೀವನದ ಬೆಳಕಿಗೆ ಅವನು ಸೂರ್ಯ, ಹಗಲು ಇದ್ದಂತೆ.
ಪದ್ಯ-೧೧:ಅರ್ಥ: ಮಗನೆ ನಮಗೆ ನೀನಿದ್ದರೆ ಎಲ್ಲರೂ ಇದ್ದಂತೆಯೇ. ಮಗನೆ ನಮಗೆ ಮನಸ್ಸಿನಲ್ಲಿ ಯಾವ ದುಃಖವೂ ಇಲ್ಲ (ನಿನ್ನ ನಡತೆಯ ಬಗ್ಗೆ); ಹೇಗೆಂದರೆ ಹಗಲಿನಲ್ಲಿ ಒಬ್ಬ ಸೂರ್ಯನಿದ್ದರೆ ಸಾಲದೇ? ಎಷ್ಟೋ ದೀವಿಗೆಗಳು ಉರಿದರೇನು, ಆರಿಹೋದರೇನು? ತಮ್ಮ ಜೀವನದ ಬೆಳಕಿಗೆ ಅವನು ಸೂರ್ಯ, ಹಗಲು ಇದ್ದಂತೆ.
ವ|| ಅದಲ್ಲದೆಯುಂ ಪಾಂಡವರಪ್ಪೊಡೆನಗೆ ಪಾಂಡುರಾಜಂಗೆ ಬೆಸಕೆಯ್ಯದುದನೆ ಬೆಸಕೆಯ್ವರೆಂದುದಂಮೀಱುವರಲ್ಲರವರ ನಾನೆಂತುಮೊಡಂಬಡಿಹಸಿ ನೀನೆಂದುದನೆನಿಸುವೆನಿದರ್ಕೆ ಮಾರ್ಕೊಳ್ಳದೊಡಂಬಡು ನಿನ್ನಂ ಕೆಯ್ಯನೊಡ್ಡಿ ಬೇಡಿದಪ್ಪೆನೆಂದ ಧ್ವತರಾಷ್ಟ್ರನ ನುಡಿಗನುಬಲಮಾಗಿ ಗಾಂಧಾರಿಯಿಂತೆಂದಳ್-
ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ಪಾಂಡವರು ಅಪ್ಪೊಡೆ (ಹಾಗಲ್ಲದೆಯೂ ಪಾಂಡವರಾದರೆ) ಎನಗೆ ಪಾಂಡುರಾಜಂಗೆ ಬೆಸಕೆಯ್ಯದುದನೆ ಬೆಸಕೆಯ್ವರು (ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಮಾಡುವರು.) ಎಂದುದಂ ಮೀಱುವರಲ್ಲರು ಅವರ ನಾನು ಎಂತುಂ ಒಡಂಬಡಿಹಸಿ (ಅವರನ್ನು ನಾನು ಹೇಗಾದರೂ ಒಪ್ಪಿಸಿ) ನೀನೆಂದುದನು ಎನಿಸುವೆನು (ನೀನು ಹೇಳುದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುತ್ತೇನೆ.) ಅದರ್ಕೆ ಮಾರ್ಕೊಳ್ಳದೆ ಒಡಂಬಡು (ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ) ನಿನ್ನಂ ಕೆಯ್ಯನೊಡ್ಡಿ ಬೇಡಿದಪ್ಪೆನು (ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುತ್ತೇನೆ) ಎಂದ ಧ್ವತರಾಷ್ಟ್ರನ ನುಡಿಗೆ ಅನುಬಲಮಾಗಿ ಗಾಂಧಾರಿಯಿಂತೆಂದಳ್ (ಎಂದು ಹೇಳಿದ ಧೃತರಾಷ್ಟ್ರನ ಮಾತಿಗೆ ಸಹಾಯಕವಾಗಿ (ಬೆಂಬಲವಾಗಿ) ಗಾಂಧಾರಿ ಹೀಗೆಂದಳು. )-
ವಚನ:ಅರ್ಥ:ಹಾಗಲ್ಲದೆಯೂ ಪಾಂಡವರಾದರೆ ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಮಾಡುವರು. ಅವರನ್ನು ನಾನು ಹೇಗಾದರೂ ಒಪ್ಪಿಸಿ ನೀನು ಹೇಳುದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುತ್ತೇನೆ. ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ; ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುತ್ತೇನೆ, ಎಂದು ಹೇಳಿದ ಧೃತರಾಷ್ಟ್ರನ ಮಾತಿಗೆ ಸಹಾಯಕವಾಗಿ (ಬೆಂಬಲವಾಗಿ) ಗಾಂಧಾರಿ ಹೀಗೆಂದಳು-
ಚಂ|| ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ
ಧುರೆಮೆ ಕಱುತ್ತು ಪಾಯೆ ಪಡಲಿಟ್ಟವೊಲಾದುದು ಪುಣ್ಯದೊಂದು ಪೆ|
ರ್ವರನುೞಿವಂತೆ ನೀನುೞಿದೆಯೆನ್ನಿರಿವನ್ನರುಮಿಲ್ಲ ಮುತ್ತರುಂ
ಕುರುಡರುಮೆನ್ನದೆಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್|| ೧೨
ಪದ್ಯ-೧೨:ಪದವಿಭಾಗ-ಅರ್ಥ:ಕುರುಕುಳ ನಂದನಂ ಪವನನಂದನನೆಂಬ ಮದಾಂಧಗಂಧಸಿಂಧುರೆಮೆ ಕಱುತ್ತು(ಕೋಪಿಸಿ) ಪಾಯೆ (ಹಾಯಲು)- (ಕುರುಕುಲವೆಂಬ ನಂದನವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು) ಪಡಲಿಟ್ಟವೊಲಾದುದು (ಪುಡಿಯಾದಂತೆ ಧ್ವಂಸ ಆಯಿತು) ಪುಣ್ಯದೆ ಒಂದು ಪೆರ್ವರನು ಉೞಿವಂತೆ (ನಮ್ಮಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ) ನೀನು ಉೞಿದೆಯೆನ್ ಇರಿವನ್ನರುಂ ಇಲ್ಲ (ನೀನು ಉಳಿದಿದ್ದೀಯೆ. ಇನ್ನು ಯುದ್ಧಮಾಡುವವರಾರೂ ಇಲ್ಲ.) ಮುತ್ತರುಂ ಕುರುಡರು ಎನ್ನದೆ ಎಮ್ಮ ನುಡಿಗೇಳ್ ಮಗನೇ (ಮುದುಕರು ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು ಮಗನೇ;) ಬಗೆ ತಂದೆಗೆ ಇಂಬುಕೆಯ್ (ಯೋಚಿಸು; ತಂದೆಯು ಮಾತಿಗೆ ಅವಕಾಸಕೊಡು, ಒಪ್ಪು. )
ಪದ್ಯ-೧೨:ಅರ್ಥ: ಕುರುಕುಲವೆಂಬ ನಂದನವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು ಪುಡಿಯಾದಂತೆ ಧ್ವಂಸ ಆಯಿತು. ನಮ್ಮಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ ನೀನು ಉಳಿದಿದ್ದೀಯೆ. ಇನ್ನು ಯುದ್ಧಮಾಡುವವರಾರೂ ಇಲ್ಲ. ಮುದುಕರು ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು ಮಗನೇ; ಯೋಚಿಸು; ತಂದೆಯು ಮಾತಿಗೆ ಅವಕಾಸಕೊಡು,ಒಪ್ಪು.
ಕಂ|| ಪೋಕಿನಿತರೊಳಸವಸದಿಂ
ದೀ ಕಲಹಂ ಧರ್ಮಸುತನನಾಂ ನಿನಗೆ ನಿರಾ|
ಪೇಕಮೊಡಂಬಡಿಸುವೆನಿಂ
ತೀ ಕಜ್ಜಂ ಕೂರ್ಪೇಡೆನಗೆ ಕೆಯ್ಕೊಳ್ ಮಗನೆ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಪೋಕೆ (ಹೋಗಲಿ) ಇನಿತರೊಳೆ ಅಸವಸದಿಂದ ಈ ಕಲಹಂ (ಈ ಜಗಳವು ಇಷ್ಟಕ್ಕೇ ಬೇಗ ಹೋಗಲಿ,-ನಿಲ್ಲಲಿ) ಧರ್ಮಸುತನನು ಆಂ ನಿನಗೆ ನಿರಾಪೇಕಂ ಒಡಂಬಡಿಸುವೆನು (ಧರ್ಮರಾಜನನ್ನು ಆಕ್ಷೇಪಣೆಯೇ ಇಲ್ಲದೆ ಒಡಂಬಡುವೆನು. ಒಪ್ಪುವಹಾಗೆ ಮಾಡುತ್ತೇನೆ.) ಇಂತು ಈ ಕಜ್ಜಂ (ಈ ಕಾರ್ಯವನ್ನು) ಕೂರ್ಪೇಡೆ (ಪ್ರೀತಿಸುವುದಾದರೆ) ಎನಗೆ ಕೆಯ್ಕೊಳ್ ಮಗನೆ (ಹೀಗೆ, ನೀನು ನನಗೆ ಪ್ರೀತಿಸುವುದಾದರೆ ಈ ಕಾರ್ಯವನ್ನು ನೀನು ಅಂಗೀಕಾರಮಾಡು)
ಪದ್ಯ-೧೩:ಅರ್ಥ: ಈ ಜಗಳವು ಇಷ್ಟಕ್ಕೇ ಬೇಗ ಹೋಗಲಿ,-ನಿಲ್ಲಲಿ. ಧರ್ಮರಾಜನನ್ನು ಆಕ್ಷೇಪಣೆಯೇ ಇಲ್ಲದೆ ಒಡಂಬಡುವೆನು. ನೀನು ನನಗೆ ಪ್ರೀತಿಸುವುದಾದರೆ ಈ ಕಾರ್ಯವನ್ನು ನೀನು ಅಂಗೀಕಾರಮಾಡು. ಎಂದಳು ತಾಯಿ ಗಾಂಧಾರಿ.
ವ|| ಎಂದನುಬಂಧಿಸಿದ ಮೋಹಪಾಶದೊಳ್ ತಾಯ್ತಂದೆಯ ನುಡಿದ ನುಡಿಯಂ ಕೇಳ್ದಭಿಮಾನಧನಂ ಸುಯೋಧನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಅನುಬಂಧಿಸಿದ ಮೋಹಪಾಶದೊಳ್ ತಾಯ್ತಂದೆಯ ನುಡಿದ (ಎಂದು ಮೋಹಪಾಶದಿಂದ ಬಂಧಿತರಾದ ತಾಯಿತಂದೆಯರು ಹೇಳಿದ) ನುಡಿಯಂ ಕೇಳ್ದ ಅಭಿಮಾನಧನಂ ಸುಯೋಧನನು ಇಂತೆಂದಂ (ನುಡಿಯನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಹೀಗೆಂದನು)-
ವಚನ:ಅರ್ಥ: ಎಂದು ಮೋಹಪಾಶದಿಂದ ಬಂಧಿತರಾದ ತಾಯಿತಂದೆಯರು ನುಡಿದ ನುಡಿಯನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಹೀಗೆಂದನು-
ಉ|| ದೋಷಮೆ ನಿಮ್ಮ ಪೇೞ್ದುದೆನಗೆಂತುಮೊಡಂಬಡಲಪ್ಪುದೊಂದೆ ದು
ಶ್ಯಾಸನ ರಕ್ತಪಾನದೊಳೆ ಸೊರ್ಕಿದ ಪಾತಕನಂ ಪೊರಳ್ಚಿ ಕೊಂ|
ದೀ ಸಮರಾವನೀತಳದೊಳಿಂ ಬಲಿಗೆಯ್ಜಿನಮೊಲ್ಲೆನಲ್ತೆ ನಿ
ರ್ದೋಷಿಗಳೊಳ್ ಪೃಥಾಸುತರೊಳಿಂ ಮಗುೞ್ದ್ದುಂ ಪುದುವಾೞೆನೆಂಬೆನೇ|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ದೋಷಮೆ ನಿಮ್ಮ ಪೇೞ್ದುದು ಎನಗೆ ಎಂತುಂ ಒಡಂಬಡಲಪ್ಪುದು (ನೀವು ಹೇಳಿದುದು ನನಗೆ ದೋಷವೇನಲ್ಲ ಹೇಗೂ ಒಪ್ಪತಕ್ಕುದೇ) ಒಂದೆ ದುಶ್ಯಾಸನ ರಕ್ತಪಾನದೊಳೆ ಸೊರ್ಕಿದ ಪಾತಕನಂ (ಆದರೆ ಒಂದು ವಿಚಾರ, ದುಶ್ಯಾಸನ ರಕ್ತಪಾನದಿಂದ ಸೊಕ್ಕಿರುವ ಪಾಪಿಯಾದ ಭೀಮನನ್ನು) ಪೊರಳ್ಚಿ ಕೊಂದು ಈ ಸಮರ ಅವನೀತಳದೊಳಿಂ (ಹೊರಳಿಸಿ ಕೊಂದು ಈ ಯುದ್ಧರಂಗದಲ್ಲಿ) ಬಲಿಗೆಯ್ಜಿನಂ ಒಲ್ಲೆನಲ್ತೆ (ಬಲಿಯಿಕ್ಕುವವರೆಗೆ ಒಪ್ಪುಲಾರೆ.) ನಿರ್ದೋಷಿಗಳೊಳ್ ಪೃಥಾಸುತರೊಳ್ ಇಂ ಮಗುೞ್ದ್ದುಂ ಪುದುವಾೞೆನ್ ಎಂಬೆನೇ (ನಿರ್ದೋಷಿಗಳಾದ ಪೃಥೆಯ ಮಕ್ಕಳಲ್ಲಿ ಇನ್ನು ಕೂಡಿ ಬದುಕುವುದಿಲ್ಲವೆನ್ನುತ್ತೇನೆಯೇ )
ಪದ್ಯ-೧೪:ಅರ್ಥ:ನೀವು ಹೇಳಿದುದು ನನಗೆ ದೋಷವೇನಲ್ಲ ಹೇಗೂ ಒಪ್ಪತಕ್ಕುದೇ; ಆದರೆ ಒಂದು ವಿಚಾರ, ದುಶ್ಯಾಸನ ರಕ್ತಪಾನದಿಂದ ಸೊಕ್ಕಿರುವ ಪಾಪಿಯಾದ ಪಾತಕಿ ಭೀಮನನ್ನು ಹೊರಳಿಸಿ ಕೊಂದು ಈ ಯುದ್ಧರಂಗದಲ್ಲಿ ಬಲಿಯಿಕ್ಕುವವರೆಗೆ ಒಪ್ಪುಲಾರೆ. ನಿರ್ದೋಷಿಗಳಾದ ಪೃಥೆಯ ಮಕ್ಕಳಲ್ಲಿ ಇನ್ನು ಕೂಡಿ ಬದುಕುವುದಿಲ್ಲವೆನ್ನುತ್ತೇನೆಯೇ?
ವ|| ಎಂಬುದುಮಂಧಮಹೀಪತಿ ನೀನಿದಾವುದು ಮಾತಾಗಿ ನುಡಿವೈ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂಧಮಹೀಪತಿ (ಕುರುಡುರಾಜನಾದ ದೃತರಾಷ್ಟ್ರನು )ನೀನು ಇದಾವುದು ಮಾತಾಗಿ ನುಡಿವೈ (ಇದು ಯಾವ ಮಾತೆಂದು ನುಡಿಯುತ್ತಿದ್ದೀಯೆ? ಎಂದನು.)-
ವಚನ:ಅರ್ಥ:ಎನ್ನಲು ಕುರುಡುರಾಜನಾದ ದೃತರಾಷ್ಟ್ರನು (ದುರ್ಯೋಧನನನ್ನು ಕುರಿತು) ಇದು ಯಾವ ಮಾತೆಂದು ನುಡಿಯುತ್ತಿದ್ದೀಯೆ? ಎಂದನು.

ಕಂ|| ಅನುಜರ್ ನಾಲ್ವರುಮಂ ಧ ರ್ಮನಂದನಂ ವೇಳೆಗೊಂಡು ಕಾವಂ ಪೊಣರ್ದಾ| ವನುವರದೊಳಮೆನೆ ಪೇೞ್ ಪವ ನನಂದನಂಗೞಿವು ಪೊಣರೆ ತಾಂ ಬೞ್ದಪನೇ|| ೧೫ ||

ಪದ್ಯ-೧೫:ಪದವಿಭಾಗ-ಅರ್ಥ:ಅನುಜರ್ ನಾಲ್ವರುಮಂ ಧರ್ಮನಂದನಂ (ಧರ್ಮರಾಜನು ತನ್ನ ನಾಲ್ಕು ಜನ ತಮ್ಮಂದಿರಲ್ಲಿ) ವೇಳೆಗೊಂಡು (ಯಾರೊಬ್ಬರು ಸತ್ತರೂ ತಾನೂ ಸಾಯುತ್ತೇನೆಂದು)ಕಾವಂ ಪೊಣರ್ದು ಅವನುವರದೊಳಂ (ಪ್ರತಿಜ್ಞೆಮಾಡಿ ತಮ್ಮಂದಿರನ್ನು ರಕ್ಷಿಸುತ್ತಿರುವಾಗ) ಎನೆ ಪೇೞ್ ಪವನನಂದನಂಗೆ ಅೞಿವು ಪೊಣರೆ (ಸಾವುಬಂದರೆ)ತಾಂ ಬೞ್ದಪನೇ (ಭೀಮನಿಗೆ ಸಾವುಬಂದರೆ ತಾನು ಬದುಕುತ್ತಾನೆಯೇ ಹೇಳು? )
ಪದ್ಯ-೧೫:ಅರ್ಥ: ಧರ್ಮರಾಜನು ತನ್ನ ನಾಲ್ಕು ಜನ ತಮ್ಮಂದಿರಲ್ಲಿ ಯಾವ ಯುದ್ಧದಲ್ಲಾದರೂ ಯಾರೊಬ್ಬರು ಸತ್ತರೂ ತಾನೂ ಸಾಯುತ್ತೇನೆಂದು ಪ್ರತಿಜ್ಞೆಮಾಡಿ ರಕ್ಷಿಸುತ್ತಿರುವಾಗ ಭೀಮನಿಗೆ ಸಾವು ಬಂದರೆ ತಾನು ಬದುಕುತ್ತಾನೆಯೇ ಹೇಳು?
ಎನೆ ನೃಪನೆಂದಂ ಧರ್ಮಜ
ನನುಜರ್ಕಳೊಳೊರ್ವನೞಿದೊಡೊಡನೞಿವ ಸುಯೋ|
ಧನನಲ್ಲಿ ನೂರ್ವರುಂ ತ
ನ್ನನುಜರ್ಕಳ್ ಸಾಯೆ ಬಾೞ್ವುದಂ ನಂಬಿದಿರೇ|| ೧೬ ||
ಪದ್ಯ-೦೦:ಪದವಿಭಾಗ-ಅರ್ಥ:ಎನೆ ನೃಪನೆಂದಂ (ಎನ್ನಲು, ದುರ್ಯೋಧನನು ಹೇಳಿದನು) ಧರ್ಮಜನು ಅನುಜರ್ಕಳೊಳ್ ಒರ್ವನು ಅೞಿದೊಡೆ ಒಡನೆ ಅೞಿವ (ಧರ್ಮರಾಯನು ತಮ್ಮಂದಿರು ಒಬ್ಬನು ಸತ್ತರೂ ಜೊತೆಯಲ್ಲಿಯೇ ಸಾಯುತ್ತಾನೆ.) ಸುಯೋಧನನಲ್ಲಿ ನೂರ್ವರುಂ ತನ್ನ ಅನುಜರ್ಕಳ್ ಸಾಯೆ ಬಾೞ್ವುದಂ ನಂಬಿದಿರೇ (ದುಯೋಧನನು ಮಾತ್ರ ತನ್ನ ತಮ್ಮಂದಿರು ನೂರುಜನವೂ ಸತ್ತಿರುವಾಗ ಅವನು ಬದುಕುತ್ತಾನೆಂದು ನಂಬಿದಿರೇನು?)
ಪದ್ಯ-೦೦:ಅರ್ಥ: ಎನ್ನಲು, ದುರ್ಯೋಧನನು ಹೇಳಿದನು. ಧರ್ಮರಾಯನು ತಮ್ಮಂದಿರು ಒಬ್ಬನು ಸತ್ತರೂ ಜೊತೆಯಲ್ಲಿಯೇ ಸಾಯುತ್ತಾನೆ. ದುಯೋಧನನು ಮಾತ್ರ ತನ್ನ ತಮ್ಮಂದಿರು ನೂರುಜನವೂ ಸತ್ತಿರುವಾಗ ಅವನು ಬದುಕುತ್ತಾನೆಂದು ನಂಬಿದಿರೇನು?
  • ಟಿಪ್ಪಣಿ:: ಇಲ್ಲತೊಂಭತ್ತೊಂಭತ್ತು ಎಂದಿರ ಬೇಕಿತ್ತು ಪ್ರಾಸಕ್ಕೆ ಹೊಂದಿಸಲು ನೂರು ಎಂದಿರಬೇಕು.
ವ|| ಎಂದು ಮತ್ರಂ ಸಂಯೋಧನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಮತ್ತಂ ಸಂಯೋಧನನಿಂತೆಂದಂ-
ವಚನ:ಅರ್ಥ:ವ|| ಎಂದು ಪುನ ದುರ್ಯೋಧನನು ಹೀಗೆಂದನು -
ಮ|| ತಲೆದೋಱಲ್ಕಣಮಳ್ಕಿ ವೈರಿ ನೆಲನಂ ಪೋ ಪೊಕ್ಕನೆಂಬನ್ನೆಗಂ
ಚಲದಿಂದೆಯ್ದುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೊಳ್|
ನೆಲದೊಳ್ ಪಂಬಲೆ ಮತ್ತಮೆನ್ನ ಮುಳಿಸಿಂಗಾಂ ಕಾದುವೆಂ ಪೇಸಿದೆಂ
ನೆಲೆಗಂಡಂತೆ ನೆಲಕ್ಕೆ ಗೆಲ್ದೊಡಮದಂ ಚಿ ಮತ್ತಮಾನಾಳ್ವೆನೇ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ತಲೆದೋಱಲ್ಕೆ ಅಣಂ ಅಳ್ಕಿ ವೈರಿ ನೆಲನಂ ಪೋ ಪೊಕ್ಕನು (ವೈರಿಯು ಕಾಣಿಸಿಕೊಂಡು ಎದುರಾಗುವುದಕ್ಕೆ ಅಲ್ಪ ಹೆದರಿ ತನ್ನ ನೆಲವನ್ನು, ಛೀ ಹೋಗಿ ಹೊಕ್ಕನು) ಎಂಬನ್ನೆಗಂ (ಎನ್ನುತ್ತಿರಲು) ಚಲದಿಂದ ಎಯ್ದುವ ಕರ್ಣನ ಉಗ್ರರಥಮಂ ಮುಂ ನುಂಗಿದೀ ದ್ರೋಹಿಯೊಳ್ (ಛಲದಿಂದ ಬರುತ್ತಿದ್ದ ಕರ್ಣನ ಭಯಂಕರವಾದ ತೇರನ್ನು ಮೊದಲೇ ನುಂಗಿದ ಈ ದ್ರೋಹಿಯಾದ ಭೂಮಿಯಲ್ಲಿ/ ಭೂಮಿಗಾಗಿ) ನೆಲದೊಳ್ ಪಂಬಲೆ (ಭೂಮಿಗಾಗಿ ಪುನ ಹಂಬಲಿಸಲೇ, ಆಸೆಪಡಲೇ?) ಮತ್ತಂ ಎನ್ನ ಮುಳಿಸಿಂಗೆ ಆಂ ಕಾದುವೆಂ (ನನ್ನ ರೋಷಕ್ಕಾಗಿ ನಾನು ಕಾದುತ್ತೇನೆ.) ಪೇಸಿದೆಂ ನೆಲೆಗಂಡು ಅಂತೆ ನೆಲಕ್ಕೆ (ಹೇಸಿದ್ದೇನೆ ಭೂಮಿಯ ನೆಲೆ ಕಂಡು- ಸ್ಥಿರತೆಯನ್ನು (ಅಸ್ಥಿರತೆಯನ್ನು ತಿಳಿದು) ಗೆಲ್ದೊಡಂ ಅದಂ ಚಿ ಮತ್ತಂ ಆನು ಆಳ್ವೆನೇ (ಗೆದ್ದರೂ ಛಿಃ ಪುನ ನಾನು ಅದನ್ನು ಆಳುತ್ತೇನೆಯೇ?)
ಪದ್ಯ-೧೭:ಅರ್ಥ: ವೈರಿಯು ಕಾಣಿಸಿಕೊಂಡು ಎದುರಾಗುವುದಕ್ಕೆ ಸ್ವಲ್ಪ ಹೆದರಿ ತನ್ನ ನೆಲವನ್ನು, ಛೀ ಹೋಗಿ ಹೊಕ್ಕನು ಎಂದು ಹೇಳುವಷ್ಟರಲ್ಲಿಯೇ ಛಲದಿಂದ ಬರುತ್ತಿದ್ದ ಕರ್ಣನ ಭಯಂಕರವಾದ ತೇರನ್ನು ಮೊದಲೇ ನುಂಗಿದ ಈ ದ್ರೋಹಿಯಾದ ಭೂಮಿಯಲ್ಲಿ / ಭೂಮಿಗಾಗಿ ಪುನ ಹಂಬಲಿಸಲೇ, ಆಸೆಪಡಲೇ? ನನ್ನ ರೋಷಕ್ಕಾಗಿ ನಾನು ಕಾದುತ್ತೇನೆ. (ಭೂಮಿ ಅಶಾಶ್ವತ ಎಂಬ) ವಾಸ್ತವಾಂಶವನ್ನು ತಿಳಿದು ಈ ನೆಲಕ್ಕೆ ಹೇಸಿದ್ದೇನೆ. ಗೆದ್ದರೂ ಛಿಃ ಪುನ ನಾನು ಅದನ್ನು ಆಳುತ್ತೇನೆಯೇ?
ವ|| ಅಂತುಮಲ್ಲದೆಯುಂ
ವಚನ:ಪದವಿಭಾಗ-ಅರ್ಥ: ಅಂತುಂ ಅಲ್ಲದೆಯುಂ
ವಚನ:ಅರ್ಥ:ವ|| ಹಾಗಲ್ಲದೆಯೂ )
ಚಂ|| ತೊಡರದೆ ನೀಮುಮಾ ನೆಗೞ್ದ ಪಾಂಡುವುಮೊಂದಿಯೆ ಬೞ್ದಿರೊಂದೊಡಂ
ಬಡು ನಿಮಗಿಲ್ಲ ಜೂದೆ ನೆವಮಾಗಿರೆ ಮೂಲಿಗನಾದೆನಾನೆ ಪೂ|
ಣ್ದಿಡುವಗೆಗೆನ್ನೊಳಾದ ಕಿಸುರೆನ್ನೊಡವೋಪುದಿದೊಳ್ಳಿತೆನ್ನ ಪಿಂ
ಬಡಿನೊಳೆ ನಣ್ಪಿನಯ್ಯ ನಿಮಗಂ ಮಗನಲ್ಲನೆ ಧರ್ಮನಂದನಂ|| ೧೮
ಪದ್ಯ-೧೮:ಪದವಿಭಾಗ-ಅರ್ಥ:ತೊಡರದೆ ನೀಮುಂ ಆ ನೆಗೞ್ದ ಪಾಂಡುವುಂ ಒಂದಿಯೆ ಬೞ್ದಿರಿ (ನೀವೂ ಆ ಪಾಂಡವರೂ ಯಾವ ವೈಮನಸ್ಯವೂ ಇಲ್ಲದೆ ಹೊಂದಿಕೊಂಡೆ ಬಾಳಿದಿರಿ.) ಒಂದು ಒಡಂಬಡು ನಿಮಗಿಲ್ಲ (ನಿಮಗೆ ಹೊಂದಿಕೊಳ್ಳುವುದರಲ್ಲಿ - ಒಂದು ಅಸಮಾಧಾನವೂ ಇಲ್ಲ.) ಜೂದೆ ನೆವಮಾಗಿರೆ ಮೂಲಿಗನಾದೆನು ಆನೆ ಪೂಣ್ದ ಇಡುವಗೆಗೆ (ಜೂಜೇ ನೆವವಾಗಿರಲು ಈ ಪ್ರತಿಜ್ಞೆಮಾಡಿದ ಬದ್ದದ್ವೇಷಕ್ಕೆ ನಾನೇ ಮೂಲನು- ಕಾರಣನಾದೆ) ಎನ್ನೊಳಾದ ಕಿಸುರು ಎನ್ನೊಡಂ ಓಪುದಿದು ಒಳ್ಳಿತು (ನನ್ನಿಂದಾದ ಅಸಮಾಧಾನ/ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು) ಎನ್ನ ಪಿಂಬಡಿನೊಳೆ ನಣ್ಪಿನ ಅಯ್ಯ ನಿಮಗಂ ಮಗನಲ್ಲನೆ ಧರ್ಮನಂದನಂ (ಪ್ರೀತಿಯ ಅಪ್ಪಾ ಧರ್ಮರಾಯನೂ ನಿಮಗೆ ಮಗನಲ್ಲವೇ?)
ಪದ್ಯ-೧೮:ಅರ್ಥ: ನೀವೂ ಆ ಪಾಂಡವರೂ ಯಾವ ವೈಮನಸ್ಯವೂ ಇಲ್ಲದೆ ಹೊಂದಿಕೊಂಡೆ ಬಾಳಿದಿರಿ. ನಿಮಗೆ ಒಂದು ಅಸಮಾಧಾನವೂ ಇಲ್ಲ. ಜೂಜೇ ನೆವವಾಗಿರಲು ಈ ಪ್ರತಿಜ್ಞೆಮಾಡಿದ ಬದ್ದದ್ವೇಷಕ್ಕೆ ನಾನೇ ಮೂಲನಾದೆ, ಕಾರಣನಾದೆ. ನನ್ನಿಂದಾದ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು. ನನ್ನ ನಂತರ (ನನಗಿಂತ ಹಿಂದೆಯೇ ಹುಟ್ಟದವನಲ್ಲವೇ?) (ನಾನು ಸತ್ತ ಬಳಿಕ) ಪ್ರೀತಿಯ ಅಪ್ಪಾ ಧರ್ಮರಾಯನೂ ನಿಮಗೆ ಮಗನಲ್ಲವೇ? (ನೀವು ಅವನೊಡನೆ ಸುಖವಾಗಿ ಬಾಳಬಹುದು.)
  • ಟಿಪ್ಪಣಿ::ಪಂಪನ ಪ್ರಕಾರ ಧುರ್ಯೋಧನ ತನಗೆ ವಿಧಿ ವಿರುದ್ಧವಾಗಿದ್ದುದು ತಿಳಿದು, ಯುದ್ಧಮಾಡಿ ಸಾಯಲು ನಿರ್ಧರಿಸಿದ್ದಾನೆ.
ಉ|| ತಪ್ಪದು ಕರ್ಣನಿಂ ಬೞಿಕೆ ಸಂಧಿಯ ಮಾತೆನಗಾತನಿಲ್ಲದೆಂ
ತಪ್ಪುದೊ ರಾಜ್ಯಮೀ ಗದೆಯುಮೀ ಭುಜದಂಡಮುಮುಳ್ಳಿನಂ ಕೊನ|
ರ್ತಪ್ಪುದೆ ಪೇೞಿಮೆನ್ನ ಪಗೆ ನೋವಱಿದಂಜುವುದೇಕೆ ನಿಂದರೇಂ
ತಪ್ಪುದೊ ಪೇೞಿಮಯ್ಯ ನೊಸಲೊಳ್ ಬರೆದಕ್ಕರಮಾ ವಿಧಾತ್ರನಾ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ತಪ್ಪು ಅದು ಕರ್ಣನಿಂ ಬೞಿಕೆ ಸಂಧಿಯ ಮಾತು (ಕರ್ಣನು ಹೋದಮೇಲೆ ಸಂಧಿಯ ಮಾತು ತಪ್ಪು) ಎನಗೆ ಆತನಿಲ್ಲದೆ ಎಂತಪ್ಪುದೊ ರಾಜ್ಯಮ್ (ಅವನಿಲ್ಲದೆ ನನಗೆ ರಾಜ್ಯವು ತನಗೆ ಹೇಗಿರುವುದೋ? ಹೇಗಾಗುತ್ತದೆ?) ಈ ಗದೆಯುಂ ಈ ಭುಜದಂಡಮುಂ ಉಳ್ಳಿನಂ ಕೊನರ್ತಪ್ಪುದೆ ಪೇೞಿಂ ಎನ್ನ ಪಗೆ,(ಗದೆಯೂ, ಬಾಹುದಂಡವೂ. ಇರುವವರೆಗೆ ನನ್ನ ಶತ್ರುವು ಚಿಗುರಿಕೊಳ್ಳುತ್ತಾನೇಯೇ,) ನೋವ ಅಱಿದು ಅಂಜುವುದೇಕೆ, (ದುಃಖವನ್ನು ಅರಿತು-, ಅನುಭವಿಸಿಯಾವ ಮೇಲೆಯೂ ಹೆದರುವುದೇಕೆ?) ನಿಂದರೆ ಎಂ ತಪ್ಪುದೊ(ನಾನು ಯುದ್ಧವನ್ನು ನಿಲ್ಲಿಸಿದರೂ ಯುದ್ಧ ತಪ್ಪದೋ ಏನೋ! ಏಕೆಂದರೆ) ಪೇೞಿಂ ಅಯ್ಯ ನೊಸಲೊಳ್ ಬರೆದ ಅಕ್ಕರಂ ಆ ವಿಧಾತ್ರನು ಆ (ಅಪ್ಪಾ ಯುದ್ಧವನ್ನು ನಾನು ನಿಲ್ಲಿಸಿದರೂ ಆ ಬ್ರಹ್ಮನು ಹಣೆಯಲ್ಲಿ ಬರೆದ ಅಕ್ಷರ ತಪ್ಪುತ್ತದೆಯೇ ಏನು?)
ಪದ್ಯ-೧೯:ಅರ್ಥ: ಕರ್ಣನು ಹೋದಮೇಲೆ ಸಂಧಿಯ ಮಾತು ತಪ್ಪು (ನನಗೆ ದೋಷಯುಕ್ತವಾದುದು); ಅವನಿಲ್ಲದೆ ನನಗೆ ರಾಜ್ಯವು ತನಗೆ ಹೇಗಿರುವುದೋ?? ಈ ಗದೆಯೂ, ಬಾಹುದಂಡವೂ. ಇರುವವರೆಗೆ ನನ್ನ ಶತ್ರುವು ಚಿಗುರಿಕೊಳ್ಳುತ್ತಾನೇಯೇ, ದುಃಖವನ್ನು ಅನುಭವಿಸಿಯಾವ ಮೇಲೆಯೂ ಹೆದರುವುದೇಕೆ? (ನಾನು ಯುದ್ಧವನ್ನು ನಿಲ್ಲಿಸಿದರೂ ಯುದ್ಧ ತಪ್ಪದೋ ಏನೋ! ಏಕೆಂದರೆ) ಅಪ್ಪಾ ಯುದ್ಧವನ್ನು ನಾನು ನಿಲ್ಲಿಸಿದರೂ ಬ್ರಹ್ಮನು ಹಣೆಯಲ್ಲಿ ಬರೆದ ಅಕ್ಷರ ತಪ್ಪುತ್ತದೆಯೇ?
ಮ|| ಸ್ರ|| ನರನಂ ಮುಂ ಕೊಲ್ವೆನಾಂ ಕರ್ಣನನೞಿದುದಱಿಂ ಕೊಲ್ವೆನಾ ಭೀಮನಂ ಸಂ
ಗರದೊಳ್ ಸೀಳ್ದೊಟ್ಟಿ ದುಶ್ಸಾಸನನೞಲನದಂ ನೀಗುವೆಂ ಪೋಕುಮಂತಿ|
ರ್ವರುಮಂ ಕೊಂದಂದು ಮೇಣಾನವರಿದಿರಿರೊಳ್ ಕಾದಿ ಸತ್ತಂದು ಮೇಣ್ ವಿ
ಸ್ಫುರಿತಂ ಮತ್ಕೋಪಮುಂ ನಿಮ್ಮಡಿಯುಮನಿದೆ ಬೀೞ್ಕೊಂಡೆನಿಂ ಪೋಗಿ ಮೇೞಿಂ|| ೨೦ ||
ಪದ್ಯ-೦೦:ಪದವಿಭಾಗ-ಅರ್ಥ:ನರನಂ (ಆರ್ಜುನನನ್ನು) ಮುಂ (ಮೊದಲು) ಕೊಲ್ವೆನ್ ಆಂ, ಕರ್ಣನನು ಇೞಿದುದಱಿಂ - ಇರಿದುದರಿಂ,(ಕರ್ಣನನ್ನು ಸಾಯಿಸಿದುದರಿಂದ ಆರ್ಜುನನನ್ನು ಮೊದಲು ಕೊಲ್ಲುತ್ತೇನೆ.) ಕೊಲ್ವೆಂ ಆ ಭೀಮನಂ ಸಂಗರದೊಳ್ (ಆ ಭೀಮನನ್ನು ಯುದ್ಧದ್ಲಲಿ ಕೊಲ್ಲುತ್ತೇನೆ,) ಸೀಳ್ದೊಟ್ಟಿ ದುಶ್ಸಾಸನನ ಅೞಲನು ಅದಂ ನೀಗುವೆಂ (ಅವನನ್ನು ಸೀಳಿ ಒಟ್ಟಿ,ರಾಶಿಮಾಡಿ, ದುಶ್ಯಾಸನನ ಆ ದು:ಖವನ್ನು ಪರಿಹಾರಮಾಡಿಕೊಳ್ಳುತ್ತೇನೆ.) ಪೋಕುಂ> ಅಂತಿರ್ವರುಮಂ ಕೊಂದಂದು (ಹಾಗೆ ಅವರಿಬ್ಬರನ್ನು ಕೊಂದ ದಿನ) ಮೇಣ್ ಅವರಿದಿರಿರೊಳ್ ಕಾದಿ ಸತ್ತಂದು (ಅಥವಾ ನಾನು ಅವರೆದುರಿಗೆ ಕಾದಿ ಸತ್ತ ದಿನ) ಮೇಣ್ ವಿಸ್ಫುರಿತಂ ಮತ್ಕೋಪಮುಂ - ಪೋಕುಂ-(ನನ್ನ ಉರಿಯುತ್ತಿರುವ ಕೋಪವು ಶಮನವಾಗುತ್ತದೆ.) ನಿಮ್ಮಡಿಯುಮಂ ಇದೆ ಬೀೞ್ಕೊಂಡೆನು ಇಂ ಪೋಗಿಂ, ಏೞಿಂ (ನಿಮ್ಮ ಪಾದಗಳನ್ನು ಬೀಳ್ಕೊಂಡೆನು (ದಯಮಾಡಿ) ಇನ್ನು ನೀವು ಹೋಗಿ, ಏಳಿ.)
ಪದ್ಯ-೦೦:ಅರ್ಥ:ದುರ್ಯೋಧನ ಹೇಳಿದ, ಕರ್ಣನನ್ನು ಸಾಯಿಸಿದುದರಿಂದ ಆರ್ಜುನನನ್ನು ಮೊದಲು ಕೊಲ್ಲುತ್ತೇನೆ. ಆ ಭೀಮನನ್ನು ಯುದ್ಧದ್ಲಲಿ ಸೀಳಿ ರಾಶಿ ಹಾಕಿ ದುಶ್ಯಾಸನನ ದು:ಖವನ್ನು ಪರಿಹಾರಮಾಡಿಕೊಳ್ಳುತ್ತೇನೆ. ಹಾಗೆ ಅವರಿಬ್ಬರನ್ನು ಕೊಂದ ದಿನ; ಅಥವಾ ನಾನು ಅವರೆದುರಿಗೆ ಕಾದಿ ಸತ್ತ ದಿನ, ನನ್ನ ಉರಿಯುತ್ತಿರುವ ಕೋಪವು ಶಮನವಾಗುತ್ತದೆ. ನಿಮ್ಮ ಪಾದಗಳನ್ನು ಬೀಳ್ಕೊಂಡೆನು (ದಯಮಾಡಿ) ಇನ್ನು ನೀವು ಹೋಗಿ, ಏಳಿ. (ಎಂದು ಅವರನ್ನು ಕಳಿಸಿದ)
ವ|| ಎಂದು ತಾಯ್ಗಂ ತಂದೆಗಮೆಱಗಿ ಪೊಡೆವಟ್ಟು ಪೋಗಲ್ವೇೞ್ದು ಸಂಸಾರಾಸಾರಸತೆಯ ನಱಿದನುಂ ಮಹಾಸತ್ತ್ವನುಮಪ್ಪುದಱಿಂ ತನ್ನಂ ತಾನೆ ಸಂತೈಸಿಯುಂ ಚೇತರಿಸಿಯುಂ ಮಜ್ಜನ ಭೋಜನಾನುಲೇಪನ ತಾಂಬೂಲಾದಿಗಳೊಳ್ ಮಹಾಹವ ಖೇದಮುಮಂ ಮನಖೇದಮುಮ ನಾಱಿಸಿ ಮಂತ್ರಶಾಲಾಂತಸ್ಥಿತ ಕನಕವಿಷ್ಟರಾರೂಢನಾಗಿ ಶಲ್ಯ ಶಕುನಿ ಕೃಪ ಕೃತವರ್ಮಾಶ್ವತ್ಥಾಮ ಪ್ರಧಾನ ವೀರಪುರುಷರಂ ಬರಿಸಿ ಯಥೋಚಿತಪ್ರತಿಪತ್ತಿಗಳೊಳಿರಿಸಿ ಪೇೞಿಮಿನ್ನೆಮ್ಮಗೆಯ್ವ ನಿಯೋಗಮೇನೆನೆ ಶಾರದ್ವತನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ತಾಯ್ಗಂ ತಂದೆಗಂ ಎಱಗಿ ಪೊಡೆವಟ್ಟು ಪೋಗಲ್ವೇೞ್ದು (ಎಂದು ತಾಯಿಗೂ ತಂದೆಗೂ ನಮಸ್ಕಾರ ಮಾಡಿ ಹೋಗಹೇಳಿ) ಸಂಸಾರ ಅಸಾರಸತೆಯನು ಅಱಿದನುಂ ಮಹಾಸತ್ತ್ವನುಂ ಅಪ್ಪುದಱಿಂ ತನ್ನಂ ತಾನೆ ಸಂತೈಸಿಯುಂ (ಸಂಸಾರದ ಅಸಾರತೆಯನ್ನು ತಿಳಿದವನೂ ಮಹಾಸತ್ವನೂ ಆದುದರಿಂದ ತಾನೇ ತನ್ನನ್ನು ಸಮಾಧಾನಮಾಡಿಕೊಂಡೂ ಚೇತರಿಸಿಕೊಂಡು,) ಚೇತರಿಸಿಯುಂ (ಚೇತರಿಸಿಕೊಂಡು,) ಮಜ್ಜನ ಭೋಜನ ಅನುಲೇಪನ ತಾಂಬೂಲಾದಿಗಳೊಳ್ ಮಹ ಆಹವ ಖೇದಮುಮಂ (ಮಹಾಯುದ್ಧದ ಆಯಾಸವನ್ನೂ) ಮನಖೇದಮುಮನು ಆಱಿಸಿ,(ಮನಸ್ಸಿನ ದುಖವನ್ನೂ ಹೋಗಲಾಡಿಸಿ,) ಮಂತ್ರಶಾಲಾ ಅಂತಸ್ಥಿತ ಕನಕವಿಷ್ಟರ ಆರೂಢನಾಗಿ (ಮಂತ್ರಶಾಲೆಯ ಒಳಗಿರುವ ಚಿನ್ನದ ಪೀಠದ ಮೇಲೆ ಕುಳಿತು) ಶಲ್ಯ ಶಕುನಿ ಕೃಪ ಕೃತವರ್ಮ ಅಶ್ವತ್ಥಾಮ ಪ್ರಧಾನ ವೀರಪುರುಷರಂ ಬರಿಸಿ (ಮುಖ್ಯ ವೀರಪುರುಷರನ್ನು ಬರಮಾಡಿಕೊಂಡು,) ಯಥೋಚಿತ ಪ್ರತಿಪತ್ತಿಗಳೊಳು ಇರಿಸಿ ( ಯಥೋಚಿತವಾದ ಸತ್ಕಾರಗಳನ್ನು ಮಾಡಿ) ಪೇೞಿಮ್ ಇನ್ನೆಉ ಎಮ್ಮಗೆಯ್ವ ನಿಯೋಗಂ ಏನೆನೆ ಶಾರದ್ವತನಿಂತೆಂದಂ- (‘ನಾವು ಇನ್ನು ಮಾಡಬೇಕಾದ ಕಾರ್ಯವೇನೆಂದು ಹೇಳಿ’ ಎನ್ನಲು ಕೃಪನು ಹೀಗೆಂದು ಹೇಳಿದನು)

ದುರ್ಯೋಧನನ ಮಂತ್ರಾಲೋಚನೆ ಸಂಪಾದಿಸಿ

ವಚನ:ಅರ್ಥ:ಎಂದು - ದುರ್ಯೋಧನನು, ತಾಯಿಗೂ ತಂದೆಗೂ ನಮಸ್ಕಾರ ಮಾಡಿ ಹೋಗಹೇಳಿ ಸಂಸಾರದ ಅಸಾರತೆಯನ್ನು ತಿಳಿದವನೂ ಮಹಾಸತ್ವನೂ ಆದುದರಿಂದ ತಾನೇ ತನ್ನನ್ನು ಸಮಾಧಾನಮಾಡಿಕೊಂಡೂ ಚೇತರಿಸಿಕೊಂಡು, ಸ್ನಾನ, ಊಟ, ಗಂಧ, ತಾಂಬೂಲ ಮೊದಲಾದವುಗಳಿಂದ ಮಹಾಯುದ್ಧದ ಆಯಾಸವನ್ನೂ ಮನಸ್ಸಿನ ದುಖವನ್ನೂ ಹೋಗಲಾಡಿಸಿಕೊಂಡನು. ಮಂತ್ರಶಾಲೆಯ ಒಳಗಿರುವ ಚಿನ್ನದ ಪೀಠದ ಮೇಲೆ ಕುಳಿತು ಶಲ್ಯ, ಶಕುನಿ, ಕೃಪ, ಕೃತವರ್ಮ, ಅಶ್ವತ್ಥಾಮರೇ ಮೊದಲಾದ ಮುಖ್ಯ ವೀರಪುರುಷರನ್ನು ಬರಮಾಡಿ ಯಥೋಚಿತವಾದ ಸತ್ಕಾರಗಳನ್ನು ಮಾಡಿ ‘ನಾವು ಇನ್ನು ಮಾಡಬೇಕಾದ ಕಾರ್ಯವೇನೆಂದು ಹೇಳಿ’ ಎನ್ನಲು ಕೃಪನು ಹೀಗೆಂದು ಹೇಳಿದನು.
ಉ|| ಸಂಗತ ನೀತಿಶಾಸ್ತ್ರವಿದರಪ್ಪರವಂದಿರ ತಮ್ಮ ತಮ್ಮ ಕ
ಜ್ವಂಗಳ ಮೆಯ್ಗಳೊಳ್ ಪುಸಿದದಂ ಕಡುನನ್ನಿಯೆ ಮಾಡಿ ತೋರ್ಪರು|
ತ್ತುಂಗ ಸುಸೂಕ್ಷ್ಮಪಾರ್ಶ್ವಕೃಶ ಕೋಮಳ ನಿಮ್ನ ಘನೋನ್ನತ ಪ್ರದೇ
ಶಂಗಳನಾ ಸಮಾನತಳದಲ್ಲಿಯೆ ಚಿತ್ರಕನೆಯ್ದೆ ತೋರ್ಪವೋಲ್|| ೨೧ ||
ಪದ್ಯ-೦೦:ಪದವಿಭಾಗ-ಅರ್ಥ:ಸಂಗತ ನೀತಿಶಾಸ್ತ್ರವಿದರಪ್ಪರು (ಚೆನ್ನಾಗಿ ನೀತಿ ಶಾಸ್ತ್ರಬಲ್ಲವರು) ಅವಂದಿರ ತಮ್ಮ ತಮ್ಮ ಕಜ್ವಂಗಳ ಮೆಯ್ಗಳೊಳ್ (ಅವರು ಅವರವರ ಕಾರ್ಯಗಳ ವಿಷಯದಲ್ಲಿ,) ಪುಸಿದ ಅದಂ ಕಡುನನ್ನಿಯೆ(ನನ್ನಿ- ಸತ್ಯ) ಮಾಡಿ ತೋರ್ಪರು (ಸುಳ್ಳಾಗಿರುವ ಅದನ್ನೇ ಅತ್ಯಂತ ಸತ್ಯವನ್ನಾಗಿ ಮಾಡಿ ತೋರಿಸುವರು, ಅದು ಹೇಗೆಂದರೆ), ಉತ್ತುಂಗ ಸುಸೂಕ್ಷ್ಮ ಪಾರ್ಶ್ವಕೃಶ ಕೋಮಳ ನಿಮ್ನ ಘನೋನ್ನತ ಪ್ರದೇಶಂಗಳನು ಆ ಸಮಾನ ತಳದಲ್ಲಿಯೆ ಚಿತ್ರಕನು ಎಯ್ದೆ ತೋರ್ಪವೋಲ್ (ಚಿತ್ರವನ್ನು ಬರೆಯುವವನು ಅತಿ ಎತ್ತರವಾದ, ಅತಿಸೂಕ್ಷ್ಮವಾದ, ಪಕ್ಕದಲ್ಲಿರುವ ತೆಳ್ಳಗಿರುವ, ಕೋಮಲವಾಗಿರುವ, ತಗ್ಗಾಗಿರುವ, ದಪ್ಪವಾಗಿರುವ, ಉನ್ನತವಾಗಿರುವ ಪ್ರದೇಶಗಳನ್ನು (ತಾವು ಬರೆಯುವ) ಪಟದ (ಚಿತ್ರದ) ಸಮ ಪ್ರದೇಶದಲ್ಲಿಯೇ ತೋರಿಸುವ ಹಾಗೆ-)
ಪದ್ಯ-೦೦:ಅರ್ಥ: (ಚೆನ್ನಾಗಿ ನೀತಿ ಶಾಸ್ತ್ರಬಲ್ಲವರು ಅವರು ಅವರವರ ಕಾರ್ಯಗಳ ವಿಷಯದಲ್ಲಿ,) ಚಿತ್ರವನ್ನು ಬರೆಯುವವನು ಅತಿ ಎತ್ತರವಾದ, ಅತಿಸೂಕ್ಷ್ಮವಾದ, ಪಕ್ಕದಲ್ಲಿರುವ ತೆಳ್ಳಗಿರುವ, ಕೋಮಲವಾಗಿರುವ, ತಗ್ಗಾಗಿರುವ, ದಪ್ಪವಾಗಿರುವ, ಉನ್ನತವಾಗಿರುವ ಪ್ರದೇಶಗಳನ್ನು (ತಾವು ಬರೆಯುವ) ಪಟದ (ಚಿತ್ರದ) ಸಮ ಪ್ರದೇಶದಲ್ಲಿಯೇ ತೋರಿಸುವ ಹಾಗೆ ಚೆನ್ನಾಗಿ (ರಾಜ)ನೀತಿಶಾಸ್ತ್ರವನ್ನು ತಿಳಿದವರು ತಮ್ಮ ತಮ್ಮ ಕಾರ್ಯಗಳ ವಿಷಯದಲ್ಲಿ ಸುಳ್ಳಾದುದನ್ನೂ ಪೂರ್ಣ ಸತ್ಯವನ್ನಾಗಿಯೇ ಮಾಡಿ ತೋರಿಸುವರು.
ವ|| ಅದಱಿನೆಂತಪ್ಪ ಬುದ್ಧಿಯೊಡೆಯರ ಪೇೞ್ವಸಾಮಾನ್ಯಮಪ್ಪುಪಾಯಂಗಳುಂ ನಿನಗೆ ದೈವಂ ವಿಮುಖಮಪ್ಪುವಱಿಂದಪಾಯಂ ಬಹುಳವಾಗಿ ಬಂದುದಾಱುಂ ಗುಣಂಗಳನೆ ತಂದುವು ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕತಂತ್ರಂಗಳ್ ಪಣ್ಣಿದ ಜಂತ್ರಂಗಳಂತೆ ಕೞಕುೞ ಮಾದುವಾರ್ಗಮಭೇದ್ಯರುಮಸಾಧ್ಯರುಮಪ್ಪಯೋನಿಸಂಭವರೆ ಹೇಳಸಾಧ್ಯರಾದವರು ಕಾರಣದಿಂ-
ವಚನ:ಪದವಿಭಾಗ-ಅರ್ಥ:ಅದಱಿನಿಂ ಅಂತಪ್ಪ (ಆದುದರಿಂದ ಹಾಗಿರುವ) ಬುದ್ಧಿಯೊಡೆಯರ ಪೇೞ್ವ ಸಾಮಾನ್ಯಮಪ್ಪ ಉಪಾಯಂಗಳುಂ (ಎಂತಹ ಬುದ್ಧಿವಂತರಾದವರೂ ಹೇಳುವ ಸಾಮಾನ್ಯವಾದ ಸಾಮ, ದಾನ, ಬೇಧ, ದಂಡ, ಉಪಾಯಗಳೂ,) ನಿನಗೆ ದೈವಂ ವಿಮುಖಂ ಅಪ್ಪುವಱಿಂದ (ನಿನಗೆ ದೈವ ವಿರೋಧವಾಗಿರುವುದರಿಂದ) ಅಪಾಯಂ ಬಹುಳವಾಗಿ ಬಂದುದು (ಅಪಾಯಗಳು ಬಹಳವಾಗಿ ಬಂದವು); ಆಱುಂ ಗುಣಂಗಳನೆ ತಂದುವು (ವಿಶೇಷ ಅಪಾಯಕಾರಿಯಾದ ರಾಜ ಸಂಧಿ ವಿಗ್ರಹಯಾನ, ಆಸನ, ಸಂಶಯ/ ಸಂಶ್ರಯ, ದ್ವೈ ಭಾವ ಎಂಬ ಆರು ಗುಣಗಳನ್ನೇ ಉಂಟುಮಾಡಿದವು.) ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕ ತಂತ್ರಂಗಳ್ ಪಣ್ಣಿದ ಜಂತ್ರಂಗಳಂತೆ ಕೞಕುೞಂ ಅದುವು, (ಆರು ವಿಧದ ಬಲ/ ಸೈನ್ಯವೆಂದು ಹೇಳುವ, ಮೌಲ, ಭೃತ್ಯ, ಸಹೃತ್, ಶ್ರೇಣಿ, ಮಿತ್ರ, ಆಟವಿಕ ತಂತ್ರಗಳು ಸಿದ್ಧಪಡಿಸಿದ ಕೃತಕಯಂತ್ರಗಳಂತೆ ಚೆಲ್ಲಾಪಿಲ್ಲಿಯಾದವು), ಆರ್ಗಂ ಅಭೇದ್ಯರುಂ ಅಸಾಧ್ಯರುಂ ಅಪ್ಪ ಅಯೋನಿಸಂಭವರೆ ಹೇಳ ಸಾಧ್ಯರಾದವರು (ಯಾರಿಗೂ ಭೇದಿಸುವುದಕ್ಕಾಗದವರೂ, ಅಸಾಧ್ಯರೂ ಅಯೋನಿಜರೂ ಆದ ದ್ರೋಣಾಚಾರ್ಯರೇ, ಹೇಳಯ್ಯಾ ಜಯಿಸಲ್ಪಟ್ಟರು. ಆ ಕಾರಣದಿಂದ- ) ಕಾರಣದಿಂ- ಆ ಕಾರಣದಿಂದ-
ವಚನ:ಅರ್ಥ:ಆದುದರಿಂದ ಎಂತಹ ಬುದ್ಧಿವಂತರಾದವರೂ ಹೇಳುವ ಸಾಮಾನ್ಯವಾದ ಉಪಾಯಗಳೂ ನಿನಗೆ ದೈವ ವಿರೋಧವಾಗಿರುವುದರಿಂದ, ಸಾಮಾನ್ಯವಾದ ಸಾಮ, ದಾನ, ಬೇಧ, ದಂಡ, ಉಪಾಯಗಳೂ, ಅಪಾಯಗಳಾಗಿ ಬಹಳವಾಗಿ ಬಂದವು. ಅವು ವಿಶೇಷ ಅಪಾಯಕಾರಿಯಾದ ರಾಜ ಸಂಧಿ ವಿಗ್ರಹಯಾನ, ಆಸನ, ಸಂಶಯ, ದ್ವೆ ಭಾವ ಎಂಬ ಆರು ಗುಣಗಳನ್ನೇ ಉಂಟುಮಾಡಿದವು. ಆರು ವಿಧದ ಬಲ/ ಸೈನ್ಯವೆಂದು ಹೇಳುವ, ಮೌಲ, ಭೃತ್ಯ, ಸಹೃತ್, ಶ್ರೇಣಿ, ಮಿತ್ರ, ಆಟವಿಕ ತಂತ್ರಗಳು ಸಿದ್ಧಪಡಿಸಿದ ಕೃತಕಯಂತ್ರಗಳಂತೆ ಚೆಲ್ಲಾಪಿಲ್ಲಿಯಾದವು. ಯಾರಿಗೂ ಭೇದಿಸುವುದಕ್ಕಾಗದವರೂ, ಅಸಾಧ್ಯರೂ ಅಯೋನಿಜರೂ ಆದ ದ್ರೋಣಾಚಾರ್ಯರೇ, ಹೇಳಯ್ಯಾ ಜಯಿಸಲ್ಪಟ್ಟರು. ಆ ಕಾರಣದಿಂದ-
ಹರಿಣಿ||ಅೞಿದರಧಿಕರ್ ಭೀಷ್ಮದ್ರೋಣಾಂಗನಾಯಕರೀಗಳಿ
ನ್ನುೞಿದರವರಿಂ ಮೇಲೆಂಬನ್ನರ್ ಮಹಾರಥರಲ್ತೆ ಮುಂ|
ಕೞಿದುದರೊಳೇಂ ನಷ್ಟಂ ನಷ್ಟಂ ಮೃತಂ ಮೃತಮೆಂಬುದಿ
ನ್ನೞಲದಿರಿದೇಕಿಲ್ಲಿಂ ಮೇಲಪ್ಪುದಂ ಬಗೆ ಭೂಪತೀ|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಅೞಿದರ್ (ಅಳಿದರು)ಅಧಿಕರ್ ಭೀಷ್ಮದ್ರೋಣ ಅಂಗನಾಯಕರ್ - (ಅಧಿಕರಾದ/ ಬಲಾಢ್ಯ ಸೇನಾಧಪತಿಗಳಾದ ಭೀಷ್ಮ ದ್ರೋಣ ಕರ್ಣರು ಸತ್ತರು.) ಈಗಳು ಇನ್ನುೞಿದರ್ ಅವರಿಂ ಮೇಲೆಂಬನ್ನರ್ ಮಹಾರಥರಲ್ತೆ (ಇನ್ನುಳಿದವರು ಅವರಿಗಿಂತ ಮೇಲೆನ್ನುವ ಮಹಾರಥರು ಅಲ್ಲವೇ?) ಮುಂ ಕೞಿದುದರೊಳೇಂ (ಮೊದಲು ಕಳೆದುದರಲ್ಲಿ ಏನು? ಮೊದಲು ಕಳೆದುಹೋದುದನ್ನು ಚಿಂತಿಸುವುದರಲ್ಲಿ ಏನು ಪ್ರಯೋಜನ?) ನಷ್ಟಂ ನಷ್ಟಂ (ಹೋದದ್ದು ಹೋಯಿತು) ಮೃತಂ ಮೃತಂ ಎಂಬುದು, (ಸತ್ತದ್ದು ಸತ್ತಿತು ಎಂದುಕೊಳ್ಳುವುದು.) ಇನ್ನೞಲದಿರ್ ಇದು ಏಕೆ (ಇನ್ನು ಇದು ಏಕೆ ಎಂದು ದುಖಿಸಬೇಡ,) ಇಲ್ಲಿಂ ಮೇಲಪ್ಪುದಂ ಬಗೆ ಭೂಪತೀ (ಮಹಾರಾಜನೇ ಇಲ್ಲಿಂದ ಮುಂದಾಗಬೇಕಾದುದನ್ನು ಯೋಚಿಸು.)
ಪದ್ಯ-೨೨:ಅರ್ಥ: ಅಧಿಕರಾದ/ ಬಲಾಢ್ಯ ಸೇನಾಧಪತಿಗಳಾದ ಭೀಷ್ಮ ದ್ರೋಣ ಕರ್ಣರು ಸತ್ತರು. ಇನ್ನುಳಿದವರು ಅವರಿಗಿಂತ ಮೇಲೆನ್ನುವ ಮಹಾರಥರು ಅಲ್ಲವೇ? ಮೊದಲು ಕಳೆದುಹೋದುದನ್ನು ಚಿಂತಿಸುವುದರಲ್ಲಿ ಏನು ಪ್ರಯೋಜನ? ನಷ್ಟವಾದುದು ನಷ್ಟವಾಯಿತು, ಸತ್ತದ್ದು ಸತ್ತಿತು ಎಂದುಕೊಳ್ಳುವುದು. ಇನ್ನು ಇದು ಏಕೆ ಎಂದು ದುಖಿಸಬೇಡ, ಮಹಾರಾಜನೇ ಇಲ್ಲಿಂದ ಮುಂದಾಗಬೇಕಾದುದನ್ನು ಯೋಚಿಸು
ಕಂ|| ನೆಱಿವೊಡೆ ನೆರವೊಳೆಮಿನಿಬರು
ಮಿಱಿ ಕಲಹಮಪಾಯ ಬಹುಳಮಿನ್ನುಂ ನಯದ|
ತ್ತೆಱಗುವೊಡೆ ಸಂಧಿ ಹರಿಗನೊ
ಳುಱುಗುಂ ನಿನಗಿಂತಿವೆರಡೆ ಕಜ್ಜಂ ನೃಪತೀ|| ೨೩ ||
ಪದ್ಯ-೨೩:ಪದವಿಭಾಗ-ಅರ್ಥ:ನೆಱಿವೊಡೆ/ ಇರಿವೊಡೆ ನೆರಂ ಒಳೆಮ್ (ನೆರಂ ಒಳೆಮ್- ನೆರವಿಗೆ ಇದ್ದೇವೆ) ಇನಿಬರುಂ, ಇಱಿ (ಯುದ್ಧಮಾಡುವುದಾದರೆ ನಾವಿಷ್ಟು ಜನವೂ ಸಹಾಯಕ್ಕೆ ಇದ್ದೇವೆ. ಇರಿ- ಯುದ್ಧಮಾಡು.) ಕಲಹಂ ಅಪಾಯ ಬಹುಳಂ ( ಯುದ್ಧವು ಹೆಚ್ಚಿನ ಅಪಾಯವುಳ್ಳದ್ದು) ಇನ್ನುಂ ನಯದತ್ತ ಎಱಗುವೊಡೆ (ಎಂದು ಸಂಯ ಕಡೆ ಒಲಿಯುವ ಪಕ್ಷದಲ್ಲಿ ) ಸಂಧಿ ಹರಿಗನೊಳು ಉಱುಗುಂ (ಆರ್ಜುನನಲ್ಲಿ ಇರುವುದು,-ಸಂಧಿಯಾಗುತ್ತದೆ.) ನಿನಗೆ ಇಂತು ಇವು ಎರಡೆ ಕಜ್ಜಂ ನೃಪತೀ ( ರಾಜನೇ ನಿನಗೆ ಇವು ಎರಡೇ (ಮಾಡಬೇಕಾದ) ಕಾರ್ಯಗಳು. )
ಪದ್ಯ-೨೩:ಅರ್ಥ: ಯುದ್ಧಮಾಡುವುದಾದರೆ ನಾವಿಷ್ಟು ಜನವೂ ಸಹಾಯಕ್ಕೆ ಇದ್ದೇವೆ. ಯುದ್ಧಮಾಡು. ಯುದ್ಧವು ಹೆಚ್ಚಿನ ಅಪಾಯವುಳ್ಳದ್ದು; ಇನ್ನು ಸಂಧಿಯ ಕಡೆ ಒಲಿಯುವ ಪಕ್ಷದಲ್ಲಿ ಆರ್ಜುನನಲ್ಲಿ ಸಂಧಿಯಾಗುತ್ತದೆ. ರಾಜನೇ ನಿನಗೆ ಇವು ಎರಡೇ (ಮಾಡಬೇಕಾದ) ಕಾರ್ಯಗಳು.
ವ|| ಎಂಬುದುಂ ಬೞಿಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನನಿಂತೆಂದಂ-
ವಚನ:ಪದವಿಭಾಗ-ಅರ್ಥ: ಎಂಬುದುಂ ಬೞಿಕ್ಕಿನ ನುಡಿಗೆ (ಆಮೇಲಿನ- ಎರಡನೆಯ ಕಾರ್ಯದ ಮಾತಿಗೆ) ಸೈರಿಸಲಾಱದೆ ಫಣಿಕೇತನನು ಇಂತು ಎಂದಂ (ಒಪ್ಪದೆ ದುಯೋಧನನು ಹೀಗೆಂದನು)-
ವಚನ:ಅರ್ಥ:ವ|| ಎನ್ನಲು ಆಮೇಲಿನ- ಎರಡನೆಯ ಕಾರ್ಯದ ಮಾತಿಗೆ ಸೈರಿಸಲಾರದೆ ದುಯೋಧನನು ಹೀಗೆಂದನು.
ಮ|| ಪೞವಾಡಯ್ದನೆ ಬೇಡೆಯುಂ ಕುಡದ ನಾನೇನೆಂದು ಸಂಧಾನಮಂ
ಗೞಿಯಿಪ್ಪೆಂ ಗೞಿಯಿಪ್ಪನಂಗನೃಪನಂ ನೀನೆತ್ತಿ ತಂದೆನ್ನ ಮುಂ|
ದಿೞಿಪಲ್ಕಾರ್ಪೊಡಮಾವುದಾಗಿ ಕೃಪ ನೀಂ ಪೇೞ್ದಿಪ್ಪೆಯಾ ಮಾತನಿ
ನ್ನುೞಿ ದುರ್ಯೋಧನನಲ್ಲನೇ ಕಳದೊಳಂ ಕಾಣ್ದಂತು ಕೌಂತೇಯರಂ|| ೨೪ ||
ಪದ್ಯ-೨೪:ಪದವಿಭಾಗ-ಅರ್ಥ:ಪೞವಾಡು ಅಯ್ದನೆ ಬೇಡೆಯುಂ ಕುಡದ ನಾನು (ಹಳೆಯ ವಾಡ- ಹಳೆಯ ಗ್ರಾಮಗಳು ಐದನ್ನು ಬೇಡಿದರೂ ಕೊಡದ ನಾನು) ಏನೆಂದು ಸಂಧಾನಮಂ ಗೞಿಯಿಪ್ಪೆಂ (ಏನೆಂಬುದಾಗಿ ಸಂಧಿಯನ್ನು ಮಾಡಲಿ) ಗೞಿಯಿಪ್ಪಂ (ಪ್ಪೆಂ) ಅಂಗನೃಪನಂ ನೀನು ಎತ್ತಿ ತಂದು ಎನ್ನ ಮುಂದೆ ಇೞಿಪಲ್ಕೆ ಆರ್ಪೊಡಂ (ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಧಿಯನ್ನು) ಗಳಿಯುಸುತ್ತೇನೆ.) ಆವುದಾಗಿ ಕೃಪ ನೀಂ ಪೇೞ್ದಿಪ್ಪೆಯಾ (ಕೃಪನೇ ನೀನು ಈ ಮಾತನ್ನು ಯಾವುದೆಂದು ಹೇಳುತ್ತೀಯೆ. ಆ ಮಾತಿಗೆ ಅರ್ಥವಿದೆಯೇ ಎಂದು ಭಾವ.) ಮಾತನು ಇನ್ನು ಉೞಿ (ಇನ್ನು ಮಾತನ್ನು ಬಿಡು.) ದುರ್ಯೋಧನನಲ್ಲನೇ ಕಳದೊಳಂ ಕಾಣ್ದಂತು ಕೌಂತೇಯರಂ (ಪಾಂಡವರನ್ನು ಯುದ್ಧಭೂಮಿಯಲ್ಲಿ ಮಾತ್ರಾ ಕಾನುವವನು ದುರ್ಯೋಧನನು ಎಂ ಹೆಸರುಳ್ಳವನಲ್ಲವೇ ನಾನು?)
ಪದ್ಯ-೨೪:ಅರ್ಥ: ಹಳೆಯ ಗ್ರಾಮಗಳು ಐದನ್ನು ಬೇಡಿದರೂ ಕೊಡದ ನಾನು ಏನೆಂಬುದಾಗಿ ಸಂಧಿಯನ್ನು ಮಾಡಲಿ? ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಧಿಯನ್ನು) ಗಳಿಯುಸುತ್ತೇನೆ. ಕೃಪನೇ ನೀನು ಈ ಮಾತನ್ನು ಯಾವುದೆಂದು ಹೇಳುತ್ತೀಯೆ. ಇನ್ನು ಮಾತನ್ನು ಬಿಡು. ಪಾಂಡವರನ್ನು ಯುದ್ಧಭೂಮಿಯಲ್ಲಿ ಮಾತ್ರಾ ಕಾನುವವನು ದುರ್ಯೋಧನನು ಎಂ ಹೆಸರುಳ್ಳವನಲ್ಲವೇ ನಾನು?
ವ|| ಎಂಬುದು ಜಳಧರಧ್ವನಿಯಿನಶ್ವತ್ಥಾಮನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದು ಜಳಧರ(ಮೋಡ) ಧ್ವನಿಯಿಂ ಅಶ್ವತ್ಥಾಮನು ಇಂತೆಂದಂ (ಎನ್ನಲು ಗುಡುಗಿನ ಧ್ವನಿಯಿಂದ ಅಶ್ಚತ್ಥಾಮನು ಹೀಗೆಂದನು)-
ವಚನ:ಅರ್ಥ: ಎನ್ನಲು ಗುಡುಗಿನ ಧ್ವನಿಯಿಂದ ಅಶ್ಚತ್ಥಾಮನು ಹೀಗೆಂದನು-
ಚಂ|| ಕುಳಬಳಶೌರ್ಯಧೈರ್ಯಯುತರೆಲ್ಲರುಮಂ ಪೆಱಗಿಕ್ಕಿ ಕರ್ಣನಂ
ಪಳಯಿಸುತಿರ್ಪೆಯೇನೊ ಗಳ ನಿನ್ನಯ ತಮ್ಮನ ನೆತ್ತರಂ ಭಯಂ|
ಗೊಳೆ ಪವಮಾನಸೂನು ತವೆ ಪೀರ್ದೆಡೆಯೊಳ್ ಕಲಿ ಕರ್ಣನೇಕೆ ಪೇೞು
ಮಿಳ ಮಿಳ ನೋಡುತಿರ್ದನವನುರ್ಕನಿಳಾಧಿಪರುಂಟೆ ನಿನ್ನವೋಲ್|| ೨೫ ||
ಪದ್ಯ-೨೫:ಪದವಿಭಾಗ-ಅರ್ಥ:ಕುಳ ಬಳ ಶೌರ್ಯ ಧೈರ್ಯಯುತರು ಎಲ್ಲರುಮಂ ಪೆಱಗಿಕ್ಕಿ (ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು - ಹೊರಗಿಟ್ಟು) ಕರ್ಣನಂ ಪಳಯಿಸುತಿರ್ಪೆಯೇನೊ ಗಳ (ಕರ್ಣನನ್ನು ಕುರಿತು ಹೊಗಳಿ ಪ್ರಲಾಪಮಾಡುತ್ತೀಯನೋ ಗಡ-ದಿಟಕ್ಕೂ!) ನಿನ್ನಯ ತಮ್ಮನ ನೆತ್ತರಂ ಭಯಂಗೊಳೆ ಪವಮಾನಸೂನು(ಭೀಮನು) ತವೆ ಪೀರ್ದ ಎಡೆಯೊಳ್ (ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುವ ಹಾಗೆ ಭೀಮನು ಪೂರ್ಣ ಕುಡಿದ ಸಂದರ್ಭದಲ್ಲಿ) ಕಲಿ ಕರ್ಣನು ಏಕೆ ಪೇೞು ಮಿಳ ಮಿಳ ನೋಡುತಿರ್ದನು ಅವನು ಉರ್ಕಂ ಇಳಾಧಿಪರುಂಟೆ ನಿನ್ನವೋಲ್ (ಶೂರನಾದ ಕರ್ಣನು ಏಕೆ ಮಿಟಮಿಟನೆ ನೋಡುತ್ತಿದ್ದ? ಹೇಳು; ನಿನ್ನ ಹಾಗಿರುವ ರಾಜರೂ ಉಂಟೇ?)
ಪದ್ಯ-೨೬:ಅರ್ಥ: ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು ಕರ್ಣನನ್ನು ಕುರಿತು ಹೊಗಳಿ ಪ್ರಲಾಪಮಾಡುತ್ತೀಯನೋ ಗಡ ದಿಟಕ್ಕೂ!. ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುವ ಹಾಗೆ ಭೀಮನು ಪೂರ್ಣವಾಗಿ ಕುಡಿದ ಸಂದರ್ಭದಲ್ಲಿ ಶೂರನಾದ ಕರ್ಣನು ಏಕೆ ಮಿಟಮಿಟನೆ ನೋಡುತ್ತಿದ್ದ ಹೇಳು? ನಿನ್ನ ಹಾಗಿರುವ ರಾಜರೂ ಉಂಟೇ?
ಕಂ|| ಅಂಬಿಗನೊಳಾದುದಿದು ಋಣ
ಸಂಬಂಧಂ ನಿನಗಮೋಘಮಿದನುೞಿದವರಾ|
ರ್ಗಂ ಬಿಸುಡಲ್ಕೇಂ ಬರ್ಕುಮೆ
ನೀಂ ಬೆಸಸುವುದೆನ್ನನಾಂತರಂ ತವೆ ಕೊಲ್ವೆಂ|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ಅಂಬಿಗನೊಳು ಆದುದು ಇದು ಋಣಸಂಬಂಧಂ (ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು.) ನಿನಗೆ ಅಮೋಘಂ (ನಿನಗೆ ಮಾತ್ರಾ ಇದು ಶ್ರೇಷ್ಠ) ಇದನು ಉೞಿದವರ್ ಆರ್ಗಂ ಬಿಸುಡಲ್ಕೇಂ ಬರ್ಕುಮೆ (ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ? ಬರುವುದೇ?) ನೀಂ ಬೆಸಸುವುದು (ನೀನು ನನಗೆ ಅಪ್ಪಣೆ ಕೊಡು; ನನ್ನನು ಕುರಿತು-,) ಆಂತರಂ ತವೆ ಕೊಲ್ವೆಂ (ಎದುರಿಸಿದವರನ್ನು ಪೂರ್ಣವಾಗಿ/ ಇಲ್ಲದಂತೆ ಕೊಲ್ಲುತ್ತೇನೆ.)
ಪದ್ಯ-೨೬:ಅರ್ಥ: ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು. ನಿನಗೆ ಮಾತ್ರಾ ಇದು ಶ್ರೇಷ್ಠ. ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ? ನೀನು ನನಗೆ ಅಪ್ಪಣೆ ಕೊಡು; ಎದುರಿಸಿದವರನ್ನು ಉಳಿಸದೆ ಕೊಲ್ಲುತ್ತೇನೆ.
ವ|| ಎಂದಶ್ವತ್ಥಾಮಂ ಕರ್ಣನಂ ಪೞಿದು ನುಡಿದೊಡಾ ನುಡಿಗೆ ಮುನಿದು ಕೊಲ್ವನಿತುವರಂ ಬಗೆದು ದುರ್ಯೋಧನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದ ಅಶ್ವತ್ಥಾಮಂ ಕರ್ಣನಂ ಪೞಿದು ನುಡಿದೊಡೆ (ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು) ಆ ನುಡಿಗೆ ಮುನಿದು (ಆ ಮಾತಿಗೆ ಕೋಪಿಸಿಕೊಂಡು) ಕೊಲ್ವ ಅನಿತುವರಂ ಬಗೆದು (ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ) ದುರ್ಯೋಧನನು ಇಂತೆಂದಂ (ದುರ್ಯೋಧನನು ಹೀಗೆಂದನು)-
ವಚನ:ಅರ್ಥ:ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು, ಆ ಮಾತಿಗೆ ಕೋಪಿಸಿಕೊಂಡು ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ ದುರ್ಯೋಧನನು ಹೀಗೆಂದನು.
ಕಂ|| ನಿನ್ನಿಂದಂ ತ್ರಿಭುವನ ರಾ
ಜ್ಯೋನ್ನತಿ ಬಂದೆನಗೆ ಸಾರ್ಗುಮಪ್ಪೊಡಮೊಲ್ಲೆಂ|
ನೀನ್ನುಡಿದು ಬರ್ದುಕಿದೈ ಪೆಱ
ರೆನ್ನಿದಿರೊಳ್ ನುಡಿದು ಕರ್ಣನಂ ಬರ್ದುಕುವರೇ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ನಿನ್ನಿಂದಂ ತ್ರಿಭುವನ ರಾಜ್ಯೋನ್ನತಿ ಬಂದು ಎನಗೆ ಸಾರ್ಗುಂ ಅಪ್ಪೊಡಂ ಒಲ್ಲೆಂ (ನಿನ್ನಿಂದ ಮೂರುಲೋಕದ ರಾಜ್ಯಾಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆಬೇಡ) ನೀನ್ ನುಡಿದು ಬರ್ದುಕಿದೈ (ನೀನಾಗುವ ಹೊತ್ತಿಗೆ ಬದುಕಿದ್ದೀಯೆ.) ಪೆಱರ್ ಎನ್ನಿದಿರೊಳ್ ನುಡಿದು ಕರ್ಣನಂ ಬರ್ದುಕುವರೇ (ನನ್ನ ಎದುರಿನಲ್ಲಿ ಕರ್ಣನನ್ನು ನಿಂದಿಸಿ ಬದುಕುತ್ತಿದ್ದರೆ?)
ಪದ್ಯ-೨೭:ಅರ್ಥ: ನಿನ್ನಿಂದ ಮೂರುಲೋಕದ ರಾಜ್ಯಾಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆಬೇಡ; ಕರ್ಣನ ವಿಷಯವಾಗಿ (ಕೆಟ್ಟುದನ್ನು) ಆಡಿ ನೀನಾಗುವ ಹೊತ್ತಿಗೆ ಬದುಕಿದ್ದೀಯೆ. ನನ್ನ ಎದುರಿನಲ್ಲಿ ಕರ್ಣನನ್ನು ನಿಂದಿಸಿ ಬದುಕುತ್ತಿದ್ದರೆ?- ಎಂದನು ಕೋಪದಿಂದ ದುರ್ಯೋಧನ.
ಚಂ|| ನುಡಿ ನಿನಗಂ ದಿನೇಶತನಯಂಗಮದೆನ್ನಯ ಪಕ್ಕದಾದೊಡಂ
ಮಿಡುಕದೆ ಕೇಳ್ವೆನಲ್ಲಿ ಸಮನಿರ್ವರುಮಾತನತೀತನಾದ ಪಿಂ|
ಬಡಿನೊಳದೆಂತು ಪೇೞು ಪೞಿಯೆ ಕೇಳ್ವೆನೊ ಕೇಳ್ದೊಡೆ ಚಿಃ ಪೆಱಂ ಪೆಱಂ
ನುಡಿದೊಡೆ ಕೇಳ್ದನೆಂದೆನಗೆ ನೋಯನೆ ಸಗ್ಗದೊಳಿರ್ದಿನಾತ್ಮಜಂ|| ೨೮||
ಪದ್ಯ-೨೮:ಪದವಿಭಾಗ-ಅರ್ಥ:ನುಡಿ ನಿನಗಂ ದಿನೇಶತನಯಂಗಂ ಅದು ಎನ್ನಯ ಪಕ್ಕದೆ ಆದೊಡಂ ಮಿಡುಕದೆ ಕೇಳ್ವೆಂ, (ನಿನಗೂ ಕರ್ಣನಿಗೂ ನನ್ನ ಸಮಕ್ಷಮದಲ್ಲಿ ವಾಗ್ವಾದವಾದರೆ ಸುಮ್ಮನಿದ್ದು ಕೇಳುತ್ತೇನೆ.). ಅಲ್ಲಿ ಸಮಂ ಇರ್ವರುಂ (ಅಲ್ಲಿ ನೀವು ಇಬ್ಬರೂ ನನಗೆ ಸಮ). ಆತನು ಅತೀತನಾದ ಪಿಂಬಡಿನೊಳು ಅದೆಂತು ಪೇೞು ಪೞಿಯೆ ಕೇಳ್ವೆನೊ (ಅವನು ಸತ್ತುಹೋದ ಬಳಿಕ ಅದು ಹೇಗೆ ಅವನ ವಿಷಯವಾದ ನಿಂದೆಯನ್ನು ಕೇಳುವೆನು ಹೇಳು.) ಕೇಳ್ದೊಡೆ ಚಿಃ ಪೆಱಂ ಪೆಱಂ ನುಡಿದೊಡೆ ಕೇಳ್ದನು ಎಂದು (ಹಾಗೆ ಕೇಳಿದರೆ ಸ್ವರ್ಗದಲ್ಲಿರುವ ಕರ್ಣನು ಚಿಃ, ಇದನ್ನು- ನಿಂದೆಯನ್ನು ಕೇಳಿದನು ಎಂದು) ಎನಗೆ ನೋಯನೆ ಸಗ್ಗದೊಳಿರ್ದ ಇನಾತ್ಮಜಂ (ನನ್ನ ವಿಷಯದಲ್ಲಿ ನೊಂದುಕೊಳ್ಳುವುದಿಲ್ಲವೇ ಸ್ವರ್ಗದಲ್ಲಿರುವ ಕರ್ಣನು? )
ಪದ್ಯ-೨೮:ಅರ್ಥ: ನಿನಗೂ ಕರ್ಣನಿಗೂ ನನ್ನ ಸಮಕ್ಷಮದಲ್ಲಿ ವಾಗ್ವಾದವಾದರೆ ಸುಮ್ಮನಿದ್ದು ಕೇಳುತ್ತೇನೆ. ಅಲ್ಲಿ ನೀವು ಇಬ್ಬರೂ ನನಗೆ ಸಮ. ಅವನು ಸತ್ತುಹೋದ ಬಳಿಕ ಅದು ಹೇಗೆ ಅವನ ವಿಷಯವಾದ ನಿಂದೆಯನ್ನು ಕೇಳುವೆನು ಹೇಳು. ಹಾಗೆ ಕೇಳಿದರೆ ಸ್ವರ್ಗದಲ್ಲಿರುವ ಕರ್ಣನು ಚಿಃ, ಇತರರು ನನ್ನನ್ನು ಬಯ್ದರೆ (ದುರ್ಯೋಧನನು) ಇದನ್ನು ಕೇಳಿದನು ಎಂದು ನನ್ನ ವಿಷಯದಲ್ಲಿ ನೊಂದುಕೊಳ್ಳುವುದಿಲ್ಲವೇ?
ವ|| ಎಂಬುದುಮೀ ನುಡಿಯೆ ನುಡಿಯೆ ನಿನ್ನ ಕೂರ್ಮೆಗಂ ತಕ್ಕೂರ್ಮೆಗಂ ದೊರೆಯಪ್ಪುದಾದೊಡಮರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆನೆಂದಶ್ವತ್ಥಾಮನಾಸ್ಥಾನದಿಂದೆೞ್ದು ಪೋದನಾಗಳ್ ಭೂನಾಥಂ ಮದ್ರರಾಜನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಈ ನುಡಿಯೆ ನಿನ್ನ ಕೂರ್ಮೆಗಂ ತಕ್ಕು ಊರ್ಮೆಗಂ ದೊರೆಯಪ್ಪುದು (ಎನ್ನಲು ಈ ಮಾತು ನಿನ್ನ ಸ್ನೇಹಕ್ಕೂ ಯೋಗ್ಯವಾದ ನಡತೆಗೂ ಸಮಾನವಾಗಿದೆ (ಯೋಗ್ಯವಾಗಿದೆ)) ಆದೊಡಂ ಆರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆನು ಎಂದು ( ಆದರೂ ಶತ್ರುಸೈನ್ಯವನ್ನು ಪೂರ್ಣವಾಗಿ ಕೊಂದಲ್ಲದೆ ನಿನ್ನ ಮುಖವನ್ನು ನೋಡುವುದಿಲ್ಲ ಎಂದು) ಅಶ್ವತ್ಥಾಮನು ಆಸ್ಥಾನದಿಂದ ಎೞ್ದು ಪೋದನು ಆಗಳ್ (ಅಶ್ವತ್ಥಾಮನು ಅಲ್ಲಿಂದ ಎದ್ದುಹೋದನು. ಆಗ) ಭೂನಾಥಂ ಮದ್ರರಾಜನನಿಂತೆಂದಂ (ಆಗ ರಾಜನಾದ ದುರ್ಯೋಧನನು ಶಲ್ಯನನ್ನು ಕುರಿತು ಹೀಗೆಂದನು)-

ಶಲ್ಯನಿಗೆ ವೀರಪಟ್ಟ / ಸೇನಾದಿಪತಿ ಪಟ್ಟ ಸಂಪಾದಿಸಿ

ವಚನ:ಅರ್ಥ:ಎನ್ನಲು ಈ ಮಾತು ನಿನ್ನ ಸ್ನೇಹಕ್ಕೂ ಯೋಗ್ಯವಾದ ನಡತೆಗೂ ಸಮಾನವಾಗಿದೆ (ಯೋಗ್ಯವಾಗಿದೆ). ಆದರೂ ಶತ್ರುಸೈನ್ಯವನ್ನು ಪೂರ್ಣವಾಗಿ ಕೊಂದಲ್ಲದೆ ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಅಶ್ವತ್ಥಾಮನು ಅಲ್ಲಿಂದ ಎದ್ದುಹೋದನು. ಆಗ ರಾಜನಾದ ದುರ್ಯೋಧನನು ಶಲ್ಯನನ್ನು ಕುರಿತು ಹೀಗೆಂದನು -
ಚಂ|| ಇನತನಯಂಗೆ ಸಾವುಮೆನಗಿಂತಿನಿತೊಂದೞಲುಂ ದಿನೇಶ ಪು
ತ್ರನೆ ನಿಮಗಿಂಬುಕೆಯ್ಯದುದಱಿಂ ದೊರೆಕೊಂಡುದು ವೀರ ಲಕ್ಷ್ಮಿನಿ|
ಮ್ಮನುಬಲದಿಂದಮಲ್ಲದೆನಗಾಗದು ದಲ್ ಸಲೆ ಪಟ್ಟಮಂ ಸಮಂ
ತೆನಗೆಯೆ ಮಾೞ್ಪೊಡೇ ತೊದಳೊ ನೀಮೆ ದಲಾಂಪುದು ಬೀರವಟ್ಟಮಂ|| ೨೯ ||
ಪದ್ಯ-೨೯:ಪದವಿಭಾಗ-ಅರ್ಥ:ಇನತನಯಂಗೆ ಸಾವುಂ ಎನಗೆ ಇಂತು ಇನಿತೊಂದು ಅೞಲುಂ (ಕರ್ಣನಿಗೆ ಸಾವೂ, ನನಗೆ ಹೀಗೆ ಇಷ್ಟೊಂದು ದುಃಖವೂ ) ದಿನೇಶ ಪುತ್ರನೆ ನಿಮಗೆ ಇಂಬುಕೆಯ್ಯದುದಱಿಂ ದೊರೆಕೊಂಡುದು (ಕರ್ಣನು ನೀವು ಹೇಳಿದ ಹಾಗೆ ಕೇಳದುದರಿಂದ ಉಂಟಾಯಿತು.) ವೀರಲಕ್ಷ್ಮಿ ನಿಮ್ಮ ಅನುಬಲದಿಂದಂ ಅಲ್ಲದೆ ಎನಗಾಗದು ದಲ್! (ವೀರಲಕ್ಷ್ಮಿಯು ನಿಮ್ಮ ಸಹಾಯವಿಲ್ಲದೆ ನನಗೆ ಆಗುವುದಿಲ್ಲ, ದಲ್ ನಿಜಕ್ಕೂ!) ಸಲೆ ಪಟ್ಟಮಂ ಸಮಂತು ಎನಗೆಯೆ ಮಾೞ್ಪೊಡೆ ಏ ತೊದಳೊ (ಮತ್ತೆ ಏನೆಂದರೆ ನನಗೇ ರಾಜ್ಯಾಭಿಷೇಕಮಾಡಬೇಕಾದರೆ- ನಾನು ಗೆಲ್ಲಬೇಕಾದರೆ, ಏನು ತೊದಲು ಮಾತೋ? - ಏನೂ ಅನುಮಾನವಿಲ್ಲ) ನೀಮೆ ದಲಾಂಪುದು ಬೀರವಟ್ಟಮಂ (ನೀವೇ ವೀರಪಟ್ಟವನ್ನು ಸ್ವೀಕರಿಸಬೇಕು.)
ಪದ್ಯ-೨೯:ಅರ್ಥ: ಕರ್ಣನಿಗೆ ಸಾವೂ, ನನಗೆ ಇಷ್ಟೊಂದು ದುಃಖವೂ, ಕರ್ಣನು ನೀವು ಹೇಳಿದ ಹಾಗೆ ಕೇಳದುದರಿಂದ ಉಂಟಾಯಿತು. ವೀರಲಕ್ಷ್ಮಿಯು ನಿಮ್ಮ ಸಹಾಯವಿಲ್ಲದೆ ನನಗೆ ಆಗುವುದಿಲ್ಲ ಅಲ್ಲವೇ? ಮತ್ತೆ ಏನೆಂದರೆ ನನಗೆ ರಾಜ್ಯಾಭಿಷೇಕಮಾಡಬೇಕಾದರೆ (ನಾನು ಗೆಲ್ಲಬೇಕಾದರೆ) ನೀವೇ ವೀರಪಟ್ಟವನ್ನು ಸ್ವೀಕರಿಸಬೇಕು. ಏನೂ ಅನುಮಾನವಿಲ್ಲ.
ವ|| ಎಂಬುದುಂ ಶಲ್ಯನಿಂತಿರ್ದಿನಿಬರೊಳಮಾನಾವಾಳ ದೊರೆಯೆಂ ಬೆಸನಂ ನೀಮೆನಗೆ ದಯೆಗೆಯ್ವಿರೆಂಬುದೆಲ್ಲಮೆನಗೆ ಸೈಪುಂ ಸ್ವಾಮಿ ಸಂಪತ್ತುಮಂತೆಗೆಯ್ವೆನೆಂದು ಷೋಡಶ ರಾಜಭರಮಂ ತಾಳ್ದುವಂತೆ ಸೇನಾಪತ್ಯಭಾರಮಂ ಮದ್ರರಾಜಂ ತಾಳ್ದಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಶಲ್ಯನಿ ಇಂತಿರ್ದ ಅನಿಬರೊಳಂ ಆನು ಆವ ಆಳ ದೊರೆಯೆಂ (“ಇಲ್ಲಿರುವ ಇಷ್ಟು ಜನರಲ್ಲಿ ನಾನು ಯಾವ ವೀರಪುರುಷನಿಗೆ ಸಮಾನಾಗುತ್ತೇನೆ?") ಬೆಸನಂ ನೀಂ ಎನಗೆ ದಯೆಗೆಯ್ವಿರೆಂಬುದು ಎಲ್ಲಂ ಎನಗೆ ಸೈಪುಂ (ನೀವು ನನಗೆ ಕಾರ್ಯವನ್ನು ವಹಿಸಿ ದಯೆಗೈದಿರುವದೆಲ್ಲ ನನ್ನ ಪುಣ್ಯವು.) ಸ್ವಾಮಿ ಸಂಪತ್ತುಂ (ಸ್ವಾಮಿಸಂಪತ್ತೂ ಆಗಿರುತ್ತದೆ) ಅಂತೆಗೆಯ್ವೆನು ಎಂದು ಷೋಡಶ ರಾಜಭರಮಂ ತಾಳ್ದುವಂತೆ ಸೇನಾಪತ್ಯಭಾರಮಂ ಮದ್ರರಾಜಂ ತಾಳ್ದಿ (ನೀವು ಹೇಳಿದ ಹಾಗೆಯೇ ಮಾಡುತ್ತೇನೆ’ ಎಂದು ಹದಿನಾರು ರಾಜರ ಭಾರವನ್ನೂ ತಾಳುವಂತೆ ಶಲ್ಕನು ಸೇನಾಧಿಪತ್ಯ ಭಾರವನ್ನು ಧರಿಸಿದನು)-
ವಚನ:ಅರ್ಥ:ಎನ್ನಲಾಗಿ ಶಲ್ಯನು ಹೇಳಿದ,“ಇಲ್ಲಿರುವ ಇಷ್ಟು ಜನರಲ್ಲಿ ನಾನು ಯಾವ ವೀರಪುರುಷನಿಗೆ ಸಮಾನಾಗುತ್ತೇನೆ?. ನೀವು ನನಗೆ ಕಾರ್ಯವನ್ನು ವಹಿಸಿ ದಯೆಗೈದಿರುವದೆಲ್ಲ ನನ್ನ ಪುಣ್ಯವು; ಸ್ವಾಮಿಸಂಪತ್ತೂ ಆಗಿರುತ್ತದೆ. ನೀವು ಹೇಳಿದ ಹಾಗೆಯೇ ಮಾಡುತ್ತೇನೆ’ ಎಂದು ಹದಿನಾರು ರಾಜರ ಭಾರವನ್ನೂ ತಾಳುವಂತೆ ಶಲ್ಕನು ಸೇನಾಧಿಪತ್ಯ ಭಾರವನ್ನು ಧರಿಸಿದನು.
ಕಂ|| ಮುಟ್ಟುಗಿಡೆ ತಾನೆ ತನ್ನಂ
ಕಟ್ಟಿಸಿಕೊಳ್ವಂತೆ ಬೀರವಟ್ಟಮನಾಗಳ್|
ಕಟ್ಟಿಸಿಕೊಂಡಂ ಶಲ್ಯಂ
ಕಟ್ಟುದುದಂ ಕಳೆಯಲಾರ್ಗಮೇಂ ತೀರ್ದಪುದೇ|| ೩೦
ಪದ್ಯ-೩೦:ಪದವಿಭಾಗ-ಅರ್ಥ:ಮುಟ್ಟುಗಿಡೆ (ಮುಟ್ಟು- ಸಲಕರಣೆ; ಕಿಡೆ- ನಾಶ)ತಾನೆ ತನ್ನಂ ಕಟ್ಟಿಸಿಕೊಳ್ವಂತೆ (ಇತರ ಸಲಕರಣಗಳೆಲ್ಲ ನಾಶವಾಗಿರಲು ತನಗೆ ತಾನೇ ಕಟ್ಟಿಸಿಕೊಳ್ಳುವ ಹಾಗೆ ) ಬೀರವಟ್ಟಮನಾಗಳ್ ಕಟ್ಟಿಸಿಕೊಂಡಂ (ಶಲ್ಯನು ವೀರಪಟ್ಟವನ್ನು ಕಟ್ಟಿಸಿಕೊಂಡನು.) ಶಲ್ಯಂ ಕಟ್ಟುದುದಂ ಕಳೆಯಲು ಆರ್ಗಂ ಏಂ ತೀರ್ದಪುದೇ (ಶಲ್ಯನಿಗೆ ವಿಧಿಯ ವೀರಪಟ್ಟವನ್ನು ಕಟ್ಟಿದ ನಿಯಮವನ್ನು ಕಳೆಯಲು ಯಾರಿಗಾದರೂ ಸಾಧ್ಯವಾಗುತ್ತದೆ)
ಪದ್ಯ-೩೦:ಅರ್ಥ: ಇತರ ಸಲಕರಣಗಳೆಲ್ಲ ನಾಶವಾಗಿರಲು ತನಗೆ ತಾನೇ ಕಟ್ಟಿಸಿಕೊಳ್ಳುವ ಹಾಗೆ ಶಲ್ಯನು ವೀರಪಟ್ಟವನ್ನು ಕಟ್ಟಿಸಿಕೊಂಡನು. ಶಲ್ಯನಿಗೆ ವಿಧಿಯ ವೀರಪಟ್ಟವನ್ನು ಕಟ್ಟಿದ ನಿಯಮವನ್ನು ಕಳೆಯಲು ಯಾರಿಗಾದರೂ ಸಾಧ್ಯವಾಗುತ್ತದೆ
ವ|| ಅನ್ನೆಗಮಿತ್ತ ತದವೃತ್ತಾಂತಮಂ ಸಂಚಳಿತ ಚಾರ ಚಕ್ಷುಗಳಿಂದಂ ಧರ್ಮಪುತ್ರನಱಿದು ನರಕಾಂತಕಂಗೆ ಬೞಿಯನಟ್ಟಿ ಬರಿಸಿ ಪೇಳ್ದೊ೫ಡೆ೬೬೭೮ಡೆ ನಿಶಾಟ ರಾಜ ಕಿರೀಟ ಕೋಟಿ ತಾಟಿತ ಭುಜಂ ಚತುರ್ಭಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಇತ್ತ ತದವೃತ್ತಾಂತಮಂ ಸಂಚಳಿತ ಚಾರ ಚಕ್ಷುಗಳಿಂದಂ ಧರ್ಮಪುತ್ರನು ಅಱಿದು (ಅಷ್ಟರಲ್ಲಿ ಆ ಸಮಾಚಾರವನ್ನು ಸಂಚಾರಮಾಡುತ್ತಿರುವ ಗೂಢಚಾರರಿಂದ ಧರ್ಮರಾಯನು ತಿಳಿದು) ನರಕಾಂತಕಂಗೆ ಬೞಿಯನಟ್ಟಿ ಬರಿಸಿ ಪೇಳ್ದೊಡೆ (ಕೃಷ್ಣನಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು ಹೇಳಲು,) ನಿಶಾಟ ರಾಜ ಕಿರೀಟ ಕೋಟಿ ತಾಟಿತ ಭುಜಂ ಚತುರ್ಭಜನಿಂತೆಂದಂ (ರಾಕ್ಷಸರಾಜರ ಅನೇಕ ಕಿರೀಟಗ್ರಾದಿಂದ ಹೊಡೆಯಲ್ಪಟ್ಟ ತೋಳನ್ನುಳ್ಳ ಚತುರ್ಭುಜನಾದ ಕೃಷ್ಣನು ಹೀಗೆಂದನು.)-
ವಚನ:ಅರ್ಥ:ಅಷ್ಟರಲ್ಲಿ ಆ ಸಮಾಚಾರವನ್ನು ಸಂಚಾರಮಾಡುತ್ತಿರುವ ಗೂಢಚಾರರಿಂದ ಧರ್ಮರಾಯನು ತಿಳಿದು ಕೃಷ್ಣನಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು ಹೇಳಲು, ರಾಕ್ಷಸರಾಜರ ಅನೇಕ ಕಿರೀಟಗ್ರಾದಿಂದ ಹೊಡೆಯಲ್ಪಟ್ಟ ತೋಳನ್ನುಳ್ಳ ಚತುರ್ಭುಜನಾದ ಕೃಷ್ಣನು ಹೀಗೆಂದನು.
ಮ|| ಅದಟುಂ ಕಾರ್ಮುಕವಿದ್ಯೆಯುಂ ಭುಜಬಳಾವಷ್ಟಂಭಮುಂ ಸಂದು ನಿಂ
ದುದು ಶಲ್ಯಂಗವನೊರ್ವನಲ್ತೆ ನಮಗಂ ಹೃಚ್ಛಲ್ಯನಾತಂಗೆ ಕ|
ಟ್ಟಿದಿರೊಳ್ ನಿಲ್ವೊಡೆ ನೀನೆ ನಿಲ್ವೆಯದಱಿಂ ನಿಶ್ಯಲ್ಯಮಪ್ಪಂತು ನಿ
ನ್ನೊದವಿಂ ಮಾೞ್ಪುದಗಾಧಸಾಗರಪರೀತಾಶೇಷ ಭೂಭಾಗಮಂ|| ೩೧ ||
ಪದ್ಯ-೩೧:ಪದವಿಭಾಗ-ಅರ್ಥ:ಅದಟುಂ ಕಾರ್ಮುಕವಿದ್ಯೆಯುಂ ಭುಜಬಳಾವಷ್ಟಂಭಮುಂ (ಪರಾಕ್ರಮವೂ ಚಾಪವಿದ್ಯೆಯೂ ಬಾಹುಬಲದ ಅಹಂಕಾರವೂ) ಸಂದು ನಿಂದುದು ಶಲ್ಯಂಗೆ (ಶಲ್ಯನಲ್ಲಿ ಸೇರಿ ನಿಂತಿವೆ.) ಅವನು ಒರ್ವನು ಅಲ್ತೆ ನಮಗಂ ಹೃಚ್ಛಲ್ಯನು (ನಮಗೂ ಅವನೊಬ್ಬನೇ ಎದೆಗೆ ನಾಟದ ಈಟಿಯಂತಿರುವವಲ್ಲವೇ?) ಆತಂಗೆ ಕಟ್ಟಿದಿರೊಳ್ ನಿಲ್ವೊಡೆ ನೀನೆ ನಿಲ್ವೆಯ ಅದಱಿಂ ನಿಶ್ಯಲ್ಯಮಪ್ಪಂತು -ನಿನ್ನ ಒದವಿಂ ಮಾೞ್ಪುದು- > (ಅವನಿಗೆ ಸರಿಸಮನಾಗಿ ಎದುರು ನಿಲ್ಲುವುದಾದರೆ, ನಿಶ್ಶಲ್ಯನನ್ನು ಮಾಡಲು ಸರಿಯಾದ ಒದವಿಂದ / ಸಿದ್ದತೆಯಿಂದ ನೀನೊಬ್ಬನೇ ನಿಲ್ಲುವುದು.) ಅಗಾಧ ಸಾಗರಪರೀತಾಶೇಷ ಭೂಭಾಗಮಂ - ನಿನ್ನ ಒದವಿಂ ಮಾೞ್ಪುದು (ಆದುದರಿಂದ ನೀನು ಅಗಾಧವಾದ ಸಾಗರಗಳಿಂದ ಸುತ್ತುವರಿಯಲ್ಪಟ್ಟ ಭೂಭಾಗವನ್ನು ನಿನ್ನು ಸಿದ್ದತೆಯಿಂದ ವಶ ಮಾಡಿಕೊಳ್ಳುವುದು)
ಪದ್ಯ-೩೧:ಅರ್ಥ: ಪರಾಕ್ರಮವೂ ಚಾಪವಿದ್ಯೆಯೂ ಬಾಹುಬಲದ ಅಹಂಕಾರವೂ ಶಲ್ಯನಲ್ಲಿ ಸೇರಿ ನಿಂತಿವೆ. ನಮಗೂ ಅವನೊಬ್ಬನೇ ಎದೆಗೆ ನಾಟದ ಈಟಿಯಂತಿರುವವಲ್ಲವೇ? ಅವನಿಗೆ ಸರಿಸಮನಾಗಿ ನಿಲ್ಲುವುದಾದರೆ ಸರಿಯಾದ ಒದವಿಂದ / ಸಿದ್ದತೆಯಿಂದ ನೀನೊಬ್ಬನೇ ನಿಲ್ಲುವೆ. ಆದುದರಿಂದ ನೀನು ಅಗಾಧವಾದ ಸಾಗರಗಳಿಂದ ಸುತ್ತುವರಿಯಲ್ಪಟ್ಟ ಭೂಭಾಗವನ್ನು ನಿನ್ನು ಸಿದ್ದತೆಯಿಂದ ವಶ ಮಾಡಿಕೊಳ್ಳುವುದು.
ವ|| ಅದಲ್ಲದೆಯುಂ ಸಿದ್ಧಿತ್ರಯಂಗಳ್ ನಿನಗಾತ್ಮೀಯಾಯತ್ತ ಸಿದ್ಧಿಯಾಗಿ ನಿಂದುದಱಿಂ ನೀನೆ ಬೀರವಟ್ಟಮಂ ತಾಳ್ದಿ ನಿಲ್ವುವೆನೆ-
ವಚನ:ಪದವಿಭಾಗ-ಅರ್ಥ:ಅದು ಅಲ್ಲದೆಯುಂ ಸಿದ್ಧಿತ್ರಯಂಗಳ್ (ಅಷ್ಟೇ ಅಲ್ಲದೆ ಸಿದ್ಧಿತ್ರಯಗಳಾದ ಪ್ರಭುಸಿದ್ಧಿ ಮಂತ್ರಸಿದ್ಧಿ ಮತ್ತು ಉತ್ಸಾಹ ಸಿದ್ಧಿಗಳು) ನಿನಗೆ ಆತ್ಮೀಯಾಯತ್ತ ಸಿದ್ಧಿಯಾಗಿ ನಿಂದುದಱಿಂ (ನಿನಗೆ ಸ್ವತಃ ತಾನಾಗಿ ಬಂದ ಸಿದ್ಧಿಯಾಗಿ ನಿಂತಿರುವುದರಿಂದ ) ನೀನೆ ಬೀರವಟ್ಟಮಂ ತಾಳ್ದಿ ನಿಲ್ವುವೆನೆ (ನೀನೇ ಸೇನಾಧಿಪತಿ ಅಥವಾ ವೀರಪಟ್ಟವನ್ನು ಧರಿಸಿ ನಿಲ್ಲುವುದು ಎನ್ನಲು)-
ವಚನ:ಅರ್ಥ: ಅಷ್ಟೇ ಅಲ್ಲದೆ ಸಿದ್ಧಿತ್ರಯಗಳಾದ ಪ್ರಭುಸಿದ್ಧಿ ಮಂತ್ರಸಿದ್ಧಿ ಮತ್ತು ಉತ್ಸಾಹ ಸಿದ್ಧಿಗಳು ನಿನಗೆ ಸ್ವತಃ ತಾನಾಗಿ ಬಂದ ಸಿದ್ಧಿಯಾಗಿ ನಿಂತಿರುವುದರಿಂದ ನೀನೇ ಸೇನಾಧಿಪತಿ ಅಥವಾ ವೀರಪಟ್ಟವನ್ನು ಧರಿಸಿ ನಿಲ್ಲುವುದು ಎನ್ನಲು-
ಉ|| ಆಂ ದಿಟಮಾಗಿ ಶಲ್ಯನಳವಂ ನೆರೆ ಮುನ್ನರಿದಿರ್ದುಮೆನ್ನ ತ
ಮ್ಮಂದಿರನೇಕೆ ಕಾದಿಸುವೆನಾನೆ ಮಹಾಜಿಯೊಳಾಂಪೆನಂತೆಗೆ|
ಯ್ಯೊಂದು ಮುಕುಂದ ಕಟ್ಟೆನಗೆ ಪಟ್ಟಮನೆಂದು ಮುಕುಂದವೃಂದಮೊಂ
ದೊಂದಱೊಳೊಂದಿ ಮಿಕ್ಕೆಸೆಯೆ ತಾಳ್ನಿದನಾ ವಿಭು ಬೀರಮಟ್ಟಮಂ|| ೩೨ ||
ಪದ್ಯ-೩೨:ಪದವಿಭಾಗ-ಅರ್ಥ:ಆಂ ದಿಟಮಾಗಿ ಶಲ್ಯನ ಅಳವಂ ನೆರೆ ಮುನ್ನೆ ಅರಿದಿರ್ದುಂ (ನಾನು ನಿಶ್ಚಯವಾಗಿಯೂ ಶಲ್ಯನ ಪರಾಕ್ರಮವನ್ನು ಸಂಪೂರ್ಣವಾಗಿ ಮೊದಲೇ ತಿಳಿದಿದ್ದೂ) ಎನ್ನ ತಮ್ಮಂದಿರನ ಏಕೆ ಕಾದಿಸುವೆನು (ನನ್ನ ತಮ್ಮಂದಿರನ್ನೇಕೆ ಕಾದುವಂತೆಮಾಡಲಿ;) ಆನೆ ಮಹಾಜಿಯೊಳು ಆಂಪೆನು (ಮಹಾಯುದ್ಧದಲ್ಲಿ ನಾನೆ ಎದುರಿಸುತ್ತೇನೆ.) ಅಂತೆಗೆಯ್ಯ್ ಎಂದು ಮುಕುಂದ ಕಟ್ಟು ಎನಗೆ ಪಟ್ಟಮನೆಂದು (ಕೃಷ್ಣನೇ ಹಾಗೆ ಮಾಡೆಂದು ನನಗೆ ಪಟ್ಟವನ್ನು ಕಟ್ಟು ಎಂದು) ಮುಕುಂದವೃಂದಂ ಒಂದೊಂದಱೊಳು ಒಂದಿ ( ಮುಕುಂದವೃಂದಂ ಎಂ ಭೇರಿಗಳು/ ಮಂಗಳವಾದ್ಯ ಸಮೂಹವು ಒಂದರಲ್ಲೊಂದು ಸಮನ್ವಯವಾಗಿ ಕೂಡಿಕೊಂಡು) ಮಿಕ್ಕು ಎಸೆಯೆ (ವಿಶೇಷವಾಗಿ ಶಬ್ದಮಾಡಿ ಶೋಭಿಸಲು) ತಾಳ್ನಿದನು ಆ ವಿಭು ಬೀರಮಟ್ಟಮಂ (ಆ ದೊರೆಯು ವೀರಪಟ್ಟವನ್ನು ತಾಳಿದನು/ ವಹಿಸಿಕೊಂಡನು.)
ಪದ್ಯ-೩೨:ಅರ್ಥ: ನಾನು ನಿಶ್ಚಯವಾಗಿಯೂ ಶಲ್ಯನ ಪರಾಕ್ರಮವನ್ನು ಸಂಪೂರ್ಣವಾಗಿ ಮೊದಲೇ ತಿಳಿದಿದ್ದೂ ನನ್ನ ತಮ್ಮಂದಿರನ್ನೇಕೆ ಕಾದುವಂತೆಮಾಡಲಿ; ಮಹಾಯುದ್ಧದಲ್ಲಿ ನಾನೆ ಎದುರಿಸುತ್ತೇನೆ. ಕೃಷ್ಣನೇ ಹಾಗೆ ಮಾಡೆಂದು ನನಗೆ ಪಟ್ಟವನ್ನು ಕಟ್ಟು ಎಂದು ಮುಕುಂದವೆಂಬ ಮಂಗಳವಾದ್ಯ ಸಮೂಹವು ಒಂದರಲ್ಲೊಂದು ಸಮನ್ವಯವಾಗಿ ಕೂಡಿಕೊಂಡು ವಿಶೇಷವಾಗಿ ಶಬ್ದಮಾಡಿ ಶೋಭಿಸಲು ಆ ದೊರೆಯು ವೀರಪಟ್ಟವನ್ನು ತಾಳಿದನು/ ವಹಿಸಿಕೊಂಡನು.
ವ|| ಅಂತು ಯುಧಿಷ್ಠಿರಂ ನಿಷ್ಠಿತಾಹವವ್ಯಾಪಾರನಾಗಿ ಮಧುಕೈಟಭಾರಾತಿಯಂ ಬೀಡಿಂಗೆ ಪೋಂಗಲ್ವೆೞ್ದಗ್ನಿ ಹೋತ್ರಶಾಲೆಗೆ ವಂದು ದರ್ಭಶಯನತಳದೊಳೊಱಗಿ ಬೆಳಗಪ್ಪ ಜಾವದೊಳ್-
ವಚನ:ಪದವಿಭಾಗ-ಅರ್ಥ: ಅಂತು ಯುಧಿಷ್ಠಿರಂ ನಿಷ್ಠಿತ ಆಹವ ವ್ಯಾಪಾರನಾಗಿ (ಹಾಗೆ ಧರ್ಮರಾಯನು ನಿಶ್ಚಿತವಾದ ಯುದ್ಧ ವ್ಯಾಪಾರೋದ್ಯೋಗವುಳ್ಳವನಾಗಿ) ಮಧುಕೈಟಭಾರಾತಿಯಂ (ಕೃಷ್ಣನನ್ನು) ಬೀಡಿಂಗೆ ಪೋಗಲ್ವೆೞ್ದಗ್ನಿ - ಪೋಗಲ್ ವೇಳ್ದು ಅಗ್ನಿ ಹೋತ್ರಶಾಲೆಗೆ ವಂದು (ಕೃಷ್ಣನನ್ನು ಬೀಡಿಗೆ ಹೋಗ ಹೇಳಿ ತಾನು ಯಾಗಶಾಲೆಗೆ ಬಂದು) ದರ್ಭಶಯನ ತಳದೊಳ ಒಱಗಿ ಬೆಳಗಪ್ಪ ಜಾವದೊಳ್ (ದರ್ಭೆಯಿಂದ ಮಾಡಲ್ಪಟ್ಟ ಹಾಸಿಗೆಯಲ್ಲಿ ಮಲಗಿ ಬೆಳಗಾಗುವ ಜಾವದಲ್ಲಿ)-
ವಚನ:ಅರ್ಥ:ಹಾಗೆ ಧರ್ಮರಾಯನು ನಿಶ್ಚಿತವಾದ ಯುದ್ಧ ವ್ಯಾಪಾರೋದ್ಯೋಗವುಳ್ಳವನಾಗಿ ಕೃಷ್ಣನನ್ನು ಬೀಡಿಗೆ ಹೋಗ ಹೇಳಿ ತಾನು ಯಾಗಶಾಲೆಗೆ ಬಂದು ದರ್ಭೆಯಿಂದ ಮಾಡಲ್ಪಟ್ಟ ಹಾಸಿಗೆಯಲ್ಲಿ ಮಲಗಿ ಬೆಳಗಾಗುವ ಜಾವದಲ್ಲಿ
ಚಂ|| ಕಡಲುರಿಯಂತಕಾಲ ಘನ ಗರ್ಜನೆಯಂತೆ ಸಮಸ್ತ ದಿಕ್ತಟಂ
ಪಿಡುಗುವಿನಂ ರಣಾನಕರವಂಗಳಸುಂಗೊಳೆ ಪರ್ವಿ ಬೇಗದಿಂ|
ಸಡಗರದೇೞ್ಗೆಯುಂ ಕಳಕಳಧ್ವನಿಯುಂಬೆರಸಾಡುವಂತೆರ
ೞೃಡೆಯೊಳಮಾಗಳೊರ್ಮೊದಲೆ ಪಲ್ಲಣಮಿಕ್ಕಿಪುದಲ್ಲಕಲ್ಲೊಳಂ|| ೩೩ ||
ಪದ್ಯ-೩೩:ಪದವಿಭಾಗ-ಅರ್ಥ:ಕಡಲು ಉರಿಯಂತೆ ಅಕಾಲ ಘನ ಗರ್ಜನೆಯಂತೆ (ಬಡಬಾನಲದಂತೆ ಅಕಾಲದ ಗುಡುಗಿನಂತೆ ) ಸಮಸ್ತ ದಿಕ್ತಟಂ ಪಿಡುಗುವಿನಂ (ಸಮಸ್ತ ದಿಕ್ಕುಗಳ ದಡಗಳೂ ಸಿಡಿಯುವಂತೆ ) ರಣಾನಕ-ರವಂಗಳು ಅಸುಂಗೊಳೆ ಪರ್ವಿ (ಯುದ್ಧವಾದ್ಯಗಳು ಸದ್ದು ಬೇಗನೆ ಹಬ್ಬಿ ಭೋರ್ಗರೆಯುತ್ತಿರಲು ) ಬೇಗದಿಂ ಸಡಗರದಿ ಏೞ್ಗೆಯುಂ ಕಳಕಳಧ್ವನಿಯುಂ ಬೆರಸಿ (ಬೇಗನೆ ಸಂಭ್ರಮದ ಅತಿಶಯವೂ ಕಳಕಳಧ್ವನಿಯೂ ಬೆರಸಿ) ಆಡುವಂತೆ ಎರೞ್ಪಡೆಯೊಳಂ (ಆಡುವಂತೆ ಎರಡು ಸೈನ್ಯಗಳಲ್ಲಿಯೂ) ಆಗಳ್ ಒರ್ಮೊದಲೆ ಪಲ್ಲಣಂ (ಜೀನು) ಇಕ್ಕಿಪುದು ಅಲ್ಲಕಲ್ಲೊಳಂ (ಒಟ್ಟಿಗೆ ಅಲ್ಲೋಲಕಲ್ಲೋಲವಾಗುತ್ತಿರಲು ಕುದುರೆಗಳಿಗೆ ಜೀನನ್ನು ಹಾಕಿದರು. )
ಪದ್ಯ-೩೩:ಅರ್ಥ: ಬಡಬಾನಲದಂತೆ ಅಕಾಲದ ಗುಡುಗಿನಂತೆ ಸಮಸ್ತ ದಿಕ್ಕುಗಳ ದಡಗಳೂ ಸಿಡಿಯುವಂತೆ ಯುದ್ಧವಾದ್ಯಗಳು ಸದ್ದು ಬೇಗನೆ ಹಬ್ಬಿ ಭೋರ್ಗರೆಯುತ್ತಿರಲು ಬೇಗನೆ ಸಂಭ್ರಮದ ಅತಿಶಯವೂ ಕಳಕಳಧ್ವನಿಯೂ ಬೆರಸಿ ಆಡುವಂತೆ ಎರಡು ಸೈನ್ಯಗಳಲ್ಲಿಯೂ ಒಟ್ಟಿಗೆ ಅಲ್ಲೋಲಕಲ್ಲೋಲವಾಗಲು ಕುದುರೆಗಳಿಗೆ ಜೀನನ್ನು ಹಾಕಿದರು.
ವ|| ಆಗಳಂತಕತನಯನುಂ ಧೃತರಾಷ್ಟ್ರತನಯನುಮಾರೂಢಮದಗಜರುಮುಪಾರೂಢ ವಿಶೇಷಕರುಮಾಗಿ ತಂತಮ್ಮ ಶಿಬಿರಂಗಳಿಂ ಚತುರ್ಬಲಂಗಳ್ ಪೊಱಮಟ್ಟು ಸಂಗ್ರಾಮರಂಗಕ್ಕವತರಿಸೆ ಕುರುಬಲಮಂ ಮದ್ರರಾಜನಭಿನವವ್ಯೂಹಮನೊಡ್ಡುವುದುಂ ವಿಬುಧವನಜವನಕಳಹಂಸನುಂ ಹಂಸವ್ಯೂಹನೊಡ್ಡಿ ಮಾರ್ವಲಕ್ಕೆ ಯಮಪಾಶಮಂ ಬೀಸುವಂತೆ ಕೆಸಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಅಂತಕತನಯನುಂ ಧೃತರಾಷ್ಟ್ರತನಯನು ಆರೂಢ- ಮದಗಜರುಂ ಉಪಾರೂಢ ವಿಶೇಷಕರುಮಾಗಿ (ಆಗ ಧರ್ಮರಾಯನೂ ದುರ್ಯೋಧನನೂ ಮದ್ದಾನೆಗಳನ್ನು ಹತ್ತಿ ವಿಶೇಷವಾಗಿ,) ತಂತಮ್ಮ ಶಿಬಿರಂಗಳಿಂ ಚತುರ್ಬಲಂಗಳ್ ಪೊಱಮಟ್ಟು ಸಂಗ್ರಾಮರಂಗಕ್ಕೆ ಅವತರಿಸೆ ( ಪಾಳೆಯಗಳಿಂದ ಹೊರಟು ಚತುರಂಗಸೇನಾಸಮೇತರಾಗಿ ಯುದ್ಧರಂಗದಲ್ಲಿ ಬಂದಿಳಿಯಲು) ಕುರುಬಲಮಂ ಮದ್ರರಾಜನು ಅಭಿನವವ್ಯೂಹಮನೊಡ್ಡುವುದುಂ (ಶಲ್ಯನು ಕೌರವಸೈನ್ಯವನ್ನು ಹೊಸದಾದ ರಚನಾವಿಧಾನದಿಂದ ಮುಂದೊಡ್ಡಲು) ವಿಬುಧ-ವನಜವನ-ಕಳಹಂಸನುಂ (ವಿದ್ವಾಂಸರೆಂಬ ಕಮಲದ ತೋಟಕ್ಕೆ ರಾಜಹಂಸದಂತಿರುವ ಧರ್ಮರಾಯನು) ಹಂಸವ್ಯೂಹನು ಒಡ್ಡಿ ಮಾರ್ವಲಕ್ಕೆ ಯಮಪಾಶಮಂ ಬೀಸುವಂತೆ ಕೆಯ್ವೀಸಿದಾಗಳ್ (ಹಂಸವ್ಯೂಹವನ್ನು ಚಾಚಿ ಪ್ರತಿ ಸೈನ್ಯಕ್ಕೆ ಯಮಪಾಶವನ್ನು ಬೀಸುವಂತೆ ಕೈಬೀಸಿದನು.) -
ವಚನ:ಅರ್ಥ:ಆಗ ಧರ್ಮರಾಯನೂ ದುರ್ಯೋಧನನೂ ಮದ್ದಾನೆಗಳನ್ನು ಹತ್ತಿ ವಿಶೇಷವಾಗಿ, ಪಾಳೆಯಗಳಿಂದ ಹೊರಟು ಚತುರಂಗಸೇನಾಸಮೇತರಾಗಿ ಯುದ್ಧರಂಗದಲ್ಲಿ ಬಂದಿಳಿಯಲು,. ಶಲ್ಯನು ಕೌರವಸೈನ್ಯವನ್ನು ಹೊಸದಾದ ರಚನಾವಿಧಾನದಿಂದ ಮುಂದೊಡ್ಡಲು ವಿದ್ವಾಂಸರೆಂಬ ಕಮಲದ ತೋಟಕ್ಕೆ ರಾಜಹಂಸದಂತಿರುವ ಧರ್ಮರಾಯನು, ಹಂಸವ್ಯೂಹವನ್ನು ಚಾಚಿ ಪ್ರತಿ ಸೈನ್ಯಕ್ಕೆ ಯಮಪಾಶವನ್ನು ಬೀಸುವಂತೆ ಕೈಬೀಸಿದನು.
ಕಂ|| ಚಯ್ ಚಯ್ಯೆಂಬಾಗಳ್ ಮೆಯ್
ಮೆಯ್ ಚಲದಿಂ ಮುಟ್ಟ ಪೊಣರ್ದು ತಳ್ತಿಱಿವುರ್ಕಿಂ|
ಕೆಯ್ ಚೆಚ್ಚರಿಕೆಯ ಚಲದಿಂ
ಕೆಯ್ ಚಳಿವಿನಮಿರಿದರೆರಡು ಬಲದೊಳಮದಟರ್|| ೩೪ ||
ಪದ್ಯ-೩೪:ಪದವಿಭಾಗ-ಅರ್ಥ:ಚಯ್ ಚಯ್ಯೆಂಬಾಗಳ್ ಮೆಯ್ಮೆಯ್ ಚಲದಿಂ ಮುಟ್ಟ ಪೊಣರ್ದು (ದೇಹ ದೇಹಗಳು ಚಯ್‌ಚಯ್ ಎಂದು ಚಲದಿಂದ ಘರ್ಷಣೆಮಾಡುತ್ತ ಹತ್ತಿರಕ್ಕೆ ಬಂದು ಹೋರಾಡಿ) ತಳ್ತು ಇಱಿವ ಉರ್ಕಿಂ (ಎದುರಿಸಿ ಇರಿಯುವ ಕೊಬ್ಬಿನಿಂದ ) ಕೆಯ್ ಚೆಚ್ಚರಿಕೆಯ ಚಲದಿಂ ಕೆಯ್ ಚಳಿವಿನಂ ಇರಿದರು (ಕೈಚಟುವಟಿಕೆಯ ರಭಸದಿಂದ ಕೈಗೆ ಆಯಾಸವಾಗುವಂತೆ ಹೋರಾಡಿದರು) ಎರಡು ಬಲದೊಳಂ ಅದಟರ್ (ಉಭಯ ಸೈನ್ಯದಲ್ಲಿ ಶೂರರು -ಪರಸ್ಪರ ಹೋರಾಡಿದರು-)
ಪದ್ಯ-೩೪:ಅರ್ಥ:ಯೋಧರ ದೇಹ ದೇಹಗಳು ಚಯ್‌ಚಯ್ ಎಂದು ಚಲದಿಂದ ಘರ್ಷಣೆಮಾಡುತ್ತ ಹತ್ತಿರಕ್ಕೆ ಬಂದು ಜೊತೆಜೊತೆಯಾಗಿ ಹೋರಾಡಿ ಎದುರಿಸಿ ಇರಿಯುವ ಕೊಬ್ಬಿನಿಂದ ಕೈಚಟುವಟಿಕೆಯ ರಭಸದಿಂದ ಕೈಗೆ ಆಯಾಸವಾಗುವಂತೆ ಉಭಯ ಸೈನ್ಯದಲ್ಲಿ ಶೂರರು ಪರಸ್ಪರ ಹೋರಾಡಿದರು.
ಕರಿ ಮಕರಾಹತಹತಿಯಿಂ
ಬಿರಿದಳಱುವ ಭೈತ್ರದಂತೆ ವಿವಿಧಾಯುಧ ದಂ|
ತುರಿತಂಗಳೞೆದುವಾ ಸಂ
ಗರ ಜಳನಿಧಿಯೊಳ್ ವರೂಥಕರಿನಿಕರಂಗಳ್|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ಕರಿ ಮಕರ ಆಹತಹತಿಯಿಂ (ಆಹತ- ಹತಿ: ಹೊಡೆತ;;ನೀರಾನೆ ಮತ್ತು ಮೊಸಳೆಗಳ ಹೊಡೆತಗಳಿಂದದ) ಬಿರಿದಳಱುವ ಭೈತ್ರದಂತೆ (ಬಿರಿದು ನಾಶವಾಗುವ ದೋಣಿಯಂತೆ) ವಿವಿಧಾಯುಧದ ಅಂತು ಉರಿತಂಗಳು ಅೞೆದುವು (ನಾನಾ ಆಯುಧಗಳು ವಿಶೇಷವಾಗಿ ನಾಟಕೊಂಡಿರುವ ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು) ಆ ಸಂಗರ ಜಳನಿಧಿಯೊಳ್ ವರೂಥ ಕರಿನಿಕರಂಗಳ್ ( - ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ )
ಪದ್ಯ-೩೫:ಅರ್ಥ: ನೀರಾನೆ ಮತ್ತು ಮೊಸಳೆಗಳ ಹೊಡೆತಗಳಿಂದದ ಬಿರಿದು ನಾಶವಾಗುವ ದೋಣಿಯಂತೆ ನಾನಾ ಆಯುಧಗಳು ವಿಶೇಷವಾಗಿ ನಾಟಕೊಂಡಿರುವ ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು
ಒಂದಕ್ಷೋಹಿಣಿಬಲಮೆರ
ಡುಂ ದೆಸೆಯೊಳಮುೞಿದುವನಿತೆ ಭಾರತಮೆಮ|
ಗಿನ್ನಿಂದುಜ್ಜವಣೆ ದಲೆಂದದ
ಟೊಂದುತ್ತರಮಾಗೆ ಕಾದಿದರ್ ಕಟ್ಟಾಳ್ಗಳ್|| ೩೬ ||
ಪದ್ಯ-೦೦:ಪದವಿಭಾಗ-ಅರ್ಥ:ಒಂದಕ್ಷೋಹಿಣಿಬಲಂ ಎರಡುಂ ದೆಸೆಯೊಳಂ ಉೞಿದುವು (ಎರಡು ಪಕ್ಷದಲ್ಲಿಯೂ ಒಂದೊಂದು ಕ್ಷೋಹಿಣೀ ಸೈನ್ಯವಷ್ಟೆ ಉಳಿಯಿತು.) ಅನಿತೆ ಭಾರತಂ ಎಮಗೆ ಇನ್ ಇಂದು ಉಜ್ಜವಣೆ ದಲ್ ಎಂದು (ಈ ದಿನ ನಮಗೆ ಉದ್ಯಾಪನೆ /ಮುಗಿಯುವುದು ನಿಜಕ್ಕೂ ಎಂದು ಹೇಳುತ್ತ) ಅದಟು ಒಂದು ಉತ್ತರಮಾಗೆ ಕಾದಿದರ್ ಕಟ್ಟಾಳ್ಗಳ್ ()
ಪದ್ಯ-೦೦:ಅರ್ಥ: ಎರಡು ಪಕ್ಷದಲ್ಲಿಯೂ ಒಂದೊಂದು ಕ್ಷೋಹಿಣೀ ಸೈನ್ಯವಷ್ಟೆ ಉಳಿಯಿತು. ಭಾರತಯುದ್ಧವು ಇದಿಷ್ಟೇ ಸಂಖ್ಯೆಯುಳ್ಳದು. ಈ ದಿನ ನಮಗೆ ಮುಗಿಯುವುದು ನಿಜಕ್ಕೂ, ಎಂದು ಹೇಳುತ್ತ ಅಪಾರ ಪರಾಕ್ರಮದಿಂದ ವೀರಪುರುಷರು ಕಾದಾಡಿದರು.
ಸ್ಫುರಿತಶರನಿಕರಪಾತಿತ
ನರೋತ್ತಮಾಂಗಂ ಕಬಂಧ ನಾಟಕರಂಗಂ|
ಸುರಿತನವರುರರಂಗ
ತ್ತರಂಗಮೊಪ್ಟಿದುದು ವೀರಭಟರಣರಂಗಂ|| ೩೭ ||
ಪದ್ಯ-೦೦:ಪದವಿಭಾಗ-ಅರ್ಥ:ಸ್ಫರಿತ ಶರನಿಕರ ಪಾತಿತ ನರೋತ್ತಮಾಂಗಂ (ಹೊಳೆಯುವ ಬಾಣಗಳ ಸಮೂಹಕ್ಕೆ ತಲೆಗಳನ್ನು ಬೀಳಿಸಲ್ಪಟ್ಟ) ಕಬಂಧ ನಾಟಕರಂಗಂ (ಮುಂಡಗಳು ಕುಣಿದಾಡುವ ರಂಗಸ್ಥಳವೂ) ಸುರಿತ ನವ ರುಧಿರ ರಂಗತ್ತರಂಗಂ (ಹೊಸ ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ) ಒಪ್ಟಿದುದು ವೀರಭಟ ರಣರಂಗಂ (ಆದ ವೀರಭಟರ ರಣರಂಗವು ಶೋಭಿಸಿತು.)
ಪದ್ಯ-೦೦:ಅರ್ಥ: ಹೊಳೆಯುವ ಬಾಣಗಳ ಸಮೂಹಕ್ಕೆ ಮನುಷ್ಯರ ತಲೆಗಳನ್ನು ಬೀಳಿಸಲ್ಪಟ್ಟ ಮುಂಡಗಳು ಕುಣಿದಾಡುವ ರಂಗಸ್ಥಳವೂ ಹೊಸ ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ ಆದ ವೀರಭಟರ ರಣರಂಗವು ಶೋಭಿಸಿತು.
ವ|| ಅಂತು ಮುಂಬಗಲ್ವರಂ ತುಮುೞೆ ಕಾದುವ ಸಮರಭರಂ ಮನೋರಾಗಮಂ ಮಾಡೆಯುಂ ಮುಮ್ಮೞೆಸಿ ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನನಾಯಕರ್ಕಳ್-
ವಚನ:ಪದವಿಭಾಗ-ಅರ್ಥ:ಅಂತು ಮುಂಬಗಲ್ವರಂ (ಹಾಗೆ ಹಗಲಿನ ಮುಂಭಾಗದವರೆಗೆ (ಮದ್ಯಾಹ್ನದವರೆಗೆ)) ತುಮುೞೆ ಕಾದುವ ಸಮರಭರಂ (ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು) ಮನೋರಾಗಮಂ ಮಾಡೆಯುಂ ಮುಮ್ಮೞೆಸಿ (ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಮುಂದೆ ನುಗ್ಗಿ ) ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನ ನಾಯಕರ್ಕಳ್- (ಪಾಂಡವ ಕೌರವಬಲಗಳ ಸೈನ್ಯದ ಮುಖ್ಯ ನಾಯಕರುಗಳು- -ಕಾದಿದರು.)
ವಚನ:ಅರ್ಥ:ವ|| ಹಾಗೆ ಹಗಲಿನ ಮದ್ಯಾಹ್ನದವರೆಗೆ ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಮುಂದೆ ನುಗ್ಗಿ ಪಾಂಡವ ಕೌರವಬಲಗಳ ಸೈನ್ಯದ ಮುಖ್ಯ ನಾಯಕರುಗಳು- (ಕಾದಿದರು.)

ಮ|| ಸ|| ಕಡಿಕೆಯ್ದೊಂದೊರ್ವರೊಳ್ ತಳ್ತಿಱಿವ ಬಯಕೆಯಿಂ ದಿವ್ಯ ಬಾಣಾದಿಗಳ್ಗಂ ಪೊಡೆವಟ್ಟುಂ ಸೂತರಂ ಚೋದಿಸಿಮೆನುತುಮಗುರ್ವುರ್ವೆ ಕೆಯ್ಮಿಕ್ಕು ಕಾದಲ್| ನಡೆತರ್ಪಾವೇಗದೊಳ್ ಮುಮ್ಮೞಿಸಿದ ಪಲವುಂ ರಾಜಚಿಹ್ನಂಗಳಂ ಬೆ ಳ್ಗೊಡೆಗಳ್ ತಳ್ಪೊಯ್ದದೇಂ ಕಣ್ಗೊಳಿಸಿದುದೊ ವಿನಕ್ಷತ್ರಕಚ್ಛತ್ರಪಿಂಡಂ|| ೩೮ ||

ಪದ್ಯ-೦೦:ಪದವಿಭಾಗ-ಅರ್ಥ:ಕಡಿಕೆಯ್ದು ಒಂದೊರ್ವರೊಳ್ ತಳ್ತು ಇಱಿವ ಬಯಕೆಯಿಂ (ತೀವ್ರತೆಯಿಂದ ಪರಸ್ಪರ ತಗುಲಿಕೊಂಡು ಯುದ್ಧಮಾಡುವ ಅಪೇಕ್ಷೆಯಿಂದ) ದಿವ್ಯ ಬಾಣಾದಿಗಳ್ಗಂ ಪೊಡೆವಟ್ಟುಂ (ದಿವ್ಯಾಸ್ತ್ರಗಳಿಗೆ ನಮಸ್ಕಾರಮಾಡಿ) ಸೂತರಂ ಚೋದಿಸಿಂ ಎನುತುಂ ಅಗುರ್ವು ಉರ್ವೆ (ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು) ಕೆಯ್ಮಿಕ್ಕು ಕಾದಲ್ ನಡೆತರ್ಪ ಆವೇಗದೊಳ್ (ಶಕ್ತಿಮೀರಿ ಯುದ್ಧಮಾಡಲು ಬರುತ್ತಿರುವ ವೇಗದಲ್ಲಿ ) ಮುಮ್ಮೞಿಸಿದ ಪಲವುಂ ರಾಜಚಿಹ್ನಂಗಳಂ(ಮುಂದಕ್ಕೆ ಚಾಚಿದ ಹಲವು ರಾಜಚಿಹ್ನೆಗಳನ್ನು) ಬೆಳ್ಗೊಡೆಗಳ್ ತಳ್ಪೊಯ್ದು ಅದೇಂ ಕಣ್ಗೊಳಿಸಿದುದೊ (ಶ್ವೇತಚ್ಛತ್ರಗಳು ತಾಗಿ ನಕ್ಷತ್ರ ಚಿನ್ಹೆಗಳುಳ್ಳ ಛತ್ರಿಗಳ ಸಮೂಹ ಅದೆಷ್ಟು ಆಕರ್ಷಣೆಯಾಯಿತೊ;) ವಿನಕ್ಷತ್ರಕ ಚ್ಛತ್ರಪಿಂಡಂ (- < - ನಕ್ಷತ್ರ ಚಿನ್ಹೆಗಳುಳ್ಳ ಛತ್ರಿಗಳ ಸಮೂಹ)
ಪದ್ಯ-೦೦:ಅರ್ಥ: ತೀವ್ರತೆಯಿಂದ ಪರಸ್ಪರ ತಗುಲಿಕೊಂಡು ಯುದ್ಧಮಾಡುವ ಅಪೇಕ್ಷೆಯಿಂದ ದಿವ್ಯಾಸ್ತ್ರಗಳಿಗೆ ನಮಸ್ಕಾರಮಾಡಿ ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು ಶಕ್ತಿಮೀರಿ ಯುದ್ಧಮಾಡಲು ಬರುತ್ತಿರುವ ವೇಗದಲ್ಲಿ ಮುಂದಕ್ಕೆ ಚಾಚಿದ ಹಲವು ರಾಜಚಿಹ್ನೆಗಳನ್ನು ಶ್ವೇತಚ್ಛತ್ರಗಳು ತಾಗಿ ಅಲುಗುತ್ತಿರುವ ನಕ್ಷತ್ರ ಚಿನ್ಹೆಗಳುಳ್ಳ ಛತ್ರಿಗಳ ಸಮೂಹ ಅದೆಷ್ಟು ಆಕರ್ಷಣೆಯಾಯಿತೊ; ವಿಶೇಷ ಆಕರ್ಷಣೀಯವಾಗಿದ್ದುವು.
ವ|| ಅಂತು ಮುಟ್ಟೆವಂದೋರೊರ್ವರೆ ರಥದ ಕುದುರೆಯ ಪೞವಿಗೆಯ ಕುಱುಪುಗಳಿನಿವರವರೆಂದಱಿದು ಸಾತ್ಯಕಿ ಕೃತವರ್ಮನೊಳ್ ನಕುಳಂ ಶತಬಿಂದುವಿನ ಮಕ್ಕಳಯ್ವರೊಳ್ ಸಹದೇವಂ ಶಕುನಿಯೊಳ್ ಯುದ್ಧಾಮನ್ಯೂತ್ತಮೌಜಸರ್ ಕೃಪನೊಳ್ ಭೀಮಸೇನಂ ಪರ್ವತರಾಜರೊಳ್ ವಿಕ್ರಮಾರ್ಜುನನಶ್ವತ್ಥಾಮನೊಳ್ ಪೆಣೆದು ಮಂಡಳ ಭ್ರಾಂತೋದ್ಭಾಂತಸ್ಥಿತಚಕ್ರಮೆಂಬ ರಥಯುದ್ಥದೊಳಮಾಲೀಢ ಪ್ರತ್ಯಾಲೀಢ ಸಮಪಾದಂ ಗಳೆಂಬಾಸನಂಗಳೊಳಂ ಪೆಱವುಂ ಶರಾಸನವಿದ್ಯೆಗಳೊಳತಿ ಪ್ರವೀಣರುಂ ಜಾಣರುಮಾಗಿ-
ವಚನ:ಪದವಿಭಾಗ-ಅರ್ಥ:ಅಂತು ಮುಟ್ಟೆವಂದು ಓರೊರ್ವರೆ ರಥದ ಕುದುರೆಯ ಪೞವಿಗೆಯ ಕುಱುಪುಗಳಿಂ ಇವರು ಅವರೆಂದು ಅಱಿದು (ಹಾಗೆ ಮುಟ್ಟುವಂತೆ ಸಮೀಪಕ್ಕೆ ಬಂದು ಒಬ್ಬೊಬ್ಬರ ರಥದ ಕುದುರೆಯ ಬಾವುಟದ ಗುರುತುಗಳಿಂದ ಇವರು ಅವರು ಎಂದು ತಿಳಿದು, ಗುರುತಿಸಿ) ಸಾತ್ಯಕಿ ಕೃತವರ್ಮನೊಳ್ (ಸಾತ್ಯಕಿ ಕೃತವರ್ಮನಲ್ಲಿಯೂ ) ನಕುಳಂ ಶತಬಿಂದುವಿನ ಮಕ್ಕಳು ಅಯ್ವರೊಳ್ (ನಕುಳನು ಶತಬಿಂದುವಿನ ಅಯ್ದು ಮಕ್ಕಳಲ್ಲಿಯೂ) ಸಹದೇವಂ ಶಕುನಿಯೊಳ್, ಯುದ್ಧಾಮನ್ಯು ಉತ್ತಮೌಜಸರ್ ಕೃಪನೊಳ್ (ಸಹದೇವನು ಶಕುನಿಯಲ್ಲಿಯೂ, ಯುಧಾಮನ್ಯು ಉತ್ತಮೌಜಸ ಕೃಪನೊಡನೆಯೂ) ಭೀಮಸೇನಂ ಪರ್ವತರಾಜರೊಳ್ ವಿಕ್ರಮಾರ್ಜುನನು ಅಶ್ವತ್ಥಾಮನೊಳ್ (ಭೀಮಸೇನನು ಪರ್ವತರಾಜರಲ್ಲಿಯೂ ಅರ್ಜುನನು ಆಶ್ವತ್ಥಾಮನಲ್ಲಿಯೂ) ಪೆಣೆದು ಮಂಡಳ ಭ್ರಾಂತ ಉದ್ಭ್ರಾಂತ ಸ್ಥಿತಚಕ್ರಮೆಂಬ ರಥಯುದ್ಥದೊಳಂ (ಹೆಣೆದುಕೊಂಡು ಭ್ರಾಂತ, ಉದ್ರಾಂತ, ಸ್ಥಿತ, ಚಕ್ರ ಎಂಬ ರಥಯುದ್ಧದಲ್ಲಿಯೂ) ಆಲೀಢ ಪ್ರತ್ಯಾಲೀಢ ಸಮಪಾದಂ ಗಳೆಂಬ ಆಸನಂಗಳೊಳಂ (ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬ ಆಸನಗಳಲ್ಲಿಯೂ- ಯುದ್ಧಮಾಡುವಾಗ ಕುಳಿತುಕೊಳ್ಳವ ಭಂಗಿ) ಪೆಱವುಂ ಶರಾಸನವಿದ್ಯೆಗಳೊಳತಿ ಪ್ರವೀಣರುಂ ಜಾಣರುಂ ಆಗಿ (ಇತರ ಅನೇಕ ಬಿಲ್ವಿದ್ಯೆಗಳಲ್ಲಿಯೂ ಅತಿ ಪ್ರವೀಣರೂ ಜಾಣರೂ ಆಗಿ- ಹೋರಾಡಿದರು)-
ವಚನ:ಅರ್ಥ: ಹಾಗೆ ಮುಟ್ಟುವಂತೆ ಸಮೀಪಕ್ಕೆ ಬಂದು ಒಬ್ಬೊಬ್ಬರ ರಥದ ಕುದುರೆಯ ಬಾವುಟದ ಗುರುತುಗಳಿಂದ ಇವರು ಅವರು ಎಂದು ಗುರುತಿಸಿ ಸಾತ್ಯಕಿ ಕೃತವರ್ಮನಲ್ಲಿಯೂ ನಕುಳನು ಶತಬಿಂದುವಿನ ಅಯ್ದು ಮಕ್ಕಳಲ್ಲಿಯೂ, ಸಹದೇವನು ಶಕುನಿಯಲ್ಲಿಯೂ, ಯುಧಾಮನ್ಯು ಉತ್ತಮೌಜಸ ಕೃಪನಲ್ಲಿಯೂ, ಭೀಮಸೇನನು ಪರ್ವತರಾಜರಲ್ಲಿಯೂ ಅರ್ಜುನನು ಆಶ್ವತ್ಥಾಮನಲ್ಲಿಯೂ ಹೆಣೆದುಕೊಂಡು ಭ್ರಾಂತ, ಉದ್ರಾಂತ, ಸ್ಥಿತ, ಚಕ್ರ ಎಂಬ ರಥಯುದ್ಧದಲ್ಲಿಯೂ ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬ ಆಸನಗಳಲ್ಲಿಯೂ ಇತರ ಅನೇಕ ಬಿಲ್ವಿದ್ಯೆಗಳಲ್ಲಿಯೂ ಅತಿ ಪ್ರವೀಣರೂ ಜಾಣರೂ ಆಗಿ- ಹೋರಾಡಿದರು.
ಅಕ್ಕರ|| ನೆಱೆದು ನಿರ್ವಾಯಂ ನರುವಾಯಂ ಮುಂ ಮೊನೆ ನೆರಕೆ ನಾರಾಚಂ ತಗರ್ತಲೆಯಂ
ನೆಱನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ|
ಪೆಱೆಯ ಮುಗಂ ಕಣಕೆನೆ ವೊಪಂಬು ಕವಲಂಬುರೆಂಬಂಕದಂಬೆತ್ತಲುಂ
ತುಱುಗಿ ನಡುವಿನಂ ಸಾರ್ದು ಸಾರ್ದೆಚ್ಚೆಚ್ಛು ಕಾದಿದರತಿರಥರೊಂದುಜಾವಂ|| ೩೯
ಪದ್ಯ-೦೦:ಪದವಿಭಾಗ-ಅರ್ಥ:ನೆಱೆದು ನಿರ್ವಾಯಂ ನರುವಾಯಂ ಮುಂಮೊನೆ ನೆರಕೆ ನಾರಾಚಂ (ಹೆಚ್ಚಿನ ಸಾಮರ್ಥ್ಯದವರಾಗಿ, ನಿರ್ವಾಯ, ನರುವಾಯ, ಮುಮ್ಮೊನೆ, ನೆರಕೆ, ನಾರಾಚಗಳನ್ನೂ/ಬಾಣಗಳನ್ನೂ)_ ತಗರ್ತಲೆಯಂ (ಈ ಬಗೆಯ ಬಾಣಗಳನ್ನೂ) ನೆಱನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ ಪೆಱೆಯ ಮುಗಂ ಕಣಕೆನೆ ವೊಪಂಬು ಕವಲಂಬುರೆಂಬ ಅಂಕದಂಬು ಎತ್ತಲುಂ (ಈ ಬಗೆಯ ನಾನಾ ಬಾಣಗಳು ಎಲ್ಲಾಕಡೆಯೂ) ತುಱುಗಿ ನಡುವಿನಂ ಸಾರ್ದು ಸಾರ್ದ ಎಚ್ಚೆ ಎಚ್ಛು (ಹೋಗಿ ನಾಟಿಕೊಳ್ಳುವ ಹಾಗೆ ನೋಡಿನೋಡಿ ಹೊಡೆದು ಹೊಡೆದು,) ಕಾದಿದರು ಅತಿರಥರು ಒಂದು ಜಾವಂ (ಅತಿರಥರು ಒಂದು ಜಾವದ ಕಾಲ ಕಾದಿದರು/ ಯುದ್ಧಮಾಡಿದರು. )
ಪದ್ಯ-೦೦:ಅರ್ಥ: ಹೆಚ್ಚಿನ ಸಾಮರ್ಥ್ಯದವರಾಗಿ, ನಿರ್ವಾಯ, ನರುವಾಯ, ಮುಮ್ಮೊನೆ, ನೆರಕೆ, ನಾರಾಚ, ತಗರ್ತಲೆ, ಮರ್ಮಸ್ಥಾವನ್ನು ಭೇದಿಸುವ ಕಣೆಗೆಲೆಯಂಬು, ಕಕ್ಕಂಬು, ಕೆಲ್ಲಂಬು, ಮೊನೆಯಂಬು, ಇವುಗಳು, ಕಣ್ಣನ್ನು ತುಂಬಿಕೊಳ್ಳಲು, ಪೆಯಮುಱಗಂ, ಕಣಕೆನೆ, ಪೋಪಂಬು, ಕವಲಂಬು ಎಂಬ ಈ ಬಗೆಯ ನಾನಾ ಪ್ರಸಿದ್ಧವಾದ ಬಾಣಗಳು ಎಲ್ಲಕಡೆಯಲ್ಲಿಯೂ ನುಗ್ಗಿ ಹೋಗಿ ನಾಟಿಕೊಳ್ಳುವ ಹಾಗೆ ನೋಡಿನೋಡಿ ಹೊಡೆದು ಹೊಡೆದು ಅತಿರಥರು ಒಂದು ಜಾವದ ಕಾಲ ಯುದ್ಧಮಾಡಿದರು.
ಮ|| ಅಂತು ಕಾದುವಾಗಳೇಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನು ಮಪ್ಪಶ್ವತ್ಥಾಮನೇವದೊಳ್ ಕಣ್ಗಾಣದೆ ಮಾರ್ಕೊಂಡು ವಿಕ್ರಮಾರ್ಜುನನಂ ದಿವ್ಯಾಸ್ತ್ರಂಗಳಿಂದ ಮೆಚ್ಚು ಕಾದಿ ಗೆಲಲಾಱದೆ-
ವಚನ:ಪದವಿಭಾಗ-ಅರ್ಥ:ಅಂತು ಕಾದುವಾಗಳ್ ಏಕಾದಶ ರುದ್ರರೊಳಗೆ ತುತ್ತತುದಿಯ ರುದ್ರನುಂ (ಹಾಗೆ ಯುದ್ಧ ಮಾಡುವಾಗ ಹನ್ನೊಂದು ಜನ ರುದ್ರರೊಳಗೆ ಕಟ್ಟಕಡೆಯರುದ್ರನೂ,) ರೌದ್ರನು (ಭಯಂಕರನೂ) ಅಪ್ಪ ಅಶ್ವತ್ಥಾಮನು ಏವದೊಳ್ ಕಣ್ಗಾಣದೆ (ಆದ ಅಶ್ವತ್ಥಾಮನು ಕೋಪದಿಂದ ಕುರುಡನಾಗಿ) ಮಾರ್ಕೊಂಡು ವಿಕ್ರಮಾರ್ಜುನನಂ ದಿವ್ಯಾಸ್ತ್ರಂಗಳಿಂದಂ ಎಚ್ಚು ಕಾದಿ ಗೆಲಲಾಱದೆ (ಪ್ರತಿಭಟಿಸಿ ಅರ್ಜುನನನ್ನು ದಿವ್ಯಾಸ್ತ್ರಗಳಿಂದ ಹೊಡೆದು ಕಾದಿ ಗೆಲ್ಲಲಾರದೆ)-
ವಚನ:ಅರ್ಥ:ಹಾಗೆ ಯುದ್ಧ ಮಾಡುವಾಗ ಹನ್ನೊಂದು ಜನ ರುದ್ರರೊಳಗೆ ಕಟ್ಟಕಡೆಯರುದ್ರನೂ, ಭಯಂಕರನೂ ಆದ ಅಶ್ವತ್ಥಾಮನು ಕೋಪದಿಂದ ಕುರುಡನಾಗಿ ಪ್ರತಿಭಟಿಸಿ ಅರ್ಜುನನನ್ನು ದಿವ್ಯಾಸ್ತ್ರಗಳಿಂದ ಹೊಡೆದು ಕಾದಿ ಗೆಲ್ಲಲಾರದೆ -
ಕಂ|| ತನ್ನ ದೊಣೆಯಂಬುಗಳ್ ತವು
ವನ್ನೆಗಮೆಚ್ಚಂಬು ತಪ್ಪೊಡಭಿವಾದಯೆನ|
ಲ್ಕಿನ್ನೆನಗೆ ಪದನಿದೆಂದು ಕ
ರಂ ನಗೆ ಸುರರರಿಗನಿದಿರ್ಗೆ ತೊಲಗಿದನಾಗಳ್|| ೪೦ ||
ಪದ್ಯ-೪೦:ಪದವಿಭಾಗ-ಅರ್ಥ:ತನ್ನ ದೊಣೆಯಂಬುಗಳ್ ತವುವನ್ನೆಗಂ ಎಚ್ಚು (ತನ್ನ ಬತ್ತಳಿಕೆಯ ಬಾಣಗಳು ಮುಗಿಯುವವರೆಗೂ ಹೊಡೆದು) ಅಂಬು ತಪ್ಪೊಡೆ (ಹೊಡೆದು ಬಾಣಗಳು ತೀರಿಹೋಗಲು,) ಅಭಿವಾದಯೆನಲ್ಕೆ ಇನ್ನು ಎನಗೆ ಪದಂ ಇದೆಂದು (ಇನ್ನು -ಜೀವನಕ್ಕೆ- ನಮಸ್ಕಾರ ಎನ್ನಲು ಇದು ಸಮಯವೆಂದು) ಕರಂ ನಗೆ ಸುರರು (ದೇವತೆಗಳೆಲ್ಲ ಬಹಳ ನಗುತ್ತಿರಲು) ಅರಿಗನ ಇದಿರ್ಗೆ ತೊಲಗಿದನಾಗಳ್ (ಆರ್ಜುನನೆದುರಿಗೆ ಆಗ ಹೊರಟು ಹೋದನು.)
ಪದ್ಯ-೪೦:ಅರ್ಥ: ತನ್ನ ಬತ್ತಳಿಕೆಯ ಬಾಣಗಳು ಮುಗಿಯುವವರೆಗೂ ಹೊಡೆದು ಬಾಣಗಳು ತೀರಿಹೋಗಲು, ಇನ್ನು ನಮಸ್ಕಾರ ಎನ್ನಲು ಇದು ಸಮಯವೆಂದು -ದೇವತೆಗಳೆಲ್ಲ ಬಹಳವಾಗಿ ನಗುತ್ತಿರಲು, ಆರ್ಜುನನೆದುರಿಗೆ ಆಗ ಹೊರಟು ಹೋದನು.
ದಾವಶಿಖಿ ಶಿಖೆಯನಿೞಿಪುದಿ
ದಾವ ಸರಲ್ ಪೇೞಿಮೆನಿಪ ಸರಲಿಂ ತಱಿದಂ|
ದೇವರ ಪಡೆ ರಾಗಿಸೆ ಮನ
ದೇವದಿನವಯ ಶಕುನಿಯಂ ಸಹದೇವಂ|| ೪೧ ||
ಪದ್ಯ-೦೦:ಪದವಿಭಾಗ-ಅರ್ಥ:ದಾವಶಿಖಿ ಶಿಖೆಯನು ಇೞಿಪುದು ಇದಾವ ಸರಲ್ (ದಾವಾಗ್ನಿಯನ್ನೂ ಕೀಳುಮಾಡುತ್ತಿರುವ ಈ ಬಾಣವು ಯಾವುದು) ಪೇೞಿಂ ಎನಿಪ ಸರಲಿಂ ತಱಿದಂ (ಹೇಳಿ ಎನ್ನುವ ಬಾಣದಿಂದ ಕತ್ತರಿಸಿದನು) ದೇವರ ಪಡೆ ರಾಗಿಸೆ (ದೇವರ ಸಮೂಹವು ಸಂತೋಷಪಡುತ್ತಿರಲು), ಮನದ ಏವದಿಂ ಅವಯದೆ ಶಕುನಿಯಂ ಸಹದೇವಂ (ಮನಸ್ಸಿನಲ್ಲಿ ಕೋಪಹೊಂದಿ ಶ್ರಮವಿಲ್ಲದೆ ಸಹದೇವನು ಶಕುನಿಯನ್ನು ಕೊಂದನು.)
ಪದ್ಯ-೦೦:ಅರ್ಥ: ದಾವಾಗ್ನಿಯನ್ನೂ ಕೀಳುಮಾಡುತ್ತಿರುವ ಈ ಬಾಣವು ಯಾವುದು ಹೇಳಿ ಎನ್ನುವ ಬಾಣದಿಂದ ದೇವರ ಸಮೂಹವು ಸಂತೋಷಪಡುತ್ತಿರಲು, ಮನಸ್ಸಿನಲ್ಲಿ ಕೋಪಹೊಂದಿ ಸಹದೇವನು ಶ್ರಮವಿಲ್ಲದೆ ಶಕುನಿಯನ್ನು ತರಿದನು/ ಕೊಂದನು.
ವ|| ಅಂತು ಶಕುನಿಯಂ ತಱವುದುಮಿತ್ರತಿರಭುಕ್ತಿ ವಿಷಯಾಧೀಶರಪ್ಪ ಶತಬಿಂದುವಿನ ಮಕ್ಕಳಪ್ಪಯ್ವರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತೆ ನಕುಲಂ ನೆಲಕ್ಕೆ ಸೋವತಂ ಮಾಡಿದನಿತ್ತ ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನನಂತಕಾನನನೆಯ್ದಿಸಿದಂ ಯುಧಾಮನ್ಯೂತ್ತಮೌಜಸರ್ ಗೆಲೆ ಕಾದಿ ಕೃಪನನುಪಗತಪರಿಶ್ರಮನಂ ಮಾಡಿದರಾಗಳ್ ಮೆಯ್ವಿರ್ಚಿ ಬಂದು ಪೆಣೆದ ಭೀಮ ನಕುಳ ಸಹದೇವರುಮಂ ಶಲ್ಯಂ ವಿರಥರ್ಮಾಡಿ ಪಿಡಿದು ಕೊಂಡುಪುಲ್ಲ ಸೂಡನೀಡಾಡುವಂತೆ ತನ್ನಳಿಯಂದಿರಿರ್ವರುಮನೀಡಾಡಿ ಭೀಮನಂ ಪೊಣರ್ದು ನೆಲಿಕ್ಕಿಕ್ಕಿ ಬೆನ್ನಂ ಮೆಟ್ಟಿ ದಾಂಟುವ ಮದಗಜದಂತೆ ಕೊಲಲೊಲ್ಲದೆ ದಾಂಟದಾಗಳ್ ದುರ್ಯೋಧನನೞಲ್ದು ಕಣ್ಗಾಣದೆಯ್ದೆವಂದಶ್ವತ್ಥಾಮನು ಮದ್ರರಾಜ ಕೃಪಕೃತವರ್ಮರನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಶಕುನಿಯಂ ತಱವುದುಂ ಇತ್ತ ಅತಿರಭುಕ್ತಿ ವಿಷಯಾಧೀಶರಪ್ಪ (ಹಾಗೆ ಶಕುನಿಯನ್ನು ತರಿದ ನಂತರ, ಈ ಕಡೆ ಅತಿರಭುಕ್ತಿಯೆಂಬ ದೇಶದ ರಾಜರಾದ) ಶತಬಿಂದುವಿನ ಮಕ್ಕಳಪ್ಪ ಅಯ್ವರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತೆ ನಕುಲಂ ನೆಲಕ್ಕೆ ಸೋವತಂ ಮಾಡಿದನು (ಶತಬಿಂದುವಿನ ಅಯ್ದು ಮಕ್ಕಳನ್ನೂ ನಕುಲನು ಗಾಳಿಗೆ ಒಡ್ಡಿದ ಹುಲ್ಲಿನ ಮೇಲಿನ ಜಲಬಿಂದುಗಳಂತೆ ಭೂಮಿಗೆ ಬಲಿಕೊಟ್ಟನು.) ಇತ್ತ ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ (ಈ ಕಡೆ ವಿಂಧ್ಯ, ಮಲಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು) ಭೀಮಸೇನನು ಅಂತಕ ಆನನನು ಎಯ್ದಿಸಿದಂ (ಈ ಕಡೆ ವಿಂಧ್ಯ, ಮಲಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು ಭೀಮನು ಯಮನ ಬಾಯನ್ನು ಸೇರಿಸಿದನು.) ಯುಧಾಮನ್ಯು ಉತ್ತಮೌಜಸರ್ ಗೆಲೆ ಕಾದಿ ಕೃಪನನು ಉಪಗತ ಪರಿಶ್ರಮನಂ ಮಾಡಿದರು (ಯುಧಾಮನ್ಯು ಉತ್ತಮೌಜಸರು ಗೆಲ್ಲುವ ಹಾಗೆ ಯುದ್ಧಮಾಡಿ ಕೃಪನನ್ನು ಆಯಾಸ ಪಡಿಸಿದರರು.) ಆಗಳ್ ಮೆಯ್ವಿರ್ಚಿ ಬಂದು ಪೆಣೆದ ಭೀಮ ನಕುಳ ಸಹದೇವರುಮಂ (ಆಗ ಮೆಯ್ಯುಬ್ಬಿ ಹೆಣೆದುಕೊಂಡು ಒಟ್ಟಾಗಿ ಬಂದ ಭೀಮ ನಕುಲ ಸಹದೇವರನ್ನು) ಶಲ್ಯಂ ವಿರಥರ್ ಮಾಡಿ ಪಿಡಿದು ಕೊಂಡುಪುಲ್ಲ ಸೂಡನು ಈಡಾಡುವಂತೆ (ಶಲ್ಯನು ರಥವಿಲ್ಲದವರನ್ನಾಗಿ ಮಾಡಿ ಹಿಡಿದುಕೊಂಡು ಹುಲ್ಲಿನ ಕಂತೆಯನ್ನು ಎಸೆಯುವಂತೆ ತನ್ನಳಿಯಂದಿರನ್ನು ಎಸೆದು) ತನ್ನ ಅಳಿಯಂದಿರು ಇರ್ವರುಮನು ಈಡಾಡಿ (ಇಬ್ಬರು ಅಳಿಯಂದಿರನ್ನು ಎಸೆದಾಡಿ,) ಭೀಮನಂ ಪೊಣರ್ದು ನೆಲಿಕ್ಕೆ ಇಕ್ಕಿ ಬೆನ್ನಂ ಮೆಟ್ಟಿ ದಾಂಟುವ ಮದಗಜದಂತೆ (ಭೀಮನೊಡನೆ ಹೆಣಗಿ ಅವನನ್ನು ನೆಲಕ್ಕಿಕ್ಕಿ ಬೆನ್ನನ್ನು ತುಳಿದು ದಾಟುವ ಮದ್ದಾನೆಯಂತೆ) ಕೊಲಲೊಲ್ಲದೆ ದಾಂಟದಾಗಳ್ (ಕೊಲ್ಲಲು ಇಷ್ಟಪಡದೆ ದಾಟಿದನು.) ದುರ್ಯೋಧನನು ಅೞಲ್ದು ಕಣ್ಗಾಣದೆ (ಆಗ ದುರ್ಯೋಧನನು ದುಖಪಟ್ಟು ದಿಕ್ಕುತೋರದೆ) ಎಯ್ದೆವಂದ ಅಶ್ವತ್ಥಾಮನು ಮದ್ರರಾಜ ಕೃಪ ಕೃತವರ್ಮರನು ಇಂತೆಂದಂ (ಸಮೀಪಕ್ಕೆ ಬಂದ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕುರಿತು ಹೀಗೆಂದನು.)-
ವಚನ:ಅರ್ಥ:ಹಾಗೆ ಶಕುನಿಯನ್ನು ತರಿದ ನಂತರ, ಈ ಕಡೆ ಅತಿರಭುಕ್ತಿಯೆಂಬ ದೇಶದ ರಾಜರಾದ ಶತಬಿಂದುವಿನ ಅಯ್ದುಮಕ್ಕಳನ್ನೂ ನಕುಲನು ಗಾಳಿಗೆ ಒಡ್ಡಿದ ಹುಲ್ಲಿನ ಮೇಲಿನ ಜಲಬಿಂದುಗಳಂತೆ ಭೂಮಿಗೆ ಬಲಿಕೊಟ್ಟನು. ಈ ಕಡೆ ವಿಂಧ್ಯ, ಮಲಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು ಭೀಮನು ಯಮನ ಬಾಯನ್ನು ಸೇರಿಸಿದನು. ಯುಧಾಮನ್ಯು ಉತ್ತಮೌಜಸರು ಗೆಲ್ಲುವ ಹಾಗೆ ಯುದ್ಧಮಾಡಿ ಕೃಪನನ್ನು ಆಯಾಸ ಪಡಿಸಿದರರು. ಆಗ ಮೆಯ್ಯುಬ್ಬಿ ಹೆಣೆದುಕೊಂಡು ಒಟ್ಟಾಗಿ ಬಂದ ಭೀಮ ನಕುಲ ಸಹದೇವರನ್ನು ಶಲ್ಯನು ರಥವಿಲ್ಲದವರನ್ನಾಗಿ ಮಾಡಿ ಹಿಡಿದುಕೊಂಡು ಹುಲ್ಲಿನ ಕಂತೆಯನ್ನು ಎಸೆಯುವಂತೆ ತನ್ನಳಿಯಂದಿರನ್ನು ಎಸೆದು, ಇಬ್ಬರು ಅಳಿಯಂದಿರನ್ನು ಎಸೆದಾಡಿ, ಭೀಮನೊಡನೆ ಹೆಣಗಿ ಅವನನ್ನು ನೆಲಕ್ಕಿಕ್ಕಿ ಬೆನ್ನನ್ನು ತುಳಿದು ದಾಟುವ ಮದ್ದಾನೆಯಂತೆ ಕೊಲ್ಲಲು ಇಷ್ಟಪಡದೆ ದಾಟಿದನು. ಆಗ ದುರ್ಯೋಧನನು ದುಖಪಟ್ಟು ದಿಕ್ಕುತೋರದೆ ಸಮೀಪಕ್ಕೆ ಬಂದ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕುರಿತು ಹೀಗೆಂದನು.
ತರಳ|| ನಿಜಕುಲೋಚಿತವೃತ್ತಿಯಂ ಬಗೆಯಿಂ ಮಹಾರಥರಿರ್ ಮಹೀ
ಭುಜರ ಮಕ್ಕಳಿರೆಂದು ನಂಬಿದೆನಿಂತು ನಣ್ಪನೆ ವೈರಿ ಭೂ|
ಭುಜರೊಳುಂಟೊಡತಾಗಿ ಮಾೞ್ಪುದನೀಗಳಾನಱದೆಂ ಫಣಿ
ಧ್ವಜನೆನಪ್ಪೆನೆ ನಿಮ್ಮನಿನ್ನೆನಗೆಂದೊಡೀ ರಣರಂಗದೊಳ್|| ೪೨
ಪದ್ಯ-೪೨:ಪದವಿಭಾಗ-ಅರ್ಥ:ನಿಜ ಕುಲೋಚಿತ ವೃತ್ತಿಯಂ ಬಗೆಯಿಂ ಮಹಾರಥರಿರ್ (ಮಹಾರಥಿಕರೇ, ನಿಮ್ಮ ಕುಲಕ್ಕೆ ಯೋಗ್ಯವಾದ ವರ್ತನೆಯನ್ನು ಯೋಚಿಸಿ) ಮಹೀಭುಜರ ಮಕ್ಕಳಿರೆಂದು ನಂಬಿದೆನು (ರಾಜರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ನಂಬಿದೆನು) ಇಂತು ನಣ್ಪನೆ ವೈರಿ ಭೂಭುಜರೊಳ್ ಉಂಟೊಡತಾಗಿ ಮಾೞ್ಪುದಂ (ಹೀಗೆ ಶತ್ರುರಾಜರುಗಳಲ್ಲಿ ಸ್ನೇಹವುಳ್ಳವರಾಗಿ ನಡೆದುಕೊಳ್ಳುವುದನ್ನು) ಈಗಳು ಆನು ಅಱದೆಂ (ಈಗ ನಾನು ತಿಳಿದೆನು.) ಫಣಿಧ್ವಜನೆಂ ಅಪ್ಪೆನೆ ನಿಮ್ಮನು ಇನ್ನು ಎನಗೆ ಎಂದೊಡೆ ಈ ರಣರಂಗದೊಳ್ (ಇನ್ನು ಮೇಲೆ ಯುದ್ದರಂಗದಲ್ಲಿ ನಿಮ್ಮನ್ನು ನನ್ನವರೆಂದು ಭಾವಿಸಿದರೆ ಫಣಿಧ್ವಜನೇ? ಸರ್ಪಧ್ವಜನಾದ ದುರ್ಯೋಧನನೇ? ಅಲ್ಲ.)
ಪದ್ಯ-೪೨:ಅರ್ಥ:ಮಹಾರಥಿಕರೇ, ನಿಮ್ಮ ಕುಲಕ್ಕೆ ಯೋಗ್ಯವಾದ ವರ್ತನೆಯನ್ನು ಯೋಚಿಸಿ; ರಾಜರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ನಂಬಿದೆನು. ಹೀಗೆ ಶತ್ರುರಾಜರುಗಳಲ್ಲಿ ಸ್ನೇಹವುಳ್ಳವರಾಗಿ ನಡೆದುಕೊಳ್ಳುವುದನ್ನು ಈಗ ನಾನು ತಿಳಿದೆನು. ಇನ್ನು ಮೇಲೆ ಯುದ್ದರಂಗದಲ್ಲಿ ನಿಮ್ಮನ್ನು ನನ್ನವರೆಂದು ಭಾವಿಸಿದರೆ ದುರ್ಯೋಧನನೇ? ಅಲ್ಲ. (ದುಯೋಧನನೆನಿಸಿಕೊಳ್ಳುತ್ತೆನೆಯೇ?)
ಉ|| ಕಾದುವ ಮಾೞ್ಕೆಯಲ್ಲೞದು ಕೆಮ್ಮನೆ ನಣ್ಣನೆ ಮೇಳಗಾಳೆಗಂ
ಗಾದುವ ಮಾೞ್ಕೆ ಸಿಂಧು ಘಟ ಸೂತ ಸುತರ್ಕಳಿನಾಗದೊಂದು ರಾ|
ಜ್ಯೋದಯವಮ್ಮ ನಿಮ್ಮ ಬಲದಿಂದೆನಗಪ್ಪುದೆ ಮದ್ವಿರೋಧಿಯಂ
ಛೇದಿಸಲಾನೆ ಸಾಲ್ವೆನಿರಿಮನ್ನೆಗಮೀ ರಣರಂಗಭೂಮಿಯೊಳ್|| ೪೩
ಪದ್ಯ-೪೩:ಪದವಿಭಾಗ-ಅರ್ಥ:ಕಾದುವ ಮಾೞ್ಕೆಯಲ್ಲ (ಯುದ್ಧಮಾಡುವ ರೀತಿಯಲ್ಲ) ಅೞದು ಕೆಮ್ಮನೆ ನಣ್ಣನೆ ಮೇಳಗಾಳೆಗಂ ಕಾದುವ ಮಾೞ್ಕೆ (ಇದು ಸುಮ್ಮನೆ ಸ್ನೇಹದಿಂದ ಪ್ರೇಮಕಲಹವಾಡುವ ರೀತಿ) ಸಿಂಧು ಘಟ ಸೂತ ಸುತರ್ಕಳಿಂ ಆಗದೊಂದು ರಾಜ್ಯೋದಯಂ ಅಮ್ಮ! ನಿಮ್ಮ ಬಲದಿಂದ ಎನಗೆ ಅಪ್ಪುದೆ (ಭೀಷ್ಮ ದ್ರೋಣ ಕರ್ಣರಿಂದ ಆಗದ ಒಂದು ರಾಜ್ಯಲಾಭ ಅಪ್ಪಗಳಿರಾ! ನಿಮ್ಮ ಬಲದಿಂದ ನನಗಾಗುತ್ತದೆಯೇ.) ಮದ್ವಿರೋಧಿಯಂ ಛೇದಿಸಲು ಆನೆ ಸಾಲ್ವೆನು (ನನ್ನ ವಿರೋಧಿಯನ್ನು ಮುರಿಯಲು ನಾನೇ ಶಕ್ತನಾಗಿದ್ದೇನೆ.) ಇರಿಂ ಅನ್ನೆಗಂ ಈ ರಣರಂಗಭೂಮಿಯೊಳ್
ಪದ್ಯ-೪೩:ಅರ್ಥ: ದುರ್ಯೋಧನ ಹೇಳಿದ, ಇದು ಯುದ್ಧಮಾಡುವ ರೀತಿಯಲ್ಲ ; ಇದು ಸುಮ್ಮನೆ ಸ್ನೇಹದಿಂದ ಪ್ರೇಮಕಲಹವಾಡುವ ರೀತಿ. ಭೀಷ್ಮ ದ್ರೋಣ ಕರ್ಣರಿಂದ ಆಗದ ಒಂದು ರಾಜ್ಯಲಾಭ ಅಪ್ಪಗಳಿರಾ! ನಿಮ್ಮ ಬಲದಿಂದ ನನಗಾಗುತ್ತದೆಯೇ. ನನ್ನ ವಿರೋಧಿಯನ್ನು ಮುರಿಯಲು ನಾನೇ ಶಕ್ತನಾಗಿದ್ದೇನೆ. ಅಲ್ಲಿಯವರೆಗೆ ಈ ಯುದ್ಧಭೂಮಿಯಲ್ಲಿ ಇರಿ.
ವ||ಎಂದು ದುರ್ಯೋಧನನವರ ಕಾಳೆಗಮಂ ಮಾತಿನೊಳ್ ಕಳೆದು ವರೂಥದಿಂಬೀಡಿಂಗೆ ಪೋದನಾಗಳ್ ಶಲ್ಯಂ ರಾಜ ರಾಜಂ ತನ್ನಂ ಮೂದಲಿಸಿ ನುಡಿದುದರ್ಕೆ ಮನದೊಳೇವಯಿಸಿ-
ವಚನ:ಪದವಿಭಾಗ-ಅರ್ಥ:ಎಂದು ದುರ್ಯೋಧನನು ಅವರ ಕಾಳೆಗಮಂ ಮಾತಿನೊಳ್ ಕಳೆದು (ಎಂದು ದುಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರಿದು) ವರೂಥದಿಂ ಬೀಡಿಂಗೆ ಪೋದನು (ಎಂದು ದುಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರಿದು ರಥದಲ್ಲಿ ಬೀಡಿಗೆ ಹೋದನು.) ಆಗಳ್ ಶಲ್ಯಂ ರಾಜ ರಾಜಂ ತನ್ನಂ ಮೂದಲಿಸಿ ನುಡಿದುದರ್ಕೆ ಮನದೊಳು ಏವಯಿಸಿ (ಆಗ ಶಲ್ಯನು ಚಕ್ರವರ್ತಿಯಾದ ದುಯೋಧನನು ತನ್ನನ್ನು ಮೂದಲಿಸಿ ನುಡಿದುದಕ್ಕೆ ಮನಸ್ಸಿನಲ್ಲಿ ದುಖಪಟ್ಟು)-
ವಚನ:ಅರ್ಥ: ಎಂದು ದುಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರಿದು ರಥದಲ್ಲಿ ಬೀಡಿಗೆ ಹೋದನು. ಆಗ ಶಲ್ಯನು ಚಕ್ರವರ್ತಿಯಾದ ದುಯೋಧನನು ತನ್ನನ್ನು ಮೂದಲಿಸಿ ನುಡಿದುದಕ್ಕೆ ಮನಸ್ಸಿನಲ್ಲಿ ದುಖಪಟ್ಟು-
ಚಂ||ಇನಿತುವರಂ ಪರಾಭವಮನಿಳೇಶನಿನಿನ್ನೆಗಾದುದಿಂ ಸಿಡಿ
ಲ್ವೆನೆ ರಿಪು ಸೇನೆಯಂ ತುಳಿದು ತೊಳ್ವುಳಿಮಾಡುವೆನೆಂದಗುರ್ವಿನು
ರ್ವಿನ ಶರಸಂಕುಲಗಳೊಳೆ ಪೂಳ್ದೊಡೆ ಪಾಂಡವಸೈನ್ಯಮಾತನಂ
ಬಿನ ಮೊನೆಯೊಳ್ ಸುಳ್ದುರುಳಿಗೊಂಡಿದು ಶಲ್ಯನಿದೇಂ ಪ್ರತಾಪಿಯೋ. ||೪೪||
ಪದ್ಯ-೪೪:ಪದವಿಭಾಗ-ಅರ್ಥ:ಇನಿತುವರಂ ಪರಾಭವಮನು ಇಳೇಶನಿಂ ಇಂ ಎನಗೆ ಆದುದು (ರಾಜನಾದ ದುರ್ಯೋಧನನಿಂದ ಇಷ್ಟರ ಮಟ್ಟಿಗೆ ಅವಮಾನವು ನನಗಾಯಿತು.) ಇಂ ಸಿಡಿಲ್ವೆನೆ (ಇನ್ನು ಸಿಡಿದುಹೋಗುತ್ತೇನೆಯೇ?) ರಿಪು ಸೇನೆಯಂ ತುಳಿದು ತೊಳ್ವುಳಿಮಾಡುವೆನು ಎಂದು ಅಗುರ್ವಿನ ಉರ್ವಿನ (ಶತ್ರುಸೈನ್ಯವನ್ನು ತುಳಿದು ಅಜ್ಜಿಗುಜ್ಜಿಮಾಡುತ್ತೇನೆ ಎಂದು ಅತ್ಯಂತ ಭಯಂಕರವಾದ ವಿಶೇಷವಾದ) ಶರಸಂಕುಲಗಳೊಳೆ ಪೂಳ್ದೊಡೆ ( ಬಾಣಸಮೂಹದಿಂದಲೇ ಅವರನ್ನು ಹೂಳಲು) ಪಾಂಡವಸೈನ್ಯಂ ಆತನ ಅಂಬಿನ ಮೊನೆಯೊಳ್ (ಪಾಂಡವಸೈನ್ಯವು ಆತನ ಬಾಣಗಳ ತುದಿಯಲ್ಲಿ ) ಸುಳ್ದುರುಳಿಗೊಂಡಿದು ಶಲ್ಯನಿದೇಂ ಪ್ರತಾಪಿಯೋ (ಸುರುಟಿಕೊಂಡು ರಾಶಿಯಾಗಿ ಹೋಯಿತು. ಶಲ್ಯನು ಇನ್ನೆಷ್ಟು ಪ್ರತಾಪಶಾಲಿಯೋ!).
ಪದ್ಯ-೪೪:ಅರ್ಥ: ರಾಜನಾದ ದುರ್ಯೋಧನನಿಂದ ಇಷ್ಟರ ಮಟ್ಟಿಗೆ ಅವಮಾನವು ನನಗಾಯಿತು. ಇನ್ನು ಸಿಡಿದುಹೋಗುತ್ತೇನೆಯೇ?, ಶತ್ರುಸೈನ್ಯವನ್ನು ತುಳಿದು ಅಜ್ಜಿಗುಜ್ಜಿಮಾಡುತ್ತೇನೆ ಎಂದು ಅತ್ಯಂತ ಭಯಂಕರವಾದ ಬಾಣಸಮೂಹದಿಂದಲೇ ಅವರನ್ನು ಹೂಳಲು ಪಾಂಡವಸೈನ್ಯವು ಆತನ ಬಾಣಗಳ ತುದಿಯಲ್ಲಿ ಸುರುಟಿಕೊಂಡು ರಾಶಿಯಾಗಿ ಹೋಯಿತು. ಶಲ್ಯನು ಇನ್ನೆಷ್ಟು ಪ್ರತಾಪಶಾಲಿಯೋ!

ಯುದ್ಧದಲ್ಲಿ, ಶಲ್ಯನು ಧರ್ಮರಾಯನ ಕೋಪದ ಉಗ್ರ ದೃಷ್ಟಿಯ ಜ್ವಾಲೆಯಿಂದ ಬೂದಿಯಾದನು ಸಂಪಾದಿಸಿ

ಮಲ್ಲಿಕಾಮಾಲೆ|| ಬೀರವಟ್ಟಮನಾಂತ ಬೀರರುಮಿರ್ವರುಂ ಸುರ ರಾಜಿ ಕೈ
ವಾರದಿಂ ಬೞಿವಿಟ್ಟು ನಮ್ಮನೆ ನೋಡ ನೋಡುವರೀಗಳೀ|
ಭಾರತಂ ಸಮೆದಪ್ಪುದಳ್ಕದೆ ನಿಂದು ಕಾದೆನುತುಂ ಶರಾ
ಸಾರಮಂ ಸುರಿದಂತಕಾತ್ಮಜನಂತಸುಂಗೊಳೆ ಕಾದಿದಂ|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ:ಬೀರವಟ್ಟಮನಾಂತ ಬೀರರುಂ ಇರ್ವರುಂ (ನಾವಿಬ್ಬರೂ ಸೇನಾಧಿಪತ್ಯವನ್ನು ವಹಿಸಿರುವ ವೀರರು ಆಗಿದ್ದೇವೆ) ಸುರ ರಾಜಿ ಕೈವಾರದಿಂ ಬೞಿವಿಟ್ಟು (ದೇವತೆಗಳ ಸಮೂಹವು ಹೊಗಳುತ್ತಾ ದಾರಿಮಾಡಿಕೊಂಡು) ನಮ್ಮನೆ ನೋಡ ನೋಡುವರು (ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ) ಈಗಳೀ ಭಾರತಂ ಸಮೆದಪ್ಪುದು, ಅಳ್ಕದೆ ನಿಂದು ಕಾದು ಎನುತುಂ (ನೋಡು ಈಗ ಈ ಭಾರತಯುದ್ಧವು ಮುಕ್ತಾಯವಾಗುತ್ತಿದೆ. ಹೆದರದೆ ನಿಂತು ಯುದ್ಧಮಾಡು ಎನ್ನುತ್ತ) ಶರಾಸಾರಮಂ ಸುರಿದು ( ಧರ್ಮರಾಜನು ಬಾಣದ ಮಳೆಯನ್ನು ಸುರಿದು) ಅಂತಕಾತ್ಮಜನು ಅಂತು ಅಸುಂಗೊಳೆ ಕಾದಿದಂ (ಧರ್ಮರಾಯನು ಪ್ರಾಣವನ್ನು ಸೆಳೆದುಕೊಳ್ಳುವಂತೆ ಕಾದಿದನು.)
ಪದ್ಯ-೪೫:ಅರ್ಥ: ನಾವಿಬ್ಬರೂ ಸೇನಾಧಿಪತ್ಯವನ್ನು ವಹಿಸಿರುವ ವೀರರು ಆಗಿದ್ದೇವೆ. ದೇವತೆಗಳ ಸಮೂಹವು ಹೊಗಳುತ್ತಾ ದಾರಿಮಾಡಿಕೊಂಡು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ನೋಡು ಈಗ ಈ ಭಾರತಯುದ್ಧವು ಮುಕ್ತಾಯವಾಗುತ್ತಿದೆ. ಹೆದರದೆ ನಿಂತು ಯುದ್ಧಮಾಡು ಎನ್ನುತ್ತ ಧರ್ಮರಾಜನು ಬಾಣದ ಮಳೆಯನ್ನು ಸುರಿದು ಧರ್ಮರಾಯನು ಪ್ರಾಣವನ್ನು ಸೆಳೆದುಕೊಳ್ಳುವಂತೆ ಕಾದಿದನು.
ಕಂ|| ಕಾದೆ ರಥ ತುರಗ ಕೇತನ
ಕೋದಂಡಂಗಳುಮನುಱದೆ ಖಂಡಿಸಿ ವಿಳಯಾಂ|
ಭೋದನಿನಾದದೆ ಮದ್ರ ಮ
ಹೀದಯಿತಂ ತೊಟ್ಟನಾರ್ವುದುಂ ಧರ್ಮಸುತಂ|| ೪೬ ||
ಪದ್ಯ-೪೬:ಪದವಿಭಾಗ-ಅರ್ಥ:ಕಾದೆ ರಥ ತುರಗ ಕೇತನ ಕೋದಂಡಂಗಳುಂ ಉಱದೆ ಖಂಡಿಸಿ (ತೇರು, ಕುದುರೆ, ಬಾವುಟ, ಬಿಲ್ಲುಗಳನ್ನು ಬಿಡದೆ ಕತ್ತರಿಸಿ) ವಿಳಯಾಂ ಭೋದ ನಿನಾದದೆ (ಪ್ರಳಯಕಾಲದ ಗುಡುಗಿನ ಶಬ್ದದಿಂದ) ಮದ್ರ ಮಹೀದಯಿತಂ ತೊಟ್ಟನೆ ಆರ್ವುದುಂ ಧರ್ಮಸುತಂ (ಶಲ್ಯಮಹಾರಾಜನು ಕೂಡಲೆ ಗರ್ಜಿಸಿದನು. ಆಗ ಧರ್ಮರಾಯನು-)
ಪದ್ಯ-೪೬:ಅರ್ಥ:ತೇರು, ಕುದುರೆ, ಬಾವುಟ, ಬಿಲ್ಲುಗಳನ್ನು ಬಿಡದೆ ಕತ್ತರಿಸಿ ಪ್ರಳಯಕಾಲದ ಗುಡುಗಿನ ಶಬ್ದದಿಂದ ಶಲ್ಯಮಹಾರಾಜನು ಕೂಡಲೆ ಗರ್ಜಿಸಿದನು. ಆಗ ಧರ್ಮರಾಯನು
ಮುಳಿದು ತಳಮಳಿಸಿ ತಳರದೆ
ತೊಳಗುವ ಕರವಾಳನುರ್ಚಿ ಮೆಯ್ವೆರ್ಚಿ ಪೊದ|
ೞ್ದಳವಮರೆ ಪಿಡಿದು ರಥದಿಂ
ದಿಳೆಗಿೞಿದವನವನಿಪತಿಯನಣುಗಿಱಿವೊಯ್ದಂ|| ೪೭ ||
ಪದ್ಯ-೪೭:ಪದವಿಭಾಗ-ಅರ್ಥ:ಮುಳಿದು ತಳಮಳಿಸಿ ತಳರದೆ ತೊಳಗುವ (ಕೋಪದಿಂದ ತಲ್ಲಣಗೊಂಡು ಚಲಿಸದೆ ಹೊಳೆಯುವ) ಕರವಾಳನು ಉರ್ಚಿ ಮೆಯ್ವೆರ್ಚಿ (ಕತ್ತಿಯನ್ನು ಒರೆಯಿಂದ ಸೆಳೆದು ಮೈ ಉಬ್ಬಿ) ಪೊದೞ್ದ ಅಳವು ಅಮರೆ ( ಆವರಿಸಿದ ಶಕ್ತಿಯು ತುಂಬಲು) ಪಿಡಿದು ರಥದಿಂದ ಇಳೆಗೆ ಇೞಿದು ? - +ಹೊಡೆಯಲು(ರಥದಿಂದ ಭೂಮಿಗೆ ಇಳಿದು -+ಹೊಡೆಯಲು+-) ಅವನು ಅವನಿಪತಿಯನು ಅಣುಗಿಱಿ ವೊಯ್ದಂ (ಅವನು ಶಲ್ಯನು (ಸಮೀಪಕ್ಕೆ ಬಂದ ಧರ್ಮರಾಜನನ್ನು) ಸಮೀಪಿಸಿ ಹೊಡೆದನು.) ( -+ಹೊಡೆಯಲು+- ಅಧ್ಯಾಹಾರ, ಸೇರಿಸಿದೆ)
ಪದ್ಯ-೪೭:ಅರ್ಥ: ಕೋಪದಿಂದ ತಲ್ಲಣಗೊಂಡು ಚಲಿಸದೆ ಹೊಳೆಯುವ ಕತ್ತಿಯನ್ನು ಒರೆಯಿಂದ ಸೆಳೆದು ಮೈ ಉಬ್ಬಿ ಉಬ್ಬಿ ಆವರಿಸಿದ ಶಕ್ತಿಯು ತುಂಬಲು, ರಥದಿಂದ ಭೂಮಿಗೆ ಇಳಿದು ಹೊಡೆಯಲು, ಅವನು ಶಲ್ಯನು (ಸಮೀಪಕ್ಕೆ ಬಂದ ಧರ್ಮರಾಜನನ್ನು) ಸಮೀಪಿಸಿ ಹೊಡೆದನು.
ವ|| ಪೊಯ್ದೊಡೆ ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ ನೆಲನದಿರೆ ಕೆಡೆದ ತನ್ನಳಿಯನಂ ಮದ್ರರಾಜಂ ಕಂಡು ಕರುಣಿಸಿ-
ವಚನ:ಪದವಿಭಾಗ-ಅರ್ಥ:ಪೊಯ್ದೊಡೆ ಮದಾಂಧಗಂಧಸಿಂಧುರಂ (ಹೊಡೆದಾಗ ಮದ್ದಾನೆಯು) ಪೊಯ್ದ ಪೆರ್ಮರದಂತೆ ನೆಲನು ಅದಿರೆ ಕೆಡೆದ (ಅಪ್ಪಳಿಸಿದ ದೊಡ್ಡ ಮರದಂತೆ ನೆಲವು ಅಲ್ಲಾಡುವ ಹಾಗೆ ಕೆಳಗೆ ಬಿದ್ದ) ತನ್ನ ಅಳಿಯನಂ ಮದ್ರರಾಜಂ ಕಂಡು ಕರುಣಿಸಿ ()-
ವಚನ:ಅರ್ಥ:ಹೊಡೆದಾಗ ಮದ್ದಾನೆಯು ಅಪ್ಪಳಿಸಿದ ದೊಡ್ಡ ಮರದಂತೆ ನೆಲವು ಅಲ್ಲಾಡುವ ಹಾಗೆ ಕೆಳಗೆ ಬಿದ್ದ ತನ್ನ ಸೋದರ ಅಳಿಯನಾದ ಧರ್ಮರಾಜನನ್ನು ಶಲ್ಯನು ನೋಡಿ ಕರುಣಿಸಿ - (ಶಲ್ಯ ಮಾದ್ರಿಯ ಅಣ್ಣ)
ಚಂ|| ಮುಳಿಯಿಸದನ್ನಮೀ ನೃಪನಿನಾಗದು ಸಾವೆನಗೆಂತುಮೀತನಂ
ಮುಳಿಯಿಪಿನೆಂದುರಸ್ಥಳಮನಂತೊದೆದಾಗಡೆ ಕಂತುಗೀಶ್ವರಂ|
ಮುಳಿದವೊಲಾ ನೃಪಂ ಮುಳಿದು ನೋಡೆ ವಿಲೋಚನಪಾವಕಂ ತಗು
ಳ್ದಳುರ್ದೊಡೆ ಬೂದಿಯಾದುದೊಡಲಾಗಳೆ ಮದ್ರ ಮಹಾಮಹೀಶನಾ|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಮುಳಿಯಿಸದನ್ನಂ ಈ ನೃಪನಿಂ ಆಗದು ಸಾವೆನಗೆ (ಕೋಪವನ್ನುಂಟು ಮಾಡುವವರೆಗೂ ಧರ್ಮಜನಿಗಂದ ಸಾವು ನನಗೆ ಆಗುವುದಿಲ್ಲ.) ಎಂತುಂ ಈತನಂ ಮುಳಿಯಿಪೆಂ (ಪಿ/ಪೆ) ಎಂದು ಉರಸ್ಥಳಮನು (ಹೇಗೂ ಈತನನ್ನು ರೇಗಿಸುತ್ತೇನೆ ಎಂದು) ಅಂತು ಒದೆದ ಆಗಡೆ (ಎದೆಯನ್ನು ಹಾಗೆ ಒದೆದಾಗ ತಕ್ಷಣ,) ಕಂತುಗೆ ಈಶ್ವರಂ ಮುಳಿದವೊಲ್ ಆ ನೃಪಂ ಮುಳಿದು (ಮನ್ಮಥನಿಗೆ ಈಶ್ವರನು ಕೋಪಿಸಿಕೊಂಡ ಹಾಗೆ) ನೋಡೆ ವಿಲೋಚನ ಪಾವಕಂ ತಗುಳ್ದು ಅಳುರ್ದೊಡೆ (ನೋಡಲು ಕಣ್ಣಿನ ಬೆಂಕಿಯು ಬೆನ್ನಟ್ಟಿ ತಾಗಿ ವ್ಯಾಪಿದಾಗ) ಬೂದಿಯಾದುದು ಒಡಲು ಆಗಳೆ ಮದ್ರ ಮಹಾಮಹೀಶನಾ (ಆ ಮದ್ರರಾಜನ ದೇಹವು ಆಗಲೇ ಬೂದಿಯಾಯಿತು)
  • ಟಿಪ್ಪಣಿ::ಮೂಲ ಭಾರತದಲ್ಲಿ ಕೊನೆಗೆ ವಿರಥನಾದ ಧರ್ಮರಾಯನು ಎಸೆದ ಈಟಿಯಿಂ ಶಲ್ಯನು ಸಾಯುವನು. ಇದು ಕೋಪವನ್ನೇ ಮಾಡದ ಧರ್ಜನಿಗೆ ಕೋಪ ಬರಿಸಿ ಅವನ ಉಗ್ರದೃಷ್ಟಿಯ ಬೋಕಿಯಿಂದ ಸಾಯುವ ಸನ್ನಿವೇಶ ಪಂಪನ ಕವಿಸಮಯ.
ಪದ್ಯ-೪೮:ಅರ್ಥ: ಕೋಪವನ್ನುಂಟು ಮಾಡುವವರೆಗೂ ಧರ್ಮಜನಿಗಂದ ಸಾವು ನನಗೆ ಆಗುವುದಿಲ್ಲ. ಹೇಗೂ ಈತನನ್ನು ರೇಗಿಸುತ್ತೇನೆ ಎಂದು ಎದೆಯನ್ನು ಹಾಗೆ ಒದೆದ , ತಕ್ಷಣವೇ ಮನ್ಮಥನಿಗೆ ಈಶ್ವರನು ಕೋಪಿಸಿಕೊಂಡು ನೋಡಲು ಕಣ್ಣಿನ ಬೆಂಕಿಯು ತಾಗಿ ವ್ಯಾಪಿದಾಗ ಆ ಮದ್ರರಾಜ ಶಲ್ಯನ ದೇಹವು ಆಗಲೇ ಬೂದಿಯಾಯಿತು)
ವ|| ಅಂತಜಾತಶತ್ರು ನೇತ್ರೋದ್ಭಾತಾನಳಂ ತ್ರಿಣೇತ್ರಲಲಾಟನಳನಂತಳವಲ್ಲದಳುರೆ ಮದ್ರನಾಥಂ ಭಸ್ಮೀಭೂತನಾದ ಮಾತನಹಿಕೇತನಂ ಕೇಳ್ದು-
ವಚನ:ಪದವಿಭಾಗ-ಅರ್ಥ:ಅಂತು ಅಜಾತಶತ್ರು ನೇತ್ರ ಉದ್ಭಾತ ಅನಳಂ (ಹಾಗೆ ಧರ್ಮರಾಯನ ಕಣ್ಣಿನಲ್ಲಿ ಹುಟ್ಟಿದ ಬೆಂಕಿಯು ಮುಕ್ಕಣ್ಣನ ಹಣೆಗಣ್ಣಿನ ಬೆಂಕಿಯು) ತ್ರಿಣೇತ್ರ ಲಲಾಟ ಅನಳನಂತೆ ಅಳವಲ್ಲದೆ ಅಳುರೆ - ಸುಡಲು(ಶಿವನ ಹಣೆಗಣ್ಣ ಅಗ್ನಿಯಂತೆ ಅಳತೆಯಿಲ್ಲದಷ್ಟು ಮೀರಿ ಸುಡಲು) ಮದ್ರನಾಥಂ ಭಸ್ಮೀಭೂತನಾದಂ ಆತನು ಅಹಿಕೇತನಂ ಕೇಳ್ದು (ಶಲ್ಯನು ಬೂದಿಯಾದ ಮಾತನ್ನು ದುರ್ಯೋಧನನು ಕೇಳಿದನು. ಕೇಳಿ)-
ವಚನ:ಅರ್ಥ:ಹಾಗೆ ಧರ್ಮರಾಯನ ಕಣ್ಣಿನಲ್ಲಿ ಹುಟ್ಟಿದ ಬೆಂಕಿಯು ಮುಕ್ಕಣ್ಣನ ಹಣೆಗಣ್ಣಿನ ಬೆಂಕಿಯು ಶಿವನ ಹಣೆಗಣ್ಣ ಅಗ್ನಿಯಂತೆ ಅಳತೆಯಿಲ್ಲದಷ್ಟು ಸುಡಲು, ಶಲ್ಯನು ಬೂದಿಯಾದ ಮಾತನ್ನು ದುರ್ಯೋಧನನು ಕೇಳಿದಾಗ-

ಏಕಾಂಗಿಯಾದ ದುರ್ಯೋಧನನು ಸಂಜಯನ ಸಲಹೆಯಂತೆ ಭೀಷ್ಮರನ್ನು ಕಂಡು ಸಲಹೆ ಕೇಳಲು ಹೋಗುವುದು ಸಂಪಾದಿಸಿ

ಉ|| ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರ ರಾ
ಜಾದಿ ಮಹೀಭುಜರ್ ಧುರದೊಳೆನ್ನಯ ದೂಸಱಿನೞ್ಗಿ ಮೞ್ಗಿದಂ|
ತಾದರಿದೊಂದೆ ಮೆಯ್ಯುೞಿದುದಿನ್ನೆನಗಾವುದೊ ಮೆಳ್ಪಡೆಯ್ದೆ ಮುಂ
ದಾದ ವಿರೋಧಿಸಾಧನಮನೆನ್ನ ಗದಾಶನಿಯಿಂದುರುಳ್ಚುವೆಂ|| ೪೯ ||
ಪದ್ಯ-೪೯:ಪದವಿಭಾಗ-ಅರ್ಥ:ಆ ದೊರೆಯರ್ (ಅಂತಹ ಅಸಮಾನ ಯೋಗ್ಯತೆಯವರಾದ) ನದೀಜ ಘಟಸಂಭವ ಸೂರ್ಯತನೂಜ ಮದ್ರ ರಾಜಾದಿ ಮಹೀಭುಜರ್ ( ಭೀಷ್ಮ, ದ್ರೋಣ, ಕರ್ಣ, ಶಲ್ಯನೇ ಮೊದಲಾದ ರಾಜರುಗಳು) ಧುರದೊಳು ಎನ್ನಯ ದೂಸಱಿಂ ಅೞ್ಗಿ ಮೞ್ಗಿದಂತಾದರು (ಯುದ್ಧದಲ್ಲಿ ನನ್ನ ಕಾರಣದಿಂದ ಸತ್ತು ನಿರ್ನಾಮವಾದರು.) ಇದೊಂದೆ ಮೆಯ್ಯ ಉೞಿದುದು (ಈ ನನ್ನದೊಂದೆ ಶರೀರ ಉಳಿದಿದೆ.) ಇನ್ನು ಎನಗೆ ಆವುದೊ ಮೆಳ್ಪಡೆ/ಮಾಳ್ಪೊಡೆ (ಇನ್ನು ನನಗೆ ಮಾಡುವ ಕಾರ್ಯವಾವುದು?) ಎಯ್ದೆ ಮುಂದಾದ ವಿರೋಧಿಸಾಧನಮನು (ಚೆನ್ನಾಗಿ/ ಸಮರ್ಥವಾಗಿ ನನ್ನನ್ನು ಎದುರಿಸುವ ಶತ್ರುಸೈನ್ಯವನ್ನು) ಎನ್ನ ಗದಾ ಅಶನಿಯಿಂದ ಉರುಳ್ಚುವೆಂ (ನನ್ನ ಗದೆಯೆಂಬ ಸಿಡಿಲಿನಿಂದ ಉರುಳಿಸುವೆನು )
ಪದ್ಯ-೪೯:ಅರ್ಥ:ಅಂತಹ ಅಸಮಾನ ಯೋಗ್ಯತೆಯವರಾದ ಭೀಷ್ಮ, ದ್ರೋಣ, ಕರ್ಣ, ಶಲ್ಯನೇ ಮೊದಲಾದ ರಾಜರುಗಳು ಯುದ್ಧದಲ್ಲಿ ನನ್ನ ಕಾರಣದಿಂದ ಸತ್ತು ನಿರ್ನಾಮವಾದರು. ಈ ನನ್ನದೊಂದೆ ಶರೀರ ಉಳಿದಿದೆ. ಇನ್ನು ನನಗೆ ಮಾಡುವ ಕಾರ್ಯವಾವುದು? ಚೆನ್ನಾಗಿ/ ಸಮರ್ಥವಾಗಿ ನನ್ನನ್ನು ಎದುರಿಸುವ ಶತ್ರುಸೈನ್ಯವನ್ನು ನನ್ನ ಗದೆಯೆಂಬ ಸಿಡಿಲಿನಿಂದ ಉರುಳಿಸುವೆನು, ಎಂದು ದುರ್ಯೋಧನನು ಯೋಚಿಸಿ ನಿಶ್ಚಯಿಸಿದನು.
ವ|| ಎಂದು ನಿಜಭುಜ ವಿಕ್ರಮೈಕಸಾಹಯನಾಗಿ ಗದೆಯಂ ಕೊಂಡು ಸಂಗ್ರಾಮ ರಂಗಕ್ಕೆ ನಡೆಯಲೆಂದಿರ್ದ ಕುರುಕುಳಚೂಡಾಮಣಿಯ ದಕ್ಷಿಣಕರಾಗ್ರಮಂ ಪಿಡಿದು ಸಂಜಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನಿಜಭುಜ ವಿಕ್ರಮ ಏಕಸಾಹಯನಾಗಿ ಗದೆಯಂ ಕೊಂಡು (ಎಂದು ತನ್ನ ಬಾಹುಬಲ ಶೌರ್ಯವೊಂದನ್ನೇ ಸಹಾಯವನ್ನಾಗಿ ಹೊಂದಿ ಗದೆಯನ್ನು ತೆಗೆದುಕೊಂಡು) ಸಂಗ್ರಾಮ ರಂಗಕ್ಕೆ ನಡೆಯಲೆಂದು ಇರ್ದ ಕುರುಕುಳಚೂಡಾಮಣಿಯ (ಯುದ್ಧರಂಗಕ್ಕೆ ಹೋಗಬೇಕೆಂದಿದ್ದ ಕುರುಕುಲಚೂಡಾಮಣಿಯಾದ ದುಯೋಧನನ) ದಕ್ಷಿಣಕರಾಗ್ರಮಂ ಪಿಡಿದು ಸಂಜಯನು ಇಂತು ಎಂದಂ (ಬಲಗೈಯ್ಯ ತುದಿಯನ್ನು ಹಿಡಿದುಕೊಂಡು ಸಂಜಯನು ಹೀಗೆಂದನು)-
ವಚನ:ಅರ್ಥ:ಎಂದು ತನ್ನ ಬಾಹುಬಲ ಶೌರ್ಯವೊಂದನ್ನೇ ಸಹಾಯವನ್ನಾಗಿ ಹೊಂದಿ ಗದೆಯನ್ನು ತೆಗೆದುಕೊಂಡು ಯುದ್ಧರಂಗಕ್ಕೆ ಹೋಗಬೇಕೆಂದಿದ್ದ ಕುರುಕುಲಚೂಡಾಮಣಿಯಾದ ದುಯೋಧನನ ಬಲಗೈಯ್ಯ ತುದಿಯನ್ನು ಹಿಡಿದುಕೊಂಡು ಸಂಜಯನು ಹೀಗೆಂದನು. -
ಮ|| ಬೆವಸಾಯಂಗೆಯಲಿನ್ನುಮುಂಟೆಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂ
ಡವರಂ ಗೆಲ್ವುದಸಾಧ್ಯಮಾಯ್ತೆ ನಿಜ ದೋರ್ದಂಡಂಬರಂ ಗಂಡರಾ|
ಹವರಂಗಕ್ಕೊಳರೇ ಸಮಂತು ಪಗೆಯಂ ಕೊಲ್ವಂತು ಗೆಲ್ವಂತು ಕಾ
ದುವುದೇಕಾಕಿಯೆ ಆಗಿ ದೇವರಿಪುಭೂಪಾಳರ್ಕಳೊಳ್ ಕಾದುವೈ|| ೫೦ ||
ಪದ್ಯ-೫೦:ಪದವಿಭಾಗ-ಅರ್ಥ:ಬೆವಸಾಯಂಗೆಯಲ್ ಇನ್ನುಂ ಉಂಟೆಡೆ (ಮುಂದಿನಕಾರ್ಯ ಮಾಡುವುದಕ್ಕೆ ಇನ್ನೂ ಅವಕಾಶವಿರುವಾಗ) ಕೃಪ ಅಶ್ವತ್ಥಾಮರು ಉಳ್ಳಂತೆ ( ಕೃಪ ಅಶ್ವತ್ಥಾಮರು ಇರಲು) ಪಾಂಡವರಂ ಗೆಲ್ವುದು ಅಸಾಧ್ಯಮಾಯ್ತೆ (ಪಾಂಡವರನ್ನು ಗೆಲ್ಲುವುದು ಅಸಾಧ್ಯವಾಯಿತೇ?); ನಿಜ ದೋರ್ದಂಡ ಅಂಬರಂ ಗಂಡರು ಆಹವರಂಗಕ್ಕೆ ಒಳರೇ (ನಿನ್ನ ಬಾಹುದಂಡದವರೆವಿಗೂ – ಅದಕ್ಕೆ ಸಮಾನರಾದ ಪೌರುಷಶಾಲಿಗಳು ಯುದ್ಧರಂಗದಲ್ಲಿ ಇದ್ದಾರೆಯೇ?) ಸಮಂತು (ಚೆನ್ನಾಗಿ) ಪಗೆಯಂ ಕೊಲ್ವಂತು ಗೆಲ್ವಂತು ಕಾದುವುದು (ಶತ್ರುವನ್ನು ಕೊಲ್ಲುವ ಹಾಗೂ ಗೆಲ್ಲುವ ಹಾಗೆ ಕಾದಬೇಕು) ಏಕಾಕಿಯೆ ಆಗಿ ದೇವ (ಸ್ವಾಮಿ) ರಿಪುಭೂಪಾಳರ್ಕಳೊಳ್ ಕಾದುವೈ! (ಸ್ವಾಮಿ; ಶತ್ರುರಾಜರುಗಳಲ್ಲಿ ಒಬ್ಬಂಟಿಗನೇ ಆಗಿ ಕಾದುತ್ತೀಯಾ? )
ಪದ್ಯ-೫೦:ಅರ್ಥ:ಮುಂದಿನಕಾರ್ಯ ಮಾಡುವುದಕ್ಕೆ ಇನ್ನೂ ಅವಕಾಶವಿರುವಾಗ ಕೃಪ ಅಶ್ವತ್ಥಾಮರು ಇರಲು ಪಾಂಡವರನ್ನು ಗೆಲ್ಲುವುದು ಅಸಾಧ್ಯವಾಯಿತೇ? ನಿನ್ನ ಬಾಹುದಂಡದವರೆವಿಗೂ – ಅದಕ್ಕೆ ಸಮಾನರಾದ ಪೌರುಷಶಾಲಿಗಳು ಯುದ್ಧರಂಗದಲ್ಲಿದ್ದಾರೆಯೇ? ಶತ್ರುವನ್ನು ಕೊಲ್ಲುವ ಹಾಗೂ ಗೆಲ್ಲುವ ಹಾಗೆ ಕಾದಬೇಕು. ಸ್ವಾಮಿ; ಶತ್ರುರಾಜರುಗಳಲ್ಲಿ ಒಬ್ಬಂಟಿಗನೇ ಆಗಿ ಕಾದುತ್ತೀಯಾ?
ವ|| ಎಂಬುದುಮೆನ್ನುಮನೇಕಾಕಿಯೆಂದೇಳಿಸಿ ನುಡಿದೆಯೆಂದು ಸಂಜಯನ ಮೊಗಮಂ ಮುನಿದು ನೋಡಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಎನ್ನುಮಂ ಏಕಾಕಿಯೆಂದು ಏಳಿಸಿ ನುಡಿದೆಯೆಂದು (ಎನ್ನಲು ನನ್ನನ್ನು ಏಕಾಕಿಯೆಂದು ಅಪಹಾಸ್ಯಮಾಡಿ ನುಡಿದೆಯಾ) ಸಂಜಯನ ಮೊಗಮಂ ಮುನಿದು ನೋಡಿ (ಎಂದು ಸಂಜಯನ ಮುಖವನ್ನು ಕೋಪಿಸಿಕೊಂಡು ನೋಡಿ )-
ವಚನ:ಅರ್ಥ:ಎನ್ನಲು ನನ್ನನ್ನು ಏಕಾಕಿಯೆಂದು ಅಪಹಾಸ್ಯಮಾಡಿ ನುಡಿದೆಯಾ ಎಂದು ಸಂಜಯನ ಮುಖವನ್ನು ಕೋಪಿಸಿಕೊಂಡು ನೋಡಿ-
ಚಂ|| ವನ ಕರಿ ಕುಂಭ ಪಾಟನ ಪಟಿಷ್ಠ ಕಠೋರ ನಖ ಪ್ರಹಾರ ಭೇ|
ದನ ಗಳಿತಾಸ್ತ್ರ ರಕ್ತ ನವ ಮೌಕ್ತಿಕ ಪಙ್ತಿವಿಳಾಸ ಭಾಸುರಾ|
ನನನೆನೆ ಸಂದುದಗ್ರ ಮೃಗರಾಜನುಮಂ ಮದವದ್ವಿರೋಧಿ ಭೇ
ದನಕರನಪ್ಪ ಶೌರ್ಯಮದದೆನ್ನುಮನೊಂದೊಡಲೆಂಬ ಸಂಜಯಾ|| ೫೧ ||
ಪದ್ಯ-೫೧:ಪದವಿಭಾಗ-ಅರ್ಥ: ವನ ಕರಿ ಕುಂಭ ಪಾಟನ (ಕಾಡಾನೆಯ ಕುಂಭಸ್ಥಳವನ್ನು ಭೇದಿಸುವುದರಲ್ಲಿ) ಪಟಿಷ್ಠ ಕಠೋರ ನಖ ಪ್ರಹಾರ ಭೇದನ (ಸಮರ್ಥವೂ ಕಠಿಣವೂ ಆದ ಉಗುರುಗಳ ಪೆಟ್ಟಿನಿಂದ ಬಿರಿಯುವಿಕೆಯಿಂದ) ಗಳಿತ (ಸೋರಿದ) ಅಸ್ತ್ರ (ರಕ್ತದಿಂದ) ರಕ್ತ (ಕೆಂಪಾದ) ನವ ಮೌಕ್ತಿಕ ಪಙ್ತಿವಿಳಾಸ (ಹೊಸಮುತ್ತುಗಳ ಸಾಲುಗಳ ಶೋಭೆಯಿಂದ ) ಭಾಸುರಾನನನು ಎನೆ (ಪ್ರಕಾಶಮಾನವಾದ ಮುಖವುಳ್ಳದ್ದು ಎನ್ನುವಂತೆ) ಸಂದ ಉದುಗ್ರ ಮೃಗರಾಜನುಮಂ (ಪ್ರಸಿದ್ಧ ಮೃಗರಾಜನಾದ ಸಿಂಹವನ್ನು) ಮದವದ್ ವಿರೋಧಿ ಭೇದನಕರನಪ್ಪ (ಮದಿಸಿರುವ ಶತ್ರುಗಳನ್ನು ಸೀಳುವ) ಶೌರ್ಯ ಮದದ (ಪ್ರತಾಪದ ಸೊಕ್ಕಿನಿಂದ ಕೂಡಿದ) ಎನ್ನುಮಂ ಒಂದು ಒಡಲು ಎಂಬ/ ಎಂಬೆ ಸಂಜಯಾ (ನನ್ನನ್ನು ಸಂಜಯಾ, ಒಂದೊಡಲ್- ಏಕಾಕಿ ಎನ್ನುವೆಯಾ?)
ಪದ್ಯ-೫೧:ಅರ್ಥ:ದುರ್ಯೋಧನ ಹೇಳಿದ, ಕಾಡಾನೆಯ ಕುಂಭಸ್ಥಳವನ್ನು ಭೇದಿಸುವುದರಲ್ಲಿ, ಸಮರ್ಥವೂ ಕಠಿಣವೂ ಆದ ಉಗುರುಗಳ ಪೆಟ್ಟಿನಿಂದ ಬಿರಿಯುವಿಕೆಯಿಂದ, ಅಲ್ಲಿಂದ ಸುರಿಯುತ್ತಿರುವ ಕೆಂಪಾದ ಹೊಸಮುತ್ತುಗಳ ಸಾಲುಗಳ ಶೋಭೆಯಿಂದ ಪ್ರಕಾಶಮಾನವಾದ ಮುಖವುಳ್ಳದ್ದು ಎನ್ನುವಂತೆ ಪ್ರಸಿದ್ಧ ಮೃಗರಾಜನಾದ ಸಿಂಹವನ್ನು ಮದಿಸಿರುವ ಶತ್ರುಗಳನ್ನು ಸೀಳುವ ಪ್ರತಾಪದ ಸೊಕ್ಕಿನಿಂದ ಕೂಡಿದ ನನ್ನನ್ನು ಸಂಜಯಾ, ಏಕಾಕಿ ಎನ್ನುವೆಯಾ?

ದಾರಿಯಲ್ಲಿ ರಣರಂಗದಲ್ಲಿ ಬಿದ್ದ ದುರ್ಯೋಧನನ ಆಪ್ತರ ವರ್ಣನೆ ಸಂಪಾದಿಸಿ

ವ|| ಎಂಬುದುಂ ದೇವರ ಬಾಹುಬಳಮಜೇಯಮುಮಸಹಾಯಮುಮಪ್ಪುದಾದ ದೊಡಂ ದೇಶ ಕಾಲ ವಿಭಾಗಮುಮನಾಪತ್ಪ್ರತೀಕಾರಮುಮನಱಿಯದ ವಿವೇಕಿಗಳಂತೆ ದೇವರ್ ನೆಗೞಲಾಗದೇನಂ ನೆಗಳ್ದೊಡಂ ಕುರುಪಿತಾಮಹನೊಳಾಳೋಚಿಸಿ ನೆಗೞ್ವುದೆಂದು ಮುೞಿಸಾರೆ ನುಡಿದು ಕಾಲವಂಚನೆಗೆಯ್ಯಲ್ ಬಗೆದು ಸಂಗ್ರಾಮರಂಗದೊಳಗನೆ ಮುಂದಿಟ್ಟೊಡಗೊಂಡನೇಕ ನೃಪಶಿರ ಕಪಾಳಶಕಳಜರ್ಜರಿತಮುಂ ಪರಸ್ಪರ ಸಮರರಭಸ ಸಮುತ್ಸಾರಿತಮುಂ ಸಕಲ ಸಾಮಂತಮಕುಟಬದ್ಧಮೌಳಿಮಾಳಾವಿಗಳಿತಮಕುಟಕೋಟಿ ಸಂಘಟ್ಟನೋಚ್ಚಳಿತ ಮಣಿಶಲಾಕಾ ಸಂಕುಳಮುಂ ಸಮರಭರ ನಿರ್ಭರ ಭೀಮಸೇನ ಘನಗದಾಪ್ರಹರಣನಿಸ್ಸಹಮದವದನೇಕ ಮತ್ತ ಮಾತಂಗ ಪದನಖಖರ್ವಿತೋರ್ವೀತಳಮುಂ ಪ್ರಚಂಡಮಾರ್ತಂಡಮರೀಚಿತೀವ್ರಜ್ವಳನಾಸಾರ ಕರಾಳಕರವಾಳಭಾಮಂಡಳ ಪರೀತೋದ್ಯತದೋರ್ದಂಡ ಚಂಡಪ್ರಚೆಂಡಸುಭಟಾರೂಢತುರಂಗಮ ವೇಗಬಲಪತಿತಖರಖುರಟಂಕಪರಿಸ್ಖಲನಕಳಿತ ವಿಷಮಸಮರಭೇರೀ ನಿಸ್ವನಮುಮಾಕರ್ಣಕೃಷ್ಣ ವಿಕ್ರಮಾರ್ಜುನಕಾರ್ಮುಕವಿಮುಕ್ತ ನಿಶಿತಸಾಯಕಸಂಕುಳಶಲ್ಯನಿಪತಿತಾನೇಕ ಕಳಕಳಾಕಳಿತಮುಂ ಪ್ರಕುಪಿಸೂತಹೂಂಕಾರ ಕಾತರಿತತರಳತರತುರಂಗದ್ರುತವೇಗಾಕೃಷ್ಣ ಧನಂಜಯರಥಚಟುಳ ಚಕ್ರನೇಮಿಧಾರಾಪರಿವೃತಸಂಘಟ್ಟನಸಮುಚ್ಚಳಿತ ಪಾಂಸು ಪಟಳಾಂಧಕಾರದುರ್ಲಕ್ಷಾಂತರಿಕ್ಷ ಕ್ಷಿತಿ ದಿಗಂತರಾಳಾಂತರಮುಮನವರತ ನಿಹತನರಕರಿತುರಗನಿಕುರುಂಬಕೀಲಾಲಕಲ್ಲೋಲಪ್ರವರ್ತನಾನೇಕ ನದನದೀಪ್ರವಾಹ ಬಾಹುಳ್ಯದುಸ್ತರಾವತರಣಮಾರ್ಗಮುಂನಿಶಿತಾಸಿಪತ್ರಪತಿತಪ್ರಚಂಡ ಸುಭಟಮಸ್ತಕೋಚ್ಚಳಿತಚಟಾಚ್ಛಾಟನದುರ್ನಿರೀಕ್ಷ್ಯನರ್ತಿ ತಾನೇಕ ಕಬಂಧಬಂಧುರಮುಮಪ್ಪ ವಿಷಮ ಪ್ರದೇಶಂಗಳೊಳ್ ತೊಲಗಿ ತೊಲಗಿ ಪೋಗೆ ಸಂಜಯಂ ದುರ್ಯೋಧನನ ಮೊಗಮಂನೋಡಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ದೇವರ ಬಾಹುಬಳಂ ಅಜೇಯಮುಮಂ ಅಸಹಾಯಮಂ ಅಪ್ಪುದು. ( ಸ್ವಾಮಿಯವರ ತೋಳಿನ ಬಲವು ಜಯಿಸುವುದಕ್ಕೆ ಆಗದುದೂ ಸಹಾಯವನ್ನಪೇಕ್ಷಿಸದುದೂ ಆಗಿದೆ). ಆದೊಡಂ ದೇಶ ಕಾಲ ವಿಭಾಗಮುಮನು ಆಪತ್ಪ್ರತೀಕಾರಮುಮನು ಅಱಿಯದ (ಆದರೂ ದೇಶಕಾಲವಿಭಾಗವನ್ನು ಆಪತ್ತಿಗೆ ಪ್ರತೀಕಾರವನ್ನು ತಿಳಿಯದಿರುವ) ವಿವೇಕಿಗಳಂತೆ ದೇವರ್ ನೆಗೞಲಾಗದು (ವಿವೇಕಶೂನ್ಯರಾದವರ ಹಾಗೆ ಸ್ವಾಮಿಯವರು ಮಾಡಕೂಡದು). ಏನಂ ನೆಗಳ್ದೊಡಂ (ಏನು ಮಾಡಬೇಕಾದರೂ ) ಕುರುಪಿತಾಮಹನೊಳು ಆಳೋಚಿಸಿ ನೆಗೞ್ವುದೆಂದು ಮುೞಿಸಾರೆ ನುಡಿದು (ಎಂದು ದುರ್ಯೋಧನನುನ್ನು ಮನಸಾರೆ ಒಪ್ಪುವಂತೆ ಹೇಳಿ) (ಕುರುಪಿತಾಮಹನಾದ ಭೀಷ್ಮರಲ್ಲಿ ಆಲೋಚಿಸಿ ಮಾಡತಕ್ಕದ್ದು ಎಂದು) ಕಾಲವಂಚನೆಗೆಯ್ಯಲ್ ಬಗೆದು (ಕಾಲವಂಚನೆಮಾಡಲು/ ಸಮಯ ಕಳೆಯಲು ಯೋಚಿಸಿ ) ಸಂಗ್ರಾಮರಂಗದ ಒಳಗನೆ ಮುಂದಿಟ್ಟು ಒಡಗೊಂಡು (ಯುದ್ಧರಂಗದಲ್ಲಿ ಒಳಭಾಗದಲ್ಲಿಯೇ ದುರ್ಯೋಧನನನ್ನು ಮುಂದಿಟ್ಟು ಕೊಂಡು ಜೊತೆಗೂಡಿ,) ಅನೇಕ ನೃಪಶಿರ ಕಪಾಳಶಕಳಜರ್ಜರಿತಮುಂ (ಅವನೊಡನೆ ಅನೇಕರಾಜರ ತಲೆ ಮತ್ತು ಕಪಾಲಗಳ ತಲೆಯೋಡುಗಳಿಂದ ಕಿಕ್ಕಿರಿದಿದ್ದು) ಪರಸ್ಪರ ಸಮರ ರಭಸ ಸಮುತ್ಸಾರಿತಮುಂ (ಪರಸ್ಪರ ಯುದ್ಧದ ರಭಸದಲ್ಲಿ ಹೊರಹಾಕಿದ) ಸಕಲ ಸಾಮಂತ ಮಕುಟ ಬದ್ಧಮೌಳಿ ಮಾಳಾವಿಗಳಿತ ಮಕುಟಕೋಟಿ ಸಂಘಟ್ಟನ ಉಚ್ಚಳಿತ (ಸಕಲ ಸಾಮಂತರಾಜರ ತಲೆಗಳ ಸಾಲುಗಳಿಂದ ಜಾರಿದ ಕಿರೀಟಗಳ ತುದಿಯ ತಗುಲುವಿಕೆಯಿಂದ) ಮಣಿಶಲಾಕಾ ಸಂಕುಳಮುಂ (ಮೇಲೆದ್ದ ರತ್ನಸಲಾಕಿಗಳ ಸಮೂಹವನ್ನೂ) ಸಮರಭರ ನಿರ್ಭರ ಭೀಮಸೇನ ಘನಗದಾ ಪ್ರಹರಣ ನಿಸ್ಸಹಮದವದ (ಯುದ್ಧಭಾರವನ್ನು ವಹಿಸಿರುವ ಭೀಮಸೇನನ ದೊಡ್ಡದಾದ ಗದೆಯ ಪೆಟ್ಟನ್ನು ಸಹಿಸಲಾಗದ ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ) ಅನೇಕ ಮತ್ತ ಮಾತಂಗ ಪದನಖ ಖರ್ವಿತ ಓರ್ವೀ ತಳಮುಂ (ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ ಭೂಭಾಗವನ್ನುಳ್ಳದೂ) ಪ್ರಚಂಡಮಾರ್ತಂಡ ಮರೀಚಿ ತೀವ್ರಜ್ವಳನಾಸಾರ (ಬಹಳ ಕಾಂತಿಯಿಂದ ಕೂಡಿದ ಸೂರ್ಯನ ತೀವ್ರವಾದ ಕಿರಣಗಳಂತೆಯೂ ತೀವ್ರಾಗ್ನಿಯಂತೆಯೂ ಹೊಳೆಯುವ ) ಕರಾಳ ಕರವಾಳ ಭಾಮಂಡಳಪರೀತೋದ್ಯತದ (ಭಯಂಕರವಾದ ಕತ್ತಿಗಳ ಕಾಂತಿಯ ಪರಿವೇಷದಿಂದ ಸುತ್ತುವರಿಯಲ್ಪಟ್ಟ) ಓರ್ದಂಡ ಚಂಡಪ್ರಚೆಂಡ ಸುಭಟಾರೂಢ ತುರಂಗಮ ವೇಗ (ಎತ್ತರವಾದ ಬಾಹುಗಳಿಂದ ಪ್ರಚಂಡವಾದ ಸುಭಟರು ಹತ್ತಿರುವ ಕುದುರೆಗಳ ಸೈನ್ಯದ ವೇಗದಿಂದ) ಬಲಪತಿತ ಖರಖುರಟಂಕ ಪರಿಸ್ಖಲನ (ಬೀಳಿಸಲ್ಪಟ್ಟ ಹೇಸರಗತ್ತೆಗಳ ತೀಕ್ಷ್ಣವಾದ ಗೊರಸಿನ ಲಾಳಗಳ ಜಾರುವಿಕೆಯಿಂದ ಉಂಟಾದ ಶಬ್ದವುಳ್ಳದ್ದೂ) ಕಳಿತ ವಿಷಮ ಸಮರ ಭೇರೀ ನಿಸ್ವನಮುಂ (ವಿಷಮ ಸಮರ ಭೇರಿಯ ಶದ್ದಿಂದ ಕೂಡಿದ್ದೂ) ಆಕರ್ಣಕೃಷ್ಣ ವಿಕ್ರಮಾರ್ಜುನ ಕಾರ್ಮುಕ ವಿಮುಕ್ತ ನಿಶಿತಸಾಯಕಸಂಕುಳ (ಕಿವಿಯವರೆಗೂ ಸೆಳೆಯಲ್ಪಟ್ಟ ಅರ್ಜುನನ ಬಾಣದಿಂದ ಬಿಡಲ್ಪಟ್ಟ ಹರಿತವಾದ ಬಾಣಗಳ ಶಲ್ಯದಿಂದ (ಚೂರು) ), ಶಲ್ಯನಿಪತಿತ ಅನೇಕ ಕಳಕಳಾಕಳಿತಮುಂ (ಬೀಳಿಸಲ್ಪಟ್ಟ ಅನೇಕ ಕಳಕಳಶಬಲ್ದಗಳಿಂದ ಕೂಡಿದುದೂ/ ತುಂಬಿದುದೂ) ಪ್ರಕುಪಿ (ತ) ಸೂತಹೂಂಕಾರ ಕಾತರಿತ ತರಳತರ ತುರಂಗದ್ರುತ ವೇಗಾಕೃಷ್ಣ (ಕೋಪಗೊಂಡ ಸಾರಥಿಗಳ ಗರ್ಜನೆಗಳಿಂದ ಸಂಭ್ರಮಗೊಂಡ ಚಂಚಲವಾದ ಕುದುರೆಯ ಓಟದ ವೇಗದಿಂದ ಸೆಳೆಯಲ್ಪಟ್ಟ) ಧನಂಜಯ ರಥಚಟುಳ ಚಕ್ರನೇಮಿಧಾರಾ ಪರಿವೃತ ಸಂಘಟ್ಟನ ಸಮುಚ್ಚಳಿತ ಪಾಂಸು (ಅರ್ಜುನನ ಬಲಿಷ್ಠವಾದ ಚಕ್ರಗಳ ಸುತ್ತಲಿರುವ ಕಬ್ಬಿಣದ ಪಟ್ಟಿಗಳು ಹೊರಳಿದ ಹೊಡೆತದಿಂದ ಮೇಲಕ್ಕೆದ್ದ ಧೂಳುಗಳ ) ಪಟಳಾಂಧಕಾರ ದುರ್ಲಕ್ಷಾಂತರಿಕ್ಷ ಕ್ಷಿತಿ ದಿಗಂತರ ಆಳಾಂತರಮುಂ (ಪದರದಿಂದ ಕಾಣಲಾಗದ ಭೂಮ್ಯಾಕಾಶ ದಿಗ್ಭಾಗಗಳ ಒಳಭಾಗವನ್ನುಳ್ಳುದೂ) ಅನವರತ ನಿಹತ ನರ ಕರಿ ತುರಗನಿಕುರುಂಬ ಕೀಲಾಲಕಲ್ಲೋಲ ಪ್ರವರ್ತನಾನೇಕ ನದ ನದೀಪ್ರವಾಹ ಬಾಹುಳ್ಯ ದುಸ್ತರಾವತರಣ ಮಾರ್ಗಮುಂ (ಯಾವಾಗಲೂ ಹೊಡೆಯಲ್ಪಟ್ಟ ಮನುಷ್ಯ, ಆನೆ, ಕುದುರೆಗಳ ಸಮೂಹದ ರಕ್ತಗಳ ಅಲೆಗಳ ಹೊರಳುವಿಕೆಯಿಂದ ಆದ ಅನೇಕ ನದನದೀಪ್ರವಾಹಗಳನ್ನು ದಾರಿಗಳನ್ನುಳ್ಳುದೂ,) ನಿಶಿತ ಅಸಿಪತ್ರ ಪತಿತಪ್ರಚಂಡ ಸುಭಟ ಮಸ್ತಕೋಚ್ಚಳಿತ ಚಟಾಚ್ಛಾಟನ ದುರ್ನಿರೀಕ್ಷ್ಯ ನರ್ತಿತ ಅನೇಕ ಕಬಂಧಬಂಧುರಮುಂ ( ಹರಿತವಾದ ಕತ್ತಿಯಿಂದ ಬೀಳಿಸಲ್ಪಟ್ಟ ಭಯಂಕರವಾದ ಸುಭಟರ ತಲೆಯಿಂದ ಮೇಲಕ್ಕೆದ್ದ ಜುಟ್ಟುಗಳ ಚಲನೆಯಿಂದ ಮರೆಯಾಗಿರುವ ಅನೇಕ ಅಟ್ಟೆಗಳ ನೃತ್ಯದಿಂದ ಮನೋಹರವಾಗಿರುವುದೂ ಆಗಿರುವ) ಅಪ್ಪ ವಿಷಮ ಪ್ರದೇಶಂಗಳೊಳ್ ತೊಲಗಿ ತೊಲಗಿ (ಹಳ್ಳಕೊಳ್ಳಗಳ ಪ್ರದೇಶದಲ್ಲಿ ನಡೆದು ) ಪೋಗೆ ಸಂಜಯಂ ದುರ್ಯೋಧನನ ಮೊಗಮಂ ನೋಡಿ (ಹೋಗುತ್ತಿರುವ ದುರ್ಯೋಧನನ ಮುಖವನ್ನು ಸಂಜಯನು ನೋಡಿ)-
ವಚನ:ಅರ್ಥ:ಸ್ವಾಮಿಯವರ ತೋಳಿನ ಬಲವು ಜಯಿಸುವುದಕ್ಕೆ ಆಗದುದೂ ಸಹಾಯವನ್ನಪೇಕ್ಷಿಸದುದೂ ಆಗಿದೆ. ಆದರೂ ದೇಶಕಾಲವಿಭಾಗವನ್ನು ಆಪತ್ತಿಗೆ ಪ್ರತೀಕಾರವನ್ನು ತಿಳಿಯದಿರುವ ವಿವೇಕಶೂನ್ಯರಾದವರ ಹಾಗೆ ಸ್ವಾಮಿಯವರು ಮಾಡಕೂಡದು. ಏನು ಮಾಡಬೇಕಾದರೂ ಕುರುಪಿತಾಮಹನಾದ ಭೀಷ್ಮರಲ್ಲಿ ಆಲೋಚಿಸಿ ಮಾಡತಕ್ಕದ್ದು ಎಂದು ದುರ್ಯೋಧನನುನ್ನು ಮನಸಾರೆ ಒಪ್ಪುವಂತೆ ಹೇಳಿ, ಕೋಪವು ಕಡಿಮೆಯಾಗುವ ಹಾಗೆ ಮಾತನಾಡಿ ಸಮಾಧಾನಪಡಿಸಿದನು. ಕಾಲವಂಚನೆಮಾಡಲು ಯೋಚಿಸಿ ಯುದ್ಧರಂಗದಲ್ಲಿ ಒಳಭಾಗದಲ್ಲಿಯೇ ದುರ್ಯೋಧನನನ್ನು ಮುಂದಿಟ್ಟು ಕೊಂಡು ಜೊತೆಗೂಡಿ, ಅವನೊಡನೆ ಯುದ್ಧದಲ್ಲಿ ಸಕಲ ಅನೇಕರಾಜರ ತಲೆ ಮತ್ತು ಕಪಾಲಗಳ ತಲೆಯೋಡುಗಳಿಂದ ಕಿಕ್ಕಿರಿದಿದ್ದು ಪರಸ್ಪರ ಯುದ್ಧದ ರಭಸದಲ್ಲಿ ಹೊರಹಾಕಿದ, ಸಕಲ ಸಾಮಂತರಾಜರ ತಲೆಗಳ ಸಾಲುಗಳಿಂದ ಜಾರಿದ ಕಿರೀಟಗಳ ತುದಿಯ ತಗುಲುವಿಕೆಯಿಂದ ಮೇಲೆದ್ದ ರತ್ನಸಲಾಕಿಗಳ ಸಮೂಹವನ್ನೂ ಯುದ್ಧಭಾರವನ್ನು ವಹಿಸಿರುವ ಭೀಮಸೇನನ ದೊಡ್ಡದಾದ ಗದೆಯ ಪೆಟ್ಟನ್ನು ಸಹಿಸಲಾಗದ ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ ಭೂಭಾಗವನ್ನುಳ್ಳದೂ ಬಹಳ ಕಾಂತಿಯಿಂದ ಕೂಡಿದ ಸೂರ್ಯನ ತೀವ್ರವಾದ ಕಿರಣಗಳಂತೆಯೂ ತೀವ್ರಾಗ್ನಿಯಂತೆಯೂ ಹೊಳೆಯುವ ಭಯಂಕರವಾದ ಕತ್ತಿಗಳ ಕಾಂತಿಯ ಪರಿವೇಷದಿಂದ ಸುತ್ತುವರಿಯಲ್ಪಟ್ಟು ಎತ್ತರವಾದ ಬಾಹುಗಳಿಂದ ಪ್ರಚಂಡವಾದ ಸುಭಟರು ಹತ್ತಿರುವ ಕುದುರೆಗಳ ಸೈನ್ಯದ ವೇಗದಿಂದ ಬೀಳಿಸಲ್ಪಟ್ಟ ಹೇಸರಗತ್ತೆಗಳ ತೀಕ್ಷ್ಣವಾದ ಗೊರಸಿನ ಲಾಳಗಳ ಜಾರುವಿಕೆಯಿಂದ ಉಂಟಾದ ಶಬ್ದವುಳ್ಳದ್ದೂ ಕಿವಿಯವರೆಗೂ ಸೆಳೆಯಲ್ಪಟ್ಟ ಅರ್ಜುನನ ಬಾಣದಿಂದ ಬಿಡಲ್ಪಟ್ಟ ಹರಿತವಾದ ಬಾಣಗಳ ಶಲ್ಯದಿಂದ (ಚೂರು) ಬೀಳಿಸಲ್ಪಟ್ಟ ಅನೇಕ ಕಳಕಳಶಬಲ್ದಗಳಿಂದ (ಕೂಡಿದುದೂ) ತುಂಬಿದುದೂ ಕೋಪಗೊಂಡ ಸಾರಥಿಗಳ ಗರ್ಜನೆಗಳಿಂದ ಸಂಭ್ರಮಗೊಂಡ ಚಂಚಲವಾದ ಕುದುರೆಯ ಓಟದ ವೇಗದಿಂದ ಸೆಳೆಯಲ್ಪಟ್ಟ ಅರ್ಜುನನ ಬಲಿಷ್ಠವಾದ ಚಕ್ರಗಳ ಸುತ್ತಲಿರುವ ಕಬ್ಬಿಣದ ಪಟ್ಟಿಗಳು ಹೊರಳಿದ ಹೊಡೆತದಿಂದ ಮೇಲಕ್ಕೆದ್ದ ಧೂಳುಗಳ ಪದರದಿಂದ ಕಾಣಲಾಗದ ಭೂಮ್ಯಾಕಾಶ ದಿಗ್ಭಾಗಗಳ ಒಳಭಾಗವನ್ನುಳ್ಳುದೂ ಯಾವಾಗಲೂ ಹೊಡೆಯಲ್ಪಟ್ಟ ಮನುಷ್ಯ, ಆನೆ, ಕುದುರೆಗಳ ಸಮೂಹದ ರಕ್ತಗಳ ಅಲೆಗಳ ಹೊರಳುವಿಕೆಯಿಂದ ಆದ ಅನೇಕ ನದನದೀಪ್ರವಾಹಗಳನ್ನು ದಾಟಲಸಾಧ್ಯವಾದ ದಾರಿಗಳನ್ನುಳ್ಳುದೂ, ಹರಿತವಾದ ಕತ್ತಿಯಿಂದ ಬೀಳಿಸಲ್ಪಟ್ಟ ಭಯಂಕರವಾದ ಸುಭಟರ ತಲೆಯಿಂದ ಮೇಲಕ್ಕೆದ್ದ ಜುಟ್ಟುಗಳ ಚಲನೆಯಿಂದ ಮರೆಯಾಗಿರುವ ಅನೇಕ ಅಟ್ಟೆಗಳ ನೃತ್ಯದಿಂದ ಮನೋಹರವಾಗಿರುವುದೂ ಆಗಿರುವ ಹಳ್ಳಕೊಳ್ಳಗಳ ಪ್ರದೇಶದಲ್ಲಿ ನಡೆದು ಹೋಗುತ್ತಿರುವ ದುರ್ಯೋಧನನ ಮುಖವನ್ನು ಸಂಜಯನು ನೋಡಿ-
ಚಂ|| ಎಱಗುವನೇಕ ವಂಶ ನರಪಾಲಕರತ್ನಕಿರೀಟಕೋಟಿಯೊಳ್
ಮಿಱುಗುವ ಪದ್ಮರಾಗದ ಬಿಸಿಲ್ಗಗಿವೀ ನಿಜ ಪಾದಪದ್ಮಮೀ|
ಯಿಱಿದು ಸಿಡಿಲ್ದ ಬಾಳ ಮೊನೆಯಂಬಿನ ತಿಂತಿಣಿಯೊಳ್ ತಗುಳ್ದು ಕಿ
ಕ್ಕಿಱಿಗಿಱಿದಿರ್ದ ಕೊಳ್ಗುಳದೊಳಂ ನಡೆವೀ ನಡೆಗೆಂತು ನೋಂತೆಯೋ|| ೫೨
ಪದ್ಯ-೫೨:ಪದವಿಭಾಗ-ಅರ್ಥ:ಎಱಗುವ ಅನೇಕ ವಂಶ ನರಪಾಲಕ ರತ್ನಕಿರೀಟಕೋಟಿಯೊಳ್(ನಮಸ್ಕಾರಮಾಡುವ ಅನೇಕ ಮನೆತನಗಳ ರಾಜರ ಕಿರೀಟಗಳ ತುದಿಯಲ್ಲಿ) ಮಿಱುಗುವ ಪದ್ಮರಾಗದ ಬಿಸಿಲ್ಗೆ ಅಗಿವ ಈ ನಿಜ ಪಾದಪದ್ಮಂ (ಹೊಳೆಯುವ ಪದ್ಮರಾಗದ ಕಾಂತಿಗೆ ಅಂಜುತ್ತಿದ್ದ ಈ ನಿನ್ನ ಪಾದಕಮಲಗಳು) ಈ ಯಿಱಿದು ಸಿಡಿಲ್ದ ಬಾಳ ಮೊನೆಯಂಬಿನ (ಈಗ ತಾನೇ ಕತ್ತರಿಸಲ್ಪಟ್ಟು ಸಿಡಿದು ಬಿದ್ದಿರುವ ಮೊನಚಾದ ಬಾಣಗಳ) ತಿಂತಿಣಿಯೊಳ್ ತಗುಳ್ದು (ಸಮೂಹದಲ್ಲಿ ಸೇರಿಕೊಂಡು) ಕಿಕ್ಕಿಱಿಗಿಱಿದಿರ್ದ (ಒತ್ತಾಗಿ ಸೇರಿಕೊಂಡಿರುವ) ಕೊಳ್ಗುಳದೊಳಂ ನಡೆವ (ಯುದ್ಧರಂಗದಲ್ಲಿಯೂ ನಡೆಯುವ) ಈ ನಡೆಗೆಂತು ನೋಂತೆಯೋ (ಈ ನಡೆಗೆ ಹೇಗೆ/ಯಾಕಾಗಿ ವ್ರತಮಾಡಿದ್ದೆಯೋ?- )
ಪದ್ಯ-೫೨:ಅರ್ಥ: ನಮಸ್ಕಾರಮಾಡುವ ಅನೇಕ ಮನೆತನಗಳ ರಾಜರ ಕಿರೀಟಗಳ ತುದಿಯಲ್ಲಿ ಹೊಳೆಯುವ ಪದ್ಮರಾಗದ ಕಾಂತಿಗೆ ಅಂಜುತ್ತಿದ್ದ ಈ ನಿನ್ನ ಪಾದಕಮಲಗಳು ಈಗ ತಾನೇ ಕತ್ತರಿಸಲ್ಪಟ್ಟು ಸಿಡಿದು ಬಿದ್ದಿರುವ ಮೊನಚಾದ ಬಾಣಗಳ ಸಮೂಹದಲ್ಲಿ ಸೇರಿಕೊಂಡು ಒತ್ತಾಗಿ ಸೇರಿಕೊಂಡಿರುವ ಯುದ್ಧರಂಗದಲ್ಲಿಯೂ ನಡೆಯುವ ಈ ನಡೆಗೆ ಹೇಗೆ/ಯಾಕಾಗಿ ವ್ರತಮಾಡಿದ್ದೆಯೋ?-
ವ|| ಎನುತುಂ ಕಿಱಿದಂತರಮಂ ಬಂದು-
ವಚನ:ಪದವಿಭಾಗ-ಅರ್ಥ:ಎನುತುಂ ಕಿಱಿದು ಅಂತರಮಂ ಬಂದು-
ವಚನ:ಅರ್ಥ:ಎನ್ನುತ್ತ ಸ್ವಲ್ಪ ದೂರ ಬಂದು-
ಚಂ|| ಇವು ಪವನಾತ್ಮಜಂ ಗದೆಯಿನೆಲ್ವಡಗಾಗಿರೆ ಮೋದೆ ಮೊೞ್ಗಿ ಬಿ
ೞ್ದುವು ಮದವಾರಣಂಗಳಿವು ನೋಡ ಗುಣಾರ್ಣವನಂಬಿನಿಂದುರು|
ಳ್ಳುವು ಮನುಜೇಂದ್ರ ರುಂದ್ರ ಮಕುಟಾಳಿಗಳೋಳಿಗಳಿಂತಿವಲ್ತೆ ಗಾಂ
ಡಿವಿಯ ವರೂಥಘಾತದೊಳೆ ನುರ್ಗಿದ ತುಂಗತುರಂಗಕೋಟಿಗಳ್|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಇವು ಪವನಾತ್ಮಜಂ ಗದೆಯಿಂ ಎಲ್ವಡಗಾಗಿರೆ ಮೋದೆ (ಇವು ಭೀಮನು ಗದೆಯಿಂದ ಮೂಳೆ ಮಾಂಸಗಳಾಗುವಂತೆ ಹೊಡೆಯಲು) ಮೊೞ್ಗಿ ಬಿೞ್ದುವು ಮದ ವಾರಣಂಗಳಿವು ನೋಡ (ಕುಸಿದು ಬಿದ್ದ ಮದ್ದಾನೆಗಳು, ಇವು ನೋಡಪ್ಪ). ಗುಣಾರ್ಣವನಂಬಿನಿಂದ ಉರುಳ್ಳುವು ಮನುಜೇಂದ್ರ ರುಂದ್ರ ಮಕುಟ ಆಳಿಗಳ ಓಳಿಗಳು ಇಂತು ಇವು ಅಲ್ತೆ (ಅರ್ಜುನನ ಬಾಣದಿಂದ ಉರುಳಿಬಿದ್ದ ರಾಜರ ರಾಶಿಯಾದ ಕಿರೀಟಗಳ ಸಮೂಹಗಳು, ಇವೇ ಅಲ್ಲವೇ!) ಗಾಂಡಿವಿಯ ವರೂಥ ಘಾತದೊಳೆ ನುರ್ಗಿದ ತುಂಗ ತುರಂಗಕೋಟಿಗಳ್ (ಇವು ಅರ್ಜುನನ ತೇರಿನ ಪೆಟ್ಟಿನಿಂದ ಜಜ್ಜಿಹೋದ ಎತ್ತರವಾದ ಕೋಟಿ ಕುದುರೆಗಳು)
ಪದ್ಯ-೫೩:ಅರ್ಥ:ಇವು ಭೀಮನು ಗದೆಯಿಂದ ಮೂಳೆ ಮಾಂಸಗಳಾಗುವಂತೆ ಹೊಡೆಯಲು ಕುಸಿದು ಬಿದ್ದ ಮದ್ದಾನೆಗಳ, ಇವು ನೋಡಪ್ಪ. ಅರ್ಜುನನ ಬಾಣದಿಂದ ಉರುಳಿಬಿದ್ದ ರಾಜರ ರಾಶಿಯಾದ ಕಿರೀಟಗಳ ಸಮೂಹಗಳು. ಇವು ಅರ್ಜುನನ ತೇರಿನ ಪೆಟ್ಟಿನಿಂದ ಜಜ್ಜಿಹೋದ ಎತ್ತರವಾದ ಕೋಟಿ ಕುದುರೆಗಳು.
ವ|| ಎಂದು ನೆಣದ ಪಳ್ಳಂಗಳಂ ಪಾಯ್ದುಂ ನೆತ್ತರ ತೊರೆಗಳಂ ಬಂಜಿಸಿಯುಮಡಗಿನಿಡುವುಗಳಂ ದಾಂಟಿಯುಂ ಪೆಣದ ತಿಂತಿಣಿಯಂ ನೂಂಕಿಯುಂ ರಥದ ಘಟ್ಟಣೆಗಳನೇಱಿ ಪಾಯ್ದುಂ ತೇರ ಪಲಗೆಯಂ ಮೆಟ್ಟಿಯುಂ ಪೋಗಿವೋಗಿ ಭೂತ ಪ್ರೇತ ಪಿಶಾಚ ನಿಶಾಚರನಿಚಯನಿಚಿತಭೂಭಾಗಮನೆಯ್ದೆ ವಂದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ನೆಣದ ಪಳ್ಳಂಗಳಂ ಪಾಯ್ದುಂ (ಎಂಬುದಾಗಿ ಹೇಳುತ್ತಾ, ಕೊಬ್ಬುಗಳ ಹಳ್ಳವನ್ನು ಹಾಯ್ದೂ) ನೆತ್ತರ ತೊರೆಗಳಂ ಬಂಜಿಸಿಯುಂ (ರಕ್ತಪ್ರವಾಹಗಳನ್ನು ತಪ್ಪಿಸಿಯೂ) ಅಡಗಿನ ಇಡುವುಗಳಂ ದಾಂಟಿಯುಂ (ಮಾಂಸದ ರಾಶಿಗಳನ್ನು ದಾಟಿಯೂ) ಪೆಣದ ತಿಂತಿಣಿಯಂ ನೂಂಕಿಯುಂ (ಹೆಣಗಳ ಸಮೂಹವನ್ನು ತಳ್ಳಿಯೂ), ರಥದ ಘಟ್ಟಣೆಗಳನು ಏಱಿ ಪಾಯ್ದುಂ (ರಥದ ಸಂಘಟ್ಟಣೆಗಳಿಂದಾದ ದಿಣ್ಣೆಹಳ್ಳಗಳನ್ನು ಹತ್ತಿ ಇಳಿದೂ) ತೇರ ಪಲಗೆಯಂ ಮೆಟ್ಟಿಯುಂ (ತೇರಿನ ಹಲಗೆಗಳನ್ನು ತುಳಿದೂ) ಪೋಗಿ ವೋಗಿ ಭೂತ ಪ್ರೇತ ಪಿಶಾಚ (ನಡೆದು ಹೋಗಿ ಭೂತಪ್ರೇತಪಿಶಾಚ) ನಿಶಾಚರ ನಿಚಯನಿಚಿತ ಭೂಭಾಗಮನ ಎಯ್ದೆ ವಂದಾಗಳ್ (ರಾಕ್ಷಸಸಮೂಹದಿಂದ ತುಂಬಿದ ಪ್ರದೇಶವನ್ನು ಸೇರಿದರು.)-
ವಚನ:ಅರ್ಥ:ಎಂಬುದಾಗಿ ಹೇಳುತ್ತಾ, ಕೊಬ್ಬುಗಳ ಹಳ್ಳವನ್ನು ಹಾಯ್ದೂ ರಕ್ತಪ್ರವಾಹಗಳನ್ನು ತಪ್ಪಿಸಿಯೂ ಮಾಂಸದ ರಾಶಿಗಳನ್ನು ದಾಟಿಯೂ ಹೆಣಗಳ ಸಮೂಹವನ್ನು ತಳ್ಳಿಯೂ, ರಥದ ಸಂಘಟ್ಟಣೆಗಳಿಂದಾದ ದಿಣ್ಣೆಹಳ್ಳಗಳನ್ನು ಹತ್ತಿ ಇಳಿದೂ, ತೇರಿನ ಹಲಗೆಗಳನ್ನು ತುಳಿದೂ, ನಡೆದು ಹೋಗಿ ಭೂತ, ಪ್ರೇತ, ಪಿಶಾಚ, ರಾಕ್ಷಸಸಮೂಹದಿಂದ ತುಂಬಿದ ಪ್ರದೇಶವನ್ನು ಸೇರಿದರು.
ಉ|| ಬೇಡ ವಿರೋಧಮೆಂತುಮರಿಕೇಸರಿಯೊಳ್ ಸಮಸಂದು ಸಂಧಿಯಂ
ಮಾಡೆನೆ ಮಾಡಲೊಲ್ಲದೆ ಸುಹೃದ್ಬಲಮೆಲ್ಲಮನಿಕ್ಕಿ ಯುದ್ಧಮಂ|
ಮಾಡಿದ ಜಾತಿಬೆಳ್ ನಿನಗದೇವಿರಿದೀಯೆಡಱೆಂದು ಮುಂದೆ ಬಂ
ದೇಡಿಸುವಂತಿರಾಡಿದುದದೊಂದು ಮರುಳ್ ಫಣಿರಾಜಕೇತುವಂ|| ೫೪ ||
ಪದ್ಯ-೫೪:ಪದವಿಭಾಗ-ಅರ್ಥ:ಬೇಡ ವಿರೋಧಂ ಎಂತುಂ ಅರಿಕೇಸರಿಯೊಳ್ ಸಮಸಂದು (ಅರಿಕೇಸರಿಯಲ್ಲಿ ಯಾವುದೇರೀತಿ ವಿರೋಧವು ಬೇಡ,) ಸಂಧಿಯಂ ಮಾಡು ಎನೆ ಮಾಡಲು ಒಲ್ಲದೆ (ಸಂಧಿಯನ್ನು ಮಾಡಿಕೋ ಎಂದರೂ ಒಪ್ಪದೆ) ಸುಹೃತ್ ಬಲಮೆಲ್ಲಮಂ ಇಕ್ಕಿ (ಮಿತ್ರರಸೈನ್ವನ್ನೆಲ್ಲಾ ನಾಶಮಾಡಿ) ಯುದ್ಧಮಂ ಮಾಡಿದ ಜಾತಿಬೆಳ್ (ಯುದ್ಧವನ್ನು ಮಾಡಿದ ಜಾತಿದಡ್ಡನಾದ) ನಿನಗೆ ಅದು ಏವಿರಿದು ಈ ಎಡಱೆಂದು ಮುಂದೆ ಬಂದು ಏಡಿಸುವಂತಿರೆ (ನಿನಗೆ ಈ ಕಷ್ಟಗಳು ಏನು ದೊಡ್ಡದು ಎಂದು ಮುಂದೆ ಬಂದು ದುರ್ಯೋಧನನನ್ನು ಅಪಹಾಸ್ಯಮಾಡುವಂತೆ) ಆಡಿದುದದು ಒಂದು ಮರುಳ್ ಫಣಿರಾಜಕೇತುವಂ (ಒಂದು ಪಿಶಾಚಿ ಮಾತನಾಡಿತು.)
ಪದ್ಯ-೫೪:ಅರ್ಥ: ಅರಿಕೇಸರಿಯಲ್ಲಿ ಯಾವುದೇರೀತಿ ವಿರೋಧವು ಬೇಡ, ಸಂಧಿಯನ್ನು ಮಾಡಿಕೋ ಎಂದರೂ ಒಪ್ಪದೆ ಮಿತ್ರರಸೈನ್ವನ್ನೆಲ್ಲಾ ನಾಶಮಾಡಿ ಯುದ್ಧವನ್ನು ಮಾಡಿದ ಜಾತಿದಡ್ಡನಾದ ನಿನಗೆ ಈ ಕಷ್ಟಗಳು ಏನು ದೊಡ್ಡದು ಎಂದು ಮುಂದೆ ಬಂದು ದುರ್ಯೋಧನನನ್ನು ಅಪಹಾಸ್ಯ ಮಾಡುವಂತೆ ಒಂದು ಪಿಶಾಚಿ ಮಾತನಾಡಿತು.
ಚಂ|| ಮರುಳೆನೆ ಲೋಕದೊಳ್ ನೆಗೞ್ದು ಕೊಳ್ಗುಳದೊಳ್ ಮರುಳಾಟವಾಡುವಾಂ
ಮರುಳೆನೊ ವಿಕ್ರಮಾರ್ಜುನನೊಳೊಲ್ಲದೆ ಸಂಧಿಯನುರ್ಕಿ ಕೆಟ್ಟ ನೀಂ|
ಮರುಳಯೊ ಪೇೞ ಪೇೞದೊಡೆ ಪೋಗದಿರೀಶ್ವರನಾಣೆಯೆಂದು ಪು
ಲ್ಮರುಳಿನಿಸಾನುಮಂ ತೆಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ|| ೫೫ ||
ಪದ್ಯ-೫೫:ಪದವಿಭಾಗ-ಅರ್ಥ:(ಯುದ್ಧಭೂಮಿಯ ಮರುಳುಗಳು- ಪಿಶಾಚಿಗಳು, ಮರುಳ- ದಡ್ಡ) ಮರುಳೆನೆ ಲೋಕದೊಳ್ ನೆಗೞ್ದು ಕೊಳ್ಗುಳದೊಳ್ ಮರುಳಾಟವಾಡುವ ಆಂ ಮರುಳೆನೊ ( ಲೋಕದಲ್ಲಿ ಮರುಳುಗಳು ಎನ್ನಿಸಿಕೊಂಡು ಪ್ರಸಿದ್ಧರಾಗಿ ಯುದ್ಧರಂಗದಲ್ಲಿ ಮರುಳುಗಳ ಆಟವನ್ನಾಡುವ ನಾವುಗಳು ಮರುಳುಗಳೋ (ಬುದ್ಧಿಗೇಡಿಗಳೋ)) ವಿಕ್ರಮಾರ್ಜುನನೊಳ್ ಒಲ್ಲದೆ ಸಂಧಿಯನು ಉರ್ಕಿ ಕೆಟ್ಟ ನೀಂ ಮರುಳಯೊ ಪೇೞ (ವಿಕ್ರಮಾರ್ಜುನನಲ್ಲಿ ಸಂಯನ್ನೊಲ್ಲದೆ ಉಬ್ಬಿ ಕೆಟ್ಟ ನೀನುದಡ್ಡನೋ ಹೇಳು.) ಪೇೞದೊಡೆ ಪೋಗದಿರ್ ಈಶ್ವರನಾಣೆಯೆಂದು ಪುಲ್ಮರುಳ್ (ಹೇಳಿದಿದ್ದರೆ ಹೋಗಬೇಡ; ಈಶ್ವರನಾಣೆ ಎಂದು ಹುಲ್ಲಿನಂತೆ ಬಹು ಲಘುವಾದ ಒಂದು ಮರುಳು) ಇನಿಸಾನುಮಂ ತೆಗೆದು ಕಾಡಿದುದು ಅಲ್ಲಿ (ತೆಗೆ- ನಿಲ್ಲಿಸು, ಸ್ತಂಭನೇ) ಫಣೀಂದ್ರಕೇತುವಂ (ಒಂದಿಷ್ಟು ತಡೆದು ದುರ್ಯೋಧನನ್ನು ಹಿಂಸೆ ಮಾಡಿತು.)
ಪದ್ಯ-೫೫:ಅರ್ಥ: ಲೋಕದಲ್ಲಿ ಮರುಳುಗಳು ಎನ್ನಿಸಿಕೊಂಡು ಪ್ರಸಿದ್ಧರಾಗಿ ಯುದ್ಧರಂಗದಲ್ಲಿ ಮರುಳುಗಳ ಆಟವನ್ನಾಡುವ ನಾವುಗಳು ಮರುಳುಗಳೋ (ಬುದ್ಧಿಗೇಡಿಗಳೋ) ವಿಕ್ರಮಾರ್ಜುನನಲ್ಲಿ ಸಂಯನ್ನೊಲ್ಲದೆ ಉಬ್ಬಿ ಕೆಟ್ಟ ನೀನುದಡ್ಡನೋ ಹೇಳು. ಹೇಳಿದಿದ್ದರೆ ಹೋಗಬೇಡ; ಈಶ್ವರನಾಣೆ ಎಂದು ಹುಲ್ಲಿನಂತೆ ಬಹು ಲಘುವಾದ ಒಂದು ಮರುಳು ಒಂದಿಷ್ಟು ತಡೆದು ದುರ್ಯೋಧನನ್ನು ಹಿಂಸೆ ಮಾಡಿತು.
ವ|| ಆಗಳಾ ಮರುಳ ಕೆಯ್ತಕ್ಕೆ ದುರ್ಯೋಧನಂ ಮುಗುಳ್ನಗೆ ನಕ್ಕೆನ್ನಂ ವಿಧಾತ್ರಂ ಮರುಳ್ಮಾಡಿದ ಕಾರಣದಿಂದೀ ಮರುಳ ಕಣ್ಗಾಂ ಮರುಳಾಗಿ ತೋಱಿದೆನೆಂದಲ್ಲಿಂ ತಳರ್ದು ಕಿಱಿದಂತರಮಂ ನಡೆದೊಂದೆಡೆಯೊಳನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಮುಭಯ ಪಕ್ಷಸ್ಥಿತೋಭಯಕುಲಶುದ್ಧನೃಪತಿಮಣಿಮಕುಟಮರೀಚಿಮೇಚಕಿತಮುಮಪ್ಪ ಸಂಗ್ರಾಮಭೂಮಿಯ ನಡುವೆ ಧೃಷ್ಟದ್ಯುಮ್ನಕಚಗ್ರಹವಿಲುಳಿತ ಮೌಳಿಯುಂ ತದೀಯ ಕೌಕ್ಷೇಯಕಧಾರಾವಿದಾರಿತ ಶರೀರನುಮಾಗಿ ಬಿೞ್ದಿರ್ದ ಶರಾಚಾರ್ಯರಂ ಕಂಡು-
ವಚನ:ಪದವಿಭಾಗ-ಅರ್ಥ:ಆಗಳಾ ಮರುಳ ಕೆಯ್ತಕ್ಕೆ ದುರ್ಯೋಧನಂ ಮುಗುಳ್ನಗೆ ನಕ್ಕು (ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳ್ನಗೆ ನಕ್ಕು) ಎನ್ನಂ ವಿಧಾತ್ರಂ ಮರುಳ್ಮಾಡಿದ ಕಾರಣದಿಂದ ಈ ಮರುಳ ಕಣ್ಗಾಂ ಮರುಳಾಗಿ ತೋಱಿದೆನು ಎಂದು ಅಲ್ಲಿಂ ತಳರ್ದು (ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳ್ನಗೆ ನಕ್ಕು ನನ್ನನ್ನು ಬ್ರಹ್ಮನು ಮರುಳುಮಾಡಿದ ಕಾರಣದಿಂದ ಈ ಪಿಶಾಚದ ಕಣ್ಣಿಗೆ ನಾನು ಹುಚ್ಚನಾಗಿ ತೋರಿದೆನು,) ಕಿಱಿದು ಅಂತರಮಂ ನಡೆದು ಒಂದೆಡೆಯೊಳು ಅನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಂ (ಅಲ್ಲಿಂದ ಹೊರಟು ಸ್ವಲ್ಪ ದೂರ ನಡೆದು ಒಂದು ಕಡೆಯಲ್ಲಿ ಅನೇಕ ಆನೆ, ಕುದುರೆ ಮನುಷ್ಯರ ದೇಹಗಳಿಂದ ತುಂಬಿದ ಪ್ರದೇಶವನ್ನು) ಉಭಯ ಪಕ್ಷ ಸ್ಥಿತ ಉಭಯ ಕುಲಶುದ್ಧ ನೃಪತಿಮಣಿಮಕುಟ ಮರೀಚಿಮೇಚಕಿತಮುಂ ಅಪ್ಪ (ಎರಡು ವಂಶದ ಪಕ್ಷಗಳಲ್ಲಿಯೂ (ತಂದೆತಾಯಿಗಳ ಎರಡು ಕುಲದಲ್ಲಿಯೂ) ಶುದ್ಧರಾದವರ ರತ್ನಕಿರೀಟಗಳ ಕಾಂತಿಯಿಂದ ಕೂಡಿಕೊಂಡಿರುವ) ಸಂಗ್ರಾಮಭೂಮಿಯ ನಡುವೆ ಧೃಷ್ಟದ್ಯುಮ್ನ ಕಚಗ್ರಹವಿಲುಳಿತ ಮೌಳಿಯುಂ (ಆ ಯುದ್ಧಭೂಮಿಯ ಮಧ್ಯಭಾಗದಲ್ಲಿ ಧೃಷ್ಟದ್ಯುಮ್ನನು ಜುಟ್ಟನ್ನು ಹಿಡಿದುದರಿಂದ ತಿರುಗಿಕೊಂಡಿರುವ ತಲೆಯುಳ್ಳವನೂ) ತದೀಯ- ಅವನ ಕೌಕ್ಷೇಯಕ-ಕತ್ತಿಯ ಧಾರಾವಿದಾರಿತ- ಅಲುಗಿನಿಂದ ಸೀಳಿದ (ಅವನ ಕತ್ತಿಯ ಅಲಗುಗಳಿಂದ ಸೀಳಲ್ಪಟ್ಟ ) ಶರೀರನುಮಾಗಿ ಬಿೞ್ದಿರ್ದ ಶರಾಚಾರ್ಯರಂ ಕಂಡು (ಶರೀರವುಳ್ಳವನೂ ಆಗಿ ಬಿದ್ದಿದ್ದ ದ್ರೋಣಾಚಾರ್ಯನನ್ನು ನೋಡಿದನು. )-
ವಚನ:ಅರ್ಥ:ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳ್ನಗೆ ನಕ್ಕು ನನ್ನನ್ನು ಬ್ರಹ್ಮನು ಮರುಳುಮಾಡಿದ ಕಾರಣದಿಂದ ಈ ಪಿಶಾಚದ ಕಣ್ಣಿಗೆ ನಾನು ಹುಚ್ಚನಾಗಿ ತೋರಿದೆನು ಎಂದು ಅಲ್ಲಿಂದ ಹೊರಟು ಸ್ವಲ್ಪ ದೂರ ನಡೆದು ಒಂದು ಕಡೆಯಲ್ಲಿ ಅನೇಕ ಆನೆ, ಕುದುರೆ ಮನುಷ್ಯರ ದೇಹಗಳಿಂದ ತುಂಬಿದ ಪ್ರದೇಶವನ್ನು, ಎರಡು ವಂಶದ ಪಕ್ಷಗಳಲ್ಲಿಯೂ (ತಂದೆತಾಯಿಗಳ ಎರಡು ಕುಲದಲ್ಲಿಯೂ) ಶುದ್ಧರಾದವರ ರತ್ನಕಿರೀಟಗಳ ಕಾಂತಿಯಿಂದ ಕೂಡಿಕೊಂಡಿರುವ ಆ ಯುದ್ಧಭೂಮಿಯ ಮಧ್ಯಭಾಗದಲ್ಲಿ ಧೃಷ್ಟದ್ಯುಮ್ನನು ಜುಟ್ಟನ್ನು ಹಿಡಿದುದರಿಂದ ತಿರುಗಿಕೊಂಡಿರುವ ತಲೆಯುಳ್ಳವನೂ ಅವನ ಕತ್ತಿಯ ಅಲಗುಗಳಿಂದ ಸೀಳಲ್ಪಟ್ಟ ಶರೀರವುಳ್ಳವನೂ ಆಗಿ ಬಿದ್ದಿದ್ದ ದ್ರೋಣಾಚಾರ್ಯನನ್ನು ನೋಡಿದನು.
ಚಂ|| ನೆಗೞ್ದುದು ಬಿಲ್ಲ ಬಿನ್ನಣಮಿಳಾವಳಯಕ್ಕೆ ಸಮಸ್ತ ಧಾತ್ರಿ ಕೆ
ಯ್ಮುಗಿವುದು ನಿಮ್ಮದೊಂದೆ ಪೆಸರ್ಗೇಳ್ವೊಡೆ ನಿಮ್ಮ ಸರಲ್ಗೆ ದೇವರುಂ|
ಸುಗಿವರಯೋನಿಸಂಭವರಿರೆನ್ನಯ ದೂಸಱಿನೆನ್ನ ಕರ್ಮದಿಂ
ಪಗೆವರಿನಕ್ಕಟಾ ನಿಮಗವಮೀಯಿರವಾದುದೆ ಕುಂಭಸಂಭವಾ|| ೫೬ ||
ಪದ್ಯ-೫೬:ಪದವಿಭಾಗ-ಅರ್ಥ: ನೆಗೞ್ದುದು ಬಿಲ್ಲ ಬಿನ್ನಣಂ ಇಳಾವಳಯಕ್ಕೆ (ನಿಮ್ಮ ಚಾಪವಿದ್ಯಾಕೌಶಲವು ಭೂಮಂಡಲದಲ್ಲೆಲ್ಲ ನೆಗೞ್ದುದು -ಪ್ರಸಿದ್ಧವಾದುದು.) ಸಮಸ್ತ ಧಾತ್ರಿ ಕೆಯ್ಮುಗಿವುದು ನಿಮ್ಮದು ಒಂದೆ ಪೆಸರ್ ಕೇಳ್ವೊಡೆ ( ನಿಮ್ಮಒಂದು ಹೆಸರನ್ನು ಕೇಳಿದರೆ ಸಮಸ್ತ ಲೋಕವೂ ಕೈಮುಗಿಯುವುದು.) ನಿಮ್ಮ ಸರಲ್ಗೆ ದೇವರುಂ (ನಿಮ್ಮ ಬಾಣಗಳಿಗೆ ದೇವತೆಗಳೂ) ಸುಗಿವರ್ ಅಯೋನಿಸಂಭವರಿರೆ ಎನ್ನಯ ದೂಸಱಿಂ ಎನ್ನ ಕರ್ಮದಿಂ (ನೀವು ಅಯೋನಿಜರಾಗಿದ್ದೀರಿ; ನನ್ನ ಕಾರಣದಿಂದ ನನ್ನ ದುಷ್ಕರ್ಮದಿಂದ) ಪಗೆವರಿಂ ಅಕ್ಕಟಾ ನಿಮಗಂ ಈ ಯಿ/ ಇರವಾದುದೆ ಕುಂಭಸಂಭವಾ (ಅಯ್ಯೋ ದ್ರೋಣಾಚಾರ್ಯರೇ ಶತ್ರುಗಳಿಂದ ನಿಮಗೂ ಈ ದುಸ್ಥಿತಿಯುಂಟಾಯಿತೇ? )
ಪದ್ಯ-೬:ಅರ್ಥ: ನಿಮ್ಮ ಚಾಪವಿದ್ಯಾಕೌಶಲವು ಭೂಮಂಡಲದಲ್ಲೆಲ್ಲ ಪ್ರಸಿದ್ಧವಾದುದು. ನಿಮ್ಮಒಂದು ಹೆಸರನ್ನು ಕೇಳಿದರೆ ಸಮಸ್ತ ಲೋಕವೂ ಕೈಮುಗಿಯುವುದು. ನಿಮ್ಮ ಬಾಣಗಳಿಗೆ ದೇವತೆಗಳೂ ಭಯಪಡುವರು. ನೀವು ಅಯೋನಿಜರಾಗಿದ್ದೀರಿ; ನನ್ನ ಕಾರಣದಿಂದ ನನ್ನ ದುಷ್ಕರ್ಮದಿಂದ ಅಯ್ಯೋ ದ್ರೋಣಾಚಾರ್ಯರೇ ಶತ್ರುಗಳಿಂದ ನಿಮಗೂ ಈ ದುಸ್ಥಿತಿಯುಂಟಾಯಿತೇ?
ವ|| ಎಂದು ಗುರುವಿನ ಪಾದಕಮಲಂಗಳಂ ತಲೆಯ ಮೇಲಿಟ್ಟು ಪೊಡೆವಟ್ಟಂತೆ ನಡೆತಂದು ವೃಕೋದರನಿಂ ನಿಶ್ಯೇಷ ಪೀತರುಧಿರನಪ್ಪ ದುಶ್ಯಾಸನನಂ ಕಂಡಾತನಂ ಮುತ್ತಿ ಸುತ್ತಿಱಿದ ಮುದುವರ್ದುಗಳುಮನಗಲೆ ಮೆಟ್ಟಿ ಪೋೞ್ದು ಭೀಮಸೇನಂ ಮುನ್ನಂ ಕುಡಿದುದಱಿಂ ನೆತ್ತರಂ ಪಡೆಯದಾಕಾಶಕ್ಕೆ, ಬಾಯಂ ತೆರೆದೂಳ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು ಸೋದರನೞಲೊಳ್ ಕಣ್ಣ ನೀರ್ಗಳಂ ಸುರಿದು-
ವಚನ:ಪದವಿಭಾಗ-ಅರ್ಥ:ಎಂದು ಗುರುವಿನ ಪಾದಕಮಲಂಗಳಂ ತಲೆಯ ಮೇಲಿಟ್ಟು ಪೊಡೆವಟ್ಟಂತೆ ನಡೆತಂದು (ಎಂದು ಗುರುವಿನ ಪಾದಕಮಲಗಳನ್ನು ತಲೆಯ ಮೇಲಿಟ್ಟು ನಮಸ್ಕಾರಮಾಡಿ ಹಾಗೆಯೇ ಮುಂದೆ ನಡೆದು ಬಂದು) ವೃಕೋದರನಿಂ ನಿಶ್ಯೇಷ ಪೀತರುಧಿರನಪ್ಪ ದುಶ್ಯಾಸನನಂ ಕಂಡು (ಭೀಮಸೇನನಿಂದ ಸ್ವಲ್ಪವೂ ಉಳಿಯದಂತೆ ಕುಡಿಯಲ್ಪಟ್ಟ ರಕ್ತವನ್ನುಳ್ಳ ದುಶ್ಯಾಸನನನ್ನು ನೋಡಿ) ಆತನಂ ಮುತ್ತಿ ಸುತ್ತಿಱಿದ ಮುದುವರ್ದುಗಳುಮನು (ಆತನನನ್ನು ಮುತ್ತಿ ಸುತ್ತುವರಿದಿದ್ದ ಮುದಿಹದ್ದುಗಳನ್ನು ಬಿಟ್ಟು) ಅಗಲೆ ಮೆಟ್ಟಿ ಪೋೞ್ದು (ಅವನನ್ನು ಬಿಟ್ಟು ದೂರಹೋಗುವಂತೆ ಕಾಲಿನಿಂದ ಶಬ್ದಮಾಡಿ ಸೀಳಿ) ಭೀಮಸೇನಂ ಮುನ್ನಂ ಕುಡಿದುದಱಿಂ ನೆತ್ತರಂ ಪಡೆಯದೆ ಆಕಾಶಕ್ಕೆ, ಬಾಯಂ ತೆರೆದ ಊಳ್ವ (ಭೀಮನು ಮೊದಲೇ ಕುಡಿದುಬಿಟ್ಟಿದ್ದುದರಿಂದ ರಕ್ತವನ್ನು ಪಡೆಯದೆ ಆಕಾಶದ ಕಡೆ ಬಾಯಿಬಿಟ್ಟು ಕೂಗುತ್ತಿರುವ) ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು (ಗುಳ್ಳೆನರಿಗಳನ್ನೂ ನರಗಳನ್ನೂ ಪಕ್ಕೆಗಳನ್ನೂ ಕಿತ್ತೆಳೆದು) ಪೆಡಸಾರ್ವ ನರಿಗಳುಮಂ ತಾನೆ ಸೋದು (ಹಿಂದಕ್ಕೆ ಹೋಗುವ ನರಿಗಳನ್ನೂ ತಾನೇ ಅಟ್ಟಿ) ಸೋದರನ ಅೞಲೊಳ್ ಕಣ್ಣ ನೀರ್ಗಳಂ ಸುರಿದು (ತಮ್ಮನ ಸಾವಿನ- ದುಃಖದಿಂದ ಕಣ್ಣೀರನ್ನು ಸುರಿಸಿದನು.)-
ವಚನ:ಅರ್ಥ:ಎಂದು ಗುರುವಿನ ಪಾದಕಮಲಗಳನ್ನು ತಲೆಯ ಮೇಲಿಟ್ಟು ನಮಸ್ಕಾರಮಾಡಿ ಹಾಗೆಯೇ ಮುಂದೆ ನಡೆದು ಬಂದು, ಭೀಮಸೇನನಿಂದ ಸ್ವಲ್ಪವೂ ಉಳಿಯದಂತೆ ಕುಡಿಯಲ್ಪಟ್ಟ ರಕ್ತವನ್ನುಳ್ಳ ದುಶ್ಯಾಸನನನ್ನು ನೋಡಿ ಆತನನನ್ನು ಮುತ್ತಿ ಸುತ್ತುವರಿದಿದ್ದ ಮುದಿಹದ್ದುಗಳನ್ನು ಅವನನ್ನು ಬಿಟ್ಟು ದೂರಹೋಗುವಂತೆ ಕಾಲಿನಿಂದ ಶಬ್ದಮಾಡಿ ಸೀಳಿ ಭೀಮನು ಮೊದಲೇ ಕುಡಿದುಬಿಟ್ಟಿದ್ದುದರಿಂದ ರಕ್ತವನ್ನು ಪಡೆಯದೆ ಆಕಾಶದ ಕಡೆ ಬಾಯಿಬಿಟ್ಟು ಕೂಗುತ್ತಿರುವ ಗುಳ್ಳೆನರಿಗಳನ್ನೂ ನರಗಳನ್ನೂ ಪಕ್ಕೆಗಳನ್ನೂ ಕಿತ್ತೆಳೆದು, ಹಿಂದಕ್ಕೆ ಹೋಗುವ ನರಿಗಳನ್ನೂ ತಾನೇ ಅಟ್ಟಿ, ತಮ್ಮನ ಸಾವಿನದುಃಖದಿಂದ ಕಣ್ಣೀರನ್ನು ಸುರಿಸಿದನು.
ಕಂ|| ನಿನ್ನಂ ಕೊಂದನ ಬಸಿಱಿಂ
ನಿನ್ನಂ ತೆಗೆಯದೆಯುಮವನ ಕರುಳಂ ಪರ್ದಿಂ|
ಮುನ್ನುಂಗಿಸಿ ನೋಡದೆಯುಂ
ಮುನ್ನಮೆ ಯುವರಾಜ ನಿನ್ನನಾಂ ನೋಡಿದೆನೇ|| ೫೭ ||
ಪದ್ಯ-೫೭:ಪದವಿಭಾಗ-ಅರ್ಥ:ನಿನ್ನಂ ಕೊಂದನ ಬಸಿಱಿಂ ನಿನ್ನಂ ತೆಗೆಯದೆಯುಂ (ನಿನ್ನನ್ನು ಕೊಂದವನ ಹೊಟ್ಟೆಯಿಂದ ನಿನ್ನನ್ನು ತೆಗೆಯದೆಯೂ) ಅವನ ಕರುಳಂ ಪರ್ದಿಂ ಮುಂ ನುಂಗಿಸಿ ನೋಡದೆಯುಂ (ಅವನ ಕರುಳನ್ನು ಹದ್ದಿಗೆ ಮೊದಲು ನುಂಗಿಸಿ ನೋಡದೆಯೂ) ಮುನ್ನಮೆ ಯುವರಾಜ ನಿನ್ನನಾಂ ನೋಡಿದೆನೇ (ಅದಕ್ಕೆ ಮುಂಚೆಯೇ ಯುವರಾಜನಾದ ದುಶ್ಶಾಸನನೇ ನಿನ್ನನ್ನು ನಾನು ನೋಡಿದೆನೇ? ನೋಡಿದೆನಲ್ಲಾ!)
ಪದ್ಯ-೫೭:ಅರ್ಥ:೫೭. ನಿನ್ನನ್ನು ಕೊಂದವನ ಹೊಟ್ಟೆಯಿಂದ ನಿನ್ನನ್ನು ತೆಗೆಯದೆಯೂ ಅವನ ಕರುಳನ್ನು ಹದ್ದಿಗೆ ಮೊದಲು ನುಂಗಿಸಿ ನೋಡದೆಯೂ, ಅದಕ್ಕೆ ಮುಂಚೆಯೇ ಯುವರಾಜನಾದ ದುಶ್ಶಾಸನನೇ ನಿನ್ನನ್ನು ನಾನು ನೋಡಿದೆನೇ? ನೋಡಿದೆನಲ್ಲಾ! ಎಂದು ದುರ್ಯೋಧನನು ದುಃಖಿಸಿದನು.
ವ|| ಎಂಬುದುಂ ಸಂಜಯನಿಂತಪ್ಪ ವಿಪ್ರಳಾಪಂಗಳ್ ಶೌರ್ಯಶಾಲಿಗಳ್ಗನುಚಿತ ಮತ್ತಮೆೞ್ತರ್ಪುದೆಂದು ತಳರ್ದು ಬಂದಮೋಘಾಸ್ತ್ರ ಧನಂಜಯ ಕರಪರಿಚ್ಯುತವಿಕರ್ಣ ವಿಶೀರ್ಣನಾಗಿರ್ದ ಕರ್ಣಸೂನುವಂ ವೃಷಸೇನನಂ ಕಂಡು ಕರ್ಣನಂ ನೆನೆದೆರ್ದೆದೆರೆದು ದುರ್ಯೋಧನನ ಕೆಳೆಯನಪ್ಪ ನಿಮ್ಮಮ್ಮಂ ಕರ್ಣನೆಲ್ಲಿದನೆಂದು ತೆಕ್ಕನೆ ತೀವಿದ ಕಣ್ಣ ನೀರೊಳ್ ದೆಸೆಗಾಣದೆ ನಿಂದಿರ್ದ ಸುಯೋಧನನಂ ಸಂಜಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಸಂಜಯಂ ಇಂತಪ್ಪ ವಿಪ್ರಳಾಪಂಗಳ್ ಶೌರ್ಯಶಾಲಿಗಳ್ಗೆ ಅನುಚಿತಂ (ಸಂಜಯನು ಹೇಳಿದ- ಇಂತಹ ವಿಶೇಷ ಪ್ರಲಾಪವು ಶೌರ್ಯಶಾಲಿಗಳಿಗೆ ಯೋಗ್ಯವಲ್ಲ.) ಅತ್ತಮೆ ಎೞ್ತರ್ಪುದು ಎಂದು ತಳರ್ದು (ಆ ಕಡೆ ಬರಬೇಕು ಎಂದು ಹೇಳಲು ಅಲ್ಲಿಂದ ಹೊರಟು ಬಂದು,) ಅಮೋಘಾಸ್ತ್ರ ಧನಂಜಯ ಕರಪರಿಚ್ಯುತ (ಅಮೋಘಾಸ್ತ್ರಧನಂಜಯನಾದ ಅರ್ಜುನನ ಕಯ್ಯಿಂದ ಬಿಡಲ್ಪಟ್ಟ) ವಿಕರ್ಣ ವಿಶೀರ್ಣನಾಗಿರ್ದ ಕರ್ಣಸೂನುವಂ ವೃಷಸೇನನಂ ಕಂಡು (ಬಾಣದಿಂದ ಸೀಳಲ್ಪಟ್ಟಿದ ಕರ್ಣನ ಮಗನಾದ ವೃಷಸೇನನನ್ನು ನೋಡಿ) ಕರ್ಣನಂ ನೆನೆದು ಎರ್ದೆದೆರೆದು (ಎದೆ ತೆರೆದು,ಎದೆಬಿರಿದು) ದುರ್ಯೋಧನನ ಕೆಳೆಯನಪ್ಪ ನಿಮ್ಮಮ್ಮಂ ಕರ್ಣನೆಲ್ಲಿದನೆಂದು(‘ದುರ್ಯೋಧನನ ಸ್ನೇಹಿತನಾದ ನಿಮ್ಮ ಅಮ್ಮ/ಅಪ್ಪ- ತಂದೆ ಕರ್ಣನೆಲ್ಲಿದ್ದಾನೆ ಎಂದು) ತೆಕ್ಕನೆ ತೀವಿದ ಕಣ್ಣ ನೀರೊಳ್ ದೆಸೆಗಾಣದೆ ನಿಂದಿರ್ದ ( ಥಟ್ಟಕ್ಕನೆ ತುಂಬಿದ ಕಣ್ಣೀರಿನಿಂದ ದಿಕ್ಕು ಕಾಣದೆ ನಿಂತಿದ್ದ) ಸುಯೋಧನನಂ ಸಂಜಯನು ಇಂತೆಂದಂ (ದುರ್ಯೋಧನನನ್ನು ಕುರಿತು ಸಂಜಯನು ಹೀಗೆಂದನು)-
ವಚನ:ಅರ್ಥ: ಸಂಜಯನು ಹೇಳಿದ- ಇಂತಹ ವಿಶೇಷ ಪ್ರಲಾಪವು ಶೌರ್ಯಶಾಲಿಗಳಿಗೆ ಯೋಗ್ಯವಲ್ಲ. ಆ ಕಡೆ ಬರಬೇಕು ಎಂದು ಹೇಳಲು ಅಲ್ಲಿಂದ ಹೊರಟುಬಂದು ಅಮೋಘಾಸ್ತ್ರಧನಂಜಯನಾದ ಅರ್ಜುನನ ಕಯ್ಯಿಂದ ಬಿಡಲ್ಪಟ್ಟ ಬಾಣದಿಂದ ಸೀಳಲ್ಪಟ್ಟಿದ ಕರ್ಣನ ಮಗನಾದ ವೃಷಸೇನನನ್ನು ನೋಡಿ ಕರ್ಣನನ್ನು ಜ್ಞಾಪಿಸಿಕೊಂಡು ಎದೆಬಿರಿದು ‘ದುರ್ಯೋಧನನ ಸ್ನೇಹಿತನಾದ ನಿಮ್ಮ ತಂದೆ ಕರ್ಣನೆಲ್ಲಿದ್ದಾನೆ ಎಂದು ಥಟ್ಟಕ್ಕನೆ ತುಂಬಿದ ಕಣ್ಣೀರಿನಿಂದ ದಿಕ್ಕು ಕಾಣದೆ ನಿಂತಿದ್ದ ದುರ್ಯೋಧನನನ್ನು ಕುರಿತು ಸಂಜಯನು ಹೀಗೆಂದನು-
ಚಂ|| ನರಶರಘಾತದಿಂ ಪಱಿದು ಪತ್ತಿಸಿದಂತೆವೊಲಿರ್ದ ಮೆಯ್ ಭಯಂ
ಕರತರಮಾಗೆ ಮುಯ್ವುವರೆಗಂ ತೆಗೆದಂಬಿನ ಮುಷ್ಟಿ ಬಿನ್ನಣಂ|
ಬೆರಸಿರೆ ಪೋದ ಪಂದಲೆಯೊಳಾದ ಮುಗುಳ್ನಗೆ ಭೀತರಾದರೆ
ಲ್ಲರುಮನಳುರ್ಕೆಯಿಂ ನಗುವವೋಲ್ ರವಿನಂದನನಿತ್ತಲಿರ್ದಪಂ|| ೫೮ ||
ಪದ್ಯ-೫೮:ಪದವಿಭಾಗ-ಅರ್ಥ:ನರ ಶರಘಾತದಿಂ ಪಱಿದು/ಹರಿದು ಪತ್ತಿಸಿದಂತೆವೊಲ್ ಇರ್ದ ಮೆಯ್ ( ಅರ್ಜುನನ ಬಾಣದ ಪೆಟ್ಟಿನಿಂದ ಹರಿದು ಹಂಚಿದಂತಿರುವ ಶರೀರ,) ಭಯಂಕರತರಮಾಗೆ (ಅತ್ಯಂತ ಭಯಂಕರವಾಗರಲು) ಮುಯ್ವುವರೆಗಂ ತೆಗೆದ ಅಂಬಿನ ಮುಷ್ಟಿ (ಹೆಗಲ ತುದಿಯವರೆಗೂ ಸೆಳೆದ ಬಾಣ ಹಿಡಿದ ಮುಷ್ಟಿ,) ಬಿನ್ನಣಂ ಬೆರಸಿರೆ (ಬಿನ್ನಾಣದಿಂದ/ ಶೋಭೆಯಿಂದ ಕೂಡಿರಲು) ಪೋದ ಪಂದಲೆಯೊಳಾದ ಮುಗುಳ್ನಗೆ (ಕತ್ತರಿಸಿಹೋದ ಹಸಿಯ ತಲೆಯಲ್ಲಿ ಕಾಣಿಸುತ್ತಿರುವ ಮುಗುಳ್ನಗೆ,) ಭೀತರಾದರೆಲ್ಲರುಮಂ ಅಳುರ್ಕೆಯಿಂ ನಗುವವೋಲ್ (ಇವುಗಳಿಂದ ಕೂಡಿ ಹೆದರಿ ಕೊಂಡಿರುವವರನ್ನೆಲ್ಲ ಅತಿಶಯವಾದ ರೀತಿಯಲ್ಲಿ ನಗುತ್ತಿರುವ ಹಾಗೆ) ರವಿನಂದನನು ಇತ್ತಲು ಇರ್ದಪಂ (ಸೂರ್ಯಪುತ್ರನಾದ ಕರ್ಣನು ಈ ಕಡೆ ಇದ್ದಾನೆ.)|
ಪದ್ಯ-೫೮:ಅರ್ಥ: ಅರ್ಜುನನ ಬಾಣದ ಪೆಟ್ಟಿನಿಂದ ಹರಿದು ಹಂಚಿದಂತಿರುವ ಶರೀರ, ಅತ್ಯಂತ ಭಯಂಕರವಾಗರಲು ಹೆಗಲ ತುದಿಯವರೆಗೂ ಸೆಳೆದ ಬಾಣ ಹಿಡಿದ ಮುಷ್ಟಿ, ಕೌಶಲದಿಂದ ಕೂಡಿರಲು ಕತ್ತರಿಸಿಹೋದ ಹಸಿಯ ತಲೆಯಲ್ಲಿ ಕಾಣಿಸುತ್ತಿರುವ ಮುಗುಳ್ನಗೆ, ಇವುಗಳಿಂದ ಕೂಡಿ ಹೆದರಿ ಕೊಂಡಿರುವವರನ್ನೆಲ್ಲ ಅತಿಶಯವಾದ ರೀತಿಯಲ್ಲಿ ನಗುತ್ತಿರುವ ಹಾಗೆ ಸೂರ್ಯಪುತ್ರನಾದ ಕರ್ಣನು ಈ ಕಡೆ ಇದ್ದಾನೆ, ಎಂದ ಸಂಜಯ.

ಕರ್ಣನ ಕಳೇಬರವನ್ನು ನೋಡಿ ಮೂರ್ಛಿತನಾದ ದುರ್ಯೋಧನ ಸಂಪಾದಿಸಿ

ವ|| ಎಂಬುದುಮಾಗಳ್ ತೆಪ್ಪತ್ತುಮೆಲ್ಲಿದನೆತ್ತಣನೆಂದು ಕರ್ಣನ ಕಳೇವರಮಂ ನೋಡಿ ನೋಡಲಾಱದೆ ಕಣ್ಗಳಂ ಮುಟ್ಟಿ ಮೂರ್ಛೆವೋಗಲ್ ಬಗೆದನಂ ಸಂಜಯ ತೞ್ಕೈಸಿಕೊಂಡಾಗಳ್ ಚೇತರಿಸಿ ಕೂರ್ಮೆ ಕೆಯ್ಮಿಕ್ಕು ಬರೆ ಸೈರಿಸಲಾಱದೆ-
ವಚನ:ಪದವಿಭಾಗ-ಅರ್ಥ:ಎಂಬುದುಂ ಆಗಳ್ ತೆಪ್ಪತ್ತುಮ್ (ಎನ್ನಲು ಆಗಲೆ ಚೇತರಿಸಿಕೊಂಡು) ಎಲ್ಲಿದನು ಎತ್ತಣನೆಂದು (ಎಲ್ಲಿದ್ದಾನೆ ಯಾವ ಕಡೆ ಎಂದು)(ಕರ್ಣನ ಕಳೇವರಮಂ ನೋಡಿ ನೋಡಲಾಱದೆ (ರ್ಣನ ಶರೀರವನ್ನು ನೋಡಿ ನೋಡಲಾರದೆ) ಕಣ್ಗಳಂ ಮುಟ್ಟಿ ಮೂರ್ಛೆವೋಗಲ್ ಬಗೆದನಂ (ಕಣ್ಣುಗಳನ್ನು ಮುಚ್ಚಿಕೊಂಡು ಮೂರ್ಛಿತನಾದವನನ್ನು ) ಸಂಜಯ ತೞ್ಕೈಸಿಕೊಂಡಾಗಳ್ (ಸಂಜಯನು ತಬ್ಬಿಕೊಳ್ಳಲು) ಚೇತರಿಸಿ ಕೂರ್ಮೆ ಕೆಯ್ಮಿಕ್ಕು ಬರೆ ಸೈರಿಸಲಾಱದೆ (ಪ್ರೀತಿಯು (ಸ್ನೇಹವು) ಕೈಮೀರಿ ಬರುತ್ತಿರಲು ಅದನ್ನು ಸೈರಿಸಲಾರದೆ)-
ವಚನ:ಅರ್ಥ:ಎನ್ನಲು ಆಗಲೆ ಚೇತರಿಸಿಕೊಂಡು ಎಲ್ಲಿದ್ದಾನೆ ಯಾವ ಕಡೆ ಎಂದು ಕರ್ಣನ ಶರೀರವನ್ನು ನೋಡಿ ನೋಡಲಾರದೆ ಕಣ್ಣುಗಳನ್ನು ಮುಚ್ಚಿಕೊಂಡು ಮೂರ್ಛಿತನಾದವನನ್ನು ಸಂಜಯನು ತಬ್ಬಿಕೊಳ್ಳಲು ಚೇತರಿಸಿಕೊಂಡು ಪ್ರೀತಿಯು (ಸ್ನೇಹವು) ಕೈಮೀರಿ ಬರುತ್ತಿರಲು ಅದನ್ನು ಸೈರಿಸಲಾರದೆ-
ಚಂ|| ಬೆಸನೆಡೆಗಳ್ಗೆ ತೊೞ್ತುಬೆಸನಂಗಳವುಂಕಿದೊಡಾಗದೆಂದು ಬ
ಗ್ಗಿಸುವೆಡೆಗಾಳ್ದನಿಂತು ನೆಗೞೆಂಬೆಡೆಯೊಳ್ ಗುರು ಪೆರ್ಚಿದೊಂದು ಬೇ|
ವಸದೆಡೆಗಾಶ್ರಯಂ ಮನಮನೊಪ್ಪಿಸುವೀಯೆಡೆಯೊಳ್ ಮನಂ ವಿಚಾ
ರಿಸುವೊಡೆ ಕರ್ಣನಲ್ಲದೆನಗಾವೆಡೆಗಂ ಪೆಱನೊರ್ವನಾವನೋ|| ೫೯
ಪದ್ಯ-೫೯:ಪದವಿಭಾಗ-ಅರ್ಥ:ಬೆಸನೆಡೆಗಳ್ಗೆ (ಬೆಸನ- ಕಾರ್ಯದ, ಎಡೆಗಳ್ಗೆ- ಸಂದರ್ಭದಲ್ಲಿ) ತೊೞ್ತು ಬೆಸನಂಗಳು ಅವುಂಕಿದೊಡೆ (ಸೇವಕನಂತೆಯೂ ಸಪ್ತ ವ್ಯಸನಗಳು ಮೇಲೆ ಮೇಲೆ ಒತ್ತಿ ಬರುತ್ತಿರಲು) ಆಗದೆಂದು ಬಗ್ಗಿಸುವೆಡೆಗೆ ಆಳ್ದನು ಇಂತು (ಇದಾಗುವುದಿಲ್ಲ ಎಂದು ಯಜಮಾನನಂತೆಯೂ (ಸ್ವಾಮಿ-ಒಡೆಯ) ಹೀಗೆ ) ನೆಗೞೆಂಬ ಎಡೆಯೊಳ್ ಗುರು ಪೆರ್ಚಿದೊಂದು ಬೇವಸದೆಡೆಗೆ ಆಶ್ರಯಂ (ಮಾಡು ಎನ್ನುವ ಸಮಯದಲ್ಲಿ ಗುರುವಿನಂತೆಯೂ;) ಮನಮನೊಪ್ಪಿಸುವ ಈ ಯೆಡೆಯೊಳ್ ಮನಂ ವಿಚಾರಿಸುವೊಡೆ (ಮನಸ್ಸನ್ನೊಪ್ಪಿಸುವ ಸಂದರ್ಭದಲ್ಲಿ ಮನಸ್ಸೇ ಆಗಿಯೂ ಇದ್ದಂಥ) ಕರ್ಣನಲ್ಲದೆ ಎನಗಾವ ಡಡೆಗಂ ಪೆಱನೊರ್ವನು ಆವನೋ (ಕರ್ಣನನ್ನು ಬಿಟ್ಟು ನನಗೆ ಎಲ್ಲ ಸಮಯಕ್ಕೂ ಸಹಾಯಕನಾಗುವ ಮತ್ತೊಬ್ಬನಾವನಿದ್ದಾನೆ?)
ಪದ್ಯ-೫೯:ಅರ್ಥ: ೫೯. ಕಾರ್ಯಮಾಡುವ ಸಂದರ್ಭದಲ್ಲಿ ಸೇವಕನಂತೆಯೂ ಸಪ್ತ ವ್ಯಸನಗಳು ಮೇಲೆ ಮೇಲೆ ಒತ್ತಿ ಬರುತ್ತಿರಲು ಇದಾಗುವುದಿಲ್ಲ ಎಂದು ಬೆದರಿಸುವ ಸಮಯದಲ್ಲಿ ಯಜಮಾನನಂತೆಯೂ (ಸ್ವಾಮಿ-ಒಡೆಯ) ಹೀಗೆ ಮಾಡು ಎನ್ನುವ ಸಮಯದಲ್ಲಿ ಗುರುವಿನಂತೆಯೂ; ಅಧಿಕವಾದ ವ್ಯಥೆಯುಂಟಾದಾಗ ಅವಲಂಬನದಂತೆಯೂ ಮನಸ್ಸನ್ನೊಪ್ಪಿಸುವ ಸಂದರ್ಭದಲ್ಲಿ ಮನಸ್ಸೇ ಆಗಿಯೂ ಇದ್ದಂಥ ಕರ್ಣನನ್ನು ಬಿಟ್ಟು ನನಗೆ ಎಲ್ಲ ಸಮಯಕ್ಕೂ ಸಹಾಯಕನಾಗುವ ಮತ್ತೊಬ್ಬನಾವನಿದ್ದಾನೆ?
  • ಟಿಪ್ಪಣಿ::ಅನೇಕ ಅಧ್ಯಾಹಾರಗಳಿಂದ ಅನ್ವಯ ಸ್ವಲ್ಪ ಗೊಂದಲವಾಗಿದೆ.
ಮ|| ನೆಲನಂ ಕೊಟ್ಟನಿನಾತ್ಮಜಾತನೆನಗಾಂ ತಕ್ಕೂರ್ಮೆಯಿಂದಂ ಜಳಾಂ
ಜಲಿಯಂ ಕೊಟ್ಟೆನುಮಿಲ್ಲ ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷ|
ದ್ಬಲಮಂ ಸುಟ್ಟನುದಾತ್ತಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿ
ಲ್ಲೊಲವಿಂದಿಂತೆರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ|| ೬೦
ಪದ್ಯ-೬೦:ಪದವಿಭಾಗ-ಅರ್ಥ:ನೆಲನಂ ಕೊಟ್ಟನು ಇನಾತ್ಮಜಾತನು ಎನಗೆ (ಕರ್ಣನು ನನಗೆ ಭೂಮಿಯನ್ನು (ಅನೆಕ ರಾಜ್ಯಗಳನ್ನು ಸಂಪಾದಿಸಿ ಕೊಟ್ಟನು.) ಆಂ ತಕ್ಕ ಊರ್ಮೆಯಿಂದಂ ಜಳಾಂಜಲಿಯಂ ಕೊಟ್ಟೆನುಮಿಲ್ಲ (ನಾನು ಅದಕ್ಕನುಗುಣವಾಗಿ ಪ್ರೀತಿಯಿಂದ ಅವನಿಗೆ ತರ್ಪಣವನ್ನು ಕೊಟ್ಟಿಲ್ಲ.) ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷದ್ಬಲಮಂ ಸುಟ್ಟನು (ಸೂರ್ಯನ ಮಗನಾದ ಕರ್ಣನು ತನ್ನ ತೇಜಸ್ಸೆಂಬ ಅಗ್ನಿಯಿಂದ ವೈರಿಸೈನ್ಯವನ್ನು ಸುಟ್ಟನು.) ಉದಾತ್ತಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿಲ್ಲ (ಬಹಳ ಪುಣ್ಯಶಾಲಿಯಾದ ಅವನನ್ನು ಚಿತೆಯ ಬೆಂಕಿಯಿಂದ ಸುಟ್ಟಿಲ್ಲ;) ಒಲವಿಂದ ಇಂತು ಎರ್ದೆಮುಟ್ಟಿ ಕೂರ್ತನು ಒಳನೇ ಕರ್ಣಂಗೆ ದುರ್ಯೋಧನಂ (ಹೀಗೆ ಕರ್ಣನಲ್ಲಿ ಎದೆಸೋಂಕಿ ಪ್ರೀತಿಯಿಂದ ಇರುವ ದುರ್ಯೋಧನನು ಒಳನೇ ಇರುವನೇ?)
ಪದ್ಯ-೬೦:ಅರ್ಥ: ಕರ್ಣನು ನನಗೆ ಭೂಮಿಯನ್ನು (ಅನೆಕ ರಾಜ್ಯಗಳನ್ನು ಸಂಪಾದಿಸಿ ಕೊಟ್ಟನು. ನಾನು ಅದಕ್ಕನುಗುಣವಾಗಿ ಪ್ರೀತಿಯಿಂದ ಅವನಿಗೆ ತರ್ಪಣವನ್ನು ಕೊಟ್ಟಿಲ್ಲ. ಸೂರ್ಯನ ಮಗನಾದ ಕರ್ಣನು ತನ್ನ ತೇಜಸ್ಸೆಂಬ ಅಗ್ನಿಯಿಂದ ವೈರಿಸೈನ್ಯವನ್ನು ಸುಟ್ಟನು. ಬಹಳ ಪುಣ್ಯಶಾಲಿಯಾದ ಅವನನ್ನು ಚಿತೆಯ ಬೆಂಕಿಯಿಂದ ಸುಟ್ಟಿಲ್ಲ; ಹೀಗೆ ಕರ್ಣನಲ್ಲಿ ಎದೆಸೋಂಕಿ ಪ್ರೀತಿಯಿಂದ ಇರುವ ದುರ್ಯೋಧನನು ಒಳನೇ ಇರುವನೇ? (ತಾನು ಕರ್ಣನ ಪ್ರೀತಿಗೆ ಸರಿಯಾದ ರೀತಿ ನೆಡೆದುಕೊಳ್ಲಲು ಆಗಲಿಲ್ಲ ಎಂಬ ಭಾವ)
ವ|| ಎಂದು ನೊಂದು ನುಡಿದ ದುರ್ಯೋಧನನಂ ಸಂಜಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನೊಂದು ನುಡಿದ ದುರ್ಯೋಧನನಂ ಸಂಜಯನು ಇಂತೆಂದಂ-
ವಚನ:ಅರ್ಥ: ಎಂದು ದುಖಿಸಿ ಆಡಿದ ದುರ್ಯೋಧನನಿಗೆ ಸಂಜಯನು ಹೀಗೆ ಹೇಳಿದನು –
ಶಾ|| ಕೊಟ್ಟೈಕಿರ್ಚನುದಗ್ರಶೋಕಶಿಖಿಯಿಂ ಕಣ್ಣೀರ್ಗಳಿಂದೆಯ್ದೆ ನೀ
ರ್ಗೊಟ್ಟೈ ಸೂರ್ಯಸುತಂಗೆ ಲೌಕಿಕಮನೇನಿಂ ದಾಂಟಿದೈ ಪೋೞ್ದು ಸೀ|
ಳ್ದೊಟ್ಟಿಂ ವೈರಿಯನೊಡ್ಡಿ ತತ್ಪಿಶಿತದಿಂದಾತಂಗೆ ನೀಂ ಕೂರ್ಪೋಡೇ
ಗೆಟ್ಟತ್ತಿನ್ನಡೆ ಮಾಡು ತದ್ದಿ ಜಗಣಕ್ಕಾಹಾರಮಂ ಭೂಪತೀ|| ೬೧
ಪದ್ಯ-೬೧:ಪದವಿಭಾಗ-ಅರ್ಥ:ಕೊಟ್ಟೈ ಕಿರ್ಚನು (ಚಿತಾಗ್ನಿಯನ್ನು ಕೊಟ್ಟಿದ್ದೀಯೆ) ಉದಗ್ರಶೋಕಶಿಖಿಯಿಂ (ತೀವ್ರವಾದ ಶೋಕಾಗ್ನಿಯಿಂದ ಚಿತಾಗ್ನಿಯನ್ನು ಕೊಟ್ಟಿದ್ದೀಯೆ) ಕಣ್ಣೀರ್ಗಳಿಂದ ಎಯ್ದೆ ನೀರ್ಗೊಟ್ಟೈ ಸೂರ್ಯಸುತಂಗೆ (ಕಣ್ಣೀರುಗಳಿಂದ ಚೆನ್ನಾಗಿ ತರ್ಪಣವನ್ನು ಕೊಟ್ಟಿದ್ದೀಯೆ.) ಲೌಕಿಕಮನೇನ್ ಇಂ ದಾಂಟಿದೈ (ಲೋಕವ್ಯವಹಾರವನ್ನು ಇನ್ನು ದಾಟಿದ್ದೀಯೆ? ) ಪೋೞ್ದು ಸೀಳ್ದೊಟ್ಟಿಂ ವೈರಿಯನು ಒಡ್ಡಿ (ಶತ್ರುವನ್ನು ಹೋಳುಮಾಡಿ ಸೀಳಿ ರಾಶಿಹಾಕಿ) ತತ್ಪಿ ಪಶಿತದಿಂದೆ (ಆ ಮಾಂಸದಿಂದ) ತಂಗೆ ನೀಂ ಕೂರ್ಪೊಡೆ (ಕರ್ಣನನ್ನು ನೀನು ಪ್ರೀತಿಸುವುದಾದರೆ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು.) ಏಗೆಟ್ಟತ್ತು ಇಂ ನಡೆ, (ನಷ್ಟವಾದುದೇನು? ಇನ್ನು ಮುಂದೆ ನಡೆ.) ಮಾಡು ತದ್ದಿ ಜಗಣಕ್ಕಾಹಾರಮಂ ಭೂಪತೀ (ರಾಜನೇ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು.)
ಪದ್ಯ-೬೧:ಅರ್ಥ: ತೀವ್ರವಾದ ಶೋಕಾಗ್ನಿಯಿಂದ ಚಿತಾಗ್ನಿಯನ್ನು ಕೊಟ್ಟಿದ್ದೀಯೆ. ಕಣ್ಣೀರುಗಳಿಂದ ಚೆನ್ನಾಗಿ ತರ್ಪಣವನ್ನು ಕೊಟ್ಟಿದ್ದೀಯೆ. ಲೋಕವ್ಯವಹಾರವನ್ನೆಲ್ಲಾ ಇನ್ನು ದಾಟಿದ್ದೀಯೆ? ಶತ್ರುವನ್ನು ಹೋಳುಮಾಡಿ ಸೀಳಿ ರಾಶಿಹಾಕಿ ಆ ಮಾಂಸದಿಂದ- ಕರ್ಣನನ್ನು ನೀನು ಪ್ರೀತಿಸುವುದಾದರೆ ರಾಜನೇ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು. ನಷ್ಟವಾದುದೇನು? ಇನ್ನು ಮುಂದೆ ನಡೆ, ಎಂದನು ಸಂಜಯ
ವ|| ಎಂದು ಪೆರ್ಚಿದ ಶೋಕರಸಮಂ ಕೋಪರಸದ ಮೇಲಿಕ್ಕಿ ಭೀಷ್ಮಂ ಶರಶಯನ ತಳವಿಗತನಾಗಿರ್ದಲ್ಲಿವರಮೆಂತಾನುಮೊಡಗೊಂಡು ಬಂದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ಪೆರ್ಚಿದ ಶೋಕರಸಮಂ (ಎಂದು ಹೇಳಿ ಹೆಚ್ಚಾದ ಶೇಕರಸವನ್ನೂ ಮೀರಿ) ಕೋಪರಸದ ಮೇಲಿಕ್ಕಿ (ಕೋಪರಸವು ಹೆಚ್ಚುತ್ತಿರಲು) ಭೀಷ್ಮಂ ಶರಶಯನ ತಳ ವಿಗತನಾಗಿರ್ದ ಅಲ್ಲಿವರಂ (ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿದ್ದ ಸ್ಥಳದವರೆಗೆ) ಎಂತಾನುಂ ಒಡಗೊಂಡು ಬಂದಾಗಳ್ (ಹೇಗೋ ಜೊತೆಯಲ್ಲಿ ಕರೆದುಕೊಂಡು ಹೋದನು.)-
ವಚನ:ಅರ್ಥ:ಎಂದು ಹೇಳಿ ಹೆಚ್ಚಾದ ಶೋಕರಸವನ್ನೂ ಮೀರಿ ಕೋಪರಸವು ಹೆಚ್ಚುತ್ತಿರಲು ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿದ್ದ ಸ್ಥಳದವರೆಗೆ ಹೇಗೋ ಜೊತೆಯಲ್ಲಿ ಕರೆದುಕೊಂಡು ಹೋದನು.

ದುರ್ಯೋಧನನಿಗೆ ಭೀಶ್ಮರ ಸಲಹೆ ಸಂಪಾದಿಸಿ

ಚಂ|| ಇಡಿದಿರೆ ರೋಮ ಕೂಪದೊಳಗುರ್ಚಿದ ಸಾಲ ಸರಲ್ಗಳುಂ ತೆಱಂ
ಬಿಡಿದರೆ ಬೆಟ್ಟುವೋರ್ಗುಡಿಸಿದಂತೆ ನೆಱಲ್ದಿರೆ ಸುಯ್ವ ಪುಣ್ಗಳಿಂ|
ಬಡನಡುವಂ ಶರಾಳಿಭಯದಿಂ ನಡುಪಂತಿರೆ ಚಿತ್ತದೊಳ್ ಮೃಡಂ
ತೊಡರ್ದಿರೆ ಬಿೞ್ದದೇನೆಸೆದನೋ ಶರಶಯ್ಯೊಯೊಳಂದು ಸಿಂಧುಜಂ|| ೬೨ ||
ಪದ್ಯ-೬೨:ಪದವಿಭಾಗ-ಅರ್ಥ:ಇಡಿದಿರೆ ರೋಮ ಕೂಪದೊಳಗೆ ಉರ್ಚಿದ ಸಾಲ ಸರಲ್ಗಳುಂ (ಕೂದಲಿನ ಒಂದೊಂದು ಹಳ್ಳ (ಕುಳಿ)ಗಳಲ್ಲಿಯೂ ಸಾಲವೃಕ್ಷದಿಂದ ಮಾಡಿದ ಬಾಣಗಳು ನಾಟಿಕೊಂಡು ದಟ್ಟವಾಗಿ ತುಂಬಿರಲು) ತೆಱಂ ಬಿಡಿದರೆ ಬೆಟ್ಟುವು ಓರ್ಗುಡಿಸಿದಂತೆ ನೆಱಲ್ದಿರೆ (ನಾನಾ ರೀತಿಯಲ್ಲಿ ಪರ್ವತಗಳುರುಳಿದಂತೆ ಬಿದ್ದು ನಿಶ್ಚೇಷ್ಟನಾಗಿರಲು,) ಸುಯ್ವ ಪುಣ್ಗಳಿಂ ಬಡನಡುವಂ ಶರಾಳಿ ಭಯದಿಂ ನಡುಪಂತಿರೆ (ಸುಯ್ಯುವ/ ನಿಟ್ಟುಸಿರುಬಿಡುವ ನೋವುಕೊಡುತ್ತಿರುವ ಹುಣ್ಣುಗಳಿಂದಲೂ ಬಾಣಗಳ ಭಯದಿಂದಲೂ ಬಡವಾಗಿರುವ ಸೊಂಟವನ್ನು ನಡುಗಿಸುತ್ತ) ಚಿತ್ತದೊಳ್ ಮೃಡಂ ತೊಡರ್ದಿರೆ (ಮನಸ್ಸಿನಲ್ಲಿ ಶಿವನು ತೊಡಗಿ/ಸೇರಿರಲು,) ಬಿೞ್ದು ಅದೇನು ಎಸೆದನೋ ಶರಶಯ್ಯೊಯೊಳು ಅಂದು ಸಿಂಧುಜಂ (ಭೀಷ್ಮನು ಬಾಣದ ಹಾಸಿಗೆಯಲ್ಲಿ ಬಿದ್ದು/ಮಲಗಿ ಅದೇನು ಎಸೆದನೋ- ಅತ್ಯಂತ ಶೋಭಾಯಮಾನನಾಗಿದ್ದನು.)
ಪದ್ಯ-೬೨:ಅರ್ಥ: ಕೂದಲಿನ ಒಂದೊಂದು ಹಳ್ಳ (ಕುಳಿ)ಗಳಲ್ಲಿಯೂ ಸಾಲವೃಕ್ಷದಿಂದ ಮಾಡಿದ ಬಾಣಗಳು ನಾಟಿಕೊಂಡು ದಟ್ಟವಾಗಿ ತುಂಬಿರಲು ನಾನಾ ರೀತಿಯಲ್ಲಿ ಪರ್ವತಗಳುರುಳಿದಂತೆ ಬಿದ್ದು ನಿಶ್ಚೇಷ್ಟನಾಗಿರಲು, ಸುಯ್ಯುವ/ ನಿಟ್ಟುಸಿರುಬಿಡುವ ನೋವುಕೊಡುತ್ತಿರುವ ಹುಣ್ಣುಗಳಿಂದಲೂ ಬಾಣಗಳ ಭಯದಿಂದಲೂ ಬಡವಾಗಿರುವ ಸೊಂಟವನ್ನು ನಡುಗಿಸುತ್ತ ಮನಸ್ಸಿನಲ್ಲಿ ಶಿವನು ತೊಡಗಿ/ಸೇರಿರಲು, ಭೀಷ್ಮನು ಬಾಣದ ಹಾಸಿಗೆಯಲ್ಲಿ ಬಿದ್ದು/ಮಲಗಿ ಅದೇನು ಎಸೆದನೋ- ಅತ್ಯಂತ ಶೋಭಾಯಮಾನನಾಗಿದ್ದನು.
ಹರನೊಳೆ ಪತ್ತಿ ತೆತ್ತಿಸಿದ ಚಿತ್ತಮನಿರ್ಬಗಿಯಾಗೆ ಮೋಹಮೊ
ತ್ತರಿಸೆ ಸುಯೋಧನಂಗೆ ರಣಭೂಮಿಯೊಳೆಂತುಟವಸ್ಥೆಯೋ ಕನ|
ಲ್ದುರಿದಪುದೆನ್ನ ಮೆಯ್ಯೆನುತುಮತ್ತಣ ಪಂಬಲ ಬಂಬಲೊಳ್ ತೆಱಂ
ದಿರಿದುದು ಚಿತ್ತಮಾ ದೊರೆಯ ಯೋಗಿಗಮಿಂತುಂಟೆ ಮೋಹಮಾಗದೇ|| ೬೩ ||
ಪದ್ಯ-೬೩:ಪದವಿಭಾಗ-ಅರ್ಥ:ಹರನೊಳೆ ಪತ್ತಿ ತೆತ್ತಿಸಿದ ಚಿತ್ತಮನು (ಈಶ್ವರನಲ್ಲಿ ಸೇರಿಕೊಂಡಂತಿದ್ದ ಮನಸ್ಸನ್ನು) ಇರ್ಬಗಿಯಾಗೆ ಮೋಹಂ ಒತ್ತರಿಸೆ (ಎರಡು ಭಾಗವಾಗಿ ಮಾಡಲು ಮಮಕಾರವು ಒತ್ತರಿಸಿಬರಲು,) ಸುಯೋಧನಂಗೆ ರಣಭೂಮಿಯೊಳ್ ಎಂತುಟವಸ್ಥೆಯೋ (ದುರ್ಯೋಧನನಿಗೆ ಯುದ್ಧ ರಂಗದಲ್ಲಿ ಇಂತಹ ಅವಸ್ಥೆಯಾಯಿತೇ!) ಕನಲ್ದು ಉರಿದಪುದು ಎನ್ನ ಮೆಯ್ಯ ಎನುತುಂ ( ನನ್ನ ಶರೀರವು ಕೆಂಡದಂತೆ ಹೊಳೆದು ಉರಿಯುತ್ತಿದೆಯಲ್ಲಾ ಎಂದು ಹೇಳುತ್ತಾ) ಅತ್ತಣ ಪಂಬಲ ಬಂಬಲೊಳ್ ತೆಱಂದಿರಿದುದು- ತೆರಂದೆ ಇರಿದುದು (ಆ ಕಡೆಯ ಹಂಬಲದ ಸರಣಿಯಲ್ಲಿ ಮನಸ್ಸು ನಾನಾ ರೀತಿಯಾಗಿ ಅಲೆದಾಡಿತು.) ಚಿತ್ತಮು ಆ ದೊರೆಯ ಯೋಗಿಗಂ ಇಂತುಂಟೆ ಮೋಹಂ ಆಗದೇ (ಅಂತಹ ಯೋಗ್ಯತೆಯನ್ನುಳ್ಳ ಯೋಗಿಗೂ ಹೀಗೆಯೇ ಮಮತೆ ಉಂಟಾಗದೇ? ಮಮತೆ ಉಂಟಾಯಿತು)
ಪದ್ಯ-೬೩:ಅರ್ಥ:ಈಶ್ವರನಲ್ಲಿ ಸೇರಿಕೊಂಡಂತಿದ್ದ ಮನಸ್ಸನ್ನು ಮೋಹವು ಎರಡು ಭಾಗವಾಗಿ ಮಾಡಲು ಮಮಕಾರವು ಒತ್ತರಿಸಿಬರಲು, ದುರ್ಯೋಧನನಿಗೆ ಯುದ್ಧ ರಂಗದಲ್ಲಿ ಇಂತಹ ಅವಸ್ಥೆಯಾಯಿತೇ! ನನ್ನ ಶರೀರವು ಕೆಂಡದಂತೆ ಹೊಳೆದು ಉರಿಯುತ್ತಿದೆಯಲ್ಲಾ ಎಂದು ಹೇಳುತ್ತಾ, ಆ ಕಡೆಯ ಹಂಬಲದ ಸರಣಿಯಲ್ಲಿ ಮನಸ್ಸು ನಾನಾ ರೀತಿಯಾಗಿ ಅಲೆದಾಡಿತು. ಅಂತಹ ಯೋಗ್ಯತೆಯನ್ನುಳ್ಳ ಯೋಗಿಗೂ ಹೀಗೆಯೇ ಮಮತೆ ಉಂಟಾಗದೇ? ಮಮತೆ ಉಂಟಾಯಿತು
ವ|| ಎಂಬನ್ನೆಗಮವರಿರ್ವರ ಕಾಲ ಸೊಪ್ಪುಳನಾಲಿಸಿ ಸುರನದೀನಂದನಂ ಪೇೞಿಮೀ ಬಂದರಾರೆಂದನೇಕ ವ್ರಣವೇದನಾಪರವಶಶರೀರಂ ಬೆಸಗೊಳ್ವುದುಂ ಸಂಜಯಂ ಕುರುಪಿತಾ ಮಹನ ಕರ್ಣೋಪಾಂತಮಂ ಸಾರ್ದು ಕುರುಕುಳಗಗನಮೃಗಧರಂ ಬಂದನೆಂದು ಬಿನ್ನಪಂಗೆಯ್ವುದುಂ ಯೋಗಾಭ್ಯಾಸದೊಳರೆಮುಗುಳ್ದ ರಕ್ತಾಂಭೋಜದಳ ವಿಳಾಸೋಪಹಾಸಿಗಳಪ್ಪ ಕಣ್ಗಳನೊತ್ತಂಬದಿಂ ತೆರೆದು-
ವಚನ:ಪದವಿಭಾಗ-ಅರ್ಥ:ಎಂಬನ್ನೆಗಂ ಅವರಿರ್ವರ ಕಾಲ ಸೊಪ್ಪುಳನು ಆಲಿಸಿ (ಎನ್ನುವಷ್ಟರಲ್ಲಿ ಇಬ್ಬರ ಹೆಜ್ಜೆಯ ಶಬ್ದವನ್ನು ಕೇಳಿ ) ಸುರನದೀನಂದನಂ ಪೇೞಿಂ ಈ ಬಂದರು ಆರೆಂದು (‘ಈಗ ಬಂದವರು ಯಾರು ಹೇಳಿ’) ಅನೇಕ ವ್ರಣವೇದನಾ ಪರವಶ ಶರೀರಂ (ಅನೇಕ ಗಾಯಗಳ ನೋವಿನಿಂದ ಪರವಶವಾಗಿದ್ದ ಶರೀರವನ್ನುಳ್ಳ ಭೀಷ್ಮನು) ಬೆಸಗೊಳ್ವುದುಂ (ಎಂದು ಕೇಳಿದಾಗ, ) ಸಂಜಯಂ ಕುರುಪಿತಾ ಮಹನ ಕರ್ಣ ಉಪಾಂತಮಂ ಸಾರ್ದು (ಸಂಜಯನು ಕುರುಪಿತಾಮಹನಾದ ಭೀಷ್ಮನ ಕಿವಿಯ ಹತ್ತಿರಕ್ಕೆ ಹೋಗಿ) ಕುರುಕುಳ ಗಗನಮೃಗಧರಂ ಬಂದನೆಂದು ಬಿನ್ನಪಂ ಗೆಯ್ವುದುಂ (‘ಕುರುವಂಶವೆಂಬ ಆಕಾಶದ ಚಂದ್ರನಾದ ದುರ್ಯೋಧನನು ಬಂದಿದ್ದಾನೆ’ ಎಂದು ವಿಜ್ಞಾಪನೆ ಮಾಡಿದನು.) ಯೋಗಾಭ್ಯಾಸದೊಳು (ಯೋಗಾಭ್ಯಾಸದಲ್ಲಿ) ಅರೆಮುಗುಳ್ದ (ಅರ್ಧಮುಚ್ಚಿದ) ರಕ್ತಾಂಭೋಜದಳ (ಕಮಲದಳ) ವಿಳಾಸೋಪಹಾಸಿಗಳಪ್ಪ (ಕಾಂತಿಯನ್ನು ಹಾಸ್ಯಮಾಡುವ ಹಾಗಿದ್ದ ) ಕಣ್ಗಳನು ಒತ್ತಂಬದಿಂ ತೆರೆದು (ತನ್ನ ಕಣ್ಣುಗಳನ್ನು ಬಲವಂತದಿಂದ ತೆಗೆದು)-
ವಚನ:ಅರ್ಥ:ಎನ್ನುವಷ್ಟರಲ್ಲಿ ಇಬ್ಬರ ಹೆಜ್ಜೆಯ ಶಬ್ದವನ್ನು ಕೇಳಿ ಅನೇಕ ಗಾಯಗಳ ನೋವಿನಿಂದ ಪರವಶವಾಗಿದ್ದ ಶರೀರವನ್ನುಳ್ಳ ಭೀಷ್ಮನು ‘ಈಗ ಬಂದವರು ಯಾರು ಹೇಳಿ’ ಎಂದು ಕೇಳಿದಾಗ, ಸಂಜಯನು ಕುರುಪಿತಾಮಹನಾದ ಭೀಷ್ಮನ ಕಿವಿಯ ಹತ್ತಿರಕ್ಕೆ ಹೋಗಿ ‘ಕುರುವಂಶವೆಂಬ ಆಕಾಶದ ಚಂದ್ರನಾದ ದುರ್ಯೋಧನನು ಬಂದಿದ್ದಾನೆ’ ಎಂದು ವಿಜ್ಞಾಪನೆ ಮಾಡಿದನು. ಭೀಷ್ಮನು ಯೋಗಾಭ್ಯಾಸದಲ್ಲಿ ಅರ್ಧಮುಚ್ಚಿಕೊಂಡಿದ್ದ ಕನ್ನೆ ದಿಲೆಯ ದಳದ ಕಾಂತಿಯನ್ನು ಹಾಸ್ಯಮಾಡುವ ಹಾಗಿದ್ದ ತನ್ನ ಕಣ್ಣುಗಳನ್ನು ಬಲವಂತದಿಂದ ತೆಗೆದು-
ಚಂ|| ಎಱಗಿದ ಕೌರವೇಶ್ವರನೊಳಾದಮಿದಿರ್ಚಿದಲಂಪೆಲರ್ಚಿದ
ೞ್ಕಱನೊಳಕೊಳ್ವಿನಂ ಪರಸಿ ಮೆಯ್ಯೊಳೆ ಬಂದ ತೆಱಕ್ಕೆ ಮೆಯ್ ಕರಂ|
ಮಱುಗಿಪುದಿಂತು ಪೇೞು ಮಗನೆ ಬೆಳ್ಗೊಡೆಯೆಲ್ಲಿದುದೆತ್ತ ಪೋಯ್ತು ಸು
ತ್ತಿಱಿದ ಚತುರ್ಬಲಂ ನಿನಗಮೀಯಿರವಾದುದೆ ವೈರಿಭೂಪರಿಂ|| ೬೪ ||
ಪದ್ಯ-೬೪:ಪದವಿಭಾಗ-ಅರ್ಥ:ಎಱಗಿದ ಕೌರವೇಶ್ವರನೊಳು ಆದಂ ಇದಿರ್ಚಿದ (ತನಗೆ ನಮಸ್ಕಾರ ಮಾಡಿದ ಕೌರಮೇಶ್ವರನನ್ನು ಎದುರಿನಲ್ಲಿ ಕಂಡ) ಅಲಂಪು ಎಲರ್ಚಿದ ಅೞ್ಕಱಂ ಒಳಕೊಳ್ವಿನಂ (ಸಂತೋಷವು ಪ್ರೀತಿಯನ್ನು ಅದಿಕಗೊಳಿಸಲು) ಪರಸಿ ಮೆಯ್ಯೊಳೆ ಬಂದ ತೆಱಕ್ಕೆ ಮೆಯ್ ಕರಂ ಮಱುಗಿಪುದು (ನೀನು ಏಕಾಕಿಯಾಗಿ ಬಂದ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಶೇಷ ದುಃಖಪಡುತ್ತಿದೆ.) ಇಂತು ಪೇೞು ಮಗನೆ ಬೆಳ್ಗೊಡೆ ಯೆಲ್ಲಿದುದು (ಶ್ವೇತಚ್ಛತ್ರಿ ಎಲ್ಲಿ?), ಎತ್ತ ಪೋಯ್ತು ಸುತ್ತಿಱಿದ ಚತುರ್ಬಲಂ (ಸುತ್ತಲೂ ಬಳಸಿ ಬರುತ್ತಿದ್ದ ಚತುರಂಗಸೈನ್ಯವೆಲ್ಲಿ ಹೋಯಿತು?) ನಿನಗಂ ಈ ಯಿರವಾದುದೆ ವೈರಿಭೂಪರಿಂ (ಶತ್ರುರಾಜರಿಂದ ನಿನಗೂ ಈ ಸ್ಥಿತಿಯುಂಟಾಯಿತೆ?)
ಪದ್ಯ-೬೪:ಅರ್ಥ:ತನಗೆ ನಮಸ್ಕಾರ ಮಾಡಿದ ಕೌರಮೇಶ್ವರನನ್ನು ಎದುರಿನಲ್ಲಿ ಕಂಡ ಸಂತೋಷವು ಪ್ರೀತಿಯನ್ನು ಅದಿಕಗೊಳಿಸಲು ಆಶೀರ್ವಾದಮಾಡಿ, ನೀನು ಏಕಾಕಿಯಾಗಿ ಬಂದ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಶೇಷ ದುಃಖಪಡುತ್ತಿದೆ. ಮಗು, ಶ್ವೇತಚ್ಛತ್ರಿ ಎಲ್ಲಿ? ಸುತ್ತಲೂ ಬಳಸಿ ಬರುತ್ತಿದ್ದ ಚತುರಂಗಸೈನ್ಯವೆಲ್ಲಿ ಹೋಯಿತು? ಯಾವ ಕಡೆಗೆ ಹೋಯಿತು. ಶತ್ರುರಾಜರಿಂದ ನಿನಗೂ ಈ ಸ್ಥಿತಿಯುಂಟಾಯಿತೆ?
ವ|| ಎಂದು ಕಣ್ಣ ನೀರಂ ನೆಗಪಿ ನಿನ್ನ ಬಂದ ಬರವೇ ಸಮರವೃತ್ತಾಂತಮನೞಿಪಿ ದಪ್ಪುದಿಂ ನಿನ್ನ ಗೆಯ್ವ ನಿಯೋಗಮಾವುದೇಗೆಯ್ಯಲ್ ಬಗೆದಪೆಯೆನೆ-
ವಚನ:ಪದವಿಭಾಗ-ಅರ್ಥ:ಎಂದು ಕಣ್ಣ ನೀರಂ ನೆಗಪಿ (ಎಂದು ಕಣ್ಣೀರನ್ನು ತುಂಬಿಕೊಂಡು) ನಿನ್ನ ಬಂದ ಬರವೇ ಸಮರವೃತ್ತಾಂತಮನು ಅೞಿಪಿದಪ್ಪುದು ಇಂ (ನೀನು ಬಂದಿರುವ ಬರುವಿಕೆಯ ರೀತಿಯೇ ಯುದ್ಧ ಸಮಾಚಾರವನ್ನು ತಿಳಿಸುತ್ತದೆ.) ನಿನ್ನ ಗೆಯ್ವ ನಿಯೋಗಂ ಆವುದು(ಇನ್ನು ಮುಂದೆ ಮಾಡುವ ಕಾರ್ಯ ಯಾವುದು? ಮಾಡುತ್ತೀಯೆ?) ಏಗೆಯ್ಯಲ್ ಬಗೆದಪೆ ಯೆನೆ (ಏನು ಮಾಡಲು ಯೋಚಿಸಿದ್ದೀಯೆ ಎನ್ನಲು)-
ವಚನ:ಅರ್ಥ:ಎಂದು ಕಣ್ಣೀರನ್ನು ತುಂಬಿಕೊಂಡು, ನೀನು ಬಂದಿರುವ ಬರುವಿಕೆಯ ರೀತಿಯೇ ಯುದ್ಧ ಸಮಾಚಾರವನ್ನು ತಿಳಿಸುತ್ತದೆ. ಇನ್ನು ಮುಂದೇನು ಮಾಡುತ್ತೀಯೆ? ಏನು ಮಾಡಲು ಯೋಚಿಸಿದ್ದೀಯೆ ಎನ್ನಲು-.
ಚಂ|| ಬಗೆ ಪೆಱತುಂಟೆ ವೈರಿನೃಪರಂ ತಱಿದೊಟ್ಟುವುದಲ್ಲದೆಂತುಮಿ||
ಲ್ಲಿಗೆ ಬರವಂ ಭವತ್ಪದಸರೋಜವನಾಂ ಬಲಗೊಂಡು ಮತ್ತಮಾ||
ಜಿಗೆ ನಡೆಯಲ್ಕೆ ಬಂದೆನೆನೆ ದೇವನದೀಸುತನಾತ್ಮಚಿತ್ತದೊಳ್|
ಬಗೆದನಿದೇನಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ:ಬಗೆ (ಯೋಚನೆ) ಪೆಱತುಂಟೆ (ಬೇರೆ ಯೋಚನೆ ತನಗೆ ಉಂಟೇ? ಇಲ್ಲ!) ವೈರಿನೃಪರಂ ತಱಿದು ಒಟ್ಟುವುದು ಅಲ್ಲದೆ (ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆ ತನಗೆ ಉಂಟೇ? ಇಲ್ಲ!) ಎಂತುಂ ಇಲ್ಲಿಗೆ ಬರವಂ ಭವತ್ಪದಸರೋಜವನು ಆಂ ಬಲಗೊಂಡು (ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನ ಯುದ್ಧಕ್ಕೆ ಹೋಗೋಣವೆಂದು -ಬಂದೆ ಎಂದನು) ಮತ್ತಂ ಆಜಿಗೆ ನಡೆಯಲ್ಕೆ ಬಂದೆನು ಎನೆ (ಪುನಃ ಯುದ್ಧಕ್ಕೆ ಹೋಗೋಣವೆಂದು ಬಂದೆ ಎನ್ನಲು,) ದೇವನದೀಸುತನು ಆತ್ಮಚಿತ್ತದೊಳ್-ಬಗೆದನು ಇದೇನ್ ಅಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ (ಭೀಷ್ಮನು ಚಕ್ರವರ್ತಿಯಾದ ದುಯೋಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು.)
ಪದ್ಯ-೬೫:ಅರ್ಥ: ದುರ್ಯೋಧನನು ಮತ್ತೇನಜ್ಜ; ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆ ತನಗೆ ಉಂಟೇ? ಇಲ್ಲ! ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನಃ ಯುದ್ಧಕ್ಕೆ ಹೋಗೋಣವೆಂದು ಬಂದೆ ಎನ್ನಲು, ಭೀಷ್ಮನು ಚಕ್ರವರ್ತಿಯಾದ ದುಯೋಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು.
ವ|| ಎಂದಾದಿ ಮಧ್ಯಾವಸಾನದೊಳೆಲ್ಲಿಯುಮೆೞಲದ ಕಲಿತನದಳವಿಂಗೆ ಮನಂಗೊಂಡು ಮಗನೆ ನಿನಗಪ್ಪೊಡೆ ದೆಯ್ವಂ ಪ್ರತಿಕೂಲಮೆಂತುಂ ಕಾದಿ ಗೆಲಲಾರ್ಪೆಯಲ್ಲೆ ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ ನಿನ್ನೊಂದೆ ಮೆಯ್ಯೊಳಾದ ಕೂರ್ಪು ಪಗೆವರ ದರ್ಪಮನದಿರ್ಪದಲ್ತೆ ನಿನಗಂ ಮೈತ್ರೇಯರ್ ಕೊಟ್ಟೂರುಭಂಗಶಾಪಮನಿವಾರಿತಮೆನ್ನೀ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮುಮನಱಿದು ಬೞಿಯಂ ನಿನ್ನ ನೆಗೞ್ವುದಂ ನೆಗೞ್ವುದೆಂದು-
ವಚನ:ಪದವಿಭಾಗ-ಅರ್ಥ:ಎಂದು ಆದಿ ಮಧ್ಯಾವಸಾನದೊಳ್ (ಮೊದಲಿಂದ ಕೊನೆಯವರೆಗೆ) ಎಲ್ಲಿಯುಮ್ ಅೞಲದ ಕಲಿತನದ ಅಳವಿಂಗೆ (ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ) ಮನಂಗೊಂಡು (ಸಂತೋಷಪಟ್ಟು ,) ಮಗನೆ ನಿನಗೆ ಅಪ್ಪೊಡೆ ದೆಯ್ವಂ ಪ್ರತಿಕೂಲಮ್ ಎಂತುಂ ಕಾದಿ ಗೆಲಲ ಆರ್ಪೆಯಲ್ಲೆ (‘ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ;) ಸೂಜಿಯ ಕೂರ್ಪು ಕುಂಬಳದೊಳ್ ಅಡಂಗುವಂತೆ ನಿನ್ನೊಂದೆ ಮೆಯ್ಯೊಳು ಆದ ಕೂರ್ಪು (ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ) ಪಗೆವರ ದರ್ಪಮನು ಅದಿರ್ಪದಲ್ತೆ (ಶತ್ರುಗಳ ದರ್ಪವನ್ನು ನಡುಗಿಸುವಂತ್ದ್ದಲವೇ?) ನಿನಗಂ ಮೈತ್ರೇಯರ್ ಕೊಟ್ಟ ಊರುಭಂಗ ಶಾಪಮಂ ಅನಿವಾರಿತಮ್ (ನಿನಗೆ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು.) ಎನ್ನ ಈ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು (ನನ್ನ ಪ್ರಾಣವು ಇರುವಾಗಲೇ ಸಂಧಿಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ) ಕಾಲಮಂ ಕಜ್ಜಮುಮನು ಅಱಿದು (ಮುಂದಿನ ಕಾಲವನ್ನೂ ಕಾರ್ಯವನ್ನೂ ತಿಳಿದು) ಬೞಿಯಂ ನಿನ್ನ ನೆಗೞ್ವುದಂ ನೆಗೞ್ವುದೆಂದು (ಬಳಿಕ ನಿನ್ನ ಏಳಿಗೆಗೆ ಮಾಡಬೇಕಾದ್ದನ್ನು ಮಾಡು ಎಂದರು.)-
ವಚನ:ಅರ್ಥ:ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ ಸಂತೋಷಪಟ್ಟು (ದುರ್ಯೋಧನನನ್ನು ಕುರಿತು) ‘ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ; ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ ಶತ್ರುಗಳ ದರ್ಪವನ್ನು ನಡುಗಿಸುವಂತ್ದ್ದಲವೇ? ನಿನಗೆ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು. ನನ್ನ ಪ್ರಾಣವು ಇರುವಾಗಲೇ ಸಂಧಿಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ ಮುಂದಿನ ಕಾಲವನ್ನೂ ಕಾರ್ಯವನ್ನೂ ತಿಳಿದು ಬಳಿಕ ನಿನ್ನ ಏಳಿಗೆಗೆ ಮಾಡಬೇಕಾದ್ದನ್ನು ಮಾಡು ಎಂದರು.
ಚಂ|| ಪರಿಕಿಪುದೊಂದಱಿಂದೆರಡನೋತೊಳಕೊಳ್ವುದು ಮೂಱಱಿಂದೆ ನಾ
ಲ್ಕರಿದಱಿದಯ್ದಱಿಂದೆ ನೆರೆ ಕಲ್ವುದು ನಿರ್ಣಯಮಾಗಿರಾಱರೊಳ್|
ಪರಿಣತನಪ್ಪುದೇೞರೊಳಮೊಂದದೆ ನಿಲ್ವುದು ದುರ್ವಿಮಂತ್ರಮಂ
ಪರೆಪ ಟಮಾಳಮಂ ಪಿರಿದನೋದಿದೊಡಪ್ಪ ಪದಾರ್ಥಮಾವುದೋ|| ೬೬ ||
ಪದ್ಯ-೬೬:ಪದವಿಭಾಗ-ಅರ್ಥ:ಪರಿಕಿಪುದು(ಪರೀಕ್ಷಿಸಬೇಕು.) ಒಂದಱಿಂದೆ ಎರಡನು (ಒಂದರಿಂದ ಎಂದರೆ ಬುದ್ಧಿಯಿಂದ ಎರಡು ಕಾರ್ಯಾ ಅಕಾರ್ಯಗಳನ್ನು ಮಾಡಬೇಕಾದ್ದು ಮಾಡಬಾರದ್ದು,ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು.) ಓತೊಳಕೊಳ್ವುದು ಮೂಱಱಿಂದೆ (ಶತ್ರು ಮಿತ್ರ ಬಾಂಧವ ರೆಂಬ ಮೂವರನ್ನು ಒಲಿಸಿಕೊಳ್ಳಬೇಕು.) ನಾಲ್ಕು ಅರಿದು ಅಱಿದಯ್ದಱಿಂದೆ ನೆರೆ ಕಲ್ವುದು (ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು.) ನಿರ್ಣಯಮಾಗಿರು ಆಱರೊಳ್ ಪರಿಣತನಪ್ಪುದು (ರಾಜಯೋಗ್ಯವಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೆಧೀ ಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು.) ಏೞರೊಳಂ ಒಂದದೆ ನಿಲ್ವುದು (ದ್ಯೂತ ಸ್ತ್ರೀ ಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು.) ದುರ್ವಿಮಂತ್ರಮಂ ಪರೆಪ ಟಮಾಳಮಂ (ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು?) ಪಿರಿದನು ಒದಿದೊಡೆ ಅಪ್ಪ ಪದಾರ್ಥಮಾವುದೋ (ಹಿರಿದಾದ ಈ ವಿಚಾರಗಳನ್ನು ಹೇಳಿದರೆ ಅಪ್ಪಾ ಆಗುವ ಪರಮಾರ್ಥವೇನೋ!)
ಪದ್ಯ-೬೬:ಅರ್ಥ: ಒಂದರಿಂದ ಎಂದರೆ ಬುದ್ಧಿಯಿಂದ ಎರಡು ಕಾರ್ಯಾ ಅಕಾರ್ಯಗಳನ್ನು ಮಾಡಬೇಕಾದ್ದು ಮಾಡಬಾರದ್ದು,ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು. ಶತ್ರು ಮಿತ್ರ ಬಾಂಧವ ರೆಂಬ ಮೂವರನ್ನು ಒಲಿಸಿಕೊಳ್ಳಬೇಕು. ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು. ರಾಜಯೋಗ್ಯವಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೆಧೀ ಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು. ದ್ಯೂತ ಸ್ತ್ರೀ ಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು. ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು? ಹಿರಿದಾದ ಈ ವಿಚಾರಗಳನ್ನು ಹೇಳಿದರೆ ಅಪ್ಪಾ ಆಗುವ ಪರಮಾರ್ಥವೇನೋ! (ಈಗ ಹೇಳಿಯೂ ಪ್ರಯೋಜನವಿಲ್ಲ ಎಂದಿರಬಹುದು)
ಕಂ|| ಪೆರ್ಚುಗೆ ಭರತಕುಲಂ ನೆಲೆ
ವೆರ್ಚುಗೆ ನಿಮ್ಮೆರಡು ತಂಡಮೊದವಿದ ನಣ್ಪಿಂ|
ಕರ್ಚುಗೆ ಕಲುಷಂ ನೀಂ ತಲೆ
ಯುರ್ಚದಿರೆನ್ನೆಂದ ನುಡಿಗೆ ಕುರುಕುಳತಿಳಕಾ|| ೬೭||
ಪದ್ಯ-೬೭:ಪದವಿಭಾಗ-ಅರ್ಥ:ಪೆರ್ಚುಗೆ ಭರತಕುಲಂ (ಭರತಕುಲ (ವಂಶ)ಹೆಚ್ಚಲಿ ಅಭಿವೃದ್ಧಿಯಾಗಲಿ;) ನೆಲೆವೆರ್ಚುಗೆ ನಿಮ್ಮ ಎರಡು ತಂಡಂ ( ನಿಮ್ಮ ಎರಡು ಗುಂಪಿನ ನೆಲೆ ಸ್ಥಿತಿ ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ,) ಒದವಿದ ನಣ್ಪಿಂ ಕರ್ಚುಗೆ ಕಲುಷಂ (ಈಗ ಉಂಟಾಗಿರುವ ನಿಮ್ಮ ದ್ವೇಷವು ತೊಳೆದುಹೋಗಲಿ; ) ನೀಂ ತಲೆಯುರ್ಚದಿರ್ (ತಲೆ ಎರಚದಿರು) ಎನ್ನ ಎಂದ ನುಡಿಗೆ ಕುರುಕುಳತಿಳಕಾ (ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ವಿರೋದವಾಗಿ ತಲೆಯಾಡಿಸಬೇಡ.)
ಪದ್ಯ-೬೭:ಅರ್ಥ: ಭರತಕುಲ (ವಂಶ) ಅಭಿವೃದ್ಧಿಯಾಗಲಿ; ನಿಮ್ಮ ಎರಡು ಗುಂಪಿನ ನೆಲೆ ಸ್ಥಿತಿ ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ, ಈಗ ಉಂಟಾಗಿರುವ ನಿಮ್ಮ ದ್ವೇಷವು ತೊಳೆದುಹೋಗಲಿ; ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ವಿರೋದವಾಗಿ ತಲೆಯಾಡಿಸಬೇಡ.
ಉ|| ದೋಷಮುಮೇವಮುಂ ಶಕುನಿಯಿಂ ಯುವರಾಜನಿನಾಯ್ತು ಪೋಯ್ತು ನಿ
ರ್ದೋಷಿಗಳಪ್ಪ ನಿಮ್ಮೆರಡು ತಂಡಮುಮಿಂ ಪುದುವಾಳ್ವುದಂತದೇಂ|
ದೋಷಮೊ ಮೇಣ್ ವೃಕೋದರನಿನಾ ರಣರಂಗದೊಳಾದ ದುಷ್ಟ ದು
ಶ್ಯಾಸನರಕ್ತಮೋಕ್ಷದೊಳೆ ದೋಷವಿಮೋಕ್ಷಮದೇಕೆ ಕೊಂಡಪೈ|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ದೋಷಮುಂ ಏವಮುಂ ಶಕುನಿಯಿಂ ಯುವರಾಜನಿಂ ಆಯ್ತು (ನಿಮ್ಮ ತಪ್ಪೂ ಕೋಪವೂ ಶಕುನಿಯಿಂದಲೂ ದುಶ್ಯಾಸನನಿಂದಲೂ ಆಯಿತು,) ಪೋಯ್ತು (ಹೋಯಿತು;) ನಿರ್ದೋಷಿಗಳಪ್ಪ ನಿಮ್ಮೆರಡು ತಂಡಮುಮಿಂ (ನಿರ್ದೊಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ;) ಪುದುವಾಳ್ವುದು ಅಂತು ಅದೇಂ ದೋಷಮೊ (ಹಾಗೆ ಹೊಂದಿಬಾಳುವುದು ಮಾಡುವುದು ದೋಷವೇ? ಅಲ್ಲ.) ಮೇಣ್ ವೃಕೋದರನಿಂ ಆ ರಣರಂಗದೊಳ್ ಆದ ದುಷ್ಟ ದುಶ್ಯಾಸನರಕ್ತ ಮೋಕ್ಷದೊಳೆ ದೋಷ ವಿಮೋಕ್ಷಂ ಅದೇಕೆ ಕೊಂಡಪೈ(ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನ ಏಕೆ ಹಿಡಿದುಕೊಳ್ಳುವೆ? ಅದನ್ನು ಬಿಡು!)
ಪದ್ಯ-೬೮:ಅರ್ಥ: ನಿಮ್ಮ ತಪ್ಪೂ ಕೋಪವೂ ಶಕುನಿಯಿಂದಲೂ ದುಶ್ಯಾಸನನಿಂದಲೂ ಆಯಿತು, ಹೋಯಿತು; ನಿರ್ದೊಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ; ಹಾಗೆ ಹೊಂದಿಬಾಳುವುದು ಮಾಡುವುದು ದೋಷವೇನಲ್ಲ. ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನ ಏಕೆ ಹಿಡಿದುಕೊಳ್ಳುವೆ? ಅದನ್ನು ಬಿಡು!
ವ|| ಎಂದು ನುಡಿದ ಪಿತಾಮಹನ ನುಡಿಗಳ್ಗೆ ಕುರುರಾಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಪಿತಾಮಹನ ನುಡಿಗಳ್ಗೆ ( ಮಾತುಗಳಿಗೆ) ಕುರುರಾಜನು ಇಂತೆಂದಂ-
ವಚನ:ಅರ್ಥ:ಎಂದು ಹೇಳಿದ ಭೀಷ್ಮನ ಮಾತುಗಳಿಗೆ ದುಯೋಧನನು ಹೀಗೆಂದನು-
ಚಂ|| ಬಗೆ ಪೆಱತುಂಟೆ ವೈರಿನೃಪರಂ ತಱಿದೊಟ್ಟುವುದಲ್ಲದೆಂತುಮಿ||
ಲ್ಲಿಗೆ ಬರವಂ ಭವತ್ಪದಸರೋಜವನಾಂ ಬಲಗೊಂಡು ಮತ್ತಮಾ||
ಜಿಗೆ ನಡೆಯಲ್ಕೆ ಬಂದೆನೆನೆ ದೇವನದೀಸುತನಾತ್ಮಚಿತ್ತದೊಳ್|
ಬಗೆದನಿದೇನಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ:ಬಗೆ (ಯೋಚನೆ) ಪೆಱತುಂಟೆ (ಬೇರೆ ಯೋಚನೆ ತನಗೆ ಉಂಟೇ? ಇಲ್ಲ!) ವೈರಿನೃಪರಂ ತಱಿದು ಒಟ್ಟುವುದು ಅಲ್ಲದೆ (ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆ ತನಗೆ ಉಂಟೇ? ಇಲ್ಲ!) ಎಂತುಂ ಇಲ್ಲಿಗೆ ಬರವಂ ಭವತ್ಪದಸರೋಜವನು ಆಂ ಬಲಗೊಂಡು (ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನ ಯುದ್ಧಕ್ಕೆ ಹೋಗೋಣವೆಂದು -ಬಂದೆ ಎಂದನು) ಮತ್ತಂ ಆಜಿಗೆ ನಡೆಯಲ್ಕೆ ಬಂದೆನು ಎನೆ (ಪುನಃ ಯುದ್ಧಕ್ಕೆ ಹೋಗೋಣವೆಂದು ಬಂದೆ ಎನ್ನಲು,) ದೇವನದೀಸುತನು ಆತ್ಮಚಿತ್ತದೊಳ್-ಬಗೆದನು ಇದೇನ್ ಅಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ (ಭೀಷ್ಮನು ಚಕ್ರವರ್ತಿಯಾದ ದುಯೋಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು.)
ಪದ್ಯ-೬೫:ಅರ್ಥ: ದುರ್ಯೋಧನನು ಮತ್ತೇನಜ್ಜ; ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆ ತನಗೆ ಉಂಟೇ? ಇಲ್ಲ! ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನಃ ಯುದ್ಧಕ್ಕೆ ಹೋಗೋಣವೆಂದು ಬಂದೆ ಎನ್ನಲು, ಭೀಷ್ಮನು ಚಕ್ರವರ್ತಿಯಾದ ದುಯೋಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು.
ವ|| ಎಂದಾದಿ ಮಧ್ಯಾವಸಾನದೊಳೆಲ್ಲಿಯುಮೆೞಲದ ಕಲಿತನದಳವಿಂಗೆ ಮನಂಗೊಂಡು ಮಗನೆ ನಿನಗಪ್ಪೊಡೆ ದೆಯ್ವಂ ಪ್ರತಿಕೂಲಮೆಂತುಂ ಕಾದಿ ಗೆಲಲಾರ್ಪೆಯಲ್ಲೆ ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ ನಿನ್ನೊಂದೆ ಮೆಯ್ಯೊಳಾದ ಕೂರ್ಪು ಪಗೆವರ ದರ್ಪಮನದಿರ್ಪದಲ್ತೆ ನಿನಗಂ ಮೈತ್ರೇಯರ್ ಕೊಟ್ಟೂರುಭಂಗಶಾಪಮನಿವಾರಿತಮೆನ್ನೀ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮುಮನಱಿದು ಬೞಿಯಂ ನಿನ್ನ ನೆಗೞ್ವುದಂ ನೆಗೞ್ವುದೆಂದು-
ವಚನ:ಪದವಿಭಾಗ-ಅರ್ಥ:ಎಂದು ಆದಿ ಮಧ್ಯಾವಸಾನದೊಳ್ (ಮೊದಲಿಂದ ಕೊನೆಯವರೆಗೆ) ಎಲ್ಲಿಯುಮ್ ಅೞಲದ ಕಲಿತನದ ಅಳವಿಂಗೆ (ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ) ಮನಂಗೊಂಡು (ಸಂತೋಷಪಟ್ಟು ,) ಮಗನೆ ನಿನಗೆ ಅಪ್ಪೊಡೆ ದೆಯ್ವಂ ಪ್ರತಿಕೂಲಮ್ ಎಂತುಂ ಕಾದಿ ಗೆಲಲ ಆರ್ಪೆಯಲ್ಲೆ (‘ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ;) ಸೂಜಿಯ ಕೂರ್ಪು ಕುಂಬಳದೊಳ್ ಅಡಂಗುವಂತೆ ನಿನ್ನೊಂದೆ ಮೆಯ್ಯೊಳು ಆದ ಕೂರ್ಪು (ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ) ಪಗೆವರ ದರ್ಪಮನು ಅದಿರ್ಪದಲ್ತೆ (ಶತ್ರುಗಳ ದರ್ಪವನ್ನು ನಡುಗಿಸುವಂತ್ದ್ದಲವೇ?) ನಿನಗಂ ಮೈತ್ರೇಯರ್ ಕೊಟ್ಟ ಊರುಭಂಗ ಶಾಪಮಂ ಅನಿವಾರಿತಮ್ (ನಿನಗೆ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು.) ಎನ್ನ ಈ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು (ನನ್ನ ಪ್ರಾಣವು ಇರುವಾಗಲೇ ಸಂಧಿಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ) ಕಾಲಮಂ ಕಜ್ಜಮುಮನು ಅಱಿದು (ಮುಂದಿನ ಕಾಲವನ್ನೂ ಕಾರ್ಯವನ್ನೂ ತಿಳಿದು) ಬೞಿಯಂ ನಿನ್ನ ನೆಗೞ್ವುದಂ ನೆಗೞ್ವುದೆಂದು (ಬಳಿಕ ನಿನ್ನ ಏಳಿಗೆಗೆ ಮಾಡಬೇಕಾದ್ದನ್ನು ಮಾಡು ಎಂದರು.)-
ವಚನ:ಅರ್ಥ:ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ ಸಂತೋಷಪಟ್ಟು (ದುರ್ಯೋಧನನನ್ನು ಕುರಿತು) ‘ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ; ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ ಶತ್ರುಗಳ ದರ್ಪವನ್ನು ನಡುಗಿಸುವಂತ್ದ್ದಲವೇ? ನಿನಗೆ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು. ನನ್ನ ಪ್ರಾಣವು ಇರುವಾಗಲೇ ಸಂಧಿಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ ಮುಂದಿನ ಕಾಲವನ್ನೂ ಕಾರ್ಯವನ್ನೂ ತಿಳಿದು ಬಳಿಕ ನಿನ್ನ ಏಳಿಗೆಗೆ ಮಾಡಬೇಕಾದ್ದನ್ನು ಮಾಡು ಎಂದರು.
ಚಂ|| ಪರಿಕಿಪುದೊಂದಱಿಂದೆರಡನೋತೊಳಕೊಳ್ವುದು ಮೂಱಱಿಂದೆ ನಾ
ಲ್ಕರಿದಱಿದಯ್ದಱಿಂದೆ ನೆರೆ ಕಲ್ವುದು ನಿರ್ಣಯಮಾಗಿರಾಱರೊಳ್|
ಪರಿಣತನಪ್ಪುದೇೞರೊಳಮೊಂದದೆ ನಿಲ್ವುದು ದುರ್ವಿಮಂತ್ರಮಂ
ಪರೆಪ ಟಮಾಳಮಂ ಪಿರಿದನೋದಿದೊಡಪ್ಪ ಪದಾರ್ಥಮಾವುದೋ|| ೬೬ ||
ಪದ್ಯ-೬೬:ಪದವಿಭಾಗ-ಅರ್ಥ:ಪರಿಕಿಪುದು(ಪರೀಕ್ಷಿಸಬೇಕು.) ಒಂದಱಿಂದೆ ಎರಡನು (ಒಂದರಿಂದ ಎಂದರೆ ಬುದ್ಧಿಯಿಂದ ಎರಡು ಕಾರ್ಯಾ ಅಕಾರ್ಯಗಳನ್ನು ಮಾಡಬೇಕಾದ್ದು ಮಾಡಬಾರದ್ದು,ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು.) ಓತೊಳಕೊಳ್ವುದು ಮೂಱಱಿಂದೆ (ಶತ್ರು ಮಿತ್ರ ಬಾಂಧವ ರೆಂಬ ಮೂವರನ್ನು ಒಲಿಸಿಕೊಳ್ಳಬೇಕು.) ನಾಲ್ಕು ಅರಿದು ಅಱಿದಯ್ದಱಿಂದೆ ನೆರೆ ಕಲ್ವುದು (ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು.) ನಿರ್ಣಯಮಾಗಿರು ಆಱರೊಳ್ ಪರಿಣತನಪ್ಪುದು (ರಾಜಯೋಗ್ಯವಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೆಧೀ ಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು.) ಏೞರೊಳಂ ಒಂದದೆ ನಿಲ್ವುದು (ದ್ಯೂತ ಸ್ತ್ರೀ ಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು.) ದುರ್ವಿಮಂತ್ರಮಂ ಪರೆಪ ಟಮಾಳಮಂ (ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು?) ಪಿರಿದನು ಒದಿದೊಡೆ ಅಪ್ಪ ಪದಾರ್ಥಮಾವುದೋ (ಹಿರಿದಾದ ಈ ವಿಚಾರಗಳನ್ನು ಹೇಳಿದರೆ ಅಪ್ಪಾ ಆಗುವ ಪರಮಾರ್ಥವೇನೋ!)
ಪದ್ಯ-೬೬:ಅರ್ಥ: ಒಂದರಿಂದ ಎಂದರೆ ಬುದ್ಧಿಯಿಂದ ಎರಡು ಕಾರ್ಯಾ ಅಕಾರ್ಯಗಳನ್ನು ಮಾಡಬೇಕಾದ್ದು ಮಾಡಬಾರದ್ದು,ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು. ಶತ್ರು ಮಿತ್ರ ಬಾಂಧವ ರೆಂಬ ಮೂವರನ್ನು ಒಲಿಸಿಕೊಳ್ಳಬೇಕು. ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು. ರಾಜಯೋಗ್ಯವಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೆಧೀ ಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು. ದ್ಯೂತ ಸ್ತ್ರೀ ಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು. ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು? ಹಿರಿದಾದ ಈ ವಿಚಾರಗಳನ್ನು ಹೇಳಿದರೆ ಅಪ್ಪಾ ಆಗುವ ಪರಮಾರ್ಥವೇನೋ! (ಈಗ ಹೇಳಿಯೂ ಪ್ರಯೋಜನವಿಲ್ಲ ಎಂದಿರಬಹುದು)
ಕಂ|| ಪೆರ್ಚುಗೆ ಭರತಕುಲಂ ನೆಲೆ
ವೆರ್ಚುಗೆ ನಿಮ್ಮೆರಡು ತಂಡಮೊದವಿದ ನಣ್ಪಿಂ|
ಕರ್ಚುಗೆ ಕಲುಷಂ ನೀಂ ತಲೆ
ಯುರ್ಚದಿರೆನ್ನೆಂದ ನುಡಿಗೆ ಕುರುಕುಳತಿಳಕಾ|| ೬೭||
ಪದ್ಯ-೬೭:ಪದವಿಭಾಗ-ಅರ್ಥ:ಪೆರ್ಚುಗೆ ಭರತಕುಲಂ (ಭರತಕುಲ (ವಂಶ)ಹೆಚ್ಚಲಿ ಅಭಿವೃದ್ಧಿಯಾಗಲಿ;) ನೆಲೆವೆರ್ಚುಗೆ ನಿಮ್ಮ ಎರಡು ತಂಡಂ ( ನಿಮ್ಮ ಎರಡು ಗುಂಪಿನ ನೆಲೆ ಸ್ಥಿತಿ ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ,) ಒದವಿದ ನಣ್ಪಿಂ ಕರ್ಚುಗೆ ಕಲುಷಂ (ಈಗ ಉಂಟಾಗಿರುವ ನಿಮ್ಮ ದ್ವೇಷವು ತೊಳೆದುಹೋಗಲಿ; ) ನೀಂ ತಲೆಯುರ್ಚದಿರ್ (ತಲೆ ಎರಚದಿರು) ಎನ್ನ ಎಂದ ನುಡಿಗೆ ಕುರುಕುಳತಿಳಕಾ (ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ವಿರೋದವಾಗಿ ತಲೆಯಾಡಿಸಬೇಡ.)
ಪದ್ಯ-೬೭:ಅರ್ಥ: ಭರತಕುಲ (ವಂಶ) ಅಭಿವೃದ್ಧಿಯಾಗಲಿ; ನಿಮ್ಮ ಎರಡು ಗುಂಪಿನ ನೆಲೆ ಸ್ಥಿತಿ ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ, ಈಗ ಉಂಟಾಗಿರುವ ನಿಮ್ಮ ದ್ವೇಷವು ತೊಳೆದುಹೋಗಲಿ; ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ವಿರೋದವಾಗಿ ತಲೆಯಾಡಿಸಬೇಡ.
ಉ|| ದೋಷಮುಮೇವಮುಂ ಶಕುನಿಯಿಂ ಯುವರಾಜನಿನಾಯ್ತು ಪೋಯ್ತು ನಿ
ರ್ದೋಷಿಗಳಪ್ಪ ನಿಮ್ಮೆರಡು ತಂಡಮುಮಿಂ ಪುದುವಾಳ್ವುದಂತದೇಂ|
ದೋಷಮೊ ಮೇಣ್ ವೃಕೋದರನಿನಾ ರಣರಂಗದೊಳಾದ ದುಷ್ಟ ದು
ಶ್ಯಾಸನರಕ್ತಮೋಕ್ಷದೊಳೆ ದೋಷವಿಮೋಕ್ಷಮದೇಕೆ ಕೊಂಡಪೈ|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ದೋಷಮುಂ ಏವಮುಂ ಶಕುನಿಯಿಂ ಯುವರಾಜನಿಂ ಆಯ್ತು (ನಿಮ್ಮ ತಪ್ಪೂ ಕೋಪವೂ ಶಕುನಿಯಿಂದಲೂ ದುಶ್ಯಾಸನನಿಂದಲೂ ಆಯಿತು,) ಪೋಯ್ತು (ಹೋಯಿತು;) ನಿರ್ದೋಷಿಗಳಪ್ಪ ನಿಮ್ಮೆರಡು ತಂಡಮುಮಿಂ (ನಿರ್ದೊಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ;) ಪುದುವಾಳ್ವುದು ಅಂತು ಅದೇಂ ದೋಷಮೊ (ಹಾಗೆ ಹೊಂದಿಬಾಳುವುದು ಮಾಡುವುದು ದೋಷವೇ? ಅಲ್ಲ.) ಮೇಣ್ ವೃಕೋದರನಿಂ ಆ ರಣರಂಗದೊಳ್ ಆದ ದುಷ್ಟ ದುಶ್ಯಾಸನರಕ್ತ ಮೋಕ್ಷದೊಳೆ ದೋಷ ವಿಮೋಕ್ಷಂ ಅದೇಕೆ ಕೊಂಡಪೈ(ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನ ಏಕೆ ಹಿಡಿದುಕೊಳ್ಳುವೆ? ಅದನ್ನು ಬಿಡು!)
ಪದ್ಯ-೬೮:ಅರ್ಥ: ನಿಮ್ಮ ತಪ್ಪೂ ಕೋಪವೂ ಶಕುನಿಯಿಂದಲೂ ದುಶ್ಯಾಸನನಿಂದಲೂ ಆಯಿತು, ಹೋಯಿತು; ನಿರ್ದೊಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ; ಹಾಗೆ ಹೊಂದಿಬಾಳುವುದು ಮಾಡುವುದು ದೋಷವೇನಲ್ಲ. ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನ ಏಕೆ ಹಿಡಿದುಕೊಳ್ಳುವೆ? ಅದನ್ನು ಬಿಡು!

ದುರ್ಯೋಧನನು ತನ್ನವರೆಲ್ಲಾ ಸತ್ತಮೇಲೆ ಭೂಮಿ ಬೇಡ- ಯುದ್ಧವನ್ನೇ ಮಾಡುವೆನೆಂದು ಭೀಷ್ಮರಿಗೆ ಹೇಳಿದುದು ಸಂಪಾದಿಸಿ

ವ|| ಎಂದು ನುಡಿದ ಪಿತಾಮಹನ ನುಡಿಗಳ್ಗೆ ಕುರುರಾಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಪಿತಾಮಹನ ನುಡಿಗಳ್ಗೆ ( ಮಾತುಗಳಿಗೆ) ಕುರುರಾಜನು ಇಂತೆಂದಂ-
ವಚನ:ಅರ್ಥ:ಎಂದು ಹೇಳಿದ ಭೀಷ್ಮನ ಮಾತುಗಳಿಗೆ ದುಯೋಧನನು ಹೀಗೆಂದನು-
ಮ|| ಶರಶಯ್ಯಾಗ್ರದೊಳಿಂತು ನೀಮಿರೆ ಘಟಪ್ರೋದ್ಭೂತನಂತಾಗೆ ವಾ
ಸರನಾಥಾತ್ಮಜನಂತು ಸಾಯೆ ರಣದೊಳ್ ದುಶ್ಯಾಸನಂ ತದ್ವ ಕೋ|
ದರನಿಂದಂತೞಿದೞ್ಗೆ ಸೈರಿಸಿಯುಮಾಂ ಸಂಧಾನಮಂ ವೈರಿ ಭೂಪ
ರೊಳಿಂ ಸಂಧಿಸಿ ಪೇೞಿಮಾರ್ಗೆ ಮೆರೆವೆಂ ಸಂಪತ್ತುಮಂ ಶ್ರೀಯುಮಂ|| ೬೯ ||
ಪದ್ಯ-೬೯:ಪದವಿಭಾಗ-ಅರ್ಥ:ಶರಶಯ್ಯಾಗ್ರದೊಳು ಇಂತು ನೀಂ ಇರೆ, ಘಟಪ್ರೋದ್ಭೂತನು ಅಂತಾಗೆ (ಬಾಣದ ಹಾಸಿಗೆಯ ತುದಿಯಲ್ಲಿ ನೀವು ಹೀಗಿರುವಾಗ, ದ್ರೋಣಾಚಾರ್ಯರು ಹಾಗೆ ಆಗಿರುವಾಗ,) ವಾಸರನಾಥಾತ್ಮಜನು ಅಂತು ಸಾಯೆ (ಕರ್ಣನು ಹಾಗೆ ಸತ್ತಿರಲು) ರಣದೊಳ್ ದುಶ್ಯಾಸನಂ ತದ್ವ ಕೋದರನಿಂದ ಅಂತು ಅೞಿದು ಅೞ್ಗೆ (ಯುದ್ಧದಲ್ಲಿ ದುಶ್ಯಾಸನನು ಭೀಮನಿಂದ ಹಾಗೆ ಸತ್ತು ನಾಶವಾಗಿರುವಾಗ -ಇವೆಲ್ಲವನ್ನೂ)) ಸೈರಿಸಿಯುಂ ಆಂ ಸಂಧಾನಮಂ ವೈರಿ ಭೂಪರೊಳಿಂ ಸಂಧಿಸಿ (ನಾನು ಸಹಿಸಿಕೊಂಡು ಶತ್ರುರಾಜರಲ್ಲಿ ಸಂಧಿಯನ್ನು ವೈರಿಗಳಲ್ಲಿ ಸಂಧಿಮಾಡಿಕೊಂಡು) ಪೇೞಿಂ ಆರ್ಗೆ ಮೆರೆವೆಂ ಸಂಪತ್ತುಮಂ ಶ್ರೀಯುಮಂ (ಯಾರಿಗೆ ನನ್ನ ಐಶ್ವರ್ಯವನ್ನೂ ವೈಭವವನ್ನೂ ಪ್ರದರ್ಶಿಸಬೇಕು, ಹೇಳಿ.)
ಪದ್ಯ-೬೯:ಅರ್ಥ: ಬಾಣದ ಹಾಸಿಗೆಯ ತುದಿಯಲ್ಲಿ ನೀವು ಹೀಗಿರುವಾಗ, ದ್ರೋಣಾಚಾರ್ಯರು ಹಾಗೆ ಆಗಿರುವಾಗ, ಕರ್ಣನು ಹಾಗೆ ಸತ್ತಿರಲು, ಯುದ್ಧದಲ್ಲಿ ದುಶ್ಯಾಸನನು ಭೀಮನಿಂದ ಹಾಗೆ ಸತ್ತು ನಾಶವಾಗಿರುವಾಗ (ಇವೆಲ್ಲವನ್ನೂ) ನಾನು ಸಹಿಸಿಕೊಂಡು ಶತ್ರುರಾಜರಲ್ಲಿ ಸಂಧಿಯನ್ನು ವೈರಿಗಳಲ್ಲಿ ಸಂಧಿಮಾಡಿಕೊಂಡು ಯಾರಿಗೆ ನನ್ನ ಐಶ್ವರ್ಯವನ್ನೂ ವೈಭವವನ್ನೂ ಪ್ರದರ್ಶಿಸಬೇಕು.
ಕಂ|| ಬಿಡಿಮೆನ್ನ ನುಡಿಗೆ ಬೀೞ್ಕೊಳೆ
ನುಡಿಯದಿರಿಂ ಪೆಱತನಜ್ಜ ಮುಂ ನುಡಿದೆರಡಂ|
ನುಡಿವೆನೆ ಚಲಮಂ ಬಲ್ವಿಡಿ
ವಿಡಿದೆಂ ತನ್ನಪ್ಪುದಕ್ಕೆ ಸಂಗರ ಧರೆಯೊಳ್|| ೭೦ ||
ಪದ್ಯ-೦೦:ಪದವಿಭಾಗ-ಅರ್ಥ:ಬಿಡಿಂ ಎನ್ನ ನುಡಿಗೆ ಬೀೞ್ಕೊಳೆ ನುಡಿಯದಿರಿಂ ಪೆಱತನು ಅಜ್ಜ (ನನ್ನ ಮಾತಿಗೆ ನನ್ನನ್ನು ಬಿಡಿ. ಅಜ್ಜ, ತಮ್ಮನ್ನು ಬೀಲ್ಕೊಡಲು (ಅಪ್ಪಣೆಯನ್ನು ಪಡೆದು ಹೋಗುವುದಕ್ಕಾಗಿ) ಬಂದ ನನಗೆ ಬೇರೆ ಯಾವುದನ್ನೂ ಹೇಳಬೇಡಿ.) ಮುಂ ನುಡಿದು ಎರಡಂ ನುಡಿವೆನೆ (ಮೋದಲು ಒಂದು ರೀತಿ ಪುನ ಬೇರೆ ರೀತಿಯಲ್ಲಿ ಹೇಳುತ್ತೇನೆಯೇ?) ಚಲಮಂ ಬಲ್ವಿಡಿವಿಡಿದೆಂ (ಛಲವನ್ನು ಬಿಗಿಯಾಗಿ ಹಿಡಿದಿದ್ದೇನೆ.) ತನ್ನಪ್ಪುದಕ್ಕೆ ಸಂಗರ ಧರೆಯೊಳ್ (ಯುದ್ಧದಲ್ಲಿ ತಾನಾದಂತಾಗಲಿ’ ಎಂದನು.)
ಪದ್ಯ-೦೦:ಅರ್ಥ: ನನ್ನ ಮಾತಿಗೆ ನನ್ನನ್ನು ಬಿಡಿ. ಅಜ್ಜ, ತಮ್ಮನ್ನು ಬೀಳ್ಕೊಡಲು (ಅಪ್ಪಣೆಯನ್ನು ಪಡೆದು ಹೋಗುವುದಕ್ಕಾಗಿ) ಬಂದ ನನಗೆ ಬೇರೆ ಯಾವುದನ್ನೂ ಹೇಳಬೇಡಿ. ಮೋದಲು ಒಂದು ರೀತಿ ಪುನ ಬೇರೆ ರೀತಿಯಲ್ಲಿ ಹೇಳುತ್ತೇನೆಯೇ? ಛಲವನ್ನು ಬಿಗಿಯಾಗಿ ಹಿಡಿದಿದ್ದೇನೆ. ಯುದ್ಧದಲ್ಲಿ ತಾನಾದುದಾಗಲಿ’ ಎಂದನು.
ವ|| ಎಂಬುದುಂ ನೀನುಮೆಂತುಂ ಕಾದಿಯಲ್ಲದಿರೆಯಪ್ಪೊಡಿಂದಿನೊಂದಿವಸಮನೆನ್ನ ಪೇೞ್ವ ಜಳಮಂತ್ರೋಪದೇಶಮಂ ಕೆಯ್ಕೊಂಡು ಕುರುಕ್ಷೇತ್ರದುತ್ತರದಿಗ್ಧಾಗದ ವೈಶಂಪಾಯನ ಸರೋವರದೊಳ್ ಮುೞುಗಿ ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತಿರ್ದು ನಿನ್ನವಸರಕ್ಕೆ ಬಂದು ಕೂಡುವ ಬಲದೇವನುಮಂ ನಿನ್ನಿರ್ದೆಡೆಯನಱಿಯದಱಸುವಶ್ವತ್ಥಾಮ ಕೃಪ ಕೃತವರ್ಮರುಮಂ ಕೂಡಿಕೊಂಡು ಪಗೆವರಂ ನಾಳೆ ಕಾದಿ ಗೆಲ್ವುದೆಂದು ಹಿತೋಪದೇಶಂಬೆರಸು ಜಳಮಂತ್ರೋಪದೇಶಮಂ ಕಿವಿಯೊಳ್ ಪರ್ಚಿ ಪೇೞ್ದು ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಕೊಳಿಸುವಂತಾನಾಗತಬಾಧಾಪ್ರತಿಷೇಧಂ ಮಾಡುವಂತಟ್ಟಿ ಸಕಳ ಕುರುಕುಳಾವಲಂಬನಕಲ್ಪವೃಕ್ಷಮಂ ಪರಸಿ ಪೋಗಲ್ವೇೞೆ ದೇವನದೀಪ್ರಿಯಪುತ್ರನಂ ಧೃತರಾಷ್ಟ್ರಪುತ್ರಂ ಬೀೞ್ಕೊಂಡು ಕನಕಪತ್ರಲತಾಲಾಂಛಿತಗದಾದಂಡಮಂ ಕೊಂಡೊರ್ವನೆ ವೈಶಂಪಾಯನಸರೋವರದ ಬಟ್ಟೆಯಂ ನಡೆಗೊಂಡು-
ವಚನ:ಪದವಿಭಾಗ-ಅರ್ಥ:ಎಂಬುದುಂ ನೀನುಂ ಎಂತುಂ ಕಾದಿಯಲ್ಲದೆ ಇರೆಯಪ್ಪೊಡೆ ಇಂದಿನ ಒಂದಿವಸಮಂ (ನೀನು ಹೇಗೂ ಯುದ್ಧಮಾಡದೇ ಇರುವುದಿಲ್ಲವಾದರೆ ಈ ಒಂದು ದಿವಸವನ್ನು ) ಎನ್ನ ಪೇೞ್ವ ಜಳಮಂತ್ರೋಪದೇಶಮಂ ಕೆಯ್ಕೊಂಡು (ನಾನು ಹೇಳುವ ಜಲಮಂತ್ರೋಪದೇಶವನ್ನು ಅಂಗೀಕರಿಸಿ) ಕುರುಕ್ಷೇತ್ರದ ಉತ್ತರ ದಿಗ್ಧಾಗದ ವೈಶಂಪಾಯನ ಸರೋವರದೊಳ್ (ಕುರುಕ್ಷೇತ್ರದ ಉತ್ತರ ದಿಗ್ಭಾಗದಲ್ಲಿರುವ ವೈಶಂಪಾಯನಸರೋವರದಲ್ಲಿ) ಮುೞುಗಿ ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತೆ ಇರ್ದು (ಮುಳುಗಿದ್ದು ಕಾಲಾಗ್ನಿರುದ್ರನು ಪಾತಾಳಲೋಕದಲ್ಲಡಗಿರುವ ಹಾಗೆ ಇದ್ದು,) ನಿನ್ನ ಅವಸರಕ್ಕೆ ಬಂದು ಕೂಡುವ ಬಲದೇವನುಮಂ (ನಿನ್ನ ಸಹಾಯಕ್ಕೆ ಬಂದು ಸೇರುವ ಬಲರಾಮನನ್ನೂ) ನಿನ್ನ ಎರ್ದೆಡೆಯನು ಅಱಿಯದ ಱಸುವಶ್ವತ್ಥಾಮ ಕೃಪ ಕೃತವರ್ಮರುಮಂ (ನೀನು ಇರುವ ಸ್ಥಳವನ್ನು ತಿಳಿಯದೇ ಹುಡುಕುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರನ್ನೂ) ಕೂಡಿಕೊಂಡು ಪಗೆವರಂ ನಾಳೆ ಕಾದಿ ಗೆಲ್ವುದೆಂದು (ಶತ್ರುಗಳನ್ನು ನಾಳೆ ಯುದ್ಧಮಾಡಿ ಜಯಿಸು” ಎಂದು) ಹಿತೋಪದೇಶಂ ಬೆರಸು ಜಳಮಂತ್ರೋಪದೇಶಮಂ ಕಿವಿಯೊಳ್ ಪರ್ಚಿ ಪೇೞ್ದು (ಈ ಹಿತೋಪದೇಶದಿಂದ ಕೂಡಿದ ಜಳಮಂತ್ರೋದೇಶವನ್ನು ದುಯೋಧನನ ಕಿವಿಯಲ್ಲಿ ರಹಸ್ಯವಾಗಿ ಉಪದೇಶಿಸಿದನು. ಹೇಳಿ-) ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಕೊಳಿಸುವಂತೆ ಆನಾಗತಬಾಧಾ ಪ್ರತಿಷೇಧಂ ಮಾಡುವಂತೆ ಅಟ್ಟಿ (ಸಂಜಯನನ್ನು ಧೃತರಾಷ್ಟ್ರನ ಬಳಿಗೆ ಸಂಧಾನದ ಮಾತನ್ನು ಸಿದ್ಧಗೊಳಿಸುವುದಕ್ಕಾಗಿ ಕಳುಹಿಸಿದನು.) ಸಕಳ ಕುರುಕುಳಾವಲಂಬನ ಕಲ್ಪವೃಕ್ಷಮಂ ಪರಸಿ ಪೋಗಲ್ ವೇೞೆ (ಮುಂದೆ ಬರುವ ತೊಂದರೆಗೆ ಪ್ರತೀಕಾರವನ್ನು ಮಾಡುವಂತೆ ಹೇಳಿ ಸಕಲ ಕುರುವಂಶದ ಆಶ್ರಯಕ್ಕೆ ಕಲ್ಪವೃಕ್ಷದ ಹಾಗಿರುವ ದುರ್ಯೋರ್ಧನನ್ನು ಆಶೀರ್ವದಿಸಿ ಬೀಳ್ಕೊಟ್ಟನು.) ದೇವನದೀಪ್ರಿಯಪುತ್ರನಂ ಧೃತರಾಷ್ಟ್ರಪುತ್ರಂ ಬೀೞ್ಕೊಂಡು (ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಬೀಳ್ಕೊಟ್ಟು-) ಕನಕಪತ್ರಲತಾಲಾಂಛಿತಗದಾದಂಡಮಂ ಕೊಂಡು ಒರ್ವನೆ (ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಹೊರಟು ಕನಕಪತ್ರಲತೆಯಿಂದ ಗುರುತುಮಾಡಲ್ಪಟ್ಟ ಗದಾದಂಡವನ್ನು ತೆಗೆದುಕೊಂಡು ಏಕಾಕಿಯಾಗಿ) ವೈಶಂಪಾಯನಸರೋವರದ ಬಟ್ಟೆಯಂ ನಡೆಗೊಂಡು (ಏಕಾಕಿಯಾಗಿ ವೈಶಂಪಾಯನಸರೋವರದ ದಾರಯನ್ನು ನಡೆದು- -ಹೋದನು.)-
ವಚನ:ಅರ್ಥ:“ನೀನು ಹೇಗೂ ಯುದ್ಧಮಾಡದೇ ಇರುವುದಿಲ್ಲವಾದರೆ ಈ ಒಂದು ದಿವಸವನ್ನು ನಾನು ಹೇಳುವ ಜಲಮಂತ್ರೋಪದೇಶವನ್ನು ಅಂಗೀಕರಿಸಿ ಕುರುಕ್ಷೇತ್ರದ ಉತ್ತರ ದಿಗ್ಭಾಗದಲ್ಲಿರುವ ವೈಶಂಪಾಯನಸರೋವರದಲ್ಲಿ ಮುಳುಗಿದ್ದು ಕಾಲಾಗ್ನಿರುದ್ರನು ಪಾತಾಳಲೋಕದಲ್ಲಡಗಿರುವ ಹಾಗೆ ಇರು. ನಿನ್ನ ಸಹಾಯಕ್ಕೆ ಬಂದು ಸೇರುವ ಬಲರಾಮನನ್ನು, ನೀನು ಇರುವ ಸ್ಥಳವನ್ನು ತಿಳಿಯದೇ ಹುಡುಕುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರನ್ನೂ ಕೂಡಿಕೊಂಡು ಶತ್ರುಗಳನ್ನು ನಾಳೆ ಯುದ್ಧಮಾಡಿ ಜಯಿಸು”, ಎಂದು ಭೀಷ್ಮನು ಈ ಹಿತೋಪದೇಶದಿಂದ ಕೂಡಿದ ಜಳಮಂತ್ರೋದೇಶವನ್ನು ದುಯೋಧನನ ಕಿವಿಯಲ್ಲಿ ರಹಸ್ಯವಾಗಿ ಉಪದೇಶಿಸಿದನು. ಸಂಜಯನನ್ನು ಧೃತರಾಷ್ಟ್ರನ ಬಳಿಗೆ ಸಂಧಾನದ ಮಾತನ್ನು ಸಿದ್ಧಗೊಳಿಸುವುದಕ್ಕಾಗಿ ಕಳುಹಿಸಿದನು. ಮುಂದೆ ಬರುವ ತೊಂದರೆಗೆ ಪ್ರತೀಕಾರವನ್ನು ಮಾಡುವಂತೆ ಹೇಳಿ ಸಕಲ ಕುರುವಂಶದ ಆಶ್ರಯಕ್ಕೆ ಕಲ್ಪವೃಕ್ಷದ ಹಾಗಿರುವ ದುರ್ಯೋರ್ಧನನ್ನು ಆಶೀರ್ವದಿಸಿ ಬೀಳ್ಕೊಟ್ಟನು. ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಹೊರಟು ಕನಕಪತ್ರಲತೆಯಿಂದ ಗುರುತುಮಾಡಲ್ಪಟ್ಟ ಗದಾದಂಡವನ್ನು ತೆಗೆದುಕೊಂಡು ಏಕಾಕಿಯಾಗಿ ವೈಶಂಪಾಯನಸರೋವರದ ದಾರಯನ್ನು ನಡೆದುಹೋದನು.
ಶಾ|| ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ|| ೭೧| 71||
ಪದ್ಯ-೦೦:ಪದವಿಭಾಗ-ಅರ್ಥ:ಕ್ರಂದತ್ ಸ್ಯಂದನಜಾತ ನಿರ್ಗತ ಶಿಖಿಜ್ವಾಳಾ ಸಹಸ್ರಂಗಳು (ಶಬ್ದಮಾಡುತ್ತಿರುವ- ರಥದಿಂದ ಹುಟ್ಟಿ- ಹೊರಹೊರಟ- ಸಾವಿರಾರು ಅಗ್ನಿಜ್ವಾಲೆಗಳು,) ಆಟಂದು ಅತ್ತಂ ಕವಿದು ಅೞ್ವೆ (ಮೇಲೆ ಹಾಯ್ದು ಎಲ್ಲಕಡೆಯೂ ಸುಡುವ) ಬೇವ ಶವಸಂಘಾತಂಗಳಂ (ಬೇಯುತ್ತಿರುವ ಹೆಣಗಳ ರಾಶಿಗಳನ್ನು) ಚಕ್ಕಮೊಕ್ಕೆಂದಾಗಳ್ ಕಡಿದು ಉಗ್ರಭೂತ ನಿಕರಂ (ಆಗ ಭಯಂಕರವಾದ ಪಿಶಾಚಿಗಳ ಸಮೂಹಗಳು) ಕೆಯ್ ಬೇಯೆ ಬಾಯ್ ಬೇಯೆ ತಿಂಬ ಅಂದಂ (ಕೈ ಸುಡುತ್ತಿರಲು ಬಾಯ್ಗಳು ಬೇಯುತ್ತಿರಲು, ತಿನ್ನುವ ರೀತಿಯನ್ನು) ತನ್ನ ಮನಕ್ಕೆ ಅಗುರ್ವಿಸುವಿನಂ ದುರ್ಯೋಧನಂ ನೋಡಿದಂ. (ತನ್ನ ಮನಸ್ಸಿಗೆ ವಿಶೇಷ ಭಯವುಂಟಾಗುತ್ತಿರಲು ದುರ್ಯೋಧನನು ನೋಡಿದನು.)
ಪದ್ಯ-೦೦:ಅರ್ಥ: ಶಬ್ದಮಾಡುತ್ತಿರುವ- ರಥದಿಂದ ಹುಟ್ಟಿ- ಹೊರಹೊರಟ- ಸಾವಿರಾರು ಅಗ್ನಿಜ್ವಾಲೆಗಳು, ಮೇಲೆ ಹಾಯ್ದು ಎಲ್ಲಕಡೆಯೂ ಸುಡುತ್ತಿರಲು ಬೇಯುತ್ತಿರುವ ಹೆಣಗಳ ರಾಶಿಗಳನ್ನು ಆಗ ಭಯಂಕರವಾದ ಪಿಶಾಚಿಗಳ ಸಮೂಹಗಳು ಚಕ್ಕುಮೊಕ್ಕೆಂದು ಕತ್ತರಿಸಿ, ಕೈ ಸುಡುತ್ತಿರಲು ಬಾಯ್ಗಳು ಬೇಯುತ್ತಿರಲು, ತಿನ್ನುವ ರೀತಿಯನ್ನು ತನ್ನ ಮನಸ್ಸಿಗೆ ವಿಶೇಷ ಭಯವುಂಟಾಗುತ್ತಿರಲು ದುರ್ಯೋಧನನು ನೋಡಿದನು.
ವ|| ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞಿದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ ಕೋಳ್ದಾಂಟಿನೊಳ್ ಕೊಳುಗುಳವಂ ಕೞಿದುಪೋಗಿ ವಿಳಯಕಾಳ ವಿಘಟ್ಟಿತಾಷ್ಟದಿಗ್ಭಾಗಸಂಬಂಧನಗಗನತಳಮೆ ಧರಾತಳಕ್ಕೆ ಪಱಿದು ಬಿೞ್ದಂತಾನುಮಾದಿವರಾಹಂ ಸಮುದ್ರಮುದ್ರಿತಧರಾಮಂಡಳಮಂ ರಸಾತಳದಿಂದೆತ್ತಿ ಬಂದಂದು ನಭೋಮಂಡಳಸ್ಥಾನಮೆ ಸಲಿಲಪರಿಪೂರಿತಮಾದಂತಾನುಮಾಗಿ-
ವಚನ:ಪದವಿಭಾಗ-ಅರ್ಥ:ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ (ಹೊಳೆಯುತ್ತಿರುವ ಕೆಂಡದ ಮೇಲೆ ಹಳೆಯ ಬೇವಿನೆಣ್ಣೆಯಲ್ಲಿ) ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳು ಉರ್ವ ಕೆಂಡಂಗಳೊಳ್ ( ನೆನೆಯಿಕ್ಕಿದ ಬೆಳ್ಳುಳ್ಳಿಯ ವಾಸನೆಯ ಹಾಗೆ ಗುಳ್ಳೆನರಿಯ ಬಾಯಲ್ಲಿ ಸುಡುತ್ತ/ಉರಿಯುವ ಕೆಂಡಗಳಲ್ಲಿ ) ಸುೞಿದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ (ಕಾಣಿಸಿಕೊಂಡು ಬೇಯುತ್ತಿರುವ ಹೆಣಗಳ ದುರ್ವಾಸನೆಯನ್ನು ಸಹಿಸಲಾರದೆ) ಕೋಳ್ದಾಂಟಿನೊಳ್ ಕೊಳುಗುಳವಂ ಕೞೆದು ಪೋಗಿ (ಕೋಲು ದಾಟು ಹೆಜ್ಜೆ; ದೂರ ದೂರ ಹೆಜ್ಜೆ ಇಟ್ಟು ದಾಟುತ್ತಾ ಯುದ್ಧಭೂಮಿಯನ್ನು ಕಳೆದು/ಬಿಟ್ಟುಮುಂದೆ ಹೋದನು.) ವಿಳಯಕಾಳ ವಿಘಟ್ಟಿತ ಅಷ್ಟದಿಗ್ಭಾಗ ಸಂಬಂಧನ ಗಗನತಳಮೆ ಧರಾತಳಕ್ಕೆ ಪಱಿದು ಬಿೞ್ದಂತಾನುಂ (ಪ್ರಳಯಕಾಲದಲ್ಲಿ ಅಪ್ಪಳಿಸಲ್ಪಟ್ಟ ಪೆಟ್ಟಿನಿಂದ ಎಂಟು ದಿಗ್ದೇಶಗಳ ಕೀಲುಗಳೂ ಕಳಚಿ ಹೋಗಲು ಆಕಾಶವೇ ನೆಲಕ್ಕೆ ಬಿದ್ದಹೋಗಿದೆಯೊ ಎಂಬಂತೆಯೂ,) ಆದಿವರಾಹಂ ಸಮುದ್ರ ಮುದ್ರಿತ ಧರಾಮಂಡಳಮಂ (ಆದಿವರಾಹನಾದ ವಿಷ್ಣುವು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು) ರಸಾತಳದಿಂದೆ ಎತ್ತಿ ಬಂದಂದು ನಭೋಮಂಡಳ ಸ್ಥಾನಮೆ ಸಲಿಲ ಪರಿಪೂರಿತಂ ಅದಂತಾನುಂ ಆಗಿ (ಪಾತಾಳ ಲೋಕದಿಂದ ಎತ್ತಿಕೊಂಡುಬಂದ ದಿನ ಆಕಾಶ ಪ್ರದೇಶವೇ ನೀರಿನಿಂದ ತುಂಬಿಹೋಯಿತೋ ಎಂಬಂತೆ ಆಗಿರುವ, -ಸರೋವರವನ್ನು ಕಂಡನು.)-
ವಚನ:ಅರ್ಥ:ನೋಡಿ- ಹೊಳೆಯುತ್ತಿರುವ ಕೆಂಡದ ಮೇಲೆ ಹಳೆಯ ಬೇವಿನೆಣ್ಣೆಯಲ್ಲಿ ನೆನೆಯಿಕ್ಕಿದ ಬೆಳ್ಳುಳ್ಳಿಯ ವಾಸನೆಯ ಹಾಗೆ ಗುಳ್ಳೆನರಿಯ ಬಾಯಲ್ಲಿ ಸುಡುತ್ತ/ಉರಿಯುವ ಕೆಂಡಗಳಲ್ಲಿ ಕಾಣಿಸಿ ಕೊಂಡುಬೇಯುತ್ತಿರುವ ಹೆಣಗಳ ದುರ್ವಾಸನೆಯನ್ನು ಸಹಿಸಲಾರದೆ ದೂರ ದೂರ ಹೆಜ್ಜೆ ಇಟ್ಟು ದಾಟುತ್ತಾ ಯುದ್ಧಭೂಮಿಯನ್ನು ಕಳೆದು ಹೋದನು. ಪ್ರಳಯಕಾಲದಲ್ಲಿ ಅಪ್ಪಳಿಸಲ್ಪಟ್ಟ ಪೆಟ್ಟಿನಿಂದ ಎಂಟು ದಿಗ್ದೇಶಗಳ ಕೀಲುಗಳೂ ಕಳಚಿ ಹೋಗಲು ಆಕಾಶವೇ ನೆಲಕ್ಕೆ ಬಿದ್ದಹೋಗಿದೆಯೊ ಎಂಬಂತೆಯೂ, ಆದಿವರಾಹನಾದ ವಿಷ್ಣುವು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ಪಾತಾಳ ಲೋಕದಿಂದ ಎತ್ತಿಕೊಂಡುಬಂದ ದಿನ ಆಕಾಶ ಪ್ರದೇಶವೇ ನೀರಿನಿಂದ ತುಂಬಿಹೋಯಿತೋ ಎಂಬಂತೆ ಆಗಿರುವ, -ಸರೋವರವನ್ನು ಕಂಡನು.

ದುರ್ಯೋಧನನಿಂದ ವೈಶಂಪಾಯನ ಸರೋವರ ಪ್ರವೇಶ ಸಂಪಾದಿಸಿ

ಮ|| ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ|
ನೆ ದಲೆಂಬಂತಿರೆ ಕಾಚ ಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ| ೭೨ ||
ಪದ್ಯ-೭೨:ಪದವಿಭಾಗ-ಅರ್ಥ: ಇದು ಪಾತಾಳಬಿಲಕ್ಕೆ ಬಾಗಿಲು ಇದು ದಲ್ ಘೋರಾಂಧಕಾರಕ್ಕೆ ಮಾಡಿದ ಕೂಪಂ (ಇದು ಪಾತಾಳವೆಂಬ ಬಿಲದ ಬಾಗಿಲು, ಇದು ನಿಜವಾಗಿಯೂ ಭಯಂಕರವಾದ ಕತ್ತಲೆಯಿಂದ ತುಂಬಿದ ಬಾವಿ,) ಪೆಱತು ಅಲ್ತಿದು ಉಗ್ರಲಯಕಾಳಾಂಭೋಧರಚ್ಛಾಯೆ ತಾನೆ ದಲ್ ಎಂಬಂತಿರೆ (ಬೇರೆಯಲ್ಲ; ಇದು ಉಗ್ರವಾದ ಪ್ರಳಯಕಾಲದ ಮೋಡದ ನೆರಳೇ ಸರಿ ಎನ್ನುವಹಾಗೆ ಇರಲು,) ಕಾಚ ಮೇಚಕಚಯಚ್ಛಾಯ ಅಂಬುವಿಂ (ಕಾಚದಂತೆ ಕಪ್ಪುನೀಲಿ ಬಣ್ಣ ಮಿಶ್ರಿತವಾದ ಬಣ್ಣದ ನೀರಿನಿಂದ) ಗುಣ್ಪಿನಿಂ ಪುದಿದಿರ್ದು ಇತ್ತು ಸರೋವರಂ (ತುಂಬಿ ಆಳವಾಗಿ - ಬಕಬಲಾಕ ಪಕ್ಷಿಗಳ ಶಬ್ದದಿಂದ ಮೊರೆಯುತ್ತಿರುವ- ವೈಶಂಪಾಯನ ಸರೋವರವು ಆಳದಿಂದಲೂ -ಗಾಂಭೀರ್ಯದಿಂದಲೂ?- ಕೂಡಿದ್ದಿತು.) ಬಕ ಬಳಾಕಾನೀಕ ರಾವಾಕುಳಂ ( ಬಕಬಲಾಕ ಪಕ್ಷಿಗಳ ಶಬ್ದದಿಂದ ಮೊರೆಯುತ್ತಿರುವ)
ಪದ್ಯ-೭೨:ಅರ್ಥ: ಇದು ಪಾತಾಳವೆಂಬ ಬಿಲದ ಬಾಗಿಲು, ಇದು ನಿಜವಾಗಿಯೂ ಭಯಂಕರವಾದ ಕತ್ತಲೆಯಿಂದ ತುಂಬಿದ ಬಾವಿ, ಬೇರೆಯಲ್ಲ; ಇದು ಉಗ್ರವಾದ ಪ್ರಳಯಕಾಲದ ಮೋಡದ ನೆರಳೇ ಸರಿ ಎನ್ನುವಹಾಗೆ ಇರಲು, ಕಾಚದಂತೆ ಕಪ್ಪುನೀಲಿ ಬಣ್ಣ ಮಿಶ್ರಿತವಾದ ಬಣ್ಣದ ನೀರಿನಿಂದ ತುಂಬಿ ಆಳವಾಗಿ ಬಕಬಲಾಕ ಪಕ್ಷಿಗಳ ಶಬ್ದದಿಂದ ಮೊರೆಯುತ್ತಿರುವ ವೈಶಂಪಾಯನ ಸರೋವರವು ಆಳದಿಂದಲೂ (ಗಾಂಭೀರ್ಯದಿಂದಲೂ) ಕೂಡಿದ್ದಿತು.
ಚಂ|| ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ್ವಿ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿರುಂದ್ರಫಣೀಂದ್ರಕೇತುವಂ|| ೭೩ ||
ಪದ್ಯ-೨೩:ಪದವಿಭಾಗ-ಅರ್ಥ:ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ (ಪರಾಕ್ರಮಶಾಲಿಯಾದ ಅರ್ಜುನನ ಮತ್ತು ಸಾಹಸ ಭೀಮನ ಕೋಪದ ಅಗ್ನಿಯು) ಪುದಿದು ಅಳುರ್ದು (ತುಂಬಿ ವ್ಯಾಪಿಸಿ) ಅೞ್ವಿಕೊಳ್ಳದಿರದು (ಸುಡದೆ ಬಿಡುವುದಿಲ್ಲ;) ಇಲ್ಲಿಯುಂ ಎಮ್ಮುಮನು(ಇಲ್ಲಿಯೂ ಕೂಡಾ ನಮ್ಮನ್ನು) ಇಲ್ಲಿ ಬಾೞ್ವರಂ ಕದಡದಿರು ಇತ್ತ ಬಾರದಿರು (ಇಲ್ಲಿ ಬಾಳುತ್ತಿರುವ ನಮ್ಮನ್ನು ಕದಡಬೇಡ. ಈ ಕಡೆ ಬರಬೇಡ.) ಸಾರದಿರು ಎಂಬವೊಲ್ ಆದುದು ಎತ್ತಮು ಉನ್ಮದಕಳಹಂಸ ಕೋಕನಿಕರದ್ವನಿ ( ಮದಿಸಿದ ರಾಜ ಹಂಸ ಕೋಕ ಸಮೂಹಗಳ ಧ್ವನಿಯು) ರುಂದ್ರಫಣೀಂದ್ರಕೇತುವಂ (ಎಲ್ಲಾ ಕಡೆಗೂ ವಿಸ್ತಾರವಾಗಿ ಹರಡಿರುವ ಹಾವಿನ ಹರವಿಗೆಯುಳ್ಳ ದುರ್ಯೋಧನನ್ನು -- ಧ್ವನಿಯು ಸಾರುವಂತಿದ್ದವು)
ಪದ್ಯ-೨೩:ಅರ್ಥ: ಪರಾಕ್ರಮಶಾಲಿಯಾದ ಅರ್ಜುನನ ಮತ್ತು ಸಾಹಸ ಭೀಮನ ಕೋಪಾಗ್ನಿಯು ಇಲ್ಲಿಯೂ ಕೂಡಾ ನಮ್ಮನ್ನು ತುಂಬಿ ವ್ಯಾಪಿಸಿ, ಸುಟ್ಟು ನಾಶಮಾಡಿ ಸುಡದೆ ಬಿಡುವುದಿಲ್ಲ; ಇಲ್ಲಿ ಬಾಳುತ್ತಿರುವ ನಮ್ಮನ್ನು ಕದಡಬೇಡ. ಈ ಕಡೆ ಬರಬೇಡ. ಹತ್ತಿರ ಬರಬೇಡ ಎನ್ನುವ ಹಾಗೆ ಎಲ್ಲಾ ಕಡೆಗೂ ವಿಸ್ತಾರವಾಗಿ ಹರಡಿರುವ ಹಾವಿನ ಹರವಿಗೆಯುಳ್ಳ ದುರ್ಯೋಧನನ್ನು ಮದಿಸಿದ ರಾಜ ಹಂಸ ಕೋಕ ಸಮೂಹಗಳ ಧ್ವನಿಯು ಸಾರುವಂತಿದ್ದವು.
ವ|| ಅಂತೆಸೆವ ಪುಂಡರೀಕಷಂಡೋಪಾಂತಮನೆಯ್ದೆವಂದನೇಕವ್ರಣಗಳಿತನವರುರ ಮಾಗಿರ್ದ ತನ್ನ ಮೆಯ್ಯನೊರಸಿ ಕರ್ಚಿ ಮುಕ್ಕುಳಿಸಿಯುಗುೞ್ದಾಚಮಿಸಿ ಜಳದೇವತೆಗಳ್ಗೆ ಪೊಡೆವಟ್ಟು ಜಳಮಂತ್ರಾಕ್ಷರಂಗಳಿಂ ಸರೋವರಮನಭಿಮಂತ್ರಿಸಿ-
ವಚನ:ಪದವಿಭಾಗ-ಅರ್ಥ:ಅಂತು ಎಸೆವ (ಹಾಗೆ ಶೋಭಿಸುವ)ಪುಂಡರೀಕಷಂಡ (ಸರೋವರದ) ಊಪಾಂತಮನು ಎಯ್ದೆ ವಂದು (ಸಮೀಪಕ್ಕೆ ಒಳ್ಳೇರೀತಿಯಲ್ಲಿ ಬಂದು) ಅನೇಕ ವ್ರಣಗಳಿತ ನವ ರುಧೀರ ಮಾಗಿರ್ದ(ಅನೇಕ ಗಾಯಗಳಿಂದ ಕೂಡಿದ್ದ) ತನ್ನ ಮೆಯ್ಯನು ಒರಸಿ ಕರ್ಚಿ (ತನ್ನ ಸರೀರವನ್ನು ಉಜ್ಜಿ ತೊಳೆದು) ಮುಕ್ಕುಳಿಸಿಯು ಉಗುೞ್ದು ಆಚಮಿಸಿ (ಮುಕ್ಕಳಿಸಿ, ಉಗುಳಿ ಆಚಮನ ಮಾಡಿ) ಜಳದೇವತೆಗಳ್ಗೆ ಪೊಡೆವಟ್ಟು (ಜಲದೇವತೆಗಳಿಗೆ ನಮಸ್ಕರಿಸಿ,) ಜಳಮಂತ್ರಾಕ್ಷರಂಗಳಿಂ ಸರೋವರಮನು ಅಭಿಮಂತ್ರಿಸಿ (ಜಲಮಂತ್ರಾಕ್ಷರಗಳಿಂದ ಸರೋವರವನ್ನು ಮುಟ್ಟಿ ಅಭಿಮಂತ್ರಿಸಿದನು. )-
ವಚನ:ಅರ್ಥ:ಹಾಗೆ ಶೋಭಿಸುವ ಸರೋವರ ಸಮೀಪಕ್ಕೆ ಒಳ್ಳೇರೀತಿಯಲ್ಲಿ ಬಂದು ಅನೇಕ ಗಾಯಗಳಿಂದ ಕೂಡಿದ್ದ ತನ್ನ ಸರೀರವನ್ನು ಉಜ್ಜಿ ತೊಳೆದು ಮುಕ್ಕಳಿಸಿ, ಉಗುಳಿ ಆಚಮನ ಮಾಡಿ ಜಲದೇವತೆಗಳಿಗೆ ನಮಸ್ಕರಿಸಿ, ಜಲಮಂತ್ರಾಕ್ಷರಗಳಿಂದ ಸರೋವರವನ್ನು ಮುಟ್ಟಿ ಅಭಿಮಂತ್ರಿಸಿದನು.
ಚಂ|| ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ||೭೪ ||
ಪದ್ಯ-೭೪:ಪದವಿಭಾಗ-ಅರ್ಥ:ಬೆಳಗಿ ಸಮಸ್ತ ಭೂವಳಯಮಂ ನಿಜ ತೇಜದಿಂ ಆಂತ ದೈತ್ಯರಂ ತಳವೆಳಗಾಗೆ ಕಾದಿ (ಸಮಸ್ತ ಭೂಮಂಡಲವನ್ನೂ ತನ್ನ ತೇಜಸ್ಸಿನಿಂದ ಪ್ರಕಾಶಗೊಳಿಸಿ ತನಗೆ ಪ್ರತಿಭಟಿಸಿದ ರಾಕ್ಷಸರನ್ನು ತಬ್ಬಿಬ್ಬಾಗುವಂತೆ ಹೋರಾಡಿ ಕೊನೆಗೆ) ಚಳಿತು ಎಯ್ದಿ/(ಚೆನ್ನಾಗಿ) ಬೞಲ್ದು (ಪ್ರಭಾವಹೀನನಅಗಿ ಬಹಳ ಬಳಲಿ) ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್(ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಹಾಗೆ) ಕೊಳದೊಳ್ ಫಣಿರಾಜಕೇತನಂ ಮುೞುಗಿದನು ( ದುರ್ಯೋಧನನು ಆ ಸರೋವರದಲ್ಲಿ ಮುಳುಗಿದನು.) ಆರ್ಗಂ ಏಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ (ಎಂದಮೇಲೆ ಯಾರಿಗಾದರೂ ಏನು ಸಾದ್ಯವೇ? ವಿಧಿಯು ಕಟ್ಟಿರುವುದನ್ನು ಕಳೆಯುವುದಕ್ಕೆ ತೀರುತ್ತದೆಯೇ? ಸಾದ್ಯವೇ?)
ಪದ್ಯ-೭೪:ಅರ್ಥ: ಸಮಸ್ತ ಭೂಮಂಡಲವನ್ನೂ ತನ್ನ ತೇಜಸ್ಸಿನಿಂದ ಪ್ರಕಾಶಗೊಳಿಸಿ ತನಗೆ ಪ್ರತಿಭಟಿಸಿದ ರಾಕ್ಷಸರನ್ನು ತಬ್ಬಿಬ್ಬಾಗುವಂತೆ ಹೋರಾಡಿ ಕೊನೆಗೆ ತಾನು ಪ್ರಭಾವಹೀನನಾಗಿ ಬಹಳ ಬಳಲಿ, ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಹಾಗೆ, ದುರ್ಯೋಧನನು ಆ ಸರೋವರದಲ್ಲಿ ಮುಳುಗಿದನು. ಎಂದಮೇಲೆ ಯಾರಿಗಾದರೂ ಏನು ಸಾದ್ಯವೇ? ವಿಧಿಯುಕ ಟ್ಟಿರುವುದನ್ನು ಕಳೆಯುವುದಕ್ಕೆ ತೀರುತ್ತದೆಯೇ?/ -ಸಾದ್ಯವೇ?
ವ|| ಅಂತು ವಜ್ರಿಯ ವಜ್ರಹತಿಗಳ್ಕಿ ಕುಲಗಿರಿ ಜಳಧಿಯಂ ಪುಗುಂವಂತೆ ದುಯೋಧನಂ ಕೊಳನಂ ಪೊಕ್ಕಿರ್ದನನ್ನೆಗಮಿತ್ತ ಧರ್ಮಪುತ್ರಂ ಶಲ್ಯವಧೆಯಿಂ ಬೞಿಯಂ ರಾಜರಾಜನಂ ಕೊಳುಗುಳದೊಳಱಸಿಯುಂ ಕಾಣದೆ ನಮ್ಮ ಮಾಡುವ ಕರ್ತವ್ಯಮಾವುದೇಗೆಯ್ವಂ ಪೇೞಿಮೆಂದು ನಾರಾಯಣನಂ ಬೆಸಗೊಳೆ ಮಧುವನಿತಾವದನಕಮಳಹಿಮಕರನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ವಜ್ರಿಯ ವಜ್ರಹತಿಗಳ್ಕಿ ಕುಲಗಿರಿ ಜಳಧಿಯಂ ಪುಗುಂವಂತೆ (ಹಾಗೆ ಇಂದ್ರನ ವಜ್ರಾಯುಧಕ್ಕೆ ಹೆದರಿ ಕುಲಪರ್ವತಗಳು ಸಮುದ್ರವನ್ನು ಪ್ರವೇಶಿಸುವ ಹಾಗೆ) ದುರ್ಯೋಧನಂ ಕೊಳನಂ ಪೊಕ್ಕಿರ್ದನು (ದುರ್ಯೋಧನನು ಕೊಳವನ್ನು ಪ್ರವೇಶಿಸಿದ್ದನು.) ಅನ್ನೆಗಮಿತ್ತ ಧರ್ಮಪುತ್ರಂ ಶಲ್ಯವಧೆಯಿಂ ಬೞಿಯಂ ರಾಜರಾಜನಂ ಕೊಳುಗುಳದೊಳು ಅಱಸಿಯುಂ ಕಾಣದೆ (ಅಷ್ಟರಲ್ಲಿ ಈಕಡೆ ಧರ್ಮರಾಯನು ಶಲ್ಯವಧೆಯಾದಮೇಲೆ ಚಕ್ರವರ್ತಿಯಾದ ದುರ್ಯೋಧನನನ್ನು ಯುದ್ಧಭೂಮಿಯಲ್ಲಿ ಹುಡುಕಿಯೂ ಕಾಣದೆ) ನಮ್ಮ ಮಾಡುವ ಕರ್ತವ್ಯಮಾವುದು ಏಗೆಯ್ವಂ ಪೇೞಿಂ ಎಂದು (ನಾವು ಮಾಡಬೇಕಾದ ಕರ್ತವ್ಯವಾವುದು? ಏನು ಮಾಡೋಣ ಹೇಳಿ ಎಂದು) ನಾರಾಯಣನಂ ಬೆಸಗೊಳೆ (ಕೃಷ್ಣನನ್ನು ಕೇಳಲು) ಮಧುವನಿತಾ ವದನಕಮಳ ಹಿಮಕರನು (ಮಧುವನಿತೆಯ ಮುಖ ಕಮಲದ ಹಾಗಿರುವ ಚಂದ್ರನಂತಿರುವ- ಕೃಷ್ಣನು)ಇಂತೆಂದಂ (ಹೀಗೆಂದನು.)-
ವಚನ:ಅರ್ಥ:ಹಾಗೆ ಇಂದ್ರನ ವಜ್ರಾಯುಧಕ್ಕೆ ಹೆದರಿ ಕುಲಪರ್ವತಗಳು ಸಮುದ್ರವನ್ನು ಪ್ರವೇಶಿಸುವ ಹಾಗೆ ದುರ್ಯೋಧನನು ಕೊಳವನ್ನು ಪ್ರವೇಶಿಸಿದ್ದನು. ಅಷ್ಟರಲ್ಲಿ ಈ ಕಡೆ ಧರ್ಮರಾಯನು ಶಲ್ಯವಧೆಯಾದಮೇಲೆ ಚಕ್ರವರ್ತಿಯಾದ ದುರ್ಯೋಧನನನ್ನು ಯುದ್ಧಭೂಮಿಯಲ್ಲಿ ಹುಡುಕಿಯೂ ಕಾಣದೆ, ನಾವು ಮಾಡಬೇಕಾದ ಕರ್ತವ್ಯವಾವುದು? ಏನು ಮಾಡೋಣ ಹೇಳಿ ಎಂದು ಕೃಷ್ಣನನ್ನು ಕೇಳಲು ಅವನು ಹೀಗೆಂದನು.
ಇಂದಿನ ನೇಸರಿಂದೊಳಗರಾತಿಯನಿಕ್ಕದೆ ಮಾಣ್ದೆಮೊಪ್ಪಡಿ
ನ್ನೆಂದುಮಸಾಧ್ಯನಿಂದೆ ಹಳಿಯುಂ ಗಡ ಕೂಡುವನಾತನಂ ಗೆಲಲ್
ಬಂದಪುದೇ ಬಳಿಕ್ಕದುವೆ ಕಾರಣಮಾಗುಳಿದಿರ್ದನಂಧರಾ
ಣ್ನಂದನನಲ್ಲದಂತು ತಲೆಯರ್ಚುಗುಮೇ ರಣರಂಗಭೂಮಿಯೊಳ್ ||೭೫||
ಪದ್ಯ-೦೦:ಪದವಿಭಾಗ-ಅರ್ಥ:ಇಂದಿನ ನೇಸರಿಂದೊಳಗೆ ಆರಾತಿಯನು ಇಕ್ಕದೆ ಮಾಣ್ದೆಮೊಪ್ಪಡೆ (ಈ ದಿನ ಸಾಯಂಕಾಲದೊಳಗೆ ಶತ್ರುವನ್ನು ಕೊಲ್ಲದೆ ತಪ್ಪಿದೆವಾದರೆ) ಇನ್ನೆಂದುಂ ಅಸಾಧ್ಯನು (ಇನ್ನಾವಾಗಲೂ ಅವನು ಅಸಾಧ್ಯನಾಗುತ್ತಾನೆ.) ಇಂದೆ ಹಳಿಯುಂ (ನೇಗಿಲ ಕುಳ/ಹಳಿ ಹಿಡಿದವ) ಗಡ ಕೂಡುವನು ಆತನಂ ( ಈ ದಿನವೇ ಬಲರಾಮನೂ ಅವನನ್ನು ಕೂಡಿಕೊಳ್ಳತ್ತಾನೆ.) ಗೆಲಲ್ ಬಂದಪುದೇ ಬಳಿಕ್ಕ (ಬಳಿಕ ಆತನನ್ನು ಕೊಲ್ಲುವುದಕ್ಕೆ ಸಾಧ್ಯವಾಗುವುದೇ? ಇಲ್ಲ.) ಅದುವೆ ಕಾರಣಂ ಆಗಿ ಉಳಿದಿರ್ದನು ಅಂಧರಾಣ್ನಂದನನು (ಆ ಕಾರಣದಿಂದಲೇ ಧೃತರಾಷ್ಟ್ರನ ಮಗ ದುರ್ಯೋಧನನು ಮರೆಯಾಗಿ ಉಳಿದಿದ್ದಾನೆ.) ಅಲ್ಲದೆ ಅಂತು ತಲೆಯರ್ಚುಗುಮೇ ರಣರಂಗಭೂಮಿಯೊಳ್ (ಅಲ್ಲದಿದ್ದರೆ ರಣರಂಗಲ್ಲಿ ತಲೆಯನ್ನು ಮರೆಸಿಕೊಳ್ಳತ್ತಿದ್ದನೇ?)
ಪದ್ಯ-೦೦:ಅರ್ಥ: ಈ ದಿನ ಸಾಯಂಕಾಲದೊಳಗೆ ಶತ್ರುವನ್ನು ಕೊಲ್ಲದೆ ತಪ್ಪಿದೆವಾದರೆ ಇನ್ನಾವಾಗಲೂ ಅವನು ಅಸಾಧ್ಯನಾಗುತ್ತಾನೆ. ಈ ದಿನವೇ ಬಲರಾಮನೂ ಅವನನ್ನು ಕೂಡಿಕೊಳ್ಳತ್ತಾನೆ. ಬಳಿಕ ಆತನನ್ನು ಕೊಲ್ಲುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಕಾರಣದಿಂದಲೇ ಧೃತರಾಷ್ಟ್ರನ ಮಗ ದುರ್ಯೋಧನನು ಮರೆಯಾಗಿ ಉಳಿದಿದ್ದಾನೆ. ಅಲ್ಲದಿದ್ದರೆ ರಣರಂಗಲ್ಲಿ ತಲೆಯನ್ನು ಮರೆಸಿಕೊಳ್ಳತ್ತಿದ್ದನೇ?
ವ||ಎಂಬುದುಂಜಳಧರಸಮಯನಿಶಾಸಂಚಲಿತ ವಿದ್ಯುತ್ಪಿಂಗಳಾಕ್ಷಪಾತಂಗಳಿಂ ದೆಸೆಗಳಂ ನುಂಗುವಂತೆ ಮುಳಿದು ನೋಡಿ ಜರಾಸಂಧಿಸಂಬಂಧವಿಘಟನಿತೆಂದಂ.
ವಚನ:ಪದವಿಭಾಗ-ಅರ್ಥ:ಎಂಬುದುಂ ಜಳಧರಸಮಯನಿಶಾಸಂಚಲಿತ (ಎನ್ನಲು ವರ್ಷಕಾಲದ ರಾತ್ರಿಯಲ್ಲಿ ನಡುಗಿಸುತ್ತಿರುವ) ವಿದ್ಯುತ್ಪಿಂಗಳಾಕ್ಷಪಾತಂಗಳಿಂ (ಮಿಂಚಿನಂತೆ ಹೊಂಬಣ್ಣದಂತಿರುವ ತನ್ನ ಕಣ್ಣಗಳ ನೋಟದಿಂದ) ದೆಸೆಗಳಂ ನುಂಗುವಂತೆ ಮುಳಿದು ನೋಡಿ ಜರಾಸಂಧಿಸಂಬಂಧ ವಿಘಟನು ಇಂತೆಂದಂ(ದಿಕ್ಕುಗಳನ್ನಲ್ಲಾ ನುಂಗುವಂತೆ ಕೋಪಿಸಿಕೊಂಡು ಸರಾಸಂಧನ ಕೀಲುಕಟ್ಟುಗಳನ್ನು ಸಡಲಿಸಿದವನಾದಭೀಮಸೇನನು ಹೀಗೆಂದನು-)
ವಚನ:ಅರ್ಥ:ಎನ್ನಲು ವರ್ಷಕಾಲದ ರಾತ್ರಿಯಲ್ಲಿ ನಡುಗಿಸುತ್ತಿರುವ ಮಿಂಚಿನಂತೆ ಹೊಂಬಣ್ಣದಂತಿರುವ ತನ್ನ ಕಣ್ಣಗಳ ನೋಟದಿಂದ ದಿಕ್ಕುಗಳನ್ನಲ್ಲಾ ನುಂಗುವಂತೆ ಕೋಪಿಸಿಕೊಂಡು ಜರಾಸಂಧನ ಕೀಲುಕಟ್ಟುಗಳನ್ನು ಸಡಲಿಸಿದವನಾದಭೀಮಸೇನನು ಹೀಗೆಂದನು.-
ಮ||ಕಡಲಂ ಪೊಕ್ಕೊಡೆ ಪೀರ್ದಪೆಂ ಕಡಲನಾ ಪಾತಾಳಮಂ ಪೊಕ್ಕನ
ಪ್ಪಡೆಶೇಶಾಹಿಯ ಪಲ್ಗಳಂ ಮುರಿದಪೆಂ ಬ್ರಹ್ಮಾಂಡಮಂ ಪೊಕ್ಕನ
ಪ್ಪೊಡಮಾ ಬ್ರಹ್ಮನ ಗಂಟಲಂ ಮುರಿದಪೆಂ ದುರ್ಯೋಧನಂಗಿಂ ಪುಗ
ಲ್ಕಡೆ ತ್ರೈಭೂಭುವನಂಗಳಿಂ ಪೊರಗೆ ಮತ್ತೆಲ್ಲಿತ್ತೊ ಬಾಣಾಂತಕಾ||೭೬||
ಪದ್ಯ-೦೦:ಪದವಿಭಾಗ-ಅರ್ಥ:ಕಡಲಂ ಪೊಕ್ಕೊಡೆ ಪೀರ್ದಪೆಂ ಕಡಲನು (ಸಮುದ್ರವನ್ನು ಪ್ರವೇಶ ಮಾಡಿದರೆ ಆಸಮುದ್ರವನ್ನೇ ಕುಡಿದು ಹಾಕುತ್ತೇನೆ.) ಆ ಪಾತಾಳಮಂ ಪೊಕ್ಕನಪ್ಪಡೆ ಶೇಶಾಹಿಯ ಪಲ್ಗಳಂ ಮುರಿದಪೆಂ (ಆ ಪಾತಾಳವನ್ನು ಹೊಕ್ಕನಾದರೆ ಆದಿಶೇಷನ ಹಲ್ಲನ್ಉ ಮುರಿಯುತ್ತೇನೆ.) ಬ್ರಹ್ಮಾಂಡಮಂ ಪೊಕ್ಕನ ಪ್ಪೊಡಮ್ ಆ ಬ್ರಹ್ಮನ ಗಂಟಲಂ ಮುರಿದಪೆಂ (ಬ್ರಹ್ಮಾಂಡವನ್ನು ಹೊಕ್ಕನಾದರೆ ಆ ಬ್ರಹ್ಮನ ಗಂಟಲನ್ನು ಮುರಿಯುತ್ತೇನೆ.) ದುರ್ಯೋಧನಂಗೆ ಇಂ ಪುಗಲ್ಕೆ ಎಡೆ ತ್ರೈಭೂಭುವನಂಗಳಿಂ ಪೊರಗೆ ಮತ್ತೆಲ್ಲಿತ್ತೊ ಬಾಣಾಂತಕಾ (ಕೃಷ್ಣಾ ದುರ್ಯೋಧನನಿಗೆ ಇನ್ನು ಪ್ರವೇಶ ಮಾಡುವುದಕ್ಕೆ ಮೂರು ಲೋಕಗಳಿಂದ ಹೊರಗೆ ಸ್ಥಳವೆಲ್ಲಿದೆ.)
ಪದ್ಯ-೦೦:ಅರ್ಥ: ದುರ್ಯೋಧನನು ಸಮುದ್ರವನ್ನು ಪ್ರವೇಶ ಮಾಡಿದರೆ ಆಸಮುದ್ರವನ್ನೇ ಕುಡಿದು ಹಾಕುತ್ತೇನೆ. ಆ ಪಾತಾಳವನ್ನು ಹೊಕ್ಕನಾದರೆ ಆದಿಶೇಷನ ಹಲ್ಲನ್ನು ಮುರಿಯುತ್ತೇನೆ. ಬ್ರಹ್ಮಾಂಡವನ್ನು ಹೊಕ್ಕನಾದರೆ ಆ ಬ್ರಹ್ಮನ ಗಂಟಲನ್ನು ಮುರಿಯುತ್ತೇನೆ. ಕೃಷ್ಣಾ ದುರ್ಯೋಧನನಿಗೆ ಇನ್ನು ಪ್ರವೇಶ ಮಾಡುವುದಕ್ಕೆ ಮೂರು ಲೋಕಗಳಿಂದ ಹೊರಗೆ ಸ್ಥಳವೆಲ್ಲಿದೆ.
ವ||ಎಂಬನ್ನಗಂ ವೃಕೋದರನಟ್ಟಿದ ಕಿರಾತಂ ವಿಂಧ್ಯಕನೆಂಭಂ ದುರ್ಯೋಧನನೆಲ್ಲಿಯುಮರಸಿ ಕಾಣದೆ ವೈಶಂಪಾಯನ ಸರೋವರಕ್ಕೆ ನೀರ್ಗುಟಿಯಲೆಂದು ಪೋಗಿ, ಕೊಳದ ತಡಿಯೊಳ್ ಹಳಕುಳಿಶಶಂಖಚಕ್ರಲಾಂಛಿತಮಪ್ಪಡಿವೆಜ್ಜೆಯಂ ಕಂಡುಬಂದನೆಂದು, ಪೇಳ್ವುದುಮಂಭುಜನಾಭನವನ ಮಾತಿನೊಳ್ ಯುಕ್ತಿಯುಂಟೆಂತೆಂದೊಡಮರನದೀನಂದನೋಪದೇಶದಿಂದಾತಂ, ಕೊಳನಂ ಪೊಕ್ಕುಕಾಲವಂಚನೆಗೈಯಲಿರ್ದನಕ್ಕುಮೆಂದಾ ಕೊಳನಂ ಮುಟ್ಟೆವಂದದರರ ತಡಿಯೊಳ್ ಶಂಖಚಕ್ರಹಳಕುಳಿಶಲಾಂಛಿತಮಾಗಿರ್ದಡಿವೆಜ್ಜೆಯಂ ನೋಡಿ ದುರ್ಯೋಧನನುಂಪಜ್ಜೆಯಪ್ಪುದೇನುಂ ತಪ್ಪಿಲ್ಲೆಂದು ಕಳಕಳನಿನಾದಂಗಳಿಂದಾರ್ದು ಶಂಖಗಳಿಂ ಪೂರಿಸಿಯುಂ ಭೇರಿಯಂತಾಡಿಸಿಯುಮೇಗೆಯ್ದುಂ ಪೊರಮಡದಿರೆ,ಭೀಮಸೇನನೆನ್ನ ಸರಂಗೇಳ್ದಲ್ಲದೀ ಬೂತು ಪೊರಮಡುವನಲ್ಲನೀತಂಗಾನೆ ಬಲ್ಲೆನುಸಿರದಿರುಮೆಂದುಸಕಲ ದಿಕ್ವಳಯ ಭರಿತ ಮಹಾಸಿಂಹನಾದಿಂದಲ್ಲಿಯ ಜಲಚರಗಳೆರ್ದೆ ಪೌನೆ ಪಾರುವನ್ನೆಗಮಾರ್ದು-
ವಚನ:ಪದವಿಭಾಗ-ಅರ್ಥ:ಎಂಬ ಅನ್ನಗಂ ವೃಕೋದರನು ಅಟ್ಟಿದ ಕಿರಾತಂ ವಿಂಧ್ಯಕನೆಂಭಂ (ನ್ನುವಷ್ಟರಲ್ಲಿ ಭೀಮನು ಕಳುಹಿಸಿದ ಬೇಡನಾದ ವಿಂಧ್ಯಕನೆಂಬುವವನು ಬಂದು) ದುರ್ಯೋಧನನೆಲ್ಲಿಯುಂ ಅರಸಿ ಕಾಣದೆ ವೈಶಂಪಾಯನ ಸರೋವರಕ್ಕೆ ನೀರ್ಗುಟಿಯಲೆಂದು ಪೋಗಿ,(ವೈಶಂಪಾಯನ ಸರೋವರಕ್ಕೆ ನೀರು ಕುಡಿಯಬೇಕೆಂದು ಹೋಗಿ- ನೋಡಲು-) ಕೊಳದ ತಡಿಯೊಳ್ ಹಳಕುಳಿಶ ಶಂಖ ಚಕ್ರ ಲಾಂಛಿತಮಪ್ಪ ಅಡಿವೆಜ್ಜೆಯಂ ಕಂಡುಬಂದನೆಂದು (ಕೊಳದ ದಡದಲ್ಲಿ ನೇಗಿಲು,ವಜ್ರ,ಶಂಖ,ಚಕ್ರ ಇವುಗಳ ಗುರುತುಳ್ಳ ಹೆಜ್ಜೆಯನ್ನು ಕಂಡುಬಂದೆನೆಂದು- -ಹೇಳಿದನು.), ಪೇಳ್ವುದುಂ ಅಂಭುಜನಾಭನು ಅವನ ಮಾತಿನೊಳ್ ಯುಕ್ತಿಯುಂಟು (ಹೇಳಿದಾಗ, ಕೃಷ್ಣನು ಅವನ ಮಾತಿನಲ್ಲಿ ಯುಕ್ತಿಯುಂಟು,) ಎಂತೆಂದೊಡ ಅಮರನದೀನಂದನ (ಭೀಷ್ಮ) ಉಪದೇಶದಿಂದ ಆತಂ, ಕೊಳನಂ ಪೊಕ್ಕು ಕಾಲವಂಚನೆ ಗೈಯಲಿರ್ದನಕ್ಕುಂ (ಹೇಗೆಂದರೆ ಭೀಷ್ಮನ ಉಪದೇಶದಿಂದ ಅವನು ಸರೋವರವನ್ನು ಪ್ರವೇಶಿಸಿ ಕಾಲವಂಚನೆ ಮಾಡಬೇಕೆಂದಿರುವನು ಎಂದನು.) ಎಂದು ಆ ಕೊಳನಂ ಮುಟ್ಟೆವಂದದರರ ತಡಿಯೊಳ್ ಶಂಖಚಕ್ರಹಳಕುಳಿಶಲಾಂಛಿತಮಾಗಿರ್ದಡಿವೆಜ್ಜೆಯಂ ನೋಡಿ ( ಕೊಳದ ಸಮೀಪಕ್ಕೆ ಬಂದು ಅದರ ದಡದಲ್ಲಿ ಶಂಖ,ಚಕ್ರ ನೇಗಿಲು ಇವುಗಳ ಗುರುತುಳ್ಳ ಹೆಜ್ಜೆಯನ್ನು ನೋಡಿ) ದುರ್ಯೋಧನನುಂ ಪಜ್ಜೆಯಪ್ಪುದೇನುಂ ತಪ್ಪಿಲ್ಲ ಎಂದು (ದುರ್ಯೋಧನನ ಹೆಜ್ಜೆಯೇ ಆಗಿದೆ,ಅದರಲ್ಲೇನೂ ತಪ್ಪಿಲ್ಲ ಎಂದು ) ಕಳಕಳನಿನಾದಂಗಳಿಂದ ಆರ್ದು ಶಂಖಗಳಿಂ ಪೂರಿಸಿಯುಂ ಭೇರಿಯಂ ತಾಡಿಸಿಯುಂ (ಕಳಕಳಶಬ್ದದಿಂದ ಆರ್ಭಟ ಮಾಡಿದರು. ಶಂಖಗಳನ್ನು ಊದಿಸಿದರು, ನಗಾರಿಗಳನ್ನು ಹೊಡೆಯಿಸಿದರು,) ಏಗೆಯ್ದುಂ ಪೊರಮಡದಿರೆ,ಭೀಮಸೇನನು ಎನ್ನ ಸರಂಗೇಳ್ದಲ್ಲದೆ ಈ ಬೂತು ಪೊರಮಡುವನಲ್ಲನು (ಭೀಮಸೇನನು ಈ ಭೂತವು ನನ್ನ ಧ್ವನಿ ಕೇಳಿದಲ್ಲದೆ ಹೊರಟುಬರುವವನಲ್ಲ;) ಈತಂಗೆ ಆನೆ ಬಲ್ಲೆನು ಉಸಿರದಿರುಂ ಎಂದು ( ಇವನಿಗೇನು ಮಾಡಬೇಕೆಂಬುದನ್ನು ನಅನು ಬಲ್ಲೆ ನೀವು ಮಾತನಾಡಬೇಡಿ ಎಂದು) ಸಕಲ ದಿಕ್ವಳಯ ಭರಿತ ಮಹಾಸಿಂಹನಾದಿಂದ ಅಲ್ಲಿಯ ಜಲಚರಗಳ ಎರ್ದೆ ಪೌನೆ ಪಾರುವನ್ನೆಗಂ ಆರ್ದು (ಸಕಲ ದಿಕ್ಕುಗಳ ಸಮೂಹದಲ್ಲಿ ವ್ಯಾಪಿಸುವ ಮಹಾ ಸಿಂಹನಾದದಿಂದ ಅಲ್ಲಿಯ ಜಲಚರಗಳ ಎದೆಯು ಪವ್ವನೆ ಹಾರಿಹೊಗುವ ಹಾಗೆ ಆರ್ಭಟಮಾಡಿದನು.)-
ವಚನ:ಅರ್ಥ:ಎನ್ನುವಷ್ಟರಲ್ಲಿ ಭೀಮನು ಕಳುಹಿಸಿದ ಬೇಡನಾದ ವಿಂಧ್ಯಕನೆಂಬುವವನು ಬಂದು ದುರ್ಯೋಧನನ್ನು ಎಲ್ಲಿ ಹುಡುಕಿದರೂ ಕಾಣದೆ ವೈಶಂಪಾಯನ ಸರೋವರಕ್ಕೆ ನೀರು ಕುಡಿಯಬೇಕೆಂದು ಹೋದೆವು, ಕೊಳದ ದಡದಲ್ಲಿ ನೇಗಿಲು,ವಜ್ರ,ಶಂಖ,ಚಕ್ರ ಇವುಗಳ ಗುರುತುಳ್ಳ ಹೆಜ್ಜೆಯನ್ನು ಕಂಡುಬಂದೆನೆಂದು ಹೇಳಿದನು. ಹೇಳಿದಾಗ, ಕೃಷ್ಣನು ಅವನ ಮಾತಿನಲ್ಲಿ ಯುಕ್ತಿಯುಂಟು, ಹೇಗೆಂದರೆ ಭೀಷ್ಮನ ಉಪದೇಶದಿಂದ ಅವನು ಸರೋವರವನ್ನು ಪ್ರವೇಶಿಸಿ ಕಾಲವಂಚನೆ ಮಾಡಬೇಕೆಂದಿರುವನು ಎಂದನು. ಕೊಳದ ಸಮೀಪಕ್ಕೆ ಬಂದು ಅದರ ದಡದಲ್ಲಿ ಶಂಖ,ಚಕ್ರ ನೇಗಿಲು ಇವುಗಳ ಗುರುತುಳ್ಳ ಹೆಜ್ಜೆಯನ್ನು ನೋಡಿ ದುರ್ಯೋಧನನ ಹೆಜ್ಜೆಯೇ ಆಗಿದೆ, ಅದರಲ್ಲೇನೂ ತಪ್ಪಿಲ್ಲ ಎಂದು ಕಳಕಳಶಬ್ದದಿಂದ ಆರ್ಭಟ ಮಾಡಿದರು. ಶಂಖಗಳನ್ನು ಊದಿಸಿದರು, ನಗಾರಿಗಳನ್ನು ಹೊಡೆಯಿಸಿದರು, ಏನು ಮಾಡಿದರೂ ಹೊರಗೆ ಹೊರಡದಿರಲು ಭೀಮಸೇನನು ಈ ಭೂತವು ನನ್ನ ಧ್ವನಿ ಕೇಳಿದಲ್ಲದೆ ಹೊರಟು ಬರುವವನಲ್ಲ; ಇವನಿಗೇನು ಮಾಡಬೇಕೆಂಬುದನ್ನು ನಾನು ಬಲ್ಲೆ ನೀವು ಮಾತನಾಡಬೇಡಿ ಎಂದು ಸಕಲ ದಿಕ್ಕುಗಳ ಸಮೂಹದಲ್ಲಿ ವ್ಯಾಪಿಸುವ ಮಹಾ ಸಿಂಹನಾದದಿಂದ ಅಲ್ಲಿಯ ಜಲಚರಗಳ ಎದೆಯು ಪವ್ವನೆ ಹಾರಿಹೊಗುವ ಹಾಗೆ ಆರ್ಭಟಮಾಡಿದನು.

ಭೀಮನ ಮೂದಲಿಕೆಗೆ ಕೊಳದಿಂದ ಹೊರಬಂದ ದುರ್ಯೋಧನ ಸಂಪಾದಿಸಿ

ಮ||ಸ್ರ||ಕಿರಿಯಂದಿಂದಿತ್ತ ದುರ್ಯೋಧನನೆನಿಸಿದವಿಕ್ರಾಂತಮೇನಾದುದೆಳ್ತಿಂ
ದಿರಿವುರ್ಕೆಲ್ಲಿತ್ತೊ ಪಾಂಚಾಳಿಯನನೆಳೆವದಟೇನಾದುದೋ ಗಂಡಪೇಳ್ ಪೊ |
ಚ್ಚರಿನಂತಾಮಾತುಮಿಂತೀಯಿರವೆನೆ ನೆಗೆಯಂ ಮಾಡಿದೈ ಬಂದನೀತಂ
ಪೆರನಲ್ಲ ದುರ್ಜಯಂ ಕೌರವಕುಳನಳಿನೀಕುಂಜರಂ ಭೀಮಸೇನಂ||೭೭ ||
ಪದ್ಯ-೦೦:ಪದವಿಭಾಗ-ಅರ್ಥ:ಕಿರಿಯಂದಿಂದ ಇತ್ತ (ಚಿಕ್ಕಂದಿನಿಂದ ಇತ್ತಲೂ) ದುರ್ಯೋಧನನು ಎನಿಸಿದ ವಿಕ್ರಾಂತಂ ( ದುರ್ಯೋದನ ಎನಿಸಿಕೊಂಡ ನಿನ್ನ ಪೌರುಷವೇನಾಯಿತು? ) ಏನಾದುದು ಎಳ್ತಿಂದು ಉರಿವುರ್ಕು ಎಲ್ಲಿತ್ತೊ (ಮೇಲೆಬಿದ್ದು ಯುದ್ಧಮಾಡುವ ಗರ್ವವು ಎಲ್ಲಿ ಇತ್ತೋ- ಹೋಯಿತು?) ಪಾಂಚಾಳಿಯನು (ಅನ) ಎಳೆವ ಅದಟೇನಾದುದೋ (ದ್ರೌಪದಿಯನ್ನು ಎಳೆದ ಪೌರುಷ ಏನಾಯಿತು? ) ಗಂಡಪೇಳ್ (ಪೌರುಷಶಾಲಿಯೇ ಹೇಳು. ) ಪೊಚ್ಚರಿನ ಅಂತು ಆ ಮಾತುಂ ಮಿಂತು ಈ ಯಿರವೆನೆ (ಆಗ ಆ ಗರ್ವದ ಮಾತನ್ನಾಡಿ ಈಗ ದುಸ್ಥಿತಿಯಲ್ಲಿ ಇರುವುದು) ನೆಗೆಯಂ ಮಾಡಿದೈ (ನಗುವನ್ನುಂಟು ಮಾಡಿದೆಯಲ್ಲಾ.) ಬಂದನು ಈತಂ ಪೆರನಲ್ಲ ದುರ್ಜಯಂ (ಈಗ ಬಂದಿರುವವನು ಬೇರೆಯಾರೂ ಅಲ್ಲ, ಜಯಿಸುವುದಕ್ಕೆ ಅಸಾಧ್ಯವಾದವ,) ಕೌರವಕುಳ ನಳಿನೀ ಕುಂಜರಂ ಭೀಮಸೇನಂ (ಕೌರವಕುಲವೆಂಬ ಕಮಲಕ್ಕೆ ಆನೆಯಂತಿರುವ ಭೀಮಸೇನ.)
ಪದ್ಯ-೦೦:ಅರ್ಥ:ಚಿಕ್ಕಂದಿನಿಂದ ಇತ್ತಲೂ ದುರ್ಯೋದನ ಎನಿಸಿಕೊಂಡ ನಿನ್ನ ಪೌರುಷವೇನಾಯಿತು? ಮೇಲೆಬಿದ್ದು ಯುದ್ಧಮಾಡುವ ಗರ್ವವು ಎಲ್ಲಿ ಹೋಯಿತು? ದ್ರೌಪದಿಯನ್ನು ಎಳೆದ ಪೌರುಷ ಏನಾಯಿತು? ಪೌರುಷಶಾಲಿಯೇ ಹೇಳು. ಆಗ ಆ ಗರ್ವದ ಮಾತನ್ನಾಡಿ ಈಗ ದುಸ್ಥಿತಿಯಲ್ಲಿ ಇರುವುದು ನಗುವನ್ನುಂಟು ಮಾಡಿದೆಯಲ್ಲಾ. ಈಗ ಬಂದಿರುವವನು ಬೇರೆಯಾರೂ ಅಲ್ಲ, ಜಯಿಸುವುದಕ್ಕೆ ಅಸಾಧ್ಯವಾದವ, ಕೌರವಕುಲವೆಂಬ ಕಮಲಕ್ಕೆ ಆನೆಯಂತಿರುವ ಜಯಿಸುವುದಕ್ಕೆ ಅಸಾಧ್ಯವಾದವ, ಭೀಮಸೇನ.
ಕುಡಿದೆಂ ದುಶ್ಶಾಸ(ನ)ನೋರಸ್ಥಲ ವಿಗಳದಸೃಗ್ವಾರಿಯಂ ಕಂಡದಂ ಮು
ನ್ನಡೆ ನೋಡುತ್ತಳ್ಕಿ ಮಾಣ್ದೈ ನಿನಗಿರಿವದಟಂ ಕೊಟ್ಟರಾರಿಂದು ಮಾನ|
ಲ್ಕೆಡೆಯುಂಟೇ ಸಿಲ್ಕಿದೈ ಪೋ ಪೊರಮಡು ಕೊಳದಿಂ ಸತ್ತೊಡಂ ಪುಟ್ಟ ನೀನೀ
ಗಡೆ ದಲ್ ಕೊಂದಪ್ಪನೆನ್ನಂ ಮುಳುಯಿಸಿ ನಿನಗಿಂ ದ್ರೋಹ ಬಾಳ್ವಾಸೆಯುಂಟೇ||೭೮||
ಪದ್ಯ-೦೦:ಪದವಿಭಾಗ-ಅರ್ಥ:ಕುಡಿದೆಂ ದುಶ್ಶಾಸ(ನ)ನ ಓರಸ್ಥಲ ವಿಗಳದ ಸೃಗ್ವಾರಿಯಂ (ದುಶ್ಶಾಸನನ ಎದೆಯಿಂದ ಹರಿಯುತ್ತಿದ್ದ ರಕ್ತವನ್ನು ಕುಡಿದೆನು.) ಕಂಡದಂ ಮುನ್ನಡೆ ನೋಡುತ್ತ ಅಳ್ಕಿ ಮಾಣ್ದೈ (ಅದನ್ನು ಮೊದಲು ನೋಡಿ ಹೆದರಿ ನಿಂತೆಯಾ?) ನಿನಗೆ ಇರಿವ ಅದಟಂ ಕೊಟ್ಟರು ಆರು ಇಂದು (ನಿನಗೆ ಯುದ್ಧಮಾಡುವ ಪರಾಕ್ರಮವನ್ನು ಕೊಟ್ಟವರು ಯಾರು?) ಮಾನಲ್ಕೆ ಎಡೆಯುಂಟೇ ಸಿಲ್ಕಿದೈ (ಈ ದಿನ ಇದನ್ನು ತಪ್ಪಸಿಕೊಳ್ಳುವುದಕ್ಕೆ ಅವಕಾಸವುಂಟೇ? ಸಿಕ್ಕಿದೆ.) ಪೋ ಪೊರಮಡು ಕೊಳದಿಂ (ಹೋಗೋ! ಕೊಳದಿಂದ ಹೊರಗೆಬಾ.) ಸತ್ತೊಡಂ ಪುಟ್ಟ- ಹುಟ್ಟದಾ (ಸತ್ತರೆ ಹುಟ್ಟದೇ ಹೋಗುತ್ತೀಯಾ?) ನೀನ್ ಈಗಡೆ ದಲ್ ಕೊಂದಪ್ಪನು (ಈಗ ಕೊಂದು ಹಾಕುತ್ತೇನಲ್ಲವೇ?) ಎನ್ನಂ ಮುಳುಯಿಸಿ ನಿನಗಿಂ ದ್ರೋಹಿ ಬಾಳ್ವಾಸೆಯುಂಟೇ? (ನನ್ನನ್ನು ರೇಗಿಸಿಯೂ ದ್ರೋಹಿ! ಬಾಳುವಾಸೆಯುಂಟೇ?)
ಪದ್ಯ-೦೦:ಅರ್ಥ: ದುಶ್ಶಾಸನನ ಎದೆಯಿಂದ ಹರಿಯುತ್ತಿದ್ದ ರಕ್ತವನ್ನು ಕುಡಿದೆನು. ಅದನ್ನು ಮೊದಲು ನೋಡಿ ಹೆದರಿ ನಿಂತೆಯಾ? ನಿನಗೆ ಯುದ್ಧಮಾಡುವ ಪರಾಕ್ರಮವನ್ನು ಕೊಟ್ಟವರು ಯಾರು? ಈ ದಿನ ಇದನ್ನು ತಪ್ಪಸಿಕೊಳ್ಳುವುದಕ್ಕೆ ಅವಕಾಸವುಂಟೇ? ಸಿಕ್ಕಿದೆ. ಚಿಃ ಹೋಗೋ! ಕೊಳದಿಂದ ಹೊರಗೆ ಬಾ. ಸತ್ತರೆ ಹುಟ್ಟದೇ ಹೋಗುತ್ತೀಯಾ? ಈಗ ಕೊಂದು ಹಾಕುತ್ತೇನಲ್ಲವೇ? ನನ್ನನ್ನು ರೇಗಿಸಿಯೂ ದ್ರೋಹಿ! ಬಾಳುವಾಸೆಯುಂಟೇ?
ಕಂ||ಮಾನಸಿಕೆಯ ದೊರೆಗಿಡೆ ನೀಂ
ಮಾನಸನೆನೆ ನೀರೊಳೆಲವೊ ನೀಂ ಮೀನನೆಂ|
ಬೀ ನೆವದಿಂದಿರ್ದೆ ಯಿದೇನಭಿ
ಮಾನದ ಕಲಿತನದ ಪರಮಪದವನೈದಿದೆಯೋ. ||೭೯ ||
ಪದ್ಯ-೦೦:ಪದವಿಭಾಗ-ಅರ್ಥ:ಮಾನಸಿಕೆಯ ದೊರೆಗಿಡೆ (ದೊರೆ ಕಿಡೆ; ಮನುಷ್ಯತ್ವದ ಯೋಗ್ಯತೆಯನ್ನು ಕಳೆದುಕೊಂಡಮೇಲೆ) ನೀಂ ಮಾನಸನೆನೆ (ನೀನು ಮನುಷ್ಯನೇ? ) ನೀರೊಳೆಲವೊ ನೀಂ ಮೀನನು ಎಂಬ ಈ ನೆವದಿಂದ ಇರ್ದೆ (ನೀನು ಮೀನಿನ ನೆವದಿಂದ ನೀರಿನಲ್ಲಿದ್ದೀಯೆ.) ಯಿದೇನು ಅಭಿಮಾನದ ಕಲಿತನದ ಪರಮಪದವನು ಎಯ್ದಿದೆಯೋ. (ಆಹಾ ಎಂತಹ ಆತ್ಮಗೌರವದ ಪರಾಕ್ರಮದ ಪರಮೋಚ್ಛಸ್ಥಾನವನ್ನು ಏರಿದ್ದೀಯೆ?)
ಪದ್ಯ-೦೦:ಅರ್ಥ: ಮನುಷ್ಯತ್ವದ ಯೋಗ್ಯತೆಯನ್ನು ಕಳೆದುಕೊಂಡಮೇಲೆ ನೀನು ಮನುಷ್ಯನೇ? ನೀನು ಮೀನಿನ ನೆವದಿಂದ ನೀರಿನಲ್ಲಿದ್ದೀಯೆ. ಆಹಾ ಎಂತಹ ಆತ್ಮಗೌರವದ ಪರಾಕ್ರಮದ ಪರಮೋಚ್ಛಸ್ಥಾನವನ್ನು ಏರಿದ್ದೀಯೆ?
ಅದಟಿನಳುರ್ಕೆಯುಂ ನಿರಿಸಿ ನಿನ್ನ ನಿಸೇಕದ ಪೊಳ್ತು ತಪ್ಪಲೀ
ಯದೆ ಪೊರಮಟ್ಟುಬಾ ತಡೆಯದೀಗಳೆ ನೀನಿಸಿರ್ದೆಯಪ್ಪೊಡೇ\
ತೊದಳೋ ಸರೋವರದಾಂಬುವನಿತಂ ತವೆ ತುಳ್ಕಿ ರಸಾತಳಂಬರಂ
ಬೆದಕಿಯುಮೆಂತುಮಪ್ಪಳಿಸಿ ಕೊಂದಪನೇಳ್ದುದಿದೇಂ ಸುಯೋಧನಾ||೮೦||
ಪದ್ಯ-೦೦:ಪದವಿಭಾಗ-ಅರ್ಥ:ಅದಟಿನ ಅಳುರ್ಕೆಯುಂ ನಿರಿಸಿ ( ನಿನ್ನ ಪರಾಕ್ರಮದ ಅತಿಶವನ್ನು ಸ್ಥಾಪಿಸಿ) ನಿನ್ನ ನಿಸೇಕದ ಪೊಳ್ತು ತಪ್ಪಲೀಯದೆ ( ನಿನ್ನ ಶಾಸ್ತ್ರೀಯ ಹೊತ್ತು ತಪ್ಪಿಹೋಗುವುದಕ್ಕೆ ಬಿಡದೆ ) ಪೊರಮಟ್ಟು ಬಾ ತಡೆಯದೆ ಈಗಳೆ (ಸಾವಕಾಶ ಮಾಡದೆ ಈಗಲೇ ಹೊರಟು ಬಾ.) ನೀಂ ಇನಿಸು ಇರ್ದೆಯಪ್ಪೊಡೆ (ನೀನು ಸ್ವಲ್ಪ ತಡಮಾಡಿದರೆ) ಏತೊದಳೋ (ಏನು ಸುಳ್ಳೋ- ಸುಳ್ಳಲ್ಲ!) ಸರೋವರದಾಂಬುವನಿತಂ ತವೆ ತುಳ್ಕಿ ರಸಾತಳಂಬರಂ ಬೆದಕಿಯುಂ ಎಂತುಂ(ಸರೂವರದ ನೀರನ್ನೆಲ್ಲಾ ತುಳುಕಿ ಪಾತಾಳದವರೆಗೂ ಹುಡುಕಿ ಹೇಗೂ) ಎಂತುಂ ಅಪ್ಪಳಿಸಿ ಕೊಂದಪನು ಏಳ್ದುದು ಇದೇಂ ಸುಯೋಧನಾ (ಹೇಗೂ ಅಪ್ಪಳಿಸಿ ಕೊಂದು ಹಾಕುತ್ತೇನೆ. ಏಳು ಸುಯೋಧನಾ ಇದೇನಿದು?)
ಪದ್ಯ-೦೦:ಅರ್ಥ: ನಿನ್ನ ಪರಾಕ್ರಮದ ಅತಿಶವನ್ನು ಸ್ಥಾಪಿಸಿ ನಿನ್ನ ಶಾಸ್ತ್ರೀಯ ಹೊತ್ತು ತಪ್ಪಿಹೋಗುವುದಕ್ಕೆ ಬಿಡದೆ ಸಾವಕಾಶ ಮಾಡದೆ ಈಗಲೇ ಹೊರಟು ಬಾ. ನೀನು ಸ್ವಲ್ಪ ತಡಮಾಡಿದರೆ ಏನು ಸುಳ್ಳೋ- ಸುಳ್ಳಲ್ಲ! ಸರೂವರದ ನೀರನ್ನೆಲ್ಲಾ ತುಳುಕಿ ಪಾತಾಳದವರೆಗೂ ಹುಡುಕಿ ಹೇಗೂ ಅಪ್ಪಳಿಸಿ ಕೊಂದು ಹಾಕುತ್ತೇನೆ. ಏಳು ಸುಯೋಧನಾ ಇದೇನಿದು?
  • ಕೌರವನ ಕೋಪ ರನ್ನನ ವರ್ಣನೆ

ಕಂ||ಆ ರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನ ರವಮಂ ಕೋ
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ॥೨೨॥

  • ಪದವಿಭಾಗ:

ಭೀಮನ ಗರ್ಜನೆ; ನಿರ್ಜಿತ ಕಂಠೀರವ ರವಮಂ= ಸಿಂಹಗರ್ಜನೆಯನ್ನು ಮೀರಿಸಿದ,
ನಿರಸ್ತಘನ ರವಮಂ= ಮೇಘಗರ್ಜನೆಯನ್ನು ಸೋಲಿಸಿದ,
ಆ ರವಮಂ= ಆ ಗರ್ಜನೆಯನ್ನು,
ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ,
ಉರಗಪತಾಕಂ= ಸರ್ಪಧ್ವಜನು(ದುರ್ಯೋಧನನು)
ನೀರೊಳಗ ಇರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.
ಅರ್ಥ::ಭೀಮನ ಗರ್ಜನೆ ಸಿಂಹಗರ್ಜನೆಯನ್ನೂ ಮೀರಿಸಿತ್ತು;
ದಟ್ಟ ಮೋಡದ ಗುಡುಗನ್ನೂ ಸೋಲಿಸಿತ್ತು;
ದುರ್ಯೋಧನನು ಆ ಸಿಂಹನಾದವನ್ನು ಕೇಳಿ ಕೆರಳಿ
ಅವನ ಕಣ್ಣುಗಳು ಕೋಪೋದ್ರೇಕದಿಂದ ಕೆಂಪಾದವು;
ನೀರಿನಲ್ಲಿ ಮುಳುಗಿದ್ದರೂ ಸಿಟ್ಟಿನ ಕಾವಿನಿಂದ 'ಸರ್ಪಧ್ವಜ'ನು ಬೆವರಿದನು.
“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ಸಾಲು
ರನ್ನನ ನುಡಿಮುತ್ತಾಗಿ ಉಳಿದಿದೆ- 'ಉರಗಪತಾಕ' ಜೋಡಣೆ
ಹೆಚ್ಚಿನ ಮೆರುಗು ಕೊಡುವುದು.

  • ಕೌರವ ಕೊಳದಿಂದ ಹೊರಟ ಬಗೆ:

ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ
ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ
ರಜವನದಿಂ ಕಱಂಗಿ ಕಮಲಾಕರದಿಂ ಪೊಱಮಟ್ಟನಾಗಳಾ
ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥

  • ಪದವಿಭಾಗ:

ನಿಜಮಕುಟ= ತನ್ನ ಕಿರೀಟದ, ಸ್ಫುರತ್=ಪ್ರಕಾಶಿಸುವ,
ಮಣಿಗಣಚ್ಛವಿಯಂ=ನವರತ್ನಗಳ ಕಾಂತಿಯಿಂದ,
ಪಂಕಜವನದೊಳ್= ತಾವರೆಗಳ ಸಮೂಹದಲ್ಲಿ,
ಸುರಚಾಪಲೀಲೆ= ಕಾಮನಬಿಲ್ಲಿನ ಸೊಗಸು,
ಮನಂಗೊಳಿಸೆ= ಮನೋಹರವಾಗಿ ತೋರುತ್ತಿರಲು,
ತನ್ನಯ ಮೇಗೆ ಒಗೆದಿರ್ದ= ತನ್ನ ಮೇಲ್ಭಾಗದಲ್ಲಿದ್ದ,
ನೀಲನೀರಜ ವನದಿಂ= ಕನ್ನೈದಿಲೆಗಳ ಸಮೂಹದಿಂದ,
ಕಱಂಗಿ=ಕಪ್ಪಾಗಿ,
ಆ ಭುಜಯುಗ ತೋರಣಾಯಿತ ಗದಾಪರಿಘಂ=
ಪರಿಘದಂತಿರುವ ತನ್ನ ಗದೆಯನ್ನು ತೋರಣದಂತೆ
ಆ ಎರಡು ಬಾಹುಗಳಿಂದ ಮೇಲೆ ಎತ್ತಿ ಹಿಡಿದು,
ಫಣಿರಾಜಕೇತನಂ= ದುರ್ಯೋಧನನು,
ಕಮಲಾಕರದಿಂ= ಸರೋವರದಿಂದ,
ಆಗಳ್ ಪೊರಮಟ್ಟಂ= ಆಗ ಹೊರಬಂದನು.
“ಫಣಿರಾಜಕೇತನಂ “ ಸರ್ಪಧ್ವಜನು-
ಅಂತರಾರ್ಥ::ಸರ್ಪಮತ್ಸರವುಳ್ಳ ದುರ್ಯೋಧನ!
ರನ್ನ.

ವ||ಎಂದು ವಿಳಯಕಾಳಜಲಧರನಿನಾದದಿಂ ಗಜರಿ ಗರ್ಜಿಸಿದ ಜಟಾಸುರಾರಾತಿಯ ಗಳಗರ್ಜನೆಗೆ ಕರಿಕಳಭಗರ್ಜನೆಗೇಳ್ವ ಮೃಗರಾಜನಂತೆ ರಾಜ ರಾಜಂ ಸೈರಿಸದೆ ಚಿತ್ತಸ್ಖಲನೆಯಾಗೆ ಜಳಸ್ತಂಭಮಂತ್ರಮೆಲ್ಲಂ ಮಾಯಾಮಂತ್ರಮಾಗೆ-
ಪದ್ಯ-೦೦:ಪದವಿಭಾಗ-ಅರ್ಥ:ಎಂದು ವಿಳಯಕಾಳ ಜಲಧರ ನಿನಾದದಿಂ ಗಜರಿ ಗರ್ಜಿಸಿದ (ಎಂದು ಪ್ರಳಯಕಾಲದ ಗುಡುಗಿನ ಶಬ್ದದಿಂದ ಕೂಗಿ ಗರ್ಜನೆ ಮಾಡಿದ) ಜಟಾಸುರ ಆರಾತಿಯ (ಭೀಮನ) ಗಳಗರ್ಜನೆಗೆ (ಕಂಠದ ಆರ್ಭಟಕ್ಕೆ), ಕರಿ ಕಳಭ ಗರ್ಜನೆಗೆ ಏಳ್ವ ಮೃಗರಾಜನಂತೆ (ಆನೆಯ ಮರಿಯ ಗರ್ಜನೆಯನ್ನು ಕೇಳಿದ ಸಿಂಹದ ಹಾಗೆ) ರಾಜ ರಾಜಂ ಸೈರಿಸದೆ ಚಿತ್ತಸ್ಖಲನೆಯಾಗೆ (ಚಕ್ರವರ್ತಿಯಾದ ದುರ್ಯೋಧನನಿಗೆ ಮನದಸ್ಥಿರತೆಯು ಜಾರಿತು.) ಜಳಸ್ತಂಭಮಂತ್ರಮೆಲ್ಲಂ ಮಾಯಾಮಂತ್ರಮಾಗೆ (ಜಲಸ್ಥಂಬಮಂತ್ರವೆಲ್ಲಾ ಮಾಯಾ ಮಂತ್ರವಾಗಲು)-
ಪದ್ಯ-೦೦:ಅರ್ಥ: ಎಂದು ಪ್ರಳಯಕಾಲದ ಗುಡುಗಿನ ಶಬ್ದದಿಂದ ಕೂಗಿ ಗರ್ಜನೆ ಮಾಡಿದ ಭೀಮನ ಕಂಠದ ಆರ್ಭಟಕ್ಕೆ, ಆನೆಯ ಮರಿಯ ಗರ್ಜನೆಯನ್ನು ಕೇಳಿದ ಸಿಂಹದ ಹಾಗೆ ಚಕ್ರವರ್ತಿಯಾದ ದುರ್ಯೋಧನನಿಗೆ ಮನಸ್ಥೈರ್ಯವು ಜಾರಿತು. ಜಲಸ್ಥಂಬಮಂತ್ರವೆಲ್ಲಾ ಮಾಯಾಮಂತ್ರವಾಯಿತು, ಹಾಗೆ ಮಂತ್ರ ತಪ್ಪಿಹೋಗಲು.-
ಮ||ಪಗೆವಂಬಂದುರದಿಂತು ಮೂದಲಿಸೆಯುಂ ಮಾತಂ ಕಿವುಳ್ಗೀಳ್ದು ಕೆ
ಮ್ಮಗೆ ನೀರೊಳ್ ಮುಳುಗಿರ್ದೊಡಳ್ದು ಕಿಡುಗುಂಮಚ್ಚೌರ್ಯಮೆಂದುದ್ಧತಂ |
ನೆಗೆದಾಗಳ್ ವಿಲಸತ್ ಕಿರೀಟ ತಟರತ್ನಾಂಶುಪ್ರಭಾರಾಜಿ ತೊ
ಟ್ಟಗೆ ಕೆಯ್ಗಣ್ಮೆ ಸುರೇಂದ್ರ ಚಾಪರುಚಿಯಂ ಕೈಗೊಂಡುದಾ ಪೂಗೊಳಂ||೮೧ ||
ಪದ್ಯ-೮೧:ಪದವಿಭಾಗ-ಅರ್ಥ:ಪಗೆವಂ ಬಂದು ಉರದೆ ಇಂತು ಮೂದಲಿಸೆಯುಂ ( ಶತ್ರುವು ಹೀಗೆ ಬಂದು ಸುಮ್ಮನಿರದೆ/ ಅತಿಯಾಗಿ ಹೀಯಾಳಿಸಿದರೂ) ಮಾತಂ ಕಿವುಳ್ಗೀಳ್ದು ಕೆಮ್ಮಗೆ ನೀರೊಳ್ ಮುಳುಗಿರ್ದೊಡೆ (ಆ ಮಾತನ್ನು ಕಿವುಡರಂತೆ ಕಿವಿಗೆ ಹಾಕಿಕೊಳ್ಳದೆ ಸುಮ್ಮನೆ ನೀರಿನಲ್ಲಿ ಮುಳಗಿದ್ದರೆ) ಅಳ್ದು ಕಿಡುಗುಂ ಮಚ್ಚೌರ್ಯಂ ಎಂದು (ನನ್ನ ಶೌರ್ಯವು ಮುಳುಗಿ ಹಾಳಾಗುತ್ತದೆ ಎಂದು) ಉದ್ಧತಂ ನೆಗೆದಾಗಳ್ (ಆತ್ಮಾಭಿಮಾನಿಯಾದ ದುರ್ಯೋಧನನು,ನೀರಿನಿಂದ ಮೇಲಕ್ಕೆ ಜಿಗಿಯಲು) ವಿಲಸತ್ ಕಿರೀಟ ತಟರತ್ನಾಂಶುಪ್ರಭಾರಾಜಿ (ಪ್ರಕಾಶಮಾನವಾದ ಕಿರೀಟ ಪ್ರದೇಶದಲ್ಲಿರುವ ರತ್ನಗಳ ಕಾಂತಿ ಸಮೂಹವು) ತೊಟ್ಟಗೆ ಕೆಯ್ಗಣ್ಮೆ (ಅಧಿಕವಾಗಲು) ಸುರೇಂದ್ರ ಚಾಪರುಚಿಯಂ ಕೈಗೊಂಡುದಾ ಪೂಗೊಳಂ(ತಕ್ಷಣ ಹಾಗೆ ಅಧಿಕವಾಗಲು ಆ ಸರೋವರವು ಕಾಮನ ಬಿಲ್ಲಿನ ಕಾಂತಿಯನ್ನು ಹೊಂದಿತು.)
ಪದ್ಯ-೮೧:ಅರ್ಥ: ಶತ್ರುವು ಹೀಗೆ ಬಂದು ಸುಮ್ಮನಿರದೆ ಹೀಯಾಳಿಸಿದರೂ ಆ ಮಾತನ್ನು ಕಿವುಡರಂತೆ ಕಿವಿಗೆ ಹಾಕಿಕೊಳ್ಳದೆ ಸುಮ್ಮನೆ ನೀರಿನಲ್ಲಿ ಮುಳಗಿದ್ದರೆ, 'ನನ್ನ ಶೌರ್ಯವು ಮುಳುಗಿ ಹಾಳಾಗುತ್ತದೆ' ಎಂದು ಆತ್ಮಾಭಿಮಾನಿಯಾದ ದುರ್ಯೋಧನನು,ನೀರಿನಿಂದ ಮೇಲಕ್ಕೆ ಜಿಗಿಯಲು, ಪ್ರಕಾಶಮಾನವಾದ ಕಿರೀಟ ಪ್ರದೇಶದಲ್ಲಿರುವ ರತ್ನಗಳ ಕಾಂತಿ ಸಮೂಹವು ತಕ್ಷಣ ಹಾಗೆ ಅಧಿಕವಾಗಲು ಆ ಸರೋವರವು ಕಾಮನ ಬಿಲ್ಲಿನ ಕಾಂತಿಯನ್ನು ಹೊಂದಿತು.
ಚಂ|| ನೆಗೆಯ ಪೊದಳ್ದ ಬೊಬ್ಬುಳಿಕೆಗಳ್ ನೆಗೆದಂತೆರಡುಂ ಕೆಲಕ್ಕೆ ನೀ
ರುಗಿಯೆ ಗದಾಭಿಘಾತಪರಿಪೂರಿತ ತೋಯಜ ಷಂಡಮಲ್ಲಿಗ |
ಲ್ಲಿಗೆ ಕದಡೇಳೆ ಭೀಮಭುಜಮಂದರ ಘಟ್ಟನೆಯಿಂದಮಲ್ಲಿ ತೊ
ಟ್ಟಗೆ ಕೊಳೆ ಕಾಳಕೂಟ ಮೊಗೆವಂತೊಗೆದಂ ಫಣಿರಾಜಕೇತನಂ||೮೨ ||
ಪದ್ಯ-೮೨:ಪದವಿಭಾಗ-ಅರ್ಥ:ನೆಗೆಯ ಪೊದಳ್ದ ಬೊಬ್ಬುಳಿಕೆಗಳ್ ನೆಗೆದಂತೆ ಎರಡುಂ ಕೆಲಕ್ಕೆ ನೀರುಗಿಯೆ (ವ್ಯಾಪಿಸಿದ ನೀರುಗುಳ್ಳೆಗಳು ಮೇಲಕ್ಕೇಳಲು, ಅವು ಬಂದಹಾಗೆ ಎರಡು ಪಕ್ಕಗಳಿಗೂ ನೀರು ವಿಭಾಗವಾಯಯಿತು) ಗದಾಭಿಘಾತ ಪರಿಪೂರಿತ ತೋಯಜಷಂಡಂ (ಗದೆಯ ಹೊಡೆತದಿಂದ ತುಳುಕಿದ ಸರೋವರವು) ಅಲ್ಲಿಗಲ್ಲಿಗೆ ಕದಡಿ ಏಳೆ ಭೀಮಭುಜಮಂದರ ಘಟ್ಟನೆಯಿಂದಂ (ಅಲ್ಲಲ್ಲಿ ಬಗ್ಗಡವಾಗಲು ಭೀಮನ ಮಂದರ ಪರ್ವತದಂತಿರುವ ಬಾಹುಗಳ ಹೊಡೆತದಿಂದ) ಅಲ್ಲಿ ತೊಟ್ಟಗೆ ಕೊಳೆ ಕಾಳಕೂಟ ಮೊಗೆವಂತೆ ಒಗೆದಂ ಫಣಿರಾಜಕೇತನಂ (ಅಲ್ಲಿ ಬೇಗನೆ ಆಕ್ರಮಿಸಲು/ತೋರಲು, ಕಾಳಕೂಟ ವಿಷವು ಹುಟ್ಟುವಂತೆ ದುರ್ಯೋಧನನು ಹುಟ್ಟಿದನು. )
ಪದ್ಯ-೮೨:ಅರ್ಥ: ವ್ಯಾಪಿಸಿದ ನೀರುಗುಳ್ಳೆಗಳು ಮೇಲಕ್ಕೆದ್ದವು ಅವು ಬಂದಹಾಗೆ ಎರಡುಪಕ್ಕಗಳಿಗೂ ನೀರು ವಿಭಾಗವಾಯಯಿತು,. ಗದೆಯ ಹೊಡೆತದಿಂದ ತುಳುಕಿದ ಸರೋವರವು ಅಲ್ಲಲ್ಲಿ ಬಗ್ಗಡವಾಗಲು ಭೀಮನ ಮಂದರ ಪರ್ವತದಂತಿರುವ ಬಾಹುಗಳ ಹೊಡೆತದಿಂದ ಬೇಗನೆ ಆಕ್ರಮಿಸಲು ಕಾಳಕೂಟ ವಿಷವು ಹುಟ್ಟುವಂತೆ ದುರ್ಯೋಧನನು ಹುಟ್ಟಿದನು.
ವ||ಅಂತೊಗೆದು ದಿಕ್ಕರಿಕರಾನುಕಾರಿ ಕರಪರಿಘೋತ್ತರಿಂಸಿತ ತೋರಣೀಕೃತ ರೌದ್ರಗದಾದಂಡನುಂ ಪ್ರಚಂಡನುಮಾಗಿ ಸೆರಗಿಲ್ಲದೆ ಕೊಳದಿಂ ಪೊರಮಟ್ಟು ಬರ್ಪ ದುರ್ಯೋಧನನಂ ಧರ್ಮಪುತ್ರಂ ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ಒಗೆದು ದಿಕ್ಕರಿ ಕರಾನುಕಾರಿ ಕರ ಪರಿಘೋತ್ತರಿಂ ಸಿತ (ಹಾಗೆ ಹುಟ್ಟಿದ ದಿಗ್ಗಜದ ಸೊಂಡಿಲನ್ನು ಹೋಲುವ ಪರಿಘದಂತಿರುವ ಕೈಗೆ) ತೋರಣೀಕೃತ ರೌದ್ರ ಗದಾದಂಡನುಂ (ಆಭರಣ ಪ್ರಾಯವಾಗಿ ತೋರಣವಾಗಿ ಮಾಡಲ್ಪಟ್ಟ ಭಯಂಕರವಾದ ಗಧಾದಂಡವುಳ್ಳವನೂ) ಪ್ರಚಂಡನುಮಾಗಿ ಸೆರಗಿಲ್ಲದೆ ಕೊಳದಿಂ ಪೊರಮಟ್ಟು ಬರ್ಪ (ಬಹಳ ಕಾಂತಿಯುಕ್ತನೂ ಆಗಿಭಯವಿಲ್ಲದೆ ಕೊಳದಿಂದ ಹೊರಗೆಹೊರಟು ಬರುತ್ತಿರುವ) ದುರ್ಯೋಧನನಂ ಧರ್ಮಪುತ್ರಂ ನೋಡಿ (ನೋಡಿ - ಧರ್ಮಪುತ್ರನು ಹೀಗೆಂದನು.)-
ವಚನ:ಅರ್ಥ:ಹಾಗೆ ಹುಟ್ಟಿದ ದಿಗ್ಗಜದ ಸೊಂಡಿಲನ್ನು ಹೋಲುವ ಪರಿಘದಂತಿರುವ ಕೈಗೆ ಆಭರಣ ಪ್ರಾಯವಾಗಿ ತೋರಣವಾಗಿ ಮಾಡಲ್ಪಟ್ಟ ಭಯಂಕರವಾದ ಗಧಾದಂಡವುಳ್ಳವನೂ ಬಹಳ ಕಾಂತಿಯುಕ್ತನೂ ಆಗಿಭಯವಿಲ್ಲದೆ ಕೊಳದಿಂದ ಹೊರಗೆಹೊರಟು ಬರುತ್ತಿರುವ ದುರ್ಯೋಧನನ್ನು ನೋಡಿ- ಧರ್ಮರಾಯನು ಹೀಗೆಂದನು.
ಚಂ||ನಡಪಿದ ನೆಂಟರೆಯ್ದೆ ಪೊರೆದಾಳ್ ರಣರಂಗದೊಳುಳ್ಳರೆಲ್ಲರುಂ
ಮಡಿದೊಡಮುರ್ಕುಗುಂದದುಗುರಂತೆರಡುಂ ಕಡೆ ತಪ್ಪ ಕೂರ್ಪನೋ |
ಗುಡಿಸದೆ ತಾಳ್ದಿ ಮೆಯ್ಯೊಳೆ ವೃಕೋದರನೊಂದೆ ಸರಕ್ಕೆ ಕಾಯ್ಪಡಂ
ಬಡೆ ಸಿಡಿಲೇಳ್ಗೆಯಿಂ ಮಸಗಿ ಬಂದನಿದೇಂ ಕಲಿಯೋ ಸುಯೋಧನಂ || ೮೩ ||
ಪದ್ಯ-೮೩:ಪದವಿಭಾಗ-ಅರ್ಥ:ನಡಪಿದ ನೆಂಟರ್ ಎಯ್ದೆ ಪೊರೆದ ಆಳ್ ( ತನ್ನನ್ನು ಸಾಕಿ ಸಲಹಿದ ಬಂಧುಗಳೂ ತನ್ನನ್ನು ಚೆನ್ನಾಗಿ ಸಾಕಿದ ಆಳುಗಳೂ,) ರಣರಂಗದೊಳು ಉಳ್ಳರೆಲ್ಲರುಂ ಮಡಿದೊಡಂ (ಉಳಿದವರೆಲ್ಲರೂ ರಣರಂಗದಲ್ಲಿ ಸತ್ತರೂ,) ಉರ್ಕುಗುಂದದ ಉಗುರಂತೆ ಎರಡುಂ ಕಡೆ (ಉತ್ಸಾಹ ಶೂನ್ಯನಾಗದೆ ಉಗುರಿನ ಹಾಗೆ ಎರಡೂಕಡೆ) ತಪ್ಪ ಕೂರ್ಪನೋ ಗುಡಿಸದೆ ತಾಳ್ದಿ ಮೆಯ್ಯೊಳೆ (ನಾಶ ಮಾಡುವ ತೀಕ್ಷ್ಣತೆಯನ್ನು ಕಳೆದುಕೊಳ್ಳದೆ ತನ್ನ ಮಯ್ಯಲ್ಲಿ ಧರಿಸಿ) ವೃಕೋದರನ ಒಂದೆ ಸರಕ್ಕೆ (ಸ್ವರಕ್ಕೆ)ಕಾಯ್ಪಡಂ ಬಡೆ (ಭೀಮನ ಒಂದೇ ಗರ್ಜನೆಗೆ ಕೋಪವುಂಟಾಗಲು) ಸಿಡಿಲೇಳ್ಗೆಯಿಂ ಮಸಗಿ ಬಂದನಿದೇಂ ಕಲಿಯೋ ಸುಯೋಧನಂ (ಸಿಡಿಲಿನಂತೆ ರೇಗಿ ಬಂದಿದ್ದಾನೆ. ದುರ್ಯೋಧನನು ಎಂತಹ ಶೂರನೋ!)
ಪದ್ಯ-೮೩:ಅರ್ಥ: ತನ್ನನ್ನು ಸಾಕಿ ಸಲಹಿದ ಬಂಧುಗಳೂ ತನ್ನನ್ನು ಚೆನ್ನಾಗಿ ಸಾಕಿದ ಆಳುಗಳೂ, ಉಳಿದವರೆಲ್ಲರೂ ರಣರಂಗದಲ್ಲಿ ಸತ್ತರೂ, ಉತ್ಸಾಹ ಶೂನ್ಯನಾಗದೆ ಉಗುರಿನ ಹಾಗೆ ಎರಡೂಕಡೆ ನಾಶ ಮಾಡುವ ತೀಕ್ಷ್ಣತೆಯನ್ನು ಕಳೆದುಕೊಳ್ಳದೆ ತನ್ನ ಮಯ್ಯಲ್ಲಿ ಧರಿಸಿ ಭೀಮನ ಒಂದೇ ಗರ್ಜನೆಗೆ ಕೋಪವುಂಟಾಗಲು ಸಿಡಿಲಿನಂತೆ ರೇಗಿ ಬಂದಿದ್ದಾನೆ. ದುರ್ಯೋಧನನು ಎಂತಹ ಶೂರನೋ!
ವ|| ಎಂಬನ್ನೆಗಮಯ್ದೆವಂದು ದುರ್ಯೋಧನಂ ಪಾಂಡುತನೂಜನರನಿತೆಂದಂ-
ವಚನ:ಪದವಿಭಾಗ-ಅರ್ಥ:ಎಂಬ ಅನ್ನೆಗಂ ಎಯ್ದೆವಂದು ದುರ್ಯೋಧನಂ ಪಾಂಡುತನೂಜನರನು ಇಂತೆಂದಂ ( ಸಮೀಪಕ್ಕೆ ಬಂದು ಪಾಂಡವರಿಗೆ ಹೀಗೆಂದನು)-
ವಚನ:ಅರ್ಥ:ಎನ್ನುವಷ್ಟರಲ್ಲಿ ದುರ್ಯೋಧನನು ಸಮೀಪಕ್ಕೆ ಬಂದು ಪಾಂಡವರಿಗೆ ಹೀಗೆಂದನು-
ಮ||ಎಳೆ ಮುಂ ದೈತ್ಯನ ಕೆಯ್ಗೆ ಪೋಗೆ ತರಲೆಂದೀಚಕ್ರಿ ಮುನ್ನಂರಸಾ
ತಲಳಮಂ ಪೊಕ್ಕುದಮೀ ಮಹೋಗ್ರ ರಣದೊಳ್ ನಿಮ್ಮೊಂದು ಕಯ್ವಿಳ್ದಿ ಭೂ
ತಳಮಂ ಮತ್ತೆ ತರಲ್ ವಿಶುದ್ಧ ನಿಯಮ ಪ್ರಾರಂಭದಿಂದಾನುಮೀ
ಕೊಳನಂ ಪೊಕ್ಕುದುಮಾವ ದೋಷಮೆನಗಿಂ ಮಾರಾಂಪರಾರ್ ತೋರಿರೇ|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಎಳೆ ಮುಂ ದೈತ್ಯನ ಕೆಯ್ಗೆ ಪೋಗೆ ತರಲೆಂದು (ಹಿಂದೆ ಭೂಮಿಯ ರಾಕ್ಷಸನಾದ ಹಿರಣ್ಯಾಕ್ಷನ ಕೈಸೇರಲು ಅದನ್ನು ತರಲೆಂದು ಹೋಗೆಲು- ಹೋಗಲಿಲ್ಲವೇ-) ಈ ಚಕ್ರಿ ಮುನ್ನಂ ರಸಾತಲಳಮಂ ಪೊಕ್ಕುದಂ (ಈ ಕೃಷ್ಣನೇ ಮೊದಲು ಪಾತಾಳ ಲೋಕವನ್ನು ಪ್ರವೇಶ ಮಾಡಿದನು,) ಈ ಮಹೋಗ್ರ ರಣದೊಳ್ ನಿಮ್ಮೊಂದು ಕಯ್ವಿಳ್ದಿ ಭೂತಳಮಂ ಮತ್ತೆ ತರಲ್ (ಈ ಮಹಾ ಭಯಂಕರವಾದ ಯುದ್ಧದಲ್ಲಿ ನಿಮ್ಮ ಕೈಗೆ ಬಿದ್ದ ಭೂಮಂಡಲವನ್ನು) ವಿಶುದ್ಧ ನಿಯಮ ಪ್ರಾರಂಭದಿಂದಂ (ಪುನಃ ತರಲು ಶಾಸ್ತ್ರೋಕ್ತವಾದ ಆಚರಣೆಯಿಂದ) ಆನುಂ ಈ ಕೊಳನಂ ಪೊಕ್ಕುದುಂ (ನಾನು ಈ ಕೊಳವನ್ನು ಪ್ರವೇಶಿಸುವುದು) ಆವ ದೋಷಂ (ಯಾವ ಯಪ್ಪು? ) ಎನಗಿಎ ಇಂ ಮಾರಾಂಪರು ಆರ್ ತೋರಿರೇ (ನನಗೆ ಇನ್ನು ಎದುರಿಸುವವರು ಯಾರು ತೋರಿಸಿರಿ,)
ಪದ್ಯ-೮೪:ಅರ್ಥ: ಹಿಂದೆ ಭೂಮಿಯ ರಾಕ್ಷಸನಾದ ಹಿರಣ್ಯಾಕ್ಷನ ಕೈಸೇರಲು ಅದನ್ನು ತರಲೆಂದು ಈ ಕೃಷ್ಣನೇ ಮೊದಲು ಪಾತಾಳ ಲೋಕವನ್ನು ಪ್ರವೇಶ ಮಾಡಿದನು, ಈ ಮಹಾ ಭಯಂಕರವಾದ ಯುದ್ಧದಲ್ಲಿ ನಿಮ್ಮ ಕೈಗೆ ಬಿದ್ದ ಭೂಮಂಡಲವನ್ನು ಪುನಃ ತರಲು ಶಾಸ್ತ್ರೋಕ್ತವಾದ ಆಚರಣೆಯಿಂದ ನಾನು ಈ ಕೊಳವನ್ನು ಪ್ರವೇಶಿಸುವುದು, ಯಾವ ಯಪ್ಪು? ನನಗೆ ಇನ್ನು ಎದುರಿಸುವವರು ಯಾರು ತೋರಿಸಿರಿ, ಎಂದನು ದುರ್ಯೋಧನ.
ವ|| ಎಂಬುದುಂ ಧರ್ಮಪುತ್ರನಿಂತೆಂದಂ
ವಚನ:ಪದವಿಭಾಗ-ಅರ್ಥ: ಎಂಬುದುಂ ಧರ್ಮಪುತ್ರನು ಇಂತು ಎಂದಂ (ಹೀಗೆಂದನು)-
ವಚನ:ಅರ್ಥ:ಧರ್ಮರಾಯನು ಹೀಗೆಂದನು-
ಮ|| ಬಿಸುಡಿನ್ನಪ್ಪೊಡಮೇವಮಂ ಧರಣಿಯಂ ಪೆಚ್ಚಾಳ್ವಮೇನಪ್ಪುದೀ
ಕಿಸುರೊಳ್ ಕೆಮ್ಮನೆ ಪಾಪಕರ್ಮ ಚಲಮಂ ಕೊಂಡಾಡದೆಮ್ಮಯ್ವರುಂ |
ಬೆಸಕೈಯುತ್ತಿರೆ ನೀನೆ ಮೇಣರಸುಗೈ ಸೋದರ್ಯದಿಂದೊಳ್ಳಿತೇ
ವಸುಧಾಮಂಡಳಮಿಂಬುಕೆಯ್ವುದಿದನಾಂ ಕೆಯ್ಯೊಡ್ಡಿದೆಂ ಬೇಡಿದೆಂ ||೮೫||
ಪದ್ಯ-೮೫:ಪದವಿಭಾಗ-ಅರ್ಥ:ಬಿಸುಡು ಇನ್ನಪ್ಪೊಡಂ ಏವಮಂ (ದುರ್ಯೋದನ ಇನ್ನು ಮೇಲಾದರೂ ಕೋಪವನ್ನು ತೆಗೆದುಹಾಕು;) ಧರಣಿಯಂ ಪೆಚ್ಚಿ ಆಳ್ವಂ ಏನಪ್ಪುದು ಈಕಿಸುರೊಳ್ (ಭೂಮಿಯನ್ನು ಭಾಗ ಮಾಡಿ ಆಳೋಣ . ಈ ದ್ವೇಷದಿಂದ ಏನು ಪ್ರಯೋಜನ?) ಕೆಮ್ಮನೆ ಪಾಪಕರ್ಮ ಚಲಮಂ ಕೊಂಡಾಡದೆ (ನಿಷ್ಪ್ರಯೋಜಕವಾಗಿ ಪಾಪಕರ್ಮವಾದ ಹಟವನ್ನು ಹಿಡಿಯದೆ) ಎಮ್ಮ ಅಯ್ವರುಂ ಬೆಸಕೈಯುತ್ತಿರೆ ನೀನೆ ಮೇಣ್ ಅರಸುಗೈ (ನಾವು ಅಯ್ದು ಜನರೂ ನಿನಗೆ ಸೇವೆ ಮಾಡುವ ಹಾಗೆ ನೀನೇ ರಾಜ್ಯಭಾರ ಮಾಡು.) ಸೋದರ್ಯದಿಂದ ಒಳ್ಳಿತೇ ವಸುಧಾಮಂಡಳಂ (ಸೋದರ ಭಾವಕ್ಕಿಂತ ಈ ಭೂಮಂಡಲ ಮೇಲಾದುದೇ? ) ಇಂಬುಕೆಯ್ವುದು ಇದನು ಆಂ ಕೆಯ್ಯೊಡ್ಡಿದೆಂ ಬೇಡಿದೆಂ (ಇದನ್ನು ಅಂಗೀಕರಿಸು ಕಯ್ಯೊಡ್ಡಿ ಬೇಡಿದ್ದೇನೆ, ಎಂದನು ಧರ್ಮರಾಯ.)
ಪದ್ಯ-೮೫:ಅರ್ಥ: ದುರ್ಯೋದನ ಇನ್ನು ಮೇಲಾದರೂ ಕೋಪವನ್ನು ತೆಗೆದುಹಾಕು; ಭೂಮಿಯನ್ನು ಭಾಗ ಮಾಡಿ ಆಳೋಣ . ಈ ದ್ವೇಷದಿಂದ ಏನು ಪ್ರಯೋಜನ? ನಿಷ್ಪ್ರಯೋಜಕವಾಗಿ ಪಾಪಕರ್ಮವಾದ ಹಟವನ್ನು ಹಿಡಿಯದೆ, ನಾವು ಅಯ್ದು ಜನರೂ ನಿನಗೆ ಸೇವೆ ಮಾಡುವ ಹಾಗೆ ನೀನೇ ರಾಜ್ಯಭಾರ ಮಾಡು. ಸೋದರ ಭಾವಕ್ಕಿಂತ ಈ ಭೂಮಂಡಲ ಮೇಲಾದುದೇ? ಇದನ್ನು ಅಂಗೀಕರಿಸು ಕಯ್ಯೊಡ್ಡಿ ಬೇಡಿದ್ದೇನೆ, ಎಂದನು ಧರ್ಮರಾಯ.
ವ|| ಎಂಬುದುಂ ಅಂಬುಜೋದರನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂಬುಜೋದರನು ಇಂತೆಂದಂ (ಕಮಲನಾಭ ಕೃಷ್ಣನು ಹೀಗೆಂದನು-) -
ವಚನ:ಅರ್ಥ: ಹಾಗೆನ್ನಲು ಕಮಲನಾಭ ಕೃಷ್ಣನು ಹೀಗೆಂದನು-
ಅನವದ್ಯ||ಅಯ್ದಳಿವಾಡದೊಳಯ್ವರುಮಂ ನೀಂ ಕೂರ್ತಿರಿಸೆದೊಡಮೆಂತುಮೇ
ಗೆಯ್ದುಮೊದಲ್ಲದ ಕಾರಣದಿಂದಂ ನೋಡಿನಿತಾದುದು ನಿನ್ನೊಳೇಂ |
ಸಯ್ದವನಲ್ಲನೆ ಧರ್ಮತನೂಜಂ ಪೇಳ್ದುದೆನಿನ್ನೆಮಗಿಂಬುಕೆಯ್
ಸಯ್ದುನೆ ಆಗುಳಿದಾರೊಳಮೇವಂಗೊಳ್ಳದಿರಿಂ ಫಣಿಕೇತನಾ ||೮೬ ||
ಪದ್ಯ-೮೬:ಪದವಿಭಾಗ-ಅರ್ಥ:ಅಯ್ದು ಅಳಿವಾಡದೊಳ್ ಅಯ್ವರುಮಂ (ಅಯ್ದು ಸಾಮಾನ್ಯವಾದ ಗ್ರಾಮಗಳಲ್ಲಿ ಅಯ್ದುಜನರನ್ನು) ನೀಂ ಕೂರ್ತು ಇರಿಸು ಎಂದೊಡಂ (ನೀನು ಪ್ರೀತಿಯಿಂದ ಇರಿಸು ಎಂದು ಹೇಳಿದರೂ) ಎಂತುಮ್ ಏಗೆಯ್ದುಂ ಅದು ಒಲ್ಲದ ಕಾರಣದಿಂದಂ ನೋಡು ಇನಿತಾದುದು (ಹೇಗೋ ಏನು ಮಾಡಿಯೂ ಅದಕ್ಕೆ ಒಪ್ಪದ ಕಾರಣದಿಂದ ಇಷ್ಟಾಯಿತು ನೋಡು.) ನಿನ್ನೊಳೇಂ ಸಯ್ದವನಲ್ಲನೆ ಧರ್ಮತನೂಜಂ (ನಿನ್ನಲ್ಲಿ ಧರ್ಮರಾಜನು ನೇರವಾಗಿ ಸ್ನೇಹದಿಂದ ನೆಡೆದುಕೊಂಡಿಲ್ಲವೇ.) ಪೇಳ್ದುದಂ ಇನ್ನು ಎಮಗೆ ಇಂಬುಕೆಯ್ (ಧರ್ಮರಾಯನು- ಹೇಳಿದುದನ್ನು ನಮಗಾಗಿ ಅಂಗೀಕಾರ ಮಾಡು.) ಸಯ್ದುನೆ ಆಗು (ನೇರವಾದವ- ಸತ್ಯವಂತ/ಸ್ನೇಹಿತ ಆಗು) ಉಳಿದ ಆರೊಳಂ ಏವಂಗೊಳ್ಳದೆ ಇರಿಂ ಫಣಿಕೇತನಾ (ದುರ್ಯೋಧನಾ ಉಳಿದ ಯಾರಲ್ಲಿಯೂ ಕೋಪಿಸಿಕೊಳ್ಳಬೇಡ.)
ಪದ್ಯ-೮೬:ಅರ್ಥ:ಅಯ್ದು ಸಾಮಾನ್ಯವಾದ ಗ್ರಾಮಗಳಲ್ಲಿ ಅಯ್ದುಜನರನ್ನು ನೀನು ಪ್ರೀತಿಯಿಂದ ಇರಿಸು ಎಂದು ಹೇಳಿದರೂ ಹೇಗೋ ಏನು ಮಾಡಿಯೂ ಅದಕ್ಕೆ ಒಪ್ಪದ ಕಾರಣದಿಂದ ಇಷ್ಟಾಯಿತು ನೋಡು. ನಿನ್ನಲ್ಲಿ ಧರ್ಮರಾಜನು ನೇರವಾಗಿ ಸ್ನೇಹದಿಂದ ನೆಡೆದುಕೊಂಡಿಲ್ಲವೇ. ಧರ್ಮರಾಯನು ಹೇಳಿದುದನ್ನು ನಮಗಾಗಿ ಅಂಗೀಕಾರ ಮಾಡು. ಸತ್ಯವಂತನಾಗಿ/ ಸ್ನೇಹಿತನಾಗಿಯೇ ಉಳಿ. ದುರ್ಯೋಧನಾ ಉಳಿದ ಯಾರಲ್ಲಿಯೂ ಕೋಪಿಸಿಕೊಳ್ಳಬೇಡ.
ವ||ಎಂಬುದುಮಾ ಮಾತಂ ಕೆಳಗಿವಿಗೆಯ್ದು ತನ್ನ ಗದಾ ದಂಡಮಂ ಭುಜಾದಂಡದೊಳಳವಡಿಸಿ ನೋಡಿ ದುರ್ಯೋಧನನಿಂತೆಂದಂ -
ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮಾತಂ ಕೆಳಗಿವಿಗೆಯ್ದು (ಎನ್ನಲು ಆಮಾತನ್ನು ಕಿವಿಗೆ ಹಾಕಿಕೊಳ್ಳದೆ) ತನ್ನ ಗದಾ ದಂಡಮಂ ಭುಜಾದಂಡದೊಳ್ ಅಳವಡಿಸಿ ನೋಡಿ ದುರ್ಯೋಧನನಿಂತೆಂದಂ (ತನ್ನ ಗದೆಯನ್ನು ಭಜದಮೇಲೆ ಇರಿಸಿಕೊಂಡು ನೋಡಿ, ದುರ್ಯೋಧನನು ಹೀಗೆ ಹೇಳಿದನು.) -
ವಚನ:ಅರ್ಥ: ಎನ್ನಲು ಆಮಾತನ್ನು ಕಿವಿಗೆ ಹಾಕಿಕೊಳ್ಳದೆ, ತನ್ನ ಗದೆಯನ್ನು ಭಜದಮೇಲೆ ಇರಿಸಿಕೊಂಡು ನೋಡಿ, ದುರ್ಯೋಧನನು ಹೀಗೆ ಹೇಳಿದನು.
ಕಂ|| ಮುನ್ನಿಮ್ಮ ಪೇಳ್ದು ಗೆಯ್ಯದ
ನಿನ್ನೀ ಪದದಲ್ಲಿ ಪೇಳ್ದು ಗೆಯ್ದುಂತುಂತೇಂ |
ಪನ್ನಗ ಪತಾಕನಲ್ಲನೇ
ಬಿನ್ನವಣೆ ಮಾತೆನೆನ್ನೊಳಿಂ ನುಡಿಯದಿರಿಂ|| ೮೭ ||
ಪದ್ಯ-೮೭:ಪದವಿಭಾಗ-ಅರ್ಥ:ಮುಂ ನಿಮ್ಮ ಪೇಳ್ದು ಗೆಯ್ಯದ (ಮೊದಲು ನೀವು ಹೇಳಿದ್ದನ್ನು ಮಾಡದವನು) ಇನ್ ಈ ಪದದಲ್ಲಿ ಪೇಳ್ದು ಗೆಯ್ದುಂತು ಉಂತೆ (ಇನ್ನು ಸುಮ್ಮನೆ ಈ ಸಂದರ್ಭದಲ್ಲಿ ನೀವು ಹೇಳಿದುದನ್ನು ಮಾಡುವುದಕ್ಕೆ) ಏಂ ಪನ್ನಗಪತಾಕನು ಅಲ್ಲನೇ (ಅಭಿಮಾನ ಧನನಾದ ದುರ್ಯೋಧನನಲ್ಲವೇ?) ಬಿನ್ನವಣೆ ಮಾತು ಎನೆನ್ನೊಳು ಇಂ ನುಡಿಯದಿರಿಂ (ವೃಥಾ ಬಿನ್ನಾಣದ ಲೋಕೋಕ್ತಿಯನ್ನು ನನ್ನಲ್ಲಿ ಆಡಬೇಡಿ.)
ಪದ್ಯ-೮೭:ಅರ್ಥ: ಮೊದಲು ನೀವು ಹೇಳಿದ್ದನ್ನು ಮಾಡದವನು ಇನ್ನು ಸುಮ್ಮನೆ ಈ ಸಂದರ್ಭದಲ್ಲಿ ನೀವು ಹೇಳಿದುದನ್ನು ಮಾಡುವುದಕ್ಕೆ ಅಭಿಮಾನ ಧನನಾದ ದುರ್ಯೋಧನನಲ್ಲವೇ? ವೃಥಾ ಬಿನ್ನಾಣದ ಲೋಕೋಕ್ತಿಯನ್ನು ನನ್ನಲ್ಲಿ ಆಡಬೇಡಿ.
ಶಾ||ಆ ದುಶ್ಶಾಸನನಂ ಪೊರಳ್ಚಿ ರಣದೊಳ್ ಕೊದೀ ಮರುತ್ಪುತ್ರನಿಂ
ತಾದಂ ದಳ್ಳಿಸೆನೋಡಿ ನೋಡಿ ಪುದುವಾಳೆಂತಕ್ಕುಮಿಂತೀಗಳಾ |
ನಾದೆಂ ಮೇಣಿವನಾದನೇಕೆ ತಡೆವಿರ್ ಕೆಯ್ವೊಯ್ದೆವಿನ್ನೀಂ ಕರಂ
ಸೋದರ್ಯಕ್ಕೆ ಕನಲ್ದೊಡಿಂತಿನಿಬರುಂ ಕಾದಿಂ ಭರಂಗೆಯ್ದಪೆಂ ||೮೮ ||
ಪದ್ಯ-೮೮:ಪದವಿಭಾಗ-ಅರ್ಥ:ಆ ದುಶ್ಶಾಸನನಂ ಪೊರಳ್ಚಿ ರಣದೊಳ್ ಕೊಂದ (ದುಶ್ಶಾಸನನ್ನು ಯುದ್ಧದಲ್ಲಿ ಹೊರಳಿಸಿ ಕೊಂದ) ಈ ಮರುತ್ಪುತ್ರನಿಂ ತಾದಂ ದಳ್ಳಿಸೆ ನೋಡಿ ನೋಡಿ (ಈ ಭೀಮನೂ ಹೀಗೆ ವಿಶೇಷವಾಗಿ ಉರಿಯುತ್ತಿರುವುದನ್ನು ನೋಡಿ ನೋಡಿಯೂ) ಪುದುವಾಳ್ ಎಂತು ಅಕ್ಕುಂ (ಜೊತೆಯಲ್ಲಿ ಕೂಡಿ ಹುದುವಾದ ಬಾಳು ಹೇಗೆ ಸಾಧ್ಯವಾಗುತ್ತದೆ? ) ಇಂತು ಈಗಳು ಆನಾದೆಂ ಮೇಣ್ ಇವನಾದನು ಏಕೆ ತಡೆವಿರ್ ( ಈಗ ನಾನಾದೆನು ಮತ್ತು ಇವನಾದನು. ಏಕೆ ತಡೆಯುತ್ತಿದ್ದೀರಿ?) ಕೆಯ್ವೊಯ್ದೆವು (ಕೈ ತಟ್ಟಿದ್ದೇವೆ. ಯುದ್ಧಕ್ಕೆ ಸಿದ್ಧವಾಗಿ ಸೂಚನೆ. ಕೈತಟ್ಟು, ತೊಡೆತಟ್ಟು-) ಇನ್ನು ಇಂ ಕರಂ ಸೋದರ್ಯಕ್ಕೆ ಕನಲ್ದೊಡೆ ಇಂತು ಇನಿಬರುಂ ಕಾದಿಂ ಭರಂ ಗೆಯ್ದಪೆಂ. (ಇನ್ನು ನೀವು ಬಹಳ ಸೋದರತನಕ್ಕೆ ಕೋಪಿಸಿಕೊಳ್ಳುವುದಾದರೆ ನೀವಿಷ್ಟು ಜನವೂ ಯುದ್ಧಮಾಡಿ. ನಾನು ಎದುರಿಸುತ್ತೇನೆ.)
ಪದ್ಯ-೮೮:ಅರ್ಥ: ದುಶ್ಶಾಸನನ್ನು ಯುದ್ಧದಲ್ಲಿ ಹೊರಳಿಸಿ ಕೊಂದ ಈ ಭೀಮನೂ ಹೀಗೆ ವಿಶೇಷವಾಗಿ ಉರಿಯುತ್ತಿರುವುದನ್ನು ನೋಡಿ ನೋಡಿಯೂ ಜೊತೆಯಲ್ಲಿ ಕೂಡಿ ಹುದುವಾದ ಬಾಳು ಹೇಗೆ ಸಾಧ್ಯವಾಗುತ್ತದೆ? ಈಗ ನಾನಾದೆನು ಮತ್ತು ಇವನಾದನು. ಏಕೆ ತಡೆಯುತ್ತಿದ್ದೀರಿ? ಕೈ ತಟ್ಟಿದ್ದೇವೆ. ಇನ್ನು ನೀವು ಬಹಳ ಸೋದರತನಕ್ಕೆ (ಒಟ್ಟಾಗಿ) ಕೋಪಿಸಿಕೊಳ್ಳುವುದಾದರೆ ನೀವಿಷ್ಟು ಜನವೂ ಯುದ್ಧಮಾಡಿ. ನಾನು ಎದುರಿಸುತ್ತೇನೆ.
ವ||ಎಂಬನ್ನೆಗಂ ತೀರ್ಥಯಾತ್ರೆಯೊಳ್ ತೊಡರ್ದು ತಡೆದ ಬಲದೇವಂ ದುರ್ಯೋಧನಂಗಾಯು ಬರ್ಪಂತೆ ಪೆಗಲೊಳ್ ಹಲಾಯುಧವನಿಕ್ಕಿಕೊಂಡು ಜಂಗಮ ಪರ್ವತಮೆ ಬರ್ಪಂತೆ ಬಂದು ತನಗೆ ಪೊಡಮಟ್ಟ ದುರ್ಯೋಧನನಂ ಪರಸಿ ಪಿರಿದುಮಳ್ಕರಿಂದಪ್ಪಿಕೊಂಡಾತಂಗಾದವಸ್ಥೆಯಂ ಕಂಡು ಮನ್ಯುಗದ್ಗದಕಂಠನಾಗಿ ತನಗೆರಗಿದ ಮುರಾಂತಕನುಮಂ ಪಾಂಡುವರುಮಂ ಪರಸಲೊಲ್ಲದಿದೇನಂ ಮಾಡಿದಿರೆಂದೊಡೆ ಮಧುಮಥನನಣ್ಣನ ಮುನಿದ ಮೊಗಮನರಿದಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬನ್ನೆಗಂ ತೀರ್ಥಯಾತ್ರೆಯೊಳ್ ತೊಡರ್ದು ತಡೆದ (ಎನ್ನುವಷ್ಟರಲ್ಲಿ ತೀರರ್ಥಯಾಯಾತ್ರೆಯಲ್ಲಿ ನಿರತನಾಗಿದ್ದ ಅಲ್ಲಿಗೆ ಬರಲು ತಡವಾಗಿದ್ದ) ಬಲದೇವಂ ದುರ್ಯೋಧನಂಗಾಯು ಬರ್ಪಂತೆ ಪೆಗಲೊಳ್ ಹಲಾಯುಧವನಿಕ್ಕಿಕೊಂಡು ಜಂಗಮ ಪರ್ವತಮೆ ಬರ್ಪಂತೆ ಬಂದು (ಬಲರಾಮನು ದುರ್ಯೋಧನನಿಗೆ ಆಯಸ್ಸು ಬರುವಂತೆ ಹೆಗಲಮೇಲೆ ನೇಗಿಲನ್ನು ಇಟ್ಟುಕೊಂಡು ಚಲಿಸುವ ಬೆಟ್ಟವೇ ಬಂದಂತೆ ಬಂದು,) ತನಗೆ ಪೊಡಮಟ್ಟ ದುರ್ಯೋಧನನಂ ಪರಸಿ ಪಿರಿದುಂ ಅಳ್ಕರಿಂದ ಅಪ್ಪಿಕೊಂಡು ಆತಂಗಾದ ಅವಸ್ಥೆಯಂ ಕಂಡು ಮನ್ಯುಗದ್ಗದಕಂಠನಾಗಿ (ತನಗೆ ನಮಿಸಿದ ದುರ್ಯೋಧನನ್ನು ಹರಸಿ, ಬಹಳ ಪ್ರೀತಿಯಿಂದ ಅಪ್ಪಿಕೊಂಡು ಆತನಿಗಾದ ಅವಸ್ಥೆಯನ್ನು ಕಂಡು ದುಃಖದಿಂದ ಗದ್ಗದಿತ ದನಿಯಿಂದ) ತನಗೆರಗಿದ ಮುರಾಂತಕನುಮಂ ಪಾಂಡುವರುಮಂ ಪರಸಲು ಒಲ್ಲದೆ ಇದೇನಂ ಮಾಡಿದಿರಿ ಎಂದೊಡೆ (ತನಗೆ ನಮಸ್ಕಾರ ಮಾಡಿದ ಕೃಷ್ಣನಿಗೂ ಪಾಂಡವರಿಗೂ ಹರಸಲು ಇಷ್ಟ ಪಡದೆ ಇದೇನು ಮಾಡಿದಿರಿ ಎಂದನು. ಎಂದಾಗ) ಮಧುಮಥನನು ಅಣ್ಣನ ಮುನಿದ ಮೊಗಮನು ಅರಿದು ಇಂತೆಂದಂ ()-
ವಚನ:ಅರ್ಥ:ಎನ್ನುವಷ್ಟರಲ್ಲಿ ತೀರರ್ಥಯಾಯಾತ್ರೆಯಲ್ಲಿ ನಿರತನಾಗಿದ್ದ ಅಲ್ಲಿಗೆ ಬರಲು ತಡವಾಗಿದ್ದ ಬಲರಾಮನು ದುರ್ಯೋಧನನಿಗೆ ಆಯಸ್ಸು ಬರುವಂತೆ ಹೆಗಲಮೇಲೆ ನೇಗಿಲನ್ನು ಇಟ್ಟುಕೊಂಡು ಚಲಿಸುವ ಬೆಟ್ಟವೇ ಬಂದಂತೆ ಬಂದು, ತನಗೆ ನಮಿಸಿದ ದುರ್ಯೋಧನನ್ನು ಹರಸಿ, ಬಹಳ ಪ್ರೀತಿಯಿಂದ ಅಪ್ಪಿಕೊಂಡು ಆತನಿಗಾದ ಅವಸ್ಥೆಯನ್ನು ಕಂಡು ದುಃಖದಿಂದ ಗದ್ಗದಿತ ದನಿಯಿಂದ ತನಗೆ ನಮಸ್ಕಾರ ಮಾಡಿದ ಕೃಷ್ಣನಿಗೂ ಪಾಂಡವರಿಗೂ ಹರಸಲು ಇಷ್ಟ ಪಡದೆ ಇದೇನು ಮಾಡಿದಿರಿ ಎಂದನು. ಎಂದಾಗ, ಕೃಷ್ಣನು ಅಣ್ನನ ಕೋಪವನ್ನು ಅರ್ಥ ಮಾಡಿಕೊಂಡು ಹೀಗೆಂದನು.
ಚಂ||ಮುಳಿವೊಡಮೆಯ್ದೆ ಕೇಳ್ದು ಮಳಿ ಪಾಂಡ ತನೂಜರ ಮುನ್ನಿನಾಳ್ದ ಭೂ
ತಳಮನದೆಂತು ಮೀಯದೆ ಸುಯೋಧನನುದ್ಧತ ವೃತ್ತಿಯಿಂ ಸುಹೃ
ದ್ಬಳಮಳಿದಳ್ಗಿ ಕಾದಿ ಪುದುವಾಳ್ಕೆಗೊಡಂಬಡಲೊಲ್ಲದಿನ್ನುಮ
ವ್ವಳಿಸುವನೀಗಳಾತನನೆ ನೀಂ ಬೆಸಗಳ್ ಪುಸಿಯಂ ಸುಯೋಧನಂ || ೮೯ ||
ಪದ್ಯ-೮೯:ಪದವಿಭಾಗ-ಅರ್ಥ:ಮುಳಿವೊಡಂ ಎಯ್ದೆ ಕೇಳ್ದು ಮಳಿ (ಕೋಪಿಸಿಕೊಳ್ಳುವುದಾದರೆ ಚೆನ್ನಾಗಿ ವಿಚಾರ ಮಾಡಿ ಕೋಪಿಸಿಕೊ.) ಪಾಂಡತನೂಜರ ಮುನ್ನಿನ ಆಳ್ದ ಭೂ ತಳಮನು ಅದು ಎಂತುಂ ಈಯದೆ (ಪಾಂಡವರು ಮೊದಲು ಆಳಿದ ಭೂಮಿಯನ್ನು ಏನುಮಾಡಿದರೂ ಕೊಡದೆ) ಸುಯೋಧನನು ಉದ್ಧತ ವೃತ್ತಿಯಿಂ ಸುಹೃದ್ಬಳಂ ಅಳಿದು ಅಳ್ಗಿ ಕಾದಿ (ದುರ್ಯೋಧನನು ಗರ್ವದಿಂದ ಮಿತ್ರಸೈನ್ಯಗಳೆಲ್ಲಾಸತ್ತು ನಾಶವಾಗುವ ಹಾಗೆ ಯುದ್ಧಮಾಡಿ,) ಪುದುವಾಳ್ಕೆಗೆ ಒಡಂಬಡಲೊಲ್ಲದೆ ಇನ್ನುಂ ಅವ್ವಳಿಸುವಂ ಈಗಳು ಆತನನೆ ನೀಂ ಬೆಸಗಳ್ (ಕೂಡಿಬಾಳುವುದಕ್ಕೆ ಒಪ್ಪಿಕೊಳ್ಳದೆ ಇನ್ನೂ ಮೇಲೆ ಬೀಳುತ್ತಿದ್ದಾನೆ. ಈಗ ಅವನನ್ನೇ ನೀನು ಕೇಳು.) ಪುಸಿಯಂ ಸುಯೋಧನಂ (ದುರ್ಯೋಧನನು ಹುಸಿಯಾಡುವುದಿಲ್ಲ.)
ಪದ್ಯ-೮೯:ಅರ್ಥ: ಕೃಷ್ಣ ಹೇಳಿದ, ನೀನು ಕೋಪಿಸಿಕೊಳ್ಳುವುದಾದರೆ ಚೆನ್ನಾಗಿ ವಿಚಾರ ಮಾಡಿ ಕೋಪಿಸಿಕೊ. ಪಾಂಡವರು ಮೊದಲು ಆಳಿದ ಭೂಮಿಯನ್ನು ಏನುಮಾಡಿದರೂ ಕೊಡದೆ ದುರ್ಯೋಧನನು ಗರ್ವದಿಂದ ಮಿತ್ರಸೈನ್ಯಗಳೆಲ್ಲಾಸತ್ತು ನಾಶವಾಗುವ ಹಾಗೆ ಯುದ್ಧಮಾಡಿ, ಕೂಡಿಬಾಳುವುದಕ್ಕೆ ಒಪ್ಪಿಕೊಳ್ಳದೆ ಇನ್ನೂ ಮೇಲೆ ಬೀಳುತ್ತಿದ್ದಾನೆ. ಈಗ ಅವನನ್ನೇ ನೀನು ಕೇಳು. ದುರ್ಯೋಧನನು ಹುಸಿಯಾಡುವುದಿಲ್ಲ.
ವ||ಎನೆ ನೀಂ ಮರುಳ್ತನಮನೇಕೆ ಮಾಡಿದೆಯೆಂದು ತನ್ನ ಮೊಗಮಂ ನೋಡಿದ ಹಲಾಯುಧಂಗೆ ದುರ್ಯೋಧನನಿಂತೆಂದಂ -
ವಚನ:ಪದವಿಭಾಗ-ಅರ್ಥ:ಎನೆ, ನೀಂ ಮರುಳ್ತನಮನು ಏಕೆ ಮಾಡಿದೆಯೆಂದು (ನೀನು ದಡ್ಡತನವನ್ನೇಕೆ ಮಾಡಿದೆ ಎಂದು) ತನ್ನ ಮೊಗಮಂ ನೋಡಿದ ಹಲಾಯುಧಂಗೆ ದುರ್ಯೋಧನನು ಇಂತೆಂದಂ (ತನ್ನ ಮುಖವನ್ನು ನೋಡಿದ ಬಲರಾಮನಿಗೆ ದುತರ್ಯೋಧನನು ಹೀಗೆಂದನು-) -
ವಚನ:ಅರ್ಥ:ಎನ್ನಲು, ನೀನು ದಡ್ಡತನವನ್ನೇಕೆ ಮಾಡಿದೆ ಎಂದು ತನ್ನ ಮುಖವನ್ನು ನೋಡಿದ ಬಲರಾಮನಿಗೆ ದುತರ್ಯೋಧನನು ಹೀಗೆಂದನು-
ಮ||ಹರಿಯೆಂದಂದಮವಂತೆ ಪಾಂಡುತನಯರ್ ನಿರ್ದೋಷಿಗಳ್ ತಥ್ಯಮಿಂ
ತು ರಣಸ್ಥಾನದೊಳಿನ್ನೆರಳ್ನುಡಿವೆನೇ ಮದ್ಬಂಧು ಶೋಕಾಗ್ನಿಯಿಂ |
ದುರಿದಪ್ಪೆಂ ತೊಡರ್ದೆನ್ನಿಂ ಬಿಡು ವಿರೋಧಿಕ್ಷ್ಮಾಪರೆನ್ನೀ ಗದಾ
ಪರಿಘಾತದಿಂದಳ್ಗಿ ತಳ್ಗಿ ಮಡಿದಿನ್ನಳ್ಕಾಡದೇಂ ಪೋಪರೇ || ೯೦||
ಪದ್ಯ-೯೦:ಪದವಿಭಾಗ-ಅರ್ಥ:ಹರಿಯೆಂದ ಅಂದಂ ಅವು ಅಂತೆ (ಕೃಷ್ಣ ಹೇಳಿದುದು ಅದು ಹಾಗೆಯೇಸರಿ.) ಪಾಂಡುತನಯರ್ ನಿರ್ದೋಷಿಗಳ್ ತಥ್ಯಂ (ಪಾಂಡುಪುತ್ರರು ನಿರ್ದೋಷಿಗಳು. ಅದು ನಿಜ.) ಇಂತು ರಣಸ್ಥಾನದೊಳ್ ಇನ್ನು ಎರಳ್ನುಡಿವೆನೇ ( ಯುದ್ಧರಂಗದಲ್ಲಿ ಇನ್ನು ಮೇಲೆ ಎರಡು ಮಾತನ್ನಾಡುತ್ತೇನೆಯೇ?) ಮದ್ಬಂಧು- ಮತ್ ಬಂಧು ಶೋಕಾಗ್ನಿಯಿಂದ ಉರಿದಪ್ಪೆಂ (ನನ್ನ ಬಾಂದವರ ಮರಣದಿಂದುಂಟಾದ ದಃಖದ ಬೆಂಕಿಯಿಂದ ಉರಿಯುತ್ತಿದ್ದೇನೆ.) ತೊಡರ್ದ ಎನ್ನ ಇಂ ಬಿಡು (ಯುದ್ಧದಲ್ಲಿ ತೊಡಗಿರುವ ನನ್ನನ್ನು ನೀನು ಬಿಟ್ಟುಬಿಡು.) ವಿರೋಧಿಕ್ಷ್ಮಾಪರ್ ಎನ್ನ ಈ ಗದಾ ಪರಿಘಾತದಿಂದ ಅಳ್ಗಿ ತಳ್ಗಿ (ವೈರಿರಾಜರು ಈ ಪರಿಘದಂತಿರುವ ಈ ಗದೆಯ ಪೆಟ್ಟಿನಿಂದ ನಾಶವಾಗಿ ಬಿದ್ದು) ಮಡಿದು ಇನ್ನು ಅಳ್ಕಾಡದೆ ಏಂ ಪೋಪರೇ (ಏನು ಹಾಳಾಗದೇ ಹೋಗುತ್ತಾರೆಯೇ? ಎಂದನು.)
ಪದ್ಯ-೯೦:ಅರ್ಥ: ಕೃಷ್ಣ ಹೇಳಿದುದು ಅದು ಹಾಗೆಯೇಸರಿ. ಪಾಂಡುಪುತ್ರರು ನಿರ್ದೋಷಿಗಳು. ಅದು ನಿಜ. ಯುದ್ಧರಂಗದಲ್ಲಿ ಇನ್ನು ಮೇಲೆ ಎರಡು ಮಾತನ್ನಾಡುತ್ತೇನೆಯೇ? ನನ್ನ ಬಾಂದವರ ಮರಣದಿಂದುಂಟಾದ ದಃಖದ ಬೆಂಕಿಯಿಂದ ಉರಿಯುತ್ತಿದ್ದೇನೆ. ಯುದ್ಧದಲ್ಲಿ ತೊಡಗಿರುವ ನನ್ನನ್ನು ನೀನು ಬಿಟ್ಟುಬಿಡು. ವೈರಿರಾಜರು ಈ ಪರಿಘದಂತಿರುವ ಈ ಗದೆಯ ಪೆಟ್ಟಿನಿಂದ ನಾಶವಾಗಿ ಬಿದ್ದು ಹಾಳಾಗದೇ ಇರುತ್ತಾರೆಯೇ? ಎಂದನು.
ವ|| ಎಂಬುದುಂ ಸಂಕರ್ಷಣನಾತನ ಮನದುತ್ಕರ್ಷೆಯನರಿದು ಪೆರತನಿನ್ನೆನಗೆ ನುಡಿಯಲೆಡೆಯಿಲ್ಲ, ಧರ್ಮಯುದ್ಧಮಂ ನೋಡಲ್ವೇಳ್ಕುಮೆಂದು ಧರ್ಮಪುತ್ರನನಿಂತೆಂದಂ. ನಿಮ್ಮಯ್ವರೊಳೊರ್ವಂಈತನೊಳ್ ಕಾದುವುದು ಕಾದಿ ಸೋಲ್ತಿಂ ಬಳಿಯಂ ದುರ್ಯೋಧನಂ ನಲನಾಳ್ವನುಳಿದ ನಾಲ್ವರುಮಾತಂಗೆ ಬೆಸಕೈವದಾರ್ ಕಾದಿದಪರೆನೆ ಭೀಮಸೇನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಸಂಕರ್ಷಣನು ಆತನ ಮನದ ಉತ್ಕರ್ಷೆಯನು ಅರಿದು (ಬಲರಾಮನು ಆತನ ಮನಸ್ಸಿನ ಉದಾತ್ತತೆಯನ್ನು ತಿಳಿದು) ಪೆರತಂ ಇನ್ನೆನಗೆ ನುಡಿಯಲು ಎಡೆಯಿಲ್ಲ,(ಇನ್ನು ಬೇರೆಯದನ್ನು ನುಡಿಯಲು ಅವಕಾಶವಿಲ್ಲ) ಧರ್ಮಯುದ್ಧಮಂ ನೋಡಲ್ವೇಳ್ಕುಂ ಎಂದು ಧರ್ಮಪುತ್ರನನು ಇಂತೆಂದಂ (ಧರ್ಮಯುದ್ಧವನ್ನು ನೋಡಬೇಕೆಂದು ಧರ್ಮಪುತ್ರರನ್ನು ಕುರಿತು ಹೀಗೆಂದನು,). ನಿಮ್ಮ ಅಯ್ವರೊಳ್ ಒರ್ವಂ ಈತನೊಳ್ ಕಾದುವುದು (ನಿಮ್ಮ ಅಯ್ದು ಜನರಲ್ಲಿ ಒಬ್ಬನು ಈತನೊಡನೆ ಕಾದುವುದು.) ಕಾದಿ ಸೋಲ್ತಿಂ ಬಳಿಯಂ ದುರ್ಯೋಧನಂ ನಲನ ಆಳ್ವನು (ಕಾದಿ ಸೋತ ಬಳಿಕ ದುರ್ಯೋಧನನು ಭೂಮಿಯನ್ನು ಆಳುವನು.) ಉಳಿದ ನಾಲ್ವರುಂ ಆತಂಗೆ ಬೆಸಕೈವದು ( ಉಳಿದ ನಾಲ್ಕು ಜನರೂ ಅವನ ಸೇವೆ ಮಾಡತಕ್ಕದ್ದು.) ಆರ್ ಕಾದಿದಪರು ಎನೆ ಭೀಮಸೇನನು ಇಂತೆಂದಂ (ಯಾರು ಕಾದುತ್ತೀರಿ ಎನ್ನಲು, ಭೀಮಸೇನನು ಹೀಗೆ ಹೇಳಿದನು.-)-
ವಚನ:ಅರ್ಥ:ಬಲರಾಮನು ಆತನ ಮನಸ್ಸಿನ ಉದಾತ್ತತೆಯನ್ನು ತಿಳಿದು ಇನ್ನು ಬೇರೆಯದನ್ನು ನುಡಿಯಲು ಅವಕಾಶವಿಲ್ಲ ಧರ್ಮಯುದ್ಧವನ್ನು ನೋಡಬೇಕೆಂದು ಧರ್ಮಪುತ್ರರನ್ನು ಕುರಿತು ಹೀಗೆಂದನು, ನಿಮ್ಮ ಅಯ್ದು ಜನರಲ್ಲಿ ಒಬ್ಬನು ಈತನೊಡನೆ ಕಾದುವುದು. ಕಾದಿ ಸೋತ ಬಳಿಕ ದುರ್ಯೋಧನನು ಭೂಮಿಯನ್ನು ಆಳುವನು. ಉಳಿದ ನಾಲ್ಕು ಜನರೂ ಅವನ ಸೇವೆ ಮಾಡತಕ್ಕದ್ದು. ಯಾರು ಕಾದುತ್ತೀರಿ ಎನ್ನಲು, ಭೀಮಸೇನನು ಹೀಗೆ ಹೇಳಿದನು.-
ತೊಡರ್ದು ಬಿಡಿಂ ಸುಯೋಧನನೆನ್ನುಮಾನಿರೆ ಕೌರವಾಧಿಪಂ
ಗಿಡುವಗೆ ಪೇಳಿಮಿಂ ಪೆರರೊಳಂ ಮುಳಿಸುಂಟೆ ಮಹಾ ಪ್ರತಿಜ್ಞೆಯೊಳ್ |
ತೊಡರ್ದುಮನಾನೆ ಭೂತಮಳನದಿರ್ಕೆಡೆಗೆಯ್ ಗೆಲಲಾರ್ತರಾರ್ಗರ
ಳ್ನುಡಿಯದಿರೆಂದೊಡಂಬಡಿಸಿದಂ ಹಳಿಯಂ ನಯದಿಂ ವೃಕೋದರಂ ||೯೧ ||
ಪದ್ಯ-೯೧:ಪದವಿಭಾಗ-ಅರ್ಥ:ತೊಡರ್ದು ಬಿಡಿಂ ಸುಯೋಧನನು ಎನ್ನುಂ (ನನ್ನನ್ನೂ ದುರ್ಯೋಧನನ್ನೂ ಒಟ್ಟುಗೂಡಿಸಿ ಬಿಡಿ, ಯುದ್ಧಕ್ಕೆ-) ಆನು ಇರೆ ಕೌರವಾಧಿಪಂಗೆ ಇಡುವಗೆ (ಇಡುವ ಹಗೆ) ಪೇಳಿಮಿಂ ಪೆರರೊಳಂ ಮುಳಿಸುಂಟೆ (ಕೌರವೇಶ್ವರನಿಗೆ ಬದ್ಧ ದ್ವೇಷಿಯಾಗಿ ನಾನಿರುವಾಗ ಇತರರಲ್ಲಿ ಕೋಪವುಂಟೇ?) ಮಹಾ ಪ್ರತಿಜ್ಞೆಯೊಳ್ ತೊಡರ್ದುಮನು ಆನೆ (ಮಹಾ ಪ್ರತಿಜ್ಞಾರೂಢನಾಗಿರುವವನೂ ನಾನೇ!) ಭೂತಮಳನು ಅದಿರ್ಕೆ(ಭೂಮಿಯ ವಿಷಯ ಅದು ಹಾಗಿರಲಿ) ಎಡೆಗೆಯ್ (ಕಾಳೆಗ ಮಾಡುವುದಕ್ಕೆ ದ್ಥಳವನ್ನು ಸಿದ್ಧಪಡಿಸು) ಗೆಲಲ್ ಆರ್ತರು ಆರ್ಗೆ (ಗೆಲ್ಲಲು ಸಮರ್ಥರಾದವರು ಯಾರು?) ಎರಳ್ ನುಡಿಯದಿರು (ಎರಡು ಮಾತನ್ನಾಡಬೇಡ ) ಎಂದು ಒಡಂಬಡಿಸಿದಂ ಹಳಿಯಂ (ನೇಗಿಲ ಹಳಿಯನ್ನು ಹೊತ್ತ ಬಲರಾಮನನ್ನು) ನಯದಿಂ ವೃಕೋದರಂ (ಎಂದು ಭೀಮನು ಬಲರಾಮನನ್ನು ನಯವಾಗಿ ಒಪ್ಪಿಸಿದನು.)
ಪದ್ಯ-೯೧:ಅರ್ಥ: ನನ್ನನ್ನೂ ದುರ್ಯೋಧನನ್ನೂ ಒಟ್ಟುಗೂಡಿಸಿ ಬಿಡಿ, ಕೌರವೇಶ್ವರನಿಗೆ ಬದ್ಧ ದ್ವೇಷಿಯಾಗಿ ನಾನಿರುವಾಗ ಇತರರಲ್ಲಿ ಕೋಪವುಂಟೇ? ಮಹಾ ಪ್ರತಿಜ್ಞಾರೂಢನಾಗಿರುವವನೂ ನಾನೇ! ಭೂಮಿಯ ವಿಷಯ ಅದು ಹಾಗಿರಲಿ ಕಾಳೆಗ ಮಾಡುವುದಕ್ಕೆ ದ್ಥಳವನ್ನು ಸಿದ್ಧಪಡಿಸು, ಗೆಲ್ಲಲು ಸಮರ್ಥರಾದವರು ಯಾರು? ಎರಡು ಮಾತನ್ನಾಡಬೇಡ ಎಂದು ಭೀಮನು ಬಲರಾಮನನ್ನು ನಯವಾಗಿ ಒಪ್ಪಿಸಿದನು.

ಭೀಮ ದುರ್ಯೋಧನರ ಯುದ್ಧ ಸಂಪಾದಿಸಿ

  • ಕೌರವ- ಭೀಮರ ಯುದ್ಧ- ರನ್ನನ ವರ್ಣನೆ
  • ಕೌರವನ ನಿಂದೆಯ ಹೊಡೆತ:-

ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ
ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂಱುಗೊಳ್ಳೆಂದು ಮ
ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ ॥೧೮॥
ಅರ್ಥ:-
ದುರ್ಯೋದನ::ಕಳಿಂಗರಾಜನ ಆನೆಗಳ ಹಿಂಡನ್ನೆಲ್ಲ ಸಂಹರಿಸಿ
ಕಳಿಂಗರಾಜನನ್ನು ಕೊಂದ ಅಪರಾಧಕ್ಕೆ ಇದೋ ಒಂದು ಏಟು!
ನನ್ನ ತಮ್ಮಂದಿರನ್ನು (ಕೊಂದುದಕ್ಕೆ) ತಿಂದುದಕ್ಕೆ ಇದೋ ಎರಡನೆಯ ಏಟು!
ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನ ಎದೆಯಿಂದ ಪುಟಿಯುತ್ತಿರುವ
ಕೆನ್ನೆತ್ತರನ್ನು ಆರ್ಭಟಿಸುತ್ತಾ ಹೀರಿದ ಕೋಪಕ್ಕೆ ಇದೋ ಮೂರನೇ ಏಟು!
ಹೀಗೆನ್ನುತ್ತಾ ದುರ್ಯೋಧನನು ಕೋಪೋದ್ರೇಕದಿಂದ
ಗದೆಯನ್ನೆತ್ತಿ ಭೀಮನನ್ನು ಹೊಡೆದನು.

  • ಭೀಮನ ಉತ್ತರ:-

ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ
ಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋ
ವದೆ ಪೊಯ್ದಂ ತೋಳ್ಗಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋ
ಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ ॥೧೯॥
ಅರ್ಥ:-
ಇದು- ಈ ಏಟು ಅರಗಿನ ಮನೆಗೆ ಬೆಂಕಿ ಹಚ್ಚಿದ್ದಕ್ಕೆ!
ಇದು- ವಿಷಾನ್ನವನ್ನು ಇಕ್ಕಿದ್ದಕ್ಕೆ! ಈ ಏಟು ಮೋಸದ ಜೂಜಾಟಕ್ಕೆ!
ಇದು- ಈ ಏಟು ದ್ರೌಪದಿಯನ್ನು ಪರಾಭವಗೊಳಿಸಿದ್ದಕ್ಕೆ!
ಇದು- ಈ ಏಟು ಮೋಸದಿಂದ ನಮ್ಮನ್ನು ಸಭೆಗೆ ಬರಮಾಡಿದ್ದಕ್ಕೆ!
ಹೀಗೆ ಹೇಳುತ್ತಾ ಭೀಮನು ಕುಪಿತನಾಗಿ ನಿರ್ದಾಕ್ಷಿಣ್ಯದಿಂದ
ದುರ್ಯೋಧನನ ಕಾಲುಗಳು, ತೋಳುಗಳು, ಅಗಲ ಎದೆ, ಕೆನ್ನೆ,
ಮತ್ತು ನೆತ್ತಿ,ಇವುಗಳನ್ನು ಭೀಮನು ಗದೆಯಿಂದ ಅಪ್ಪಳಿಸಿದನು.
ದುರ್ಯೋಧನನ ಐದು ಅನ್ಯಾಯಗಳಿಗೆ ಐದು ಏಟುಗಳನ್ನು ಹೊಡೆದನು.

  • ರನ್ನ
ವ||ಅಂತೊಡಂಬಡಿಸಿ ಸಂಗ್ರಾಮರಂಗಕ್ಕನಿಬರುಮನೊಡಗೊಂಡು ಬಂದು -
ವಚನ:ಪದವಿಭಾಗ-ಅರ್ಥ:ಅಂತು ಒಡಂಬಡಿಸಿ (ಹಾಗೆ ಒಪ್ಪಿಸಿ,) ಸಂಗ್ರಾಮರಂಗಕ್ಕೆ ಅನಿಬರುಮನು ಒಡಗೊಂಡು ಬಂದು -
ವಚನ:ಅರ್ಥ:ಹಾಗೆ ಒಪ್ಪಿಸಿ, ಯುದ್ಧಭೂಮಿಗೆ ಎಲ್ಲರನ್ನೂ ಕೂಡಿಕೊಂಡು ಬಂದು-.
ಕಂ||ಕರಿ ತುರಂಗ ನರ ಕಳೇವರ
ಪರಿಚಿತ ರಣದಲ್ಲಿ ಮಹೀತಳಂ ಕಾದಲ್ಕಿಂ |
ತರಿದಪ್ಪುದೆಂತಿದೆಂದಣ
ಮಿರದೆ ಮರುತ್ಸೂನುಸಮರಿದಂ ಕೊಳಗುಳಮಂ||೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಕರಿ ತುರಂಗ ನರ ಕಳೇವರ ಪರಿಚಿತ ರಣದಲ್ಲಿ (ಆನೆ ಕುದುರೆ ಕಾಲಾಳಿನ ಶರೀರಗಳಿಂದ ಕಿಕ್ಕಿರಿದ ಯುದ್ಧಭೂಮಿಯಲ್ಲಿ)ಮಹೀತಳಂ ಕಾದಲ್ಕೆ ಇಂತು ಅರಿದಪ್ಪುದು ಎಂತು ಇದೆಂದು (ನೆಲವು ಕಾದುವುದಕ್ಕೆ ಕಷ್ಟವಾಗುತ್ತದೆ ಎಂದು ಹಗೋ ಇರವ ನೆಲ ಎಂದು) ಅಣಂ ಇರದೆ ಮರುತ್ಸೂನು ಸಮರಿದಂ ಕೊಳಗುಳಮಂ (ಸ್ವಲ್ಪವೂ ಸಾವಕಾಶ ಮಾಡದೆ ಭೀಮನು ಯುದ್ಧಭೂಮಿಯನ್ನು ಹಸನು ಮಾಡಿದನು.)
ಪದ್ಯ-೯೨:ಅರ್ಥ: ಆನೆ ಕುದುರೆ ಕಾಲಾಳಿನ ಶರೀರಗಳಿಂದ ಕಿಕ್ಕಿರಿದ ಯುದ್ಧಭೂಮಿಯಲ್ಲಿ ನೆಲವು ಕಾದುವುದಕ್ಕೆ ಕಷ್ಟವಾಗುತ್ತದೆ ಎಂದು ಹಗೋ ಇರವ ನೆಲ ಎಂದು ಸ್ವಲ್ಪವೂ ಸಾವಕಾಶ ಮಾಡದೆ ಭೀಮನು ಯುದ್ಧಭೂಮಿಯನ್ನು ಹಸನು ಮಾಡಿದನು.
ವ||ಅಂತು ಸಮರಿದ ಸಂಗ್ರಾಮ ರಂಗದೊಳ್ ಪರಸ್ಪರ ಕ್ರೋಧವಿಕ್ಷೇಪ ಹರ್ಷಿತ ಮಾರ್ಗ ಪ್ರಹಸ್ತ ಪ್ರಸಾಧಿತ ಘೋರ ಸಂಗ್ರಾಮತ್ಯುಗ್ರ ಗದಾ ಪರಿಘ ಬಾಸುರ ಭುಜಪರಿಘರುಮಪ್ಪ ಭೀಮದುರ್ಯೋಧನರೀರ್ವರು ಮೋರ್ವರುಮೋರ್ವರಂ ಮೂದಲಿಸಿ ಸವ್ಯಾಪಸವ್ಯ ಭ್ರಾಂತೋದ್ಧ್ರಾಂತ ಕರ್ಷಣಮಂಡಲವರ್ತನಾದಿಗಳಪ್ಪ ಮೂವತ್ತೆರಡು ಗದಾವಿಕ್ಷೇಪದೊಳಮತಿಪರಿಚಿತರಾಗಿ ಕಾದುವಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಸಮರಿದ ಸಂಗ್ರಾಮ ರಂಗದೊಳ್ ಪರಸ್ಪರ ಕ್ರೋಧವಿಕ್ಷೇಪ ಹರ್ಷಿತ ಮಾರ್ಗ ಪ್ರಹಸ್ತ ಪ್ರಸಾಧಿತ ಘೋರ ಸಂಗ್ರಾಮ ಅತ್ಯುಗ್ರ ಗದಾ ಪರಿಘ ಬಾಸುರ ಭುಜಪರಿಘರುಮಪ್ಪ ಭೀಮದುರ್ಯೋಧನರು ಈರ್ವರುಂ (ಗದಾಯುದ್ಧದ ಪರಿಕರಗಳಿಂದ ಕೂಡಿದ ಭಯಂಕರ ಯುದ್ಧವುಳ್ಳವರೂ ಆದ ಭೀಮದುರ್ಯೋಧನರು ಇಬ್ಬರೂ) ಒರ್ವರುಮೋರ್ವರಂ ಮೂದಲಿಸಿ ಸವ್ಯ ಅಪಸವ್ಯ ಭ್ರಾಂತ ಉದ್ಧ್ರಾಂತ (ಸವ್ಯ ಅಪಸ್ವ್ಯ, ಭ್ರಾಂತ ಉದ್ಭ್ರಾಂತ,) ಕರ್ಷಣ ಮಂಡಲವರ್ತನಾದಿಗಳಪ್ಪ ಮೂವತ್ತೆರಡು ಗದಾವಿಕ್ಷೇಪದೊಳಂ (ಮೂವತ್ತೆರಡು ಗದಾ ಪ್ರಯೋಗದಲ್ಲಿಯೂ) ಅತಿಪರಿಚಿತರಾಗಿ ಕಾದುವಾಗಳ್ (ವಿಶೇಷ ಪರಿಣಿತರಾಗಿ ಯುದ್ಧಮಾಡುವಾಗ-)-
ವಚನ:ಅರ್ಥ:ಹಾಗೆ ಗುಡಿಸಿದ ಯುದ್ಧರಂಗದಲ್ಲಿ ಒಬ್ಬರಿಗೊಬ್ಬರು ವಿರೋಧ ಕ್ರೋಧ ವಿಕ್ಷೇಪ ಹರ್ಷಿತ ಮಾರ್ಗ ಪ್ರಹಸ್ತ ಪ್ರಸಾದಿತಗಳೆಂಬ ಗದಾಯುದ್ಧದ ಪರಿಕರಗಳಿಂದ ಕೂಡಿದ ಭಯಂಕರ ಯುದ್ಧವುಳ್ಳವರೂ ಆದ ಇಬ್ಬರೂ ಭೀಮದುರ್ಯೋಧನರು ಇಬ್ಬರೂ ಒಬ್ಬರನ್ನೊಬ್ಬರು ಹೀಯಾಳಿಸಿ ಸವ್ಯ ಅಪಸ್ವ್ಯ, ಭ್ರಾಂತ ಉದ್ಭ್ರಾಂತ, ಕರ್ಷಣ ಮಂಡಳಾವರ್ತನ ಇವೇ ಮೊದಲಾದ ಮೂವತ್ತೆರಡು ಗದಾ ಪ್ರಯೋಗದಲ್ಲಿಯೂ ವಿಶೇಷ ಪರಿಣಿತರಾಗಿ ಯುದ್ಧಮಾಡುವಾಗ-
ಮ||ಮೊದಲಿಂ ಕಿಳ್ತು ಕುಳಾಚಳಪ್ರತತಿಗಳ್ ಪ್ರೋದ್ಯದ್ಗದಾ ಘಾತವಾ
ತದಿನಾಕಾಶಮನೈದೆ ತೂಳ್ದಿ ಕವಿತಂದಂಬೋಧಿಯೋಳ್ ಸೂಳ್ ಸೂ|
ಳಿದೆ ಬೀಳ್ದಿಂದುವು ಬತ್ತಲಾಟಿಸಿದುವಾ ವಾರಾಸಿಗಳ್ ಸುರ್ಕಿ ಬಿ|
ಕ್ಕಿದ ಬಾಯಂತೆ ಸುಳ್ದುದಂಬರಮಿದೇಂ ಪೆಂಪೋ ಗದಾ ಯುದ್ಧದಾ ||೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಮೊದಲಿಂ ಕಿಳ್ತು ಕುಳಾಚಳ ಪ್ರತತಿಗಳ್ (ಮೇಲೆತ್ತಿದ ಗದೆಯ ಪೆಟ್ಟಿನಿಂದ ಹುಟ್ಟಿದ ಗಾಳಿಯಿಂದ ಕುಲಪರ್ವತ ಸಮೂಹಗಳು) ಪ್ರೋದ್ಯತ್ ಗದಾಘಾತವಾ ತದಿಂ ಆಕಾಶಮನು ಅಯ್ದೆ ತೂಳ್ದಿ (ಮೇಲೆತ್ತಿದ ಗದಾ ಘಾತದಿಂದ ಮೂಲದಿಂದ ಕಿತ್ತುಆಕಾಶವನ್ನು ಪೂರ್ಣ ತಳ್ಳಿ ) ಕವಿತಂದು ಅಂಬೋಧಿಯೋಳ್ ಸೂಳ್ ಸೂಳಿದೆ ಬೀಳ್ದಿಂದುವು (ಮುಚ್ಚಿ ಬಂದು ಕ್ರಮವಾಗಿ ಸಮುದ್ರದಲ್ಲಿ ಬೀಳಲಾರಂಭಿಸಿದವು.) ಬತ್ತಲು ಆಟಿಸಿದುವು ಆ ವಾರಾಸಿಗಳ್ (ಆ ಸಮುದ್ರವೂ ಒಣಗಿ ಹೋಗಲು ಆಶೀಸಿದವು.) ಸುರ್ಕಿ ಬಿಕ್ಕಿದ ಬಾಯಂತೆ ಸುಳ್ದುದಂಬರಂ ಇದೇಂ ಪೆಂಪೋ ಗದಾ ಯುದ್ಧದಾ (ಆಕಾಶವು ಸುಕ್ಕಿಬಿಕ್ಕಿದ ಬಾಯಿಯಂತೆ ಸುರುಳಿಯಾಯಿತು. ಗದಾಯುದ್ಧದ ವೈಭವವು ಏನು ಅದ್ಭುತವೊ! ಅದ್ಭುತವಾಗಿತ್ತು.)
ಪದ್ಯ-೯೩:ಅರ್ಥ: ಮೇಲೆತ್ತಿದ ಗದೆಯ ಪೆಟ್ಟಿನಿಂದ ಹುಟ್ಟಿದ ಗಾಳಿಯಿಂದ ಕುಲಪರ್ವತ ಸಮೂಹಗಳು ಮೇಲೆತ್ತಿದ ಗದಾ ಘಾತದಿಂದ ಮೂಲದಿಂದ ಕಿತ್ತು ತಳ್ಳಿ ಆಕಾಶವನ್ನು ಪೂರ್ಣ ವಾಗಿ ಮುಚ್ಚಿ ಬಂದು ಕ್ರಮವಾಗಿ ಸಮುದ್ರದಲ್ಲಿ ಬೀಳಲಾರಂಭಿಸಿದವು. ಆ ಸಮುದ್ರವೂ ಒಣಗಿ ಹೋಗಲು ಆಶೀಸಿದವು. ಆಕಾಶವು ಸುಕ್ಕಿಬಿಕ್ಕಿದ ಬಾಯಿಯಂತೆ ಸುರುಳಿಯಾಯಿತು. ಗದಾಯುದ್ಧದ ವೈಭವವು ಅದ್ಭುತವಾಗಿತ್ತು.
ಗದೆಯೋಳ್ ಗಟ್ಟಸೆ ಪುಟ್ಟಿದಳ್ಕತತಿ ನೀಳ್ದಾಕಾಶಮಂ ತಾಪಿನಂ
ಪುದಿದಾ ದೇವರ ಕಣ್ಣೊಳುಳ್ಕಿ ವಿಳಯೋಳ್ಕಾಶಂಕೆಯುಂ ಮಾಡೆ ಮೆ |
ಟ್ಟಿದ ಸೂಳ್ಮೆಟ್ಟುಗಳಿಂದೆ ಬೆಟ್ಟು ಕಳಲಲ್ಲಾಡೆ ಭೂಭಾಗಮಾ
ದುದು ದುರ್ಯೋಧನನ ಭೀಮಸೇನರ ಗದಾ ಯುದ್ಧಂ ಮಹಾಭೈರವಂ ||೯೪ ||
ಪದ್ಯ-೯೪:ಪದವಿಭಾಗ-ಅರ್ಥ:ಗದೆಯೋಳ್ ಗಟ್ಟಸೆ ಪುಟ್ಟಿದ ಉಳ್ಕತತಿ (ಇಬ್ಬರೂ ಗದೆಗಳಲ್ಲಿ ಪರಸ್ಪರ ಘಟ್ಟಿಸಲು ಹುಟ್ಟಿದ ಉಲ್ಕೆಗಳ ಸಮೂಹವು) ನೀಳ್ದಾಕಾಶಮಂ ತಾಪಿನಂ ಪುದಿದು (ವಿಸ್ತರಿಸಿ ಆಕಾಶವನ್ನು ವ್ಯಾಪಿಸಿ ತಾಗುತ್ತಿರಲು) ಆ ದೇವರ ಕಣ್ಣೊಳ್ ಉಳ್ಕಿ (ದೇವತೆಗಳ ಕಣ್ಣಲ್ಲಿ ತುಂಬಿ ತುಳಕಲು) ವಿಳಯೋಳ್ಕಾಶಂಕೆಯುಂ ಮಾಡೆ (ಅವು ಪ್ರಳಯಕಾಲದ ಉಲ್ಕಾಪಾತದ ಸಂದೇಹವನ್ನುಂಟು ಮಾಡಿದವು. ಮಾಡಲು-) ಮೆಟ್ಟಿದ ಸೂಳ್ ಮೆಟ್ಟುಗಳಿಂದೆ ಬೆಟ್ಟು ಕಳಲಲ್ ಅಳ್ಳಾಡೆ ಭೂಭಾಗಂ (ಒಬ್ಬರನಂತರ ಒಬ್ಬರು ತುಳಿದ ಮೆಟ್ಟುಗಳಿಂದ ಭೂತಳವು ಅಲುಗಾಡಲು) ಆದುದು ದುರ್ಯೋಧನನ ಭೀಮಸೇನರ ಗದಾ ಯುದ್ಧಂ ಮಹಾಭೈರವಂ (ದುರ್ಯೋಧನನ ಭೀಮಸೇನರ ಗದಾ ಯುದ್ಧವು ಮಹಾಭೀಕರವಾಯಿತು.)
ಪದ್ಯ-೯೪:ಅರ್ಥ: ಇಬ್ಬರೂ ಗದೆಗಳಲ್ಲಿ ಪರಸ್ಪರ ಘಟ್ಟಿಸಲು ಹುಟ್ಟಿದ ಉಲ್ಕೆಗಳ ಸಮೂಹವು ವಿಸ್ತರಿಸಿ ಆಕಾಶವನ್ನು ವ್ಯಾಪಿಸಿತಾಗುತ್ತಿರಲು ದೇವತೆಗಳ ಕಣ್ಣಲ್ಲಿ ತುಂಬಿ ತುಳಕಲು ಅವರಿಗೆ ಅವು ಪ್ರಳಯಕಾಲದ ಉಲ್ಕಾಪಾತದ ಸಂದೇಹವನ್ನುಂಟು ಮಾಡಿದವು. ಒಬ್ಬರನಂತರ ಒಬ್ಬರು ತುಳಿದ ಮೆಟ್ಟುಗಳಿಂದ ಭೂತಳವು ಅಲುಗಾಡಲು, ದುರ್ಯೋಧನನ ಭೀಮಸೇನರ ಗದಾ ಯುದ್ಧವು ಮಹಾಭೀಕರವಾಯಿತು.
ವ|| ಅಂತಿರ್ವರುಮೊರ್ವರೊರ್ವರೊಳ್ ಬೀರಮಂ ಬಿನ್ನಣಮಂ ಮರೆದು ಕಾದೆ ದುರ್ಯೋಧನಂ ವಿದ್ಯಾಧರ ರಣದೊಳತಿಪರಿಚಿತನಪ್ಪುದರಿಂದಾಕಾಶಕ್ಕೆ ನೆಗೆದು-
ವಚನ:ಪದವಿಭಾಗ-ಅರ್ಥ:ಅಂತು ಈರ್ವರುಂ ಒರ್ವರೊರ್ವರೊಳ್ ಬೀರಮಂ ಬಿನ್ನಣಮಂ ಮರೆದು ಕಾದೆ (ಹಾಗೆ ಇಬ್ಬರೂ ಒಬ್ಬೊಬ್ಬರೂ ಶೌರ್ಯವನ್ನು ಕೌಶಲವನ್ನೂ ತೋರಿಸಿ ಹೋರಾಡಲು) ದುರ್ಯೋಧನಂ ವಿದ್ಯಾಧರ ರಣದೊಳು ಅತಿಪರಿಚಿತನಪ್ಪುದರಿಂದ ಆಕಾಶಕ್ಕೆ ನೆಗೆದು (ದುರ್ಯೋಧನನು ವಿದ್ಯಾಧರಕರಣದಲ್ಲಿ ಬಹಳ ಅರಿತವನಾದುದರಿಂದ ಆಕಾಶಕ್ಕೆ ನೆಗೆದು)-
ವಚನ:ಅರ್ಥ:ಹಾಗೆ ಇಬ್ಬರೂ ಒಬ್ಬೊಬ್ಬರೂ ಶೌರ್ಯವನ್ನು ಕೌಶಲವನ್ನೂ ತೋರಿಸಿ ಹೋರಾಡಲು ದುರ್ಯೋಧನನು ವಿದ್ಯಾಧರಕರಣದಲ್ಲಿ ಬಹಳ ಅರಿತವನಾದುದರಿಂದ ಆಕಾಶಕ್ಕೆ ನೆಗೆದು-
ಕಂ||ಸಿಡೆಲೆರುಗುವಂತೆ ಭೋರೆಂ
ದೊಡನೆರಗಿ ಮಹೋಗ್ರ ಘನ ಗದಾಪರಿಗದಿನಾ |
ರ್ದೆಡೆಗಿಡೆ ಪೊಯ್ದೊಡೆ ಭೀಮಂ
ಕೆಡೆದಂ ಧರೆ ನಡುಗೆ ನೀಳ ಕುತ್ಕೀಳಂಬೊಲ್ ||೯೫||
ಪದ್ಯ-೯೫:ಪದವಿಭಾಗ-ಅರ್ಥ:ಸಿಡೆಲು ಎರುಗುವಂತೆ ಭೋರೆಂದು ಒಡನೆ ಎರಗಿ (ಸಿಡಿಲು ಬೀಳುವಂತೆ ಭೋರೆಂದು ತಕ್ಷಣವೇ ಮೇಲೆಬಿದ್ದು) ಮಹೋಗ್ರ ಘನ ಗದಾಪರಿಗದಿಂ ಆರ್ದು ಎಡೆಗಿಡೆ ಪೊಯ್ದೊಡೆ (ಮಹಾ ಭಯಂಕರವಾದ ದಪ್ಪನಾದ ಪರಿಘದಂತಿರುವ ಗದೆಯಿಂದ ಘರ್ಜನೆಮಾಡಿ ಇದ್ದ ಸ್ಥಳದಿಂದ ಕದಲುವಂತೆ ಹೊಡೆಯಲು) ಭೀಮಂ ಕೆಡೆದಂ ಧರೆ ನಡುಗೆ ನೀಳ ಕುತ್ಕೀಳಂಬೊಲ್ (ಭೂಮಿ ನಡುಗಿತು. ಭೀಮನು ನೀಲ ಪರ್ವತದಂತೆ ಕೆಳಗೆ ಬಿದ್ದನು)
ಪದ್ಯ-೯೫:ಅರ್ಥ: ಸಿಡಿಲು ಬೀಳುವಂತೆ ಭೋರೆಂದು ತಕ್ಷಣವೇ ಮೇಲೆಬಿದ್ದು ಮಹಾ ಭಯಂಕರವಾದ ದಪ್ಪನಾದ ಪರಿಘದಂತಿರುವ ಗದೆಯಿಂದ ಘರ್ಜನೆಮಾಡಿ ಇದ್ದ ಸ್ಥಳದಿಂದ ಕದಲುವಂತೆ ಹೊಡೆಯಲು ಭೂಮಿ ನಡುಗಿತು. ಭೀಮನು ನೀಲ ಪರ್ವತದಂತೆ ಕೆಳಗೆ ಬಿದ್ದನು.

ದುರ್ಯೋಧನನ ಊರುಭಂಗ ಸಂಪಾದಿಸಿ

ವ||ಅಂತು ದುರ್ಯೋಧನ ಗದಾಪ್ರಹರಣದಿಂದಚೇತನನಾಗಿರ್ದೊಡೆ ಬಿಳ್ದನನಿರಿಯೆನೆಂದು ಪವಮಾನ ಮಾರ್ಗೊದೊಳ್ ಗದೆಯಂಬೀಸುವಾಗಳ್ ಸುಯೋಧನನ ಗದೆಯ ಗಾಳಿಯೊಳ್ ಮೂರ್ಛೆಯಿಂದೆಚ್ಚತ್ತು ಧರಾತಳದೊಳ್ ಸೂಸಿದ ತನ್ನ ಗದಾದಂಡಮಂ ಭುಜದಂಡದೊಳಳವಡಿಸಿಕೊಂಡ ವೃಕೋದದನನಂಬುಜೋದರಂ ಬಿಚ್ಚಳಿಸುವ ನೆವದೊಳೆಮ್ಮಮ್ಮಂಗಕ್ಕುಮೆಂದು ತೊಡೆಯಂ ಪೊಯ್ದಾರ್ವುದುಂ ದುರ್ಯೋದನನನೆರದೆಂದರಿದು-
ವಚನ:ಪದವಿಭಾಗ-ಅರ್ಥ:ಅಂತು ದುರ್ಯೋಧನ ಗದಾಪ್ರಹರಣದಿಂದ ಅಚೇತನನಾಗಿರ್ದೊಡೆ (ಹಾಗೆ ದುರ್ಯೋಧನನ ಗದೆಯ ಹೊಡೆತದಿಂದ ಮೂರ್ಛಿತನಾಗಿರಲು) ಬಿಳ್ದನನು ಇರಿಯೆನೆಂದು ಪವಮಾನ ಮಾರ್ಗೊದೊಳ್ ಗದೆಯಂ ಬೀಸುವಾಗಳ್ (‘ಬಿದ್ದವನನ್ನು ಹೊಡೆಯುವುದಿಲ್ಲ’ ಎಂದು ವಾಯುಮಾರ್ಗದಲ್ಲಿ ಸ್ವಲ್ಪದೂರದಲ್ಲಿಯೇ ಗದೆಯನ್ನು ಬೀಸಿದಾಗ,) ಸುಯೋಧನನ ಗದೆಯ ಗಾಳಿಯೊಳ್ ಮೂರ್ಛೆಯಿಂದ ಎಚ್ಚತ್ತು (ಭೀಮನು ಆ ಗದೆಯ ಗಾಳಿಯಿಂದ ಮೂರ್ಛೆಯಿಂದ ಎಚ್ಚರಾಗಿ,) ಧರಾತಳದೊಳ್ ಸೂಸಿದ ತನ್ನ ಗದಾದಂಡಮಂ ಭುಜದಂಡದೊಳ್ ಅಳವಡಿಸಿಕೊಂಡ ವೃಕೋದದನನು (ಭೂಮಿಯಮೇಲೆ ಬಿದ್ದಿದ್ದ ತನ್ನ ಗದೆಯನ್ನು ಭೂಜಾದಂಡದಲ್ಲಿ ಅಳವಡಿಸಿಕೊಂಡ ಭೀಮನನ್ನು) ಅಂಬುಜೋದರಂ ಬಿಚ್ಚಳಿಸುವ ನೆವದೊಳು (ಕೃಷ್ಣನು ಹೊಗಳುವ ನೆಪದಿಂದ) ಎಮ್ಮ ಅಮ್ಮಂಗೆ ಅಕ್ಕುಂ ಎಂದು (ನಮ್ಮಪ್ಪನಿಗೆ ಜಯವಾಗುತ್ತದೆ ಎಂದು) ತೊಡೆಯಂ ಪೊಯ್ದು ಆರ್ವುದುಂ (ತೊಡೆಯನ್ನು ತಟ್ಟಿ ಆರ್ಭಟಿಸಲು,) ದುರ್ಯೋದನನನ ಎರದೆಂದು ಅರಿದು (ಭೀಮನು ಅದೇ (ಆ ತೊಡೆಯೇ) ದುಯೋಧನನ ಮರ್ಮಸ್ಥಳವೆಂದು ತಿಳಿದನು. ತಿಳಿದು)-
ವಚನ:ಅರ್ಥ:ಹಾಗೆ ದುರ್ಯೋಧನನ ಗದೆಯ ಹೊಡೆತದಿಂದ ಮೂರ್ಛಿತನಾಗಿರಲು ದುರ್ಯೋಧನನು ‘ಬಿದ್ದವನನ್ನು ಹೊಡೆಯುವುದಿಲ್ಲ’ ಎಂದು ವಾಯುಮಾರ್ಗದಲ್ಲಿ ಸ್ವಲ್ಪದೂರದಲ್ಲಿಯೇ ಗದೆಯನ್ನು ಬೀಸಿದಾಗ, ಭೀಮನು ಆ ಗದೆಯ ಗಾಳಿಯಿಂದ ಮೂರ್ಛೆಯಿಂದ ಎಚ್ಚರಾಗಿ, ಭೂಮಿಯಮೇಲೆ ಬಿದ್ದಿದ್ದ ತನ್ನ ಗದೆಯನ್ನು ಭೂಜಾದಂಡದಲ್ಲಿ ಅಳವಡಿಸಿಕೊಂಡ ಭೀಮನನ್ನು, ಕೃಷ್ಣನು ಹೊಗಳುವ ನೆಪದಿಂದ ನಮ್ಮಪ್ಪನಿಗೆ ಜಯವಾಗುತ್ತದೆ ಎಂದು ತೊಡೆಯನ್ನು ತಟ್ಟಿ ಆರ್ಭಟಿಸಲು, ಭೀಮನು ಅದೇ (ಆ ತೊಡೆಯೇ) ದುಯೋಧನನ ಮರ್ಮಸ್ಥಳವೆಂದು ತಿಳಿದನು. ಹಾಗೆ ತಿಳಿದು-
  • ಕೌರವನ ಊರುಭಂಗ- ರನ್ನನ ವರ್ಣನೆ

ಇಡೆ ತೊಡೆಯನುಡಿದು ನೆಟ್ಟನೆ
ಕೆಡೆಯುತ್ತುಂ ಕರ್ಚಿ ನೆಲನನಾನಿದನೆಂತುಂ
ಬಿಡೆನೆಂಬ ತೆಱದೆ ಕುಲಗಿರಿ
ಕೆಡೆವಂದದೆ ಕೌರವೇಂದ್ರನಾಗಳ್ ಕೆಡೆದಂ ॥೮-೩೭॥

  • ಅರ್ಥ :-

ಭೀಮನು, ಇಡೆ- ಹೊಡೆದಾಗ, ತೊಡೆಗಳು ಮುರಿದು,
ನೇರವಾಗಿ ಬೀಳುತ್ತಾ,-
"ನೆಲನಂ ಆಂ ಇದಂ ಎಂತುಂ ಬಿಡೆಂ ಎಂಬ ತೆಱದೆ,"
ಈ ಭೂಮಿಯನ್ನು ನಾನು ಎಷ್ಟು ಮಾತ್ರಕ್ಕೂ
ಪಾಂಡವರಿಗೆ ಬಿಟ್ಟುಕೊಡಲಾರೆನು ಎಂಬ ಹಾಗೆ,
ಭೂಮಿಯನ್ನು ಕಚ್ಚಿ ಹಿಡಿದು, ಕುಲಪರ್ವತವು ಕುಸಿದು
ಬೀಳುವಂತೆ, ಆಗ ಕೌರವೇಂದ್ರನು ಬಿದ್ದನು.

  • ರನ್ನ.
ಮ|| ಸ್ರ|| ನೆಱನೀತಂಗೂರುಯುಗ್ಮಂ ನೆಱನನಱಯದಾನಿನ್ನೆಗಂ ಮಾಣ್ದೆನಿಂ ಪೋ
ತೆಱಪಂ ಪಾರ್ದಿರ್ಪೆನೆಂದೊಯ್ಯನೆ ಗದೆಯನಣಂ ಪಾಡುಗೆಯ್ದಿರ್ದು ಭೋರೆಂ|
ದೆಱಪುಗ್ರಾರಾತಿಯೂರುದ್ವಯಮನಿಡೆ ಗದಾಘಾತದಿಂದೂರುಯುಗ್ಮಂ
ಮುಱಿದೆತ್ತಂ ನುಚ್ಚುನೂಱಾಗಿರೆ ಕೆಡೆದನಿಳಾಭಾಗದೊಳ್ ಧಾರ್ತರಾಷ್ಟ್ರಂ|| ೯೬ ||
ಪದ್ಯ-೯೬:ಪದವಿಭಾಗ-ಅರ್ಥ:ನೆಱನು (ಮರ್ಮಸ್ಥಾನ) ಈತಂಗೆ ಊರುಯುಗ್ಮಂ (ಈತನಿಗೆ ಈ ಎರಡು ತೊಡೆಗಳು ಮರ್ಮಸ್ಥಾನ.) ನೆಱನನು ಅಱಯದೆ ಆನು ಇನ್ನೆಗಂ ಮಾಣ್ದೆನು (ಮರ್ಮವನ್ನು ತಿಳಿಯದೆ ನಾನು ಇಲ್ಲಿಯವರೆಗೆ ತಪ್ಪಿದೆನು.) ಇಂ ಪೋ ತೆಱಪಂ ಪಾರ್ದಿರ್ಪೆಂ (ಇನ್ನು ಬಿಡು, ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ-) ಎಂದು ಒಯ್ಯನೆ ಗದೆಯನ್ನು ಅಣಂ ಪಾಡುಗೆಯ್ದ ಇರ್ದು (ಎಂದು ನಿಧಾನವಾಗಿ ಗದೆಯನ್ನು ಅಣಿಯಾಗಿ ಸಿದ್ದಮಾಡಿಕೊಂಡು) ಭೋರೆಂದು ಎಱಪ ಉಗ್ರ ಆರಾತಿಯ ಊರುದ್ವಯಮನು ಇಡೆ (ಭೋರೆಂದು ಮೇಲೆ ಎರಗುವ ಶತ್ರುವಿನ ಎರಡು ತೊಡೆಗಳನ್ನು ಹೊಡೆಯಲು) ಗದಾಘಾತದಿಂದ ಊರುಯುಗ್ಮಂ ಮುಱಿದು ಎತ್ತಂ ನುಚ್ಚುನೂಱಾಗಿರೆ (ಗದೆಯ ಪೆಟ್ಟಿನಿಂದ ಆ ಎರಡು ತೊಡೆಗಳೂ ಮುರಿದು ಎಲ್ಲ ಕಡೆಯಲ್ಲಿಯೂ ಪುಡಿಪುಡಿಯಾಗಿರಲು) ಕೆಡೆದನು ಇಳಾಭಾಗದೊಳ್ ಧಾರ್ತರಾಷ್ಟ್ರಂ (ದುರ್ಯೋಧನನು ನೆಲದ ಮೇಲೆ ಬಿದ್ದನು.)
ಪದ್ಯ-೯೬:ಅರ್ಥ:ಭೀಮನು ಯೋಚಿಸಿದ, ಈತನಿಗೆ ಈ ಎರಡು ತೊಡೆಗಳು ಮರ್ಮಸ್ಥಾನ. ಮರ್ಮವನ್ನು ತಿಳಿಯದೆ ನಾನು ಇಲ್ಲಿಯವರೆಗೆ ತಪ್ಪಿದೆನು. ಇನ್ನು ಬಿಡು, ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ- ಎಂದು ನಿಧಾನವಾಗಿ ಗದೆಯನ್ನು ಅಣಿಯಾಗಿ ಸಿದ್ದಮಾಡಿಕೊಂಡು ಭೋರೆಂದು ಮೇಲೆ ಎರಗುವ ಶತ್ರುವಿನ ಎರಡು ತೊಡೆಗಳನ್ನು ಹೊಡೆಯಲು, ಗದೆಯ ಪೆಟ್ಟಿನಿಂದ ಆ ಎರಡು ತೊಡೆಗಳೂ ಮುರಿದು ಎಲ್ಲ ಕಡೆಯಲ್ಲಿಯೂ ಪುಡಿಪುಡಿಯಾಗಿರಲು ದುರ್ಯೋಧನನು ನೆಲದ ಮೇಲೆ ಬಿದ್ದನು.
ಚಂ|| ನುಡಿದುದನೆಯ್ದೆ ತುತ್ತ ತುದಿಯೆಯ್ದುವಿನಂ ನುಡಿದಂ ವಲಂ ಚಲಂ
ಬಿಡಿದುದನೆಯ್ದೆ ಮುಂ ಪಿಡಿದುದಂ ಪಿಡಿದಂ ಸಲೆ ಪುಣ್ದ ಪೂಣ್ಕೆ ಪೂಣ್ಕೆ ನೇ|
ರ್ಪಡೆ ನಡೆವನ್ನೆಗಂ ನಡೆದನಳ್ಕದೆ ಬಳ್ಕದೆ ತನ್ನೊಡಲ್ ಪಡೆ
ಲ್ವಡುವಿನಮಣ್ಮುಗುಂದನೆ ದಲೇನಭಿಮಾನಧನಂ ಸುಯೋಧನಂ|| ೯೭
ಪದ್ಯ-೯೭:ಪದವಿಭಾಗ-ಅರ್ಥ: ನುಡಿದುದನು ಎಯ್ದೆ ತುತ್ತ ತುದಿಯೆ ಎಯ್ದುವಿನಂ ನುಡಿದಂ (ಆಡಿದ ಮಾತನ್ನು ತುತ್ತತುದಿ ಮುಟ್ಟುವವರೆಗೂ ಆಡಿದಂತಾದನು.) ವಲಂ ಚಲಂ ಬಿಡಿದುದನು ಎಯ್ದೆ ಮುಂ ಪಿಡಿದುದಂ ಪಿಡಿದಂ (ಅಬ್ಬಾ! ಮೊದಲು ಹಿಡಿದ ಹಟವನ್ನು ಕೊನೆಯವರೆಗೂ ಹಿಡಿದೇ ಇದ್ದನು, ಸಾಧಿಸಿದನು.) ಸಲೆ ಪುಣ್ದ ಪೂಣ್ಕೆ ಪೂಣ್ಕೆ ನೇರ್ಪಡೆ ನಡೆವ ಅನ್ನೆಗಂ ನಡೆದನು,(ಮಾಡಿದ ಪ್ರತಿಜ್ಞೆಯ ನೇರವಾಗಿ ನಡೆಯುವವರೆಗೂ ನಡೆದನು.) ಅಳ್ಕದೆ ಬಳ್ಕದೆ ತನ್ನೊಡಲ್ ಪಡೆಲ್ವಡುವಿನಂ ಅಣ್ಮುಗುಂದನೆ (ಹೆದರದೆ ಅಳ್ಳಾಡದೆ ತನ್ನ ಶರೀರವು ಪುಡಿಯಾಗಿ ಒಡೆದು ಬೀಳುವವರೆಗೂ ತನ್ನ ಪೌರುಷವು ಕುಗ್ಗದೆ ಇದ್ದನಲ್ಲಾ) ದಲ್ ಏನು ಅಭಿಮಾನಧನಂ ಸುಯೋಧನಂ (ದಲ್ -ಅಬ್ಬಾ! ದುರ್ಯೋಧನನು ಎಷ್ಟು ಆತ್ಮಗೌರವವೇ ಸಂಪತ್ತಾಗಿ ಉಳ್ಳವನು)
ಪದ್ಯ-೯೭:ಅರ್ಥ: ಆಡಿದ ಮಾತನ್ನು ತುತ್ತತುದಿ ಮುಟ್ಟುವವರೆಗೂ ಆಡಿದನು. ವಲಂ- ಅಬ್ಬಾ! ಮೊದಲು ಹಿಡಿದ ಹಟವನ್ನು ಕೊನೆಯವರೆಗೂ ಸಾಧಿಸಿದನು. ಮಾಡಿದ ಪ್ರತಿಜ್ಞೆಯ ನೇರವಾಗಿ ನಡೆಯುವವರೆಗೂ ನಡೆದನು. ಹೆದರದೆ ಅಳ್ಳಾಡದೆ ತನ್ನ ಶರೀರವು ಪುಡಿಯಾಗಿ ಒಡೆದು ಬೀಳುವವರೆಗೂ ತನ್ನ ಪೌರುಷವು ಕುಗ್ಗದೆ ಇದ್ದನಲ್ಲಾ! ದಲ್ -ಅಬ್ಬಾ! ದುರ್ಯೋಧನನು ಎಷ್ಟು ಆತ್ಮಗೌರವವೇ ಸಂಪತ್ತಾಗಿ ಉಳ್ಳವನು!
ವ|| ಅಂತು ಸತ್ತುಂ ನೆಲನಂ ಪತ್ತುವಿಡೆನೆಂಬಂತೆ (ಹಾಗೆ ಸತ್ತೂ ನೆಲವನ್ನು- ಹತ್ತಿಕೊಂಡಿರುವುದನ್ನು- ಅಂಟಿಕೊಂಡಿರುವುದನ್ನು, ಬಿಡುವುದಿಲ್ಲ ಎನ್ನುವ ಹಾಗೆ) ನೆಲನಂ ಪತ್ತಿ ಮೂರ್ಛಾಗತನಾಗಿರ್ದ ಕುರುಕುಳಚೂಡಾಮಣಿಯನೇುನುಂ ಮಾಣದೆ ಕಿವಿರವೈರಿ ಮುಟ್ಟೆವಂದಾಗಳೇಕಾದಶಾ ಕ್ಷೋಹಿಣೀಪತಿಯಪ್ಪ ರಾಜಾರಾಜನಂ ಪರಾಭವಂಬಡಿಸದಿರೆಂದು ಬಲದೇವಂ ಬಾರಿಸೆವಾರಿಸೆ-
ವಚನ:ಪದವಿಭಾಗ-ಅರ್ಥ:ಅಂತು ಸತ್ತುಂ ನೆಲನಂ ಪತ್ತುವಿಡೆನು ಎಂಬಂತೆ (ಹಾಗೆ ಸತ್ತೂ ನೆಲವನ್ನು(ಹತ್ತಿಕೊಂಡಿರುವುದನ್ನು- ಅಂಟಿಕೊಂಡಿರುವುದನ್ನು) ಬಿಡುವುದಿಲ್ಲ ಎನ್ನುವ ಹಾಗೆ) ನೆಲನಂ ಪತ್ತಿ ಮೂರ್ಛಾಗತನಾಗಿರ್ದ ಕುರುಕುಳಚೂಡಾಮಣಿಯನು ಏನುಂ ಮಾಣದೆ (ನೆಲವನ್ನು ತಬ್ಬಿಕೊಂಡು ಎಚ್ಚರತಪ್ಪಿದ್ದ ಕುರುಕುಲಚೂಡಾಮಣಿಯಾದ ದುಯೋರ್ಧನನನ್ನು ಭೀಮನು ಸ್ವಲ್ಪವೂ ಬೇಡವೆಂದರೂ ಬಿಡದೆ) ಕಿಮ್ಮೀರ ವೈರಿ ಮುಟ್ಟೆವಂದಾಗಳ್ (ಸಮೀಪಿಸಿ ಬಂದಾಗ) ಏಕಾದಶಾ ಕ್ಷೋಹಿಣೀಪತಿಯಪ್ಪ ರಾಜಾರಾಜನಂ ಪರಾಭವಂ ಬಡಿಸದಿರು ಎಂದು (ಹನ್ನೊಂದು ಅಕ್ಷೋಹಿಣೀ ಪತಿಯಾದ ಚಕ್ರವರ್ತಿಯನ್ನು ಅವಮಾನ ಪಡಿಸಬೇಡ ಎಂದು) ಬಲದೇವಂ ಬಾರಿಸೆ ವಾರಿಸೆ (ತಡೆದು ನಿವಾರಿಸುತ್ತಿರಲು.)-
ವಚನ:ಅರ್ಥ:ಹಾಗೆ ಸತ್ತೂ ನೆಲವನ್ನು(ಹತ್ತಿಕೊಂಡಿರುವುದನ್ನು- ಅಂಟಿಕೊಂಡಿರುವುದನ್ನು) ಬಿಡುವುದಿಲ್ಲ ಎನ್ನುವ ಹಾಗೆ ನೆಲವನ್ನು ತಬ್ಬಿಕೊಂಡು ಎಚ್ಚರತಪ್ಪಿದ್ದ ಕುರುಕುಲಚೂಡಾಮಣಿಯಾದ ದುಯೋರ್ಧನನನ್ನು ಭೀಮನು ಸ್ವಲ್ಪವೂ ಬೇಡವೆಂದರೂ ಬಿಡದೆ, ಸಮೀಪಕ್ಕೆ ಬಂದಾಗ ಬಲರಾಮನು, ಹನ್ನೊಂದು ಅಕ್ಷೋಹಿಣೀ ಪತಿಯಾದ ಚಕ್ರವರ್ತಿಯನ್ನು ಅವಮಾನ ಪಡಿಸಬೇಡ ಎಂದು ತಡೆದು ನಿವಾರಿಸುತ್ತಿರಲು.
ಮ|| ಸ್ರ|| ಇದರೊಳೊ ಮೂರ್ಧಾಭಿಷೇಕಂ ತನಗೆ ಗಡ ಸಮಂತಾಯ್ತು ಪಿಂಛಾತಪತ್ರಂ
ಪುದಿದೆತ್ತಂ ತಣ್ಣೆೞಲ್ಮಾಡುವುದು ಗಡಮಿದೆಂತೆಂದುಮಾರ್ಗಪ್ಟೊಡಂ ಪ|
ರ್ವಿದ ಗರ್ವೋದ್ರೋಕದಿಂ ಬಾಗದು ಗಡಮೆನುತುಂ ಮಾಣಿಕಂ ಸೂಸೆ ಬಲ್ಪಿಂ
ದೊದೆದಂ ಸಾರ್ತಂದು ದುರ್ಯೋಧನನ ಮಕುಟಮಂ ಕೋಪದಿಂ ಭೀಮಸೇನಂ|| ೯೮
ಪದ್ಯ-೯೮:ಪದವಿಭಾಗ-ಅರ್ಥ:ಇದರೊಳೊ ಮೂರ್ಧಾಭಿಷೇಕಂ ತನಗೆ ಗಡ ಸಮಂತಾಯ್ತು (ಇದರಿಂದಲ್ಲವೇ ಇವನಿಗೆ ಪಟ್ಟಾಭಿಷೇಕವು ಚೆನ್ನಾಗಿ ಆಯಿತು.) ಪಿಂಛಾತಪತ್ರಂ ಪುದಿದು ಎತ್ತಂ ತಣ್ಣೆೞಲ್ಮಾಡುವುದು ಗಡಂ (ನವಿಲುಗರಿಯ ಕೊಡೆಯು ಎಲ್ಲ ಕಡೆಯೂ ಪ್ರಸರಿಸಿ ಇದಕ್ಕಲ್ಲವೇ ತಂಪಾದ ನೆರಳನ್ನುಂಟು ಮಾಡುವುದು) ಇದು ಎಂತು ಎಂದುಮ್ ಆರ್ಗಪ್ಟೊಡಂ ಪರ್ವಿದ ಗರ್ವೋದ್ರೋಕದಿಂ ಬಾಗದು ಗಡಂ (ಇದು ಎಂದೂ ಯಾರಿಗೂ ಹೆಚ್ಚಾದ ಗರ್ವದಿಂದ ಬಾಗುವುದಿಲ್ಲವಲ್ಲವೇ’ )ಎನುತುಂ ಮಾಣಿಕಂ ಸೂಸೆ ಬಲ್ಪಿಂದ ಒದೆದಂ ಸಾರ್ತಂದು ದುರ್ಯೋಧನನ ಮಕುಟಮಂ () ಕೋಪದಿಂ ಭೀಮಸೇನಂ (ಎನ್ನುತ್ತ ಮಾಣಿಕ್ಯರತ್ನಗಳು ಚೆಲ್ಲುತ್ತಿರಲು ಭೀಮಸೇನನು ಸಾರ್ತಂದು- ಹತ್ತಿರಬಂದು ಕೋಪದಿಂದ ದುಯೋಧನನ ಕಿರೀಟವನ್ನು ಬಲವಾಗಿ ಒದೆದನು. )
ಪದ್ಯ-೯೮:ಅರ್ಥ: ‘ಇದರಿಂದಲ್ಲವೇ ಇವನಿಗೆ ಪಟ್ಟಾಭಿಷೇಕವು ಚೆನ್ನಾಗಿ ಆಯಿತು. (ಆಗುವುದು, ಇನ್ನೂ ಆಗಿಲ್ಲ). ನವಿಲುಗರಿಯ ಕೊಡೆಯು ಎಲ್ಲ ಕಡೆಯೂ ಪ್ರಸರಿಸಿ ಇದಕ್ಕಲ್ಲವೇ ತಂಪಾದ ನೆರಳನ್ನುಂಟು ಮಾಡುವುದು. ಇದು ಎಂದೂ ಯಾರಿಗೂ ಹೆಚ್ಚಾದ ಗರ್ವದಿಂದ ಬಾಗುವುದಿಲ್ಲವಲ್ಲವೇ’ ಎನ್ನುತ್ತ ಮಾಣಿಕ್ಯರತ್ನಗಳು ಚೆಲ್ಲುತ್ತಿರಲು ಭೀಮಸೇನನು ಹತ್ತಿರಬಂದು ಕೋಪದಿಂದ ದುಯೋಧನನ ಕಿರೀಟವನ್ನು ಬಲವಾಗಿ ಒದೆದನು.
ವ|| ಒದೆವುದುಂ ದುರ್ಯೋಧನಂಗಾದವಸ್ಥೆಯಂ ನೋಡಲಾಱದೆಯುಂ ತನ್ನ ತಮ್ಮನ ಮನಮಂ ನೋಡಿಸಲಾಱದೆಯುಂ ಬಲದೇವಂ ಭಗ್ನಮನೋರಥನಾಗಿ ದ್ವಾರಾವತಿಗೆ ಪೋದನನ್ನೆಗಂ ವೇಣೀಸಂಹಾರೋರುಭಂಗ ಮಕುಟಭಂಗಂಗಳೆಂಬ ತನ್ನ ಮಹಾ ಪ್ರತಿಜ್ಞೆಯಂ ನೆಱಪಿದ ಭೀಮಸೇನನಳವನಳವಲ್ಲದೆ ಪೊಗೞ್ದು ಚಕ್ರಿ ಕಾಲ ಕುಶಲನಪ್ಪುದಱಿನಶ್ವತ್ಥಾಮನಿನಪ್ಪನಾಗತ ಬಾಧಾವಿಘಾತಮಂ ಮಾಡಲೆಂದಯ್ವರುಮಂ ನೀಲಗಿರಿಗೊಡಗೊಂಡು ಪೋಗುತ್ತುಮಲ್ಲಿರ್ದ ಬೀಡುಮನಾ ಬೀಡಿಂಗೆ ಕಾಪಾಗಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯುತ್ತಮೌಜಸರುಮಂ ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರುಮಂ ಪೇೞ್ದು ಹಸ್ತಿನಪುರಕ್ಕೆ ಕಳಿಪಿದನ್ನೆಗಮಿತ್ತ ಕೃಪ ಕೃತವರ್ಮ ಸಮೇತನಶ್ವತ್ಥಾಮಂ ದುಯೋರ್ಧನನಿರ್ದೆಡೆಯಱಿಯದೆ ಗಾಂಗೇಯರಿಂದಮಿರ್ದೆಡೆಯನಱಿದು ಕೊಳಕ್ಕೆವಂದಲ್ಲಿಯುಂ ಕಾಣದೆ ಕೊಳುಗುಳದೊಳಱಸುತ್ತುಂ ಬರ್ಪಂ ತೊಟ್ಟನೆ ಕಟ್ಟಿದಿರೊಳ್-
ವಚನ:ಪದವಿಭಾಗ-ಅರ್ಥ:ಒದೆವುದುಂ ದುರ್ಯೋಧನಂಗೆ ಆದ ಅವಸ್ಥೆಯಂ ನೋಡಲಾಱದೆಯುಂ (ಬಲರಾಮನು ದುರ್ಯೋಧನನಿಗಾದ ಅವಸ್ಥೆಯನ್ನು ನೋಡಲಾರದೆಯೂ) ತನ್ನ ತಮ್ಮನ ಮನಮಂ ನೋಯಿಸಲಾಱದೆಯುಂ ಬಲದೇವಂ ಭಗ್ನಮನೋರಥನಾಗಿ ದ್ವಾರಾವತಿಗೆ ಪೋದನು (ಭಗ್ನಮನೋರಥನಾಗಿ ದ್ವಾರಾವತಿಗೆ ಹೋದನು.) ಅನ್ನೆಗಂ ವೇಣೀಸಂಹಾರ , ಊರುಭಂಗ ಮಕುಟಭಂಗಂಗಳು ಎಂಬ ತನ್ನ ಮಹಾ ಪ್ರತಿಜ್ಞೆಯಂ ನೆಱಪಿದ ಭೀಮಸೇನನು (ಅಷ್ಟರಲ್ಲಿ ವೇಣೀಸಂಹಾರ (ಮುಡಿಯನ್ನು ಕಟ್ಟುವುದು) ಊರುಭಂಗ (ತೊಡೆಯನ್ನು ಮುರಿಯುವುದು) ಮಕುಟಭಂಗ (ಕಿರೀಟವನ್ನು ಒಡೆಯುವುದು) ಎಂಬ ತನ್ನ ಮಹಾಪ್ರತಿಜ್ಞೆಗಳನ್ನು ಪೂರ್ಣಮಾಡಿದ ಭೀಮಸೇನನ) ಅಳವನು ಅಳವಲ್ಲದೆ ಪೊಗೞ್ದು ಚಕ್ರಿ (ಶಕ್ತಿಯನ್ನು ಅಳತೆಮೀರಿ ಕೃಷ್ಣನು ಹೊಗಳಿದನು. ಹೊಗಳಿ-) ಕಾಲ ಕುಶಲನಪ್ಪುದಱಿಂ ಅಶ್ವತ್ಥಾಮನಿಂ ಅಪ್ಪ ಅನಾಗತ ಬಾಧಾ ವಿಘಾತಮಂ ಮಾಡಲೆಂದು ಅಯ್ವರುಮಂ (ಕಾಲಕುಶಲನು- ಕಾಲ ಸಂದರ್ಭವನ್ನರಿತು ಮಾಡಬೇಕಾದ ಕಾರ್ಯವನ್ನು ಮಾಡುವದರಲ್ಲಿ ಜಾಣನು- ಆದುದರಿಂದ ಅಶ್ವತ್ಥಾಮನಿಂದ ಮುಂದೆ ಬರುವ ವಿಪತ್ತಿಗೆ ಪರಿಹಾ ರಮಾಡುವುದಕ್ಕೆಂದು ಅಯ್ದು ಜನ ಪಾಂಡವರನ್ನು) ನೀಲಗಿರಿಗೆ ಒಡಗೊಂಡು ಪೋಗುತ್ತುಂ ಅಲ್ಲಿರ್ದ ಬೀಡುಮನು (ನೀಲಗಿರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು.) ಆ ಬೀಡಿಂಗೆ ಕಾಪಾಗಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸರುಮಂ (ಆ ಬೀಡಿಗೆ ರಕ್ಷಕರಾಗಿ ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜಸರನ್ನೂ ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ) ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರುಮಂ ಪೇೞ್ದು ಹಸ್ತಿನಪುರಕ್ಕೆ ಕಳಿಪಿದನು, (ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ಪಾಂಡವರನ್ನು ಹಸ್ತಿನಾಪಟ್ಟಣಕ್ಕೆ ಕಳುಹಿಸಿದನು.) ಅಗಮಿತ್ತ ಕೃಪ ಕೃತವರ್ಮ ಸಮೇತಂ ಅಶ್ವತ್ಥಾಮಂ ದುಯೋರ್ಧನನು ಇರ್ದೆಡೆಯ ಅಱಿಯದೆ (ಅಷ್ಟರಲ್ಲಿ ಈ ಕಡೆ ಕೃಪ ಕೃತವರ್ಮರೊಡಗೂಡಿದ ಅಶ್ವತ್ಥಾಮನು ದುರ್ಯೋಧನನಿದ್ದ ಸ್ಥಳವನ್ನು ತಿಳಿಯದೆ) ಗಾಂಗೇಯರಿಂದಂ ಇರ್ದೆಡೆಯನು ಅಱಿದು ಕೊಳಕ್ಕೆವಂದು ಅಲ್ಲಿಯುಂ ಕಾಣದೆ (ಭೀಷ್ಮರಿಂದ ದುರ್ಯೋಧನನಿದ್ದ ಸ್ಥಳವನ್ನು ತಿಳಿದು ಕೊಳಕ್ಕೆ ಬಂದು ಅಲ್ಲಿಯೂ ಕಾಣದೆ ) ಕೊಳುಗುಳದೊಳು ಅಱಸುತ್ತುಂ ಬರ್ಪಂ ತೊಟ್ಟನೆ ಕಟ್ಟಿದಿರೊಳ್ (ಯುದ್ಧಭೂಮಿಯಲ್ಲಿ ಹುಡುಕುತ್ತ ಬರುತ್ತಿದ್ದವನು ಥಟಕ್ಕನೆ ಎದುರುಗಡೆಯಲ್ಲಿ )-
ವಚನ:ಅರ್ಥ:ಬಲರಾಮನು ದುರ್ಯೋಧನನಿಗಾದ ಅವಸ್ಥೆಯನ್ನು ನೋಡಲಾರದೆಯೂ ತನ್ನ ತಮ್ಮನಾದ ಕೃಷ್ಣನ ಮನಸ್ಸನ್ನು ನೋಯಿಸಲಾರದೆಯೂ ಭಗ್ನಮನೋರಥನಾಗಿ ದ್ವಾರಾವತಿಗೆ ಹೋದನು. ಅಷ್ಟರಲ್ಲಿ ವೇಣೀಸಂಹಾರ (ಮುಡಿಯನ್ನು ಕಟ್ಟುವುದು) ಊರುಭಂಗ (ತೊಡೆಯನ್ನು ಮುರಿಯುವುದು) ಮಕುಟಭಂಗ (ಕಿರೀಟವನ್ನು ಒಡೆಯುವುದು) ಎಂಬ ತನ್ನ ಮಹಾಪ್ರತಿಜ್ಞೆಗಳನ್ನು ಪೂರ್ಣಮಾಡಿದ ಭೀಮಸೇನನ ಶಕ್ತಿಯನ್ನು ಅಳತೆಮೀರಿ ಕೃಷ್ಣನು ಹೊಗಳಿದನು. ಕಾಲಕುಶಲನು ಆದುದರಿಂದ ಅಶ್ವತ್ಥಾಮನಿಂದ ಮುಂದೆ ಬರುವ ವಿಪತ್ತಿಗೆ ಪರಿಹಾ ರಮಾಡುವುದಕ್ಕೆಂದು ಅಯ್ದು ಜನ ಪಾಂಡವರನ್ನು ನೀಲಗಿರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು. ಆ ಬೀಡಿಗೆ ರಕ್ಷಕರಾಗಿ ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜಸರನ್ನೂ ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ಪಾಂಡವರನ್ನು ಹಸ್ತಿನಾಪಟ್ಟಣಕ್ಕೆ ಕಳುಹಿಸಿದನು. ಅಷ್ಟರಲ್ಲಿ ಈ ಕಡೆ ಕೃಪಕೃತವರ್ಮರೊಡಗೂಡಿದ ಅಶ್ವತ್ಥಾಮನು ದುರ್ಯೋಧನನಿದ್ದ ಸ್ಥಳವನ್ನು ತಿಳಿಯದೆ ಭೀಷ್ಮರಿಂದ ದುರ್ಯೋಧನನಿದ್ದ ಸ್ಥಳವನ್ನು ತಿಳಿದು ಕೊಳಕ್ಕೆ ಬಂದು ಅಲ್ಲಿಯೂ ಕಾಣದೆ ಯುದ್ಧಭೂಮಿಯಲ್ಲಿ ಹುಡುಕುತ್ತ ಬರುತ್ತಿದ್ದವನು ಥಟಕ್ಕನೆ ಎದುರುಗಡೆಯಲ್ಲಿ
ಚಂ|| ಪಿಡಿದೆಡಗೆಯ್ಯ ಚಾಮರದ ದಕ್ಷಿಣಹಸ್ತದ ಪದ್ಮದೊಳ್ಪೊಡಂ
ಬಡೆ ನಸು ಮಾಸಿ ಪಾಡಳಿದ ರೂಪಿನೊಳುಣ್ಮವ ಗಾಡಿ ನಾಡೆ ಕ|
ಣ್ಗೆಡರೆ ತೊಡಂಕಿ ಪೀರಿದ ಕುರುಳ್ಗಳೆ ಚಿತ್ತದೊಳಾದ ಬೇಸಱಂ
ನುಡಿವವೊಲಾಗೆ ಬರ್ಪ ಕಮಳಾಯತನೇತ್ರೆಯನಿಂದು ವಕ್ತ್ರೆಯಂ|| ೯೯ ||
ಪದ್ಯ-೯೯:ಪದವಿಭಾಗ-ಅರ್ಥ:ಪಿಡಿದೆಡಗೆಯ್ಯ ಚಾಮರದ (ಎಡಗೈಯಲ್ಲಿ ಚಾಮರವೂ) ದಕ್ಷಿಣಹಸ್ತದ ಪದ್ಮದ ಒಳ್ಪು (ಬಲಗೈಯಲ್ಲಿ ಕಮಲದ ಹೂವೂ ಮನೋಹರವಾಗಿರಲು ) ಒಡಂಬಡೆ ನಸು ಮಾಸಿ ಪಾಡಳಿದ ರೂಪಿನೊಳು ಉಣ್ಮವ ಗಾಡಿ ನಾಡೆ (ಸ್ವಲ್ಪ ತೇಜೋಹೀನವಾಗಿ ಸ್ವಭಾವಸ್ಥಿತಿ ಕೆಟ್ಟು ಆಕಾರವನ್ನು ಹೊರಹೊಮ್ಮುತ್ತಿರುವ ಸೌಂದರ್ಯವು) ಕಣ್ಗೆ ಅಡರೆ ತೊಡಂಕಿ ಪೀರಿದ ಕುರುಳ್ಗಳೆ ಚಿತ್ತದೊಳು ಆದ ಬೇಸಱಂ ನುಡಿವವೊಲಾಗೆ (ವಿಷೇಷವಾಗಿ ಕಣ್ಣನ್ನು ಆಕರ್ಷಿಸಲು ಸಿಕ್ಕಾಗಿ ಕೆದರಿರುವ ಕುರುಳುಗಳು ಮನಸ್ಸಿನ ಬೇಸರನ್ನು ನುಡಿಯುವ ಹಾಗಿರಲು (ಎದುರಿಗೆ) ಬರ್ಪ ಕಮಳಾಯತನೇತ್ರೆಯನಿಉ ಇಂದು ವಕ್ತ್ರೆಯಂ ( ಬರುತ್ತಿದ್ದ ಕಮಳದಂತೆ ವಿಸ್ತಾರವಾದ ಕಣ್ಣುಳ್ಳ ಚಂದ್ರಮುಖಿಯನ್ನು ನೋಡಿ-)
ಪದ್ಯ-೯೯:ಅರ್ಥ: ಎಡಗೈಯಲ್ಲಿ ಚಾಮರವೂ ಬಲಗೈಯಲ್ಲಿ ಕಮಲದ ಹೂವೂ ಮನೋಹರವಾಗಿರಲು ಸ್ವಲ್ಪ ತೇಜೋಹೀನವಾಗಿ ಸ್ವಭಾವಸ್ಥಿತಿ ಕೆಟ್ಟು ಆಕಾರವನ್ನು ಹೊರಹೊಮ್ಮುತ್ತಿರುವ ಸೌಂದರ್ಯವು ವಿಷೇಷವಾಗಿ ಕಣ್ಣನ್ನು ಆಕರ್ಷಿಸಲು ಸಿಕ್ಕಾಗಿ ಕೆದರಿರುವ ಕುರುಳುಗಳು ಮನಸ್ಸಿನ ಬೇಸರನ್ನು ನುಡಿಯುವ ಹಾಗಿರಲು (ಎದುರಿಗೆ) ಬರುತ್ತಿದ್ದ ಕಮಳದಂತೆ ವಿಸ್ತಾರವಾದ ಕಣ್ಣುಳ್ಳ ಚಂದ್ರಮುಖಿಯನ್ನು ನೋಡಿದನು.
ವ|| ಕಂಡು ನೀನಾರ್ಗೇನೆಂಬೆಯೆಲ್ಲಿಗೆ ಪೋದಪೆಯೆನೆ-
ವಚನ:ಪದವಿಭಾಗ-ಅರ್ಥ:ಕಂಡು ನೀನಾರ್ಗೆ ಏನೆಂಬೆ ಯೆಲ್ಲಿಗೆ ಪೋದಪೆ ಎನೆ-
ವಚನ:ಅರ್ಥ:ವ|| ನೀನಾರು? ನಿನ್ನ ಹೆಸರೇನು? ಎಲ್ಲಿಗೆ ಹೋಗುತ್ತಿದ್ದೀಯೆ ಎನ್ನಲು-
ಮ|| ಪೆಸರೊಳ್ ಲಕ್ಷ್ಮಿಯೆನಿನ್ನೆಗಂ ನೆಲಸಿ ತಾಂ ದುರ್ಯೋಧನೋರಸ್ಥಳಾ
ವಸಥಂ ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂ|
ತಸದಿರ್ದೆಂ ಬಿಸುಟಾ ಧರಾಧಿಪತಿಯಂ ನಾರಾಯಣಾದೇಶಮೊ
ಡ್ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಪೆಂ|| ೧೦೦ ||
ಪದ್ಯ-೧೦೦:ಪದವಿಭಾಗ-ಅರ್ಥ:ಪೆಸರೊಳ್ ಲಕ್ಷ್ಮಿಯೆಂ ಇನ್ನೆಗಂ ನೆಲಸಿ ತಾಂ (ನನ್ನ ಹೆಸರು ಲಕ್ಷ್ಮಿಯೆಂದು. ಇಲ್ಲಿಯವರೆಗೆ ಅಲ್ಲಿ ಯಾನು ಸಂತೋಷದಿಂದ ಇದ್ದೆನು. ) ದುರ್ಯೋಧನನ ಓರಸ್ಥಳ ಆವಸಥಂ (ದುರ್ಯೋಧನನ ಎದೆಯು ಮನೆಯಾಗಿರಲು )ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂತಸದಿಂ ಇರ್ದೆಂ (ದ್ರೋಣ ಭೀಷ್ಮ ಕರ್ಣರ ಬಾಹುಬಲದಿಂದ ರಕ್ಷಿತನಾದ ಅಲ್ಲಿ ನಾನು ಸಂತೋಷದಿಂದ ಇದ್ದೆನು) ಬಿಸುಟಾ ಧರಾಧಿಪತಿಯಂ (ಆ ರಾಜನನ್ನು ಬಿಸುಟು- ಬಿಟ್ಟು) ನಾರಾಯಣ ಆದೇಶಮೊಡ್ಡಿಸೆ ಪಾಂಡುಪ್ರಿಯ ಪುತ್ರರೊಳ್ ನೆರೆಯಲು ಎಂದು ಇಂತೀಗಳಾಂ ಪೋದಪೆಂ (ಕೃಷ್ಣನು ಅಪ್ಪಣೆಯ ಪ್ರಕಾರ ಪಾಂಡುಪ್ರಿಯಪುತ್ರರಲಿ ಸೇರಬೇಕೆಂದು ಈಗ ನಾನು ಹೋಗುತ್ತಿದ್ದೇನೆ.)
ಪದ್ಯ-೧೦೦:ಅರ್ಥ: ನನ್ನ ಹೆಸರು ಲಕ್ಷ್ಮಿಯೆಂದು. ದ್ರೋಣ ಭೀಷ್ಮ ಕರ್ಣರ ಬಾಹುಬಲದಿಂದ ರಕ್ಷಿತನಾದ ದುರ್ಯೋಧನನ ಎದೆಯು ಮನೆಯಾಗಿರಲು ಇಲ್ಲಿಯವರೆಗೆ ಅಲ್ಲಿ ನಾನು ಸಂತೋಷದಿಂದ ಇದ್ದೆನು. ಕೃಷ್ಣನು ಅಪ್ಪಣೆಯ ಪ್ರಕಾರ ಆ ರಾಜನನ್ನು ಬಿಟ್ಟು, ಪಾಂಡುಪ್ರಿಯಪುತ್ರರಲಿ ಸೇರಬೇಕೆಂದು ಈಗ ನಾನು ಹೋಗುತ್ತಿದ್ದೇನೆ. ಎಂದಳು.
ವ|| ಎಂಬುದುಮಶ್ವತ್ಥಾಮನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಶ್ವತ್ಥಾಮನು ಇಂತೆಂದಂ-
ವಚನ:ಅರ್ಥ: ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು.

ಅಶ್ವತ್ಥಾಮನು ಕೊನೆಯದಿನ ರಾತ್ರಿ ಮಲಗಿದ್ದ ಪಾಂಡವ ಯೋಧರನ್ನೂ ಪಾಂಡವರ ಐದು ಮಕ್ಕಳನ್ನೂ ವಧೆಮಾಡಿದುದು ಸಂಪಾದಿಸಿ

ಪೊಸತಲರ್ದಂಬುಜಂಗಳೆಸಳೊಳ್ ನೆಡಪಾಡುವಳೇಂ ಪಯೋಧಿಯಂ
ಪೊಸೆದೊಡೆ ಪುಟ್ಟಿದೈ ಮುರವಿರೋಧಿಯ ಪತ್ನಿಯೆ ಮಿಂಚುತಿರ್ಪ ಕೂ|
ರಸಿಗಳ ಮೇಲೆ ಸಂಚರಿಪೆ ವೈರಿನರಾಧಿಪಸೈನ್ಯವಾರ್ಧಿಯಂ
ಪೊಸೆದೊಡೆ ಪುಟ್ಟಿದೀ ನಿನಗೆ ವಕ್ರಿಸಲೆನ್ನನದೆಂತು ತೀರ್ಗುಮೋ ||೧೦೧ ||
ಪದ್ಯ-೧೦೧:ಪದವಿಭಾಗ-ಅರ್ಥ:ಪೊಸತು ಅಲರ್ದ ಅಂಬುಜಂಗಳ ಎಸಳೊಳ್ ನೆಡಪಾಡುವಳೇಂ (ಹೊಸದಾಗಿ ಅರಳಿರುವ ಕಮಲದಳಗಳ ಮೇಲೆ ಓಡಾಡುವವಳೇನು! ) ಪಯೋಧಿಯಂ ಪೊಸೆದೊಡೆ ಪುಟ್ಟಿದೈ (ಸಮುದ್ರವನ್ನು ಕಡೆಯಲು ಹುಟ್ಟಿದೆಯಾ!) ಮುರವಿರೋಧಿಯ ಪತ್ನಿಯೆ ಮಿಂಚುತಿರ್ಪ ಕೂರಸಿಗಳ ಮೇಲೆ ಸಂಚರಿಪೆ (ವಿಷ್ಣುವಿನ ಹೆಂಡತಿಯೇ?, ಮಿಂಚಿನಂತಿರುವ ಹರಿತವಾದ ಕತ್ತಿಗಳ ಮೇಲೆ ಸಂಚರಿಸುತ್ತೀಯೆ;) ವೈರಿನರಾಧಿಪ ಸೈನ್ಯವಾರ್ಧಿಯಂ ಪೊಸೆದೊಡೆ ಪುಟ್ಟಿದೀ ನಿನಗೆ (ಶತ್ರುರಾಜ ಸೇನಾ ಸಮುದ್ರವನ್ನು ಕಡೆದಾಗ ಹುಟ್ಟಿದ ಈ ನಿನಗೆ) ವಕ್ರಿಸಲೆನ್ನನದೆಂತು ತೀರ್ಗುಮೋ (ನನ್ನನ್ನು ಪ್ರತಿಭಟಿಸಲು ಸಾಧ್ಯವೇ?)
ಪದ್ಯ-೧೦೧:ಅರ್ಥ:ಹೊಸದಾಗಿ ಅರಳಿರುವ ಕಮಲದಳಗಳ ಮೇಲೆ ಓಡಾಡುವವಳೇನು! ಸಮುದ್ರವನ್ನು ಕಡೆಯಲು ಹುಟ್ಟಿದೆಯಾ!, ವಿಷ್ಣುವಿನ ಹೆಂಡತಿಯೇ?, ಮಿಂಚಿನಂತಿರುವ ಹರಿತವಾದ ಕತ್ತಿಗಳ ಮೇಲೆ ಸಂಚರಿಸುತ್ತೀಯೆ; ಶತ್ರುರಾಜ ಸೇನಾ ಸಮುದ್ರವನ್ನು ಕಡೆದಾಗ ಹುಟ್ಟಿದ ಈ ನಿನಗೆ ನನ್ನನ್ನು ಪ್ರತಿಭಟಿಸಲು ಸಾಧ್ಯವೇ,
ಮ|| ಕುರುವಂಶಾಂಬರಭಾನುವಂ ಬಿಸುಡಿಸಲ್ಕಾನುಳ್ಳಿನಂ ತೀರದಾ
ನಿರೆ ನಾರಾಯಣನೆಂಬನುಂ ಪ್ರಭುವೆ ಪೇೞ್ ನೀನೀ ಮರುಳ್ಮಾತನಂ|
ಬುರುಹಾಕ್ಷ್ಮೀ ಬಿಸುಡಂಜದಿರ್ ನಡೆ ಕುರುಕ್ಷ್ಮಾಪಾಳನಿರ್ದಲ್ಲಿಗೆಂ
ದರವಿಂದಾಲಯೆಯಂ ಮಗುೞ್ಚಿದನದೇನಾ ದ್ರೌಣಿ ಶೌರ್ಯಾರ್ಥಿಯೋ|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ಕುರುವಂಶಾಂಬರಭಾನುವಂ (ಕುರುವಂಶವೆಂಬ ಆಕಾಶಕ್ಕೆ ಸೂರ್ಯನಾದ ದುಯೋರ್ಧನನನ್ನು) ಬಿಸುಡಿಸಲ್ಕೆ ಆನು ಉಳ್ಳಿನಂ ತೀರದು (ನಾನಿರುವಾಗ ನೀನು ಬಿಸಾಡಲು ಸಾಧ್ಯವಿಲ್ಲ;) ಆನಿರೆ ನಾರಾಯಣನೆಂಬನುಂ ಪ್ರಭುವೆ ಪೇೞ್ (ನಾನಿರುವಾಗ ನಾರಾಯಣನೆಂಬುವನು ನಿನಗೆ ಯಜಮಾನನೇ ಹೇಳು,) ನೀನು ಈ ಮರುಳ್ ಮಾತಂ ಅಂಬುರುಹಾಕ್ಷ್ಮೀ ಬಿಸುಡು (ಹೇ ಕಮಲಮುಖಿ ಈ ಹುಚ್ಚುಮಾತನ್ನು ಬಿಸಾಡು;) ಅಂಜದಿರ್ ನಡೆ ಕುರುಕ್ಷ್ಮಾಪಾಳನಿರ್ದಲ್ಲಿಗೆ ಎಂದು ಅರವಿಂದಾಲಯೆಯಂ ಮಗುೞ್ಚಿದಂ (ಹೆದರಬೇಡ; ನಡೆ, ಕೌರವಚಕ್ರವರ್ತಿಯಿರುವ ಸ್ಥಳಕ್ಕೆ ಎಂದು ಲಕ್ಷ್ಮಿಯನ್ನು ಹಿಂತಿರುಗಿಸಿದನು.) ಅದೇನು ಆ ದ್ರೌಣಿ ಶೌರ್ಯಾರ್ಥಿಯೋ (ಅದೇನು ಅಶ್ವತ್ಥಾಮನು ಪ್ರತಾಪಿಯೋ?)
ಪದ್ಯ-೧೦೨:ಅರ್ಥ: ಕುರುವಂಶವೆಂಬ ಆಕಾಶಕ್ಕೆ ಸೂರ್ಯನಾದ ದುಯೋರ್ಧನನನ್ನು ನಾನಿರುವಾಗ ನೀನು ಬಿಸಾಡಲು ಸಾಧ್ಯವಿಲ್ಲ; ನಾನಿರುವಾಗ ನಾರಾಯಣನೆಂಬುವನು ನಿನಗೆ ಯಜಮಾನನೇ ಹೇಳು, ಹೇ ಕಮಲಮುಖಿ ಈ ಹುಚ್ಚುಮಾತನ್ನು ಬಿಸಾಡು; ಹೆದರಬೇಡ; ನಡೆ, ಕೌರವಚಕ್ರವರ್ತಿಯಿರುವ ಸ್ಥಳಕ್ಕೆ ಎಂದು ಲಕ್ಷ್ಮಿಯನ್ನು ಹಿಂತಿರುಗಿಸಿದನು. ಅದೇನು ಅಶ್ವತ್ಥಾಮನು ಪ್ರತಾಪಿಯೋ?
ವ|| ಅಂತು ವಿಕಸಿತಕಮಳದಳನಯನೆಯಂ ಕಮಳೆಯನಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬಘಟಚೇಟಿಕೆಯಂ ತರ್ಪಂತೆ ತಂದು ವೃಕೋದರ ಗದಾಸಂಚೂರ್ಣಿತೋರು ಯುಗಳನುಂ ಭೀಮಸೇನಚರಣಪ್ರಹರಣಗಳಿತಶೋಣಿತಾರ್ದ್ರಮೌಳಿಯುಮಾಗಿ ಕೋಟಲೆಗೊಳ್ವ ಕೌರವೇಶ್ವರನನೆಯ್ದೆ ಪೋಗಿ ಹಸ್ತಪ್ರಹಸ್ತಮಂಡಲಾಗ್ರನುಂ ಶೋಕವ್ಯಗ್ರನುಮಾಗಿ-
ವಚನ:ಪದವಿಭಾಗ-ಅರ್ಥ:ಅಂತು ವಿಕಸಿತ ಕಮಳದಳ ನಯನೆಯಂ ಕಮಳೆಯನು (ಅರಳಿದ ಕಮಲದಳದಂತೆ ಕಣ್ಣುಳ್ಳ ಲಕ್ಷ್ಮಿಯನ್ನು) ಅಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬ ಘಟಚೇಟಿಕೆಯಂ ತರ್ಪಂತೆ ತಂದು (ಮುಂದಿಟ್ಟುಕೊಂಡು ಕೌರವಕುಟುಂಬ ಘಟಚೇಟಿಕೆಯನ್ನು ಕರೆದುತರುವಂತೆ ತಂದು) ವೃಕೋದರ ಗದಾ ಸಂಚೂರ್ಣಿತೋರು ಯುಗಳನುಂ (ಭೀಮನ ಗದೆಯಿಂದ ಪುಡಿಮಾಡಲ್ಪಟ್ಟ ಎರಡು ತೊಡೆಯುಳ್ಳವನೂ) ಭೀಮಸೇನ ಚರಣ ಪ್ರಹರಣಗಳಿತ ಶೋಣಿತ ಆರ್ದ್ರ ಮೌಳಿಯುಮಾಗಿ (ಭೀಮಸೇನನ ಪಾದಗಳ ಒದೆತದಿಂದ ಸುರಿದ ರಕ್ತದಿಂದ ಒದ್ದೆಯಾಗಿರುವ ತಲೆಯುಳ್ಳವನೂ ಆಗಿ) ಕೋಟಲೆಗೊಳ್ವ ಕೌರವೇಶ್ವರನನು ಎಯ್ದೆ ಪೋಗಿ ಹಸ್ತಪ್ರಹಸ್ತ ಮಂಡಲಾಗ್ರನುಂ(ಕತ್ತಿ ಹಿಡಿದ ಕೈ) ಶೋಕ ವ್ಯಗ್ರನುಮಾಗಿ (ವ್ಯಥೆಪಡುತ್ತಿರುವ ದುರ್ಯೋಧನನ ಹತ್ತಿರಕ್ಕೆ ಬಂದು, ಹಿಡಿದ ಕತ್ತಿಯು ಕೈಯ, ದುರ್ಯೋಧನನ್ನು ದುಃಖದಿಂದ ವಿಶೇಷ ಖಿನ್ನನಾಗಿ- ನೋಡಿದನು.)-
ವಚನ:ಅರ್ಥ:ಅರಳಿದ ಕಮಲದಳದಂತೆ ಕಣ್ಣುಳ್ಳ ಲಕ್ಷ್ಮಿಯನ್ನು ಅಶ್ವತ್ಥಾಮನು ಮುಂದಿಟ್ಟುಕೊಂಡು ಕೌರವಕುಟುಂಬ ಘಟಚೇಟಿಕೆಯನ್ನು ಕರೆದುತರುವಂತೆ ತಂದನು. ಭೀಮನ ಗದೆಯಿಂದ ಪುಡಿಮಾಡಲ್ಪಟ್ಟ ಎರಡು ತೊಡೆಯುಳ್ಳವನೂ ಭೀಮಸೇನನ ಪಾದಗಳ ಒದೆತದಿಂದ ಸುರಿದ ರಕ್ತದಿಂದ ಒದ್ದೆಯಾಗಿರುವ ತಲೆಯುಳ್ಳವನೂ ಆಗಿ ವ್ಯಥೆಪಡುತ್ತಿರುವ ದುರ್ಯೋಧನನ ಹತ್ತಿರಕ್ಕೆ ಬಂದು ಹಿಡಿದ ಕತ್ತಿಯು ಕೈಯ, ದುರ್ಯೋಧನನ್ನು ದುಃಖದಿಂದ ವಿಶೇಷ ಖಿನ್ನನಾಗಿ- ನೋಡಿದನು.)-
ಚಂ|| ನೆಗೞ್ದ ನೆಗೞ್ತೆಗಾವೆಡೆಯೊಳಂ ಪೞೆ ಯಿಲ್ಲದೆ ಪೂಣ್ದು ಸಂದ ವೈ
ರಿಗಳನೆ ಕೊಂದು ವಾರಿಪರೀತಮಹೀತಳಮಂ ನಿಮಿರ್ಚಿ ಜೆ|
ಟ್ಟಿಗರನಯೋನಿಸಂಭವರನಾಳ್ದರಿವರ್ಗದೊಳಾಂತು ಕಾದೆಯುಂ
ಬಗೆ ದೊರೆಕೊಂಡುದಿಲ್ಲಿದು ವಿಧಾತ್ರನ ದೋಷಮೊ ನಿನ್ನ ದೋಷಮೋ|| ೧೦೩ ||
ಪದ್ಯ-೧೦೩:ಪದವಿಭಾಗ-ಅರ್ಥ:ನೆಗೞ್ದ ನೆಗೞ್ತೆಗೆ ಆವೆಡೆಯೊಳಂ ಪೞೆ ಯಿಲ್ಲದೆ ಪೂಣ್ದು (ದುರ್ಯೋಧನನು ಮಾಡಿದ ಕಾರ್ಯಕ್ಕೆ ಅಥವಾ ಪ್ರಸಿದ್ಧ ಕಾರ್ಯಕ್ಕೆ ಎಲ್ಲಿಯೂ ನಿಂದೆಯಿಲ್ಲದೆ ನಿರ್ವಹಿಸಿ,) ಸಂದ ವೈರಿಗಳನೆ ಕೊಂದು (ಪ್ರಸಿದ್ಧರಾದ ಶತ್ರುಗಳನ್ನು ಕೊಂದು,) ವಾರಿಪರೀತ ಮಹೀತಳಮಂ ನಿಮಿರ್ಚಿ ( ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ,) ಜೆಟ್ಟಿಗರನು ಅಯೋನಿಸಂಭವರನು ಆಳ್ದು (ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ, ಶೂರರನ್ನೂ -ಕರ್ಣ ಅಯೋನಿಜರನ್ನೂ- ದ್ರೋಣ ಕೃಪ- ಆಳಿ (ಒಡೆಯ)ಯಾಗಿದ್ದು,) ಅರಿವರ್ಗದೊಳು ಆಂತು (ಶತ್ರುವರ್ಗವನ್ನು ಎದುರಿಸಿ) ಕಾದೆಯುಂ (ಯುದ್ಧಮಾಡಿದರೂ ) ಬಗೆ (ನಿನಗೆ ಇಷ್ಟಾರ್ಥವು) ದೊರೆಕೊಂಡುದಿಲ್ಲ (ಲಭಿಸಲಿಲ್ಲವಲ್ಲಾ), ಇದು ವಿಧಾತ್ರನ ದೋಷಮೊ ನಿನ್ನ ದೋಷಮೋ (ಇದು ವಿಧಿಯ ದೋಷವೋ, ನಿನ್ನ ದೋಷವೋ?)
ಪದ್ಯ-೧೦೩:ಅರ್ಥ: ದುರ್ಯೋಧನನು ಮಾಡಿದ ಕಾರ್ಯಕ್ಕೆ ಅಥವಾ ಪ್ರಸಿದ್ಧ ಕಾರ್ಯಕ್ಕೆ ಎಲ್ಲಿಯೂ ನಿಂದೆಯಿಲ್ಲದೆ ನಿರ್ವಹಿಸಿ, ಪ್ರಸಿದ್ಧರಾದ ಶತ್ರುಗಳನ್ನು ಕೊಂದು, ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ, ಶೂರರನ್ನೂ ಅಯೋನಿಜರನ್ನೂ ಆಳಿ (ಒಡೆಯ)ಯಾಗಿದ್ದು, ಶತ್ರುವರ್ಗವನ್ನು ಎದುರಿಸಿ, ಯುದ್ಧಮಾಡಿದರೂ ನಿನಗೆ ಇಷ್ಟಾರ್ಥವು ಲಭಿಸಲಿಲ್ಲವಲ್ಲಾ. ಇದು ವಿಧಿಯೋ, ನಿನ್ನ ದೋಷವೋ!
ಕಂ|| ಆದೊಡಮೆನ್ನಂ ಬಂಚಿಸಿ
ಪೋದುದರೊಳ್ ನಿನಗೆ ಪಗವರಿಂದಿನಿತೆಡಱಾ|
ಯ್ತಾದಿತ್ಯತೇಜ ಬೆಸಸಿದಿ
ರಾದ ಪೃಥಾಸುತರನುೞಿಯಲೀಯದೆ ಕೊಲ್ವೆಂ|| ೧೦೪ ||
ಪದ್ಯ-೧೦೪:ಪದವಿಭಾಗ-ಅರ್ಥ:ಆದೊಡಂ ಎನ್ನಂ ಬಂಚಿಸಿ ಪೋದುದರೊಳ್ (ಆದರೂ ನನ್ನನ್ನು ವಂಚಿಸಿ ಹೋದುದರಿಂದ) ನಿನಗೆ ಪಗವರಿಂದ ಇನಿತು ಎಡಱಾಯ್ತು (ನಿನಗೆ ಶತ್ರುಗಳಿಂದ ಇಷ್ಟು ಕೇಡಾಯಿತು.) ಆದಿತ್ಯತೇಜ ಬೆಸಸು ಇದಿರಾದ ಪೃಥಾಸುತರನು ಉೞಿಯಲೀಯದೆ (ಉಳಿಯಲು ಈಯದೆ) ಕೊಲ್ವೆಂ (ಸೂರ್ಯತೇಜಸ್ಸುಳ್ಳ ದುರ್ಯೋಧನನೇ ಆಜ್ಞೆಮಾಡು, ಪ್ರತಿಭಟಿಸಿದ ಪಾಂಡವರನ್ನು ಉಳಿಯುವುದಕ್ಕೆ ಅವಕಾಶವಿಲ್ಲದಂತೆ ಕೊಲುತ್ತೇನೆ; - ಎಂದನು.)
ಪದ್ಯ-೧೦೪:ಅರ್ಥ:ಆದರೂ ನನ್ನನ್ನು ವಂಚಿಸಿ/ ತಿರಸ್ಕರಿಸಿ ಹೋದುದರಿಂದ ನಿನಗೆ ಶತ್ರುಗಳಿಂದ ಇಷ್ಟು ಕೇಡಾಯಿತು. ಸೂರ್ಯತೇಜಸ್ಸುಳ್ಳ ದುರ್ಯೋಧನನೇ ಆಜ್ಞೆಮಾಡು, ಪ್ರತಿಭಟಿಸಿದ ಪಾಂಡವರನ್ನು ಉಳಿಯುವುದಕ್ಕೆ ಅವಕಾಶವಿಲ್ಲದಂತೆ ಕೊಲುತ್ತೇನೆ ಎಂದನು.
ವ|| ಎಂಬುದುಂ ಫಣಿಕೇತನಂ ನೆತ್ತಿಯಿಂದೊರೆದುಗುವ ನೆತ್ತರ ಧಾರೆಯಿಂ ಮೆತ್ತಿದ ಕಣ್ಗಳನೊತ್ತಂಬದಿಂ ತೆರೆದಶ್ವತ್ಥಾಮನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಫಣಿಕೇತನಂ ನೆತ್ತಿಯಿಂದ ಒರೆದು ಉಗುವ (ಸರ್ಪಧ್ವಜನಾದ ದುರ್ಯೋಧನನು ತಲೆಯಿಂದ ಜಿನುಗಿ ಹರಿಯುತ್ತಿರುವ) ನೆತ್ತರ ಧಾರೆಯಿಂ ಮೆತ್ತಿದ ಕಣ್ಗಳನು (ರಕ್ತಪ್ರವಾಹದಿಂದ ಅಂಟಿಕೊಂಡಿದ್ದ ಕಣ್ಣುಗಳನ್ನು) ಒತ್ತಂಬದಿಂ ತೆರೆದು ಅಶ್ವತ್ಥಾಮನ ಮೊಗಮಂ ನೋಡಿ (ಬಲಾತ್ಕಾರದಿಂದ ತೆರೆದು ಅಶ್ವತ್ಥಾಮನ ಮುಖವನ್ನು ನೋಡಿ - ಹೇಳಿದನು)-
ವಚನ:ಅರ್ಥ:ಸರ್ಪಧ್ವಜನಾದ ದುರ್ಯೋಧನನು ತಲೆಯಿಂದ ಜಿನುಗಿ ಹರಿಯುತ್ತಿರುವ ರಕ್ತಪ್ರವಾಹದಿಂದ ಅಂಟಿಕೊಂಡಿದ್ದ ಕಣ್ಣುಗಳನ್ನು ಬಲಾತ್ಕಾರದಿಂದ ತೆರೆದು ಅಶ್ವತ್ಥಾಮನ ಮುಖವನ್ನು ನೋಡಿ -ಹೇಳಿದನು.
ಚಂ|| ಎನಗಿನಿತೊಂದವಸ್ಥೆ ವಿಧಿಯೋಗದಿನಾದುದಿದರ್ಕೆ ನೀನೞ
ಲ್ದಿನಿತು ಮನಕ್ಷತಂಬಡದಿರಾಗದು ಪಾಂಡವರಂ ಗೆಲಲ್ ಪುರಾ|
ತನಪುರುಷಂ ಮುರಾರಿ ಕೆಲದೊಳ್ ನಿಲೆ ನೀಂ ಕೊಲಲಾರ್ಪೊಡಾಗದೆಂ
ಬೆನೆ ತಱಿದೊಟ್ಟಿ ವೈರಿಗಳನೆನ್ನಸುವುಳ್ಳಿನಮೆಯ್ದೆವಾ ಗಡಾ|| ೧೦೫ ||
ಪದ್ಯ-೧೦೫:ಪದವಿಭಾಗ-ಅರ್ಥ:ಎನಗೆ ಇನಿತೊಂದು ಅವಸ್ಥೆ ವಿಧಿಯೋಗದಿಂ ಆದುದು ಇದರ್ಕೆ ( ನನಗೆ ಇಷ್ಟೊಂದು ಕಷ್ಟದ ಸ್ಥಿತಿ ವಿಧಿಯ ಕಟ್ಟಳೆಯಿಂದ ಆಯಿತು. ಇದಕ್ಕೆ) ನೀನು ಅೞಲ್ದು ಇನಿತು ಮನಕ್ಷತಂ ಬಡದಿರಾಗದು (ಇದಕ್ಕೆ ನೀನು ದುಖಪಟ್ಟು ಮನಸ್ಸಿನಲ್ಲಿ ನೋಯಬೇಡ.) ಪಾಂಡವರಂ ಗೆಲಲ್ ಪುರಾತನಪುರುಷಂ ಮುರಾರಿ ಕೆಲದೊಳ್ ನಿಲೆ (ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ) ನೀಂ ಕೊಲಲ್ ಆರ್ಪೊಡೆ ಆಗದು ಎಂಬೆನೆ (ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ನೀನು ಪಾಂಡವರನ್ನು ಕೊಲ್ಲಲು (ಆಗದು) ಆಗುವುದಾದರೆ ಬೇಡ ಎನ್ನುತ್ತೇನೆಯೇ?) ತಱಿದು ಒಟ್ಟಿ ವೈರಿಗಳನು ಎನ್ನ ಅಸುವುಳ್ಳಿನಂ ಎಯ್ದೆವಾ ಗಡಾ (ಶತ್ರುಗಳನ್ನು ಕತ್ತರಿಸಿಹಾಕಿ ನನ್ನ ಪ್ರಾಣವಿರುವಂತೆಯೇ ನ್ನ ಹತ್ತಿರ ಬಾ ಗಡಾ! )
ಪದ್ಯ-೧೦೫:ಅರ್ಥ: ನನಗೆ ಇಷ್ಟೊಂದು ಕಷ್ಟದ ಸ್ಥಿತಿ ವಿಧಿಯ ಕಟ್ಟಳೆಯಿಂದ ಆಯಿತು. ಇದಕ್ಕೆ ನೀನು ದುಖಪಟ್ಟು ಮನಸ್ಸಿನಲ್ಲಿ ನೋಯಬೇಡ. ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ನೀನು ಪಾಂಡವರನ್ನು ಕೊಲ್ಲಲು (ಆಗದು) ಆಗುವುದಾದರೆ ಬೇಡ ಎನ್ನುತ್ತೇನೆಯೇ? ಹಾಗಿದ್ದರೆ, ಶತ್ರುಗಳನ್ನು ಕತ್ತರಿಸಿಹಾಕಿ ನನ್ನ ಪ್ರಾಣವಿರುವಂತೆಯೇ ನ್ನ ಹತ್ತಿರ ಬಾ ಗಡಾ! ಎಂದ ದುರ್ಯೋದನ.
ವ|| ಎಂಬುದುಂ ಪಾಂಡವರನಿಕ್ಕಿದೊಸಗೆವಾತನೀಗಳೆ ಕೇಳಿಸುವೆನೆಂದು ಸರೋಜ ನಿಳಯೆಯನೆನ್ನ ಬರ್ಪನ್ನಮರಸನನಗಲದೆ ವಿಕಸಿತಶತಪತ್ರಾತಪತ್ರದ ತಣ್ಣೆೞಲುಮಂ ಕುಂದಲೀಯದಿರೆಂದು ನಿಯಮಿಸಿ ರುದ್ರಾವತಾರಂ ಕೃಪ ಕೃತವರ್ಮ ಸಮೇತನರಸನಂ ಬೀೞ್ಕೊಂಡು ಪೋದನಾಗಳ್-
ವಚನ:ಪದವಿಭಾಗ-ಅರ್ಥ:ಎಂಬುದುಂ ಪಾಂಡವರನು ಇಕ್ಕಿದ ಒಸಗೆವಾತನು ಈಗಳೆ ಕೇಳಿಸುವೆನು ಎಂದು (ಎನ್ನಲು ‘ಪಾಂಡವರನ್ನು ಇಕ್ಕಿ ಕೊಂದ ಶುಭವಾರ್ತೆಯನ್ನು ಈಗಲೇ ಕೇಳಿಸುತ್ತೇನೆ’ ಎಂದು) ಸರೋಜ ನಿಳಯೆಯನೆ ಎನ್ನ ಬರ್ಪನ್ನಂ ಅರಸನನು ಅಗಲದೆ (ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ) ವಿಕಸಿತ ಶತಪತ್ರ ಆತಪತ್ರದ ತಣ್ಣೆೞಲುಮಂ ಕುಂದಲು ಈಯದಿರೆಂದು ನಿಯಮಿಸಿ (ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ ಅರಳಿದ ಕಮಲದ ಕೊಡೆಯ ತಂಪಾದ ನೆರಳನ್ನು ಕಡಿಮೆಮಾಡಬೇಡವೆಂದು ಕಟ್ಟಳೆಯಿಟ್ಟು) ರುದ್ರಾವತಾರಂ ಕೃಪ ಕೃತವರ್ಮ ಸಮೇತಂ ಅರಸನಂ ಬೀೞ್ಕೊಂಡು ಪೋದನಾಗಳ್ (ರುದ್ರಾವತಾರನಾದ ಅಶ್ವತ್ಥಾಮನು ಕೃಪಕೃತವರ್ಮರೊಡನೆ ರಾಜನನ್ನು ಬೀಳ್ಕೊಂಡು ಹೋದನು- ಆಗ)-
ವಚನ:ಅರ್ಥ:ಎನ್ನಲು ‘ಪಾಂಡವರನ್ನು ಇಕ್ಕಿ ಕೊಂದ ಶುಭವಾರ್ತೆಯನ್ನು ಈಗಲೇ ಕೇಳಿಸುತ್ತೇನೆ’ ಎಂದು ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ ಅರಳಿದ ಕಮಲದ ಕೊಡೆಯ ತಂಪಾದ ನೆರಳನ್ನು ಕಡಿಮೆಮಾಡಬೇಡವೆಂದು ಕಟ್ಟಳೆಯಿಟ್ಟು ರುದ್ರಾವತಾರನಾದ ಅಶ್ವತ್ಥಾಮನು ಕೃಪಕೃತವರ್ಮರೊಡನೆ ರಾಜನನ್ನು ಬೀಳ್ಕೊಂಡು ಹೋದನು- ಆಗ
ಚಂ|| ಮಗನೞಲೊಳ್ ಕರಂ ಮಱುಗುತಿರ್ಪಿನಮೆನ್ನ ತನೂಜನಾಳ್ವ ಸಾ
ಮಿಗಮೞಿವಾಗೆ ಶೋಕರಸಮಿರ್ಮಡಿಸಿತ್ತು ಜಳಪ್ರವೇಶಮಿ|
ಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನನಾಥನಾಗಿ ತೊ
ಟ್ಟಗೆ ಮುೞುಪಂತೆವೋಲ್ ಮುೞುಗಿದಂ ಕಡುಕೆಯ್ದಪರಾಂಬುರಾಶಿಯೊಳ್ || ೧೦೬
ಪದ್ಯ-೧೦೬:ಪದವಿಭಾಗ-ಅರ್ಥ:ಮಗನ ಅೞಲೊಳ್ ಕರಂ ಮಱುಗುತಿರ್ಪಿನಂ (ನಾನು ನನ್ನ ಮಗನ ಮರಣದುಖದಿಂದಲೇ ವಿಶೇಷ ದುಖಪಡುತ್ತಿರಲು) ಎನ್ನ ತನೂಜನು ಆಳ್ವ ಸಾಮಿಗಂ ಅೞಿವಾಗೆ ಶೋಕರಸಂ ಇರ್ಮಡಿಸಿತ್ತು (ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸವು ಇಮ್ಮಡಿಯಾಗಿದೆ.) ಜಳಪ್ರವೇಶಂ ಇಲ್ಲಿಗೆ ಪದನೆಂದು ನಿಶ್ಚಯಿಸಿ (ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು ಎಂದು ನಿಶ್ಚಯಿಸಿ) ವಾರಿಜನಾಥನು ಅನಾಥನಾಗಿ ತೊಟ್ಟಗೆ ಮುೞುಪಂತೆವೋಲ್(ಸೂರ್ಯನು ಅನಾಥನಾಗಿ -ದಿಕ್ಕಿಲ್ಲದವನಾಗಿ- ಕೂಡಲೆ ಮುಳುಗುವ ಹಾಗೆ) ಮುೞುಗಿದಂ ಕಡುಕೆಯ್ದು ಅಪರಾಂಬು ರಾಶಿಯೊಳ್ (ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು. )
ಪದ್ಯ-೧೦೬:ಅರ್ಥ: ಸೂರ್ಯನು ಮುಳುಗಿದನು:- ನಾನು ನನ್ನ ಮಗನ ಮರಣದುಖದಿಂದಲೇ ವಿಶೇಷ ದುಖಪಡುತ್ತಿರಲು ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸವು ಇಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ (ದಿಕ್ಕಿಲ್ಲದವನಾಗಿ) ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು.
ವ|| ಆ ಪ್ರಸ್ತಾವದೊಳಶ್ವತ್ಥಾಮಂ ಕೃಪ ಕೃತವರ್ಮರುಂಬೆರಸು ಹಸ್ತಿನಪುರದೊಳ್ ಪಾಂಡವರಿರ್ದರೆಗೆತ್ತುಮಲ್ಲಿಗೆ ನಿಟ್ಟಾಲಿಯಾಗಿ ದಾೞಿಯನಿಟ್ಟು ಮುಟ್ಟೆವಂದು ಬಾಯ್ಮಾಡಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜಸರಂ ಕೊಂದು ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರಂ ಪಾಂಡವರೆಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು ತೞತೞನೆ ನೇಸಱ್ಮೂಡುವಾಗಳೆಯ್ದೆ ವಂದು ದುರ್ಯೋಧನನಂ ಕಂಡು ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನೆಂದು ಮುಂದಿಕ್ಕಿದಾಗಳ್ ದುರ್ಯೋಧನಂ ನೋಡಿ-
ವಚನ:ಪದವಿಭಾಗ-ಅರ್ಥ:ಆ ಪ್ರಸ್ತಾವದೊಳು ಅಶ್ವತ್ಥಾಮಂ ಕೃಪ ಕೃತವರ್ಮರುಂ ಬೆರಸು (ಆ ಸಮಯದಲ್ಲಿ ಅಶ್ವತ್ಥಾಮನು ಕೃಪಕೃತವರ್ಮರ ಒಡಗೂಡಿ) ಹಸ್ತಿನಪುರದೊಳ್ ಪಾಂಡವರ್ ಇರ್ದರೆಗೆತ್ತುಂ ಅಲ್ಲಿಗೆ ನಿಟ್ಟಾಲಿಯಾಗಿ ದಾೞಿಯನಿಟ್ಟು (ಹಸ್ತಿನಾಪಟ್ಟಣದಲ್ಲಿ ಪಾಂಡವರಿರುವರೆಂದು ಭ್ರಾಂತಿಸಿ ಅಲ್ಲಿಗೆ ದುರುಗುಟ್ಟಿ ನೋಡಿ /ಎಚ್ಚರದಿಂದ ದಾಳಿಯಿಟ್ಟು) ಮುಟ್ಟೆವಂದು ಬಾಯ್ಮಾಡಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸರಂ ಕೊಂದು (ಸಮೀಪಕ್ಕೆ ಬಂದು ಕೂಗಿ ದೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸರನ್ನು ಕೊಂದು) ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರಂ ಪಾಂಡವರೆಗೆತ್ತು ಕೊಂದು (ಶ್ರುತಸೋಮಕರೇ ಮೊದಲಾದ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿಕೊಂಡು ಕೊಂದು,) ತತ್ ಉತ್ತಮಾಂಗಂಗಳಂ ಕೊಂಡು ತೞತೞನೆ ನೇಸಱ್ಮೂಡುವಾಗಳು ಎಯ್ದೆ ವಂದು (ಅವರ ತಲೆಗಳನ್ನು ತೆಗೆದುಕೊಂಡು ಪ್ರಕಾಶಮಾನವಾಗಿ ಸೂರ್ಯನು ಹುಟ್ಟುವ ಹೊತ್ತಿಗೆ ಸರಿಯಾಗಿ ಸಮೀಪಕ್ಕೆ ಬಂದು,) ದುರ್ಯೋಧನನಂ ಕಂಡು ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನೆಂದು (ದುರ್ಯೋಧನನನ್ನು ಕುರಿತು ತೆಗೆದುಕೊ ನಿನಗೆ ಪ್ರಿಯರಾದ ಪಾಂಡವರ ತಲೆಗಳನ್ನು ಎಂದು) ಮುಂದಿಕ್ಕಿದಾಗಳ್ ದುರ್ಯೋಧನಂ ನೋಡಿ (ಮುಂದಿಟ್ಟಾಗ, ಅದನ್ನು ದುರ್ಯೋಧನನು ನೋಡಿ)-
ವಚನ:ಅರ್ಥ:ಆ ಸಮಯದಲ್ಲಿ ಅಶ್ವತ್ಥಾಮನು ಕೃಪಕೃತವರ್ಮರ ಒಡಗೂಡಿ ಹಸ್ತಿನಾಪಟ್ಟಣದಲ್ಲಿ ಪಾಂಡವರಿರುವರೆಂದು ಭ್ರಾಂತಿಸಿ ಅಲ್ಲಿಗೆ ದುರುಗುಟ್ಟಿ ನೋಡಿ ಎಚ್ಚರದಿಂದ ದಾಳಿಯಿಟ್ಟು (ಮುತ್ತಿಗೆ ಹಾಕಿ) ಸಮೀಪಕ್ಕೆ ಬಂದು ಕೂಗಿ ದೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯು ಉತ್ತಮೌಜಸರನ್ನು ಕೊಂದು ಶ್ರುತಸೋಮಕರೇ ಮೊದಲಾದ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿಕೊಂಡು ಕೊಂದು, ಅವರ ತಲೆಗಳನ್ನು ತೆಗೆದುಕೊಂಡು ಪ್ರಕಾಶಮಾನವಾಗಿ ಸೂರ್ಯನು ಹುಟ್ಟುವ ಹೊತ್ತಿಗೆ ಸರಿಯಾಗಿ ಸಮೀಪಕ್ಕೆ ಬಂದು, ದುರ್ಯೋಧನನನ್ನು ಕುರಿತು ತೆಗೆದುಕೊ ನಿನಗೆ ಪ್ರಿಯರಾದ ಪಾಂಡವರ ತಲೆಗಳನ್ನು ಎಂದು ಮುಂದಿಟ್ಟಾಗ, ಅದನ್ನು ದುರ್ಯೋಧನನು ನೋಡಿ
ಕಂ|| ಬಾಲಕಮಳಂಗಳಂ ಕಮ
ಳಾಲಯದಿಂ ತಿಱಿದು ತರ್ಪ್ಪವೋಲ್ ತಂದೈ ನೀಂ|
ಬಾಲಕರ ತಲೆಗಳಕ್ಕಟ
ಬಾಲಕವಧದೋಷಮೆಂತು ನೀಂ ನೀಗಿದಪಯ್|| ೧೦೭ ||
ಪದ್ಯ-೧೦೭:ಪದವಿಭಾಗ-ಅರ್ಥ:ಬಾಲ ಕಮಳಂಗಳಂ ಕಮಳಾಲಯದಿಂ ತಿಱಿದು ತರ್ಪ್ಪವೋಲ್ (ಸರೋವರದಿಂದ ಎಳೆಯ ಕಮಲಗಳನ್ನು ಕಿತ್ತು ತರುವ ಹಾಗೆ ) ತಂದೈ ನೀಂ ಬಾಲಕರ ತಲೆಗಳ ಅಕ್ಕಟ (ಅಯ್ಯೋ! ನೀನು ಬಾಲಕರ ತಲೆಗಳನ್ನು ತಂದಿರುವೆ,) ಬಾಲಕವಧ ದೋಷಮೆಂತು ನೀಂ ನೀಗಿದಪಯ್ (ಬಾಲವಧೆಯ ದೋಷವನ್ನು ನೀನು ಹೇಗೆ ಕಳೆದುಕೊಳ್ಳುತ್ತೀಯೇ? ಎಂದನು. )
ಪದ್ಯ-೧೦೭:ಅರ್ಥ: ಸರೋವರದಿಂದ ಎಳೆಯ ಕಮಲಗಳನ್ನು ಕಿತ್ತು ತರುವ ಹಾಗೆ ಅಯ್ಯೋ! ನೀನು ಬಾಲಕರ ತಲೆಗಳನ್ನು ತಂದಿರುವೆ, ಬಾಲವಧೆಯ ದೋಷವನ್ನು ನೀನು ಹೇಗೆ ಕಳೆದುಕೊಳ್ಳುತ್ತೀಯೇ? ಎಂದನು.
ವ|| ಎಂಬುದುಮಶ್ವತ್ಧಾಮನಂತೆಂಬುದೇನೆನೆ ದುರ್ಯೋಧನನೆಂದಂ ಪಾಂಡವರ ತಲೆಗಳಲ್ಲಮಿವು ಪಾಂಡವರ ಸೂನುಗಳಪ್ಪ ಪಂಚಪಾಂಡವರ ತಲೆಗಳೆಂಬುದುಮಿದರ್ಕೆ ಕರ್ತವ್ಯಮಾವುದೆಂದೊಡೆ ಹಿಮವತ್ಪರ್ವತದೊಳ್ ತಪಶ್ಚರಣಪರಾಯಣರಾಗಿ ಮೆನಗಮಂತ್ಯಕಾಲಮೆಂದು ದುರ್ಯೋಧನಂ ಪ್ರಾಣಪರಿತ್ಯಾಗಂಗೆಯ್ದನಾಗಳಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರಿತ್ತ ಕೃತವರ್ಮನುಂ ದ್ವಾರಾವತಿಗೆ ಪೋದನಾಗಳ್-
ವಚನ:ಪದವಿಭಾಗ-ಅರ್ಥ: ಎಂಬುದುಂ ಅಶ್ವತ್ಧಾಮನಂ ಅಂತೆಂಬುದು ಏನೆನೆ ( ಅಶ್ವತ್ಥಾಮನು ಹಾಗೆಂದರೇನು? ಎನ್ನಲು) ದುರ್ಯೋಧನನೆಂದಂ ಪಾಂಡವರ ತಲೆಗಳು ಅಲ್ಲಂ ಇವು ( ದುಯೋರ್ಧನನು ಹೀಗೆ ಹೇಳಿದನು. ‘ಇವು ಪಾಂಡವರ ತಲೆಗಳಲ್ಲ). ಪಾಂಡವರ ಸೂನುಗಳಪ್ಪ ಪಂಚಪಾಂಡವರ ತಲೆಗಳೆಂಬುದುಂ (ಪಾಂಡವರ ಮಕ್ಕಳಾದ ಪಂಚಪಾಂಡವರ ತಲೆಗಳು ಎನ್ನಲು) ಇದರ್ಕೆ ಕರ್ತವ್ಯಮಾವುದು ಎಂದೊಡೆ (ಇದರ ಪರಿಹಾರಕ್ಕೆ ಮಾಡಬೇಕಾದ ಕರ್ತವ್ಯವೇನು ಎಂದನು ಅಶ್ವತ್ಥಾಮ); ಹಿಮವತ್ಪರ್ವತದೊಳ್ ತಪಶ್ಚರಣ ಪರಾಯಣರಾಗಿಂ (ಹಿಮವತ್ಪರ್ವತದಲ್ಲಿ ತಪಸ್ಸುಮಾಡುವುದರಲ್ಲಿ ಆಸಕ್ತರಾಗಿ’); ಎನಗಮಂತ್ಯಕಾಲಂ ಎಂದು ದುರ್ಯೋಧನಂ ಪ್ರಾಣಪರಿತ್ಯಾಗಂ ಗೆಯ್ದನು (ನನಗೂ ಅಂತ್ಯಕಾಲವು ಬಂದಿದೆ’ ಎಂದು ದುರ್ಯೋಧನನು ಪ್ರಾಣವನ್ನು ನೀಗಿದನು.) ಆಗಳು ಅಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರು ಇತ್ತ ಕೃತವರ್ಮನುಂ ದ್ವಾರಾವತಿಗೆ ಪೋದನು ಆಗಳ್ (ಆಗ ಅಶ್ವತ್ಥಾಮನೂ ಕೃಪನೂ ಅವಮಾನಿತರಾಗಿ ಹಿಮವತ್ಪರ್ವತಕ್ಕೆ ನಡೆದರು. ಈ ಕಡೆ ಕೃತವರ್ಮನೂ ದ್ವಾರಾವತಿಗೆ ಹೋದನು.)-
ವಚನ:ಅರ್ಥ: ಅಶ್ವತ್ಥಾಮನು ಹಾಗೆಂದರೇನು? ಎನ್ನಲು ದುಯೋರ್ಧನನು ಹೀಗೆ ಹೇಳಿದನು. ‘ಇವು ಪಾಂಡವರ ತಲೆಗಳಲ್ಲ. ಪಾಂಡವರ ಮಕ್ಕಳಾದ ಪಂಚಪಾಂಡವರ ತಲೆಗಳು ಎನ್ನಲು; ಇದರ ಪರಿಹಾರಕ್ಕೆ ಮಾಡಬೇಕಾದ ಕರ್ತವ್ಯವೇನು ಎಂದನು ಅಶ್ವತ್ಥಾಮ; ಹಿಮವತ್ಪರ್ವತದಲ್ಲಿ ತಪಸ್ಸುಮಾಡುವುದರಲ್ಲಿ ಆಸಕ್ತರಾಗಿ’, ನನಗೂ ಅಂತ್ಯಕಾಲವು ಬಂದಿದೆ’ ಎಂದು ದುರ್ಯೋಧನನು ಪ್ರಾಣವನ್ನು ನೀಗಿದನು. ಆಗ ಅಶ್ವತ್ಥಾಮನೂ ಕೃಪನೂ ಅವಮಾನಿತರಾಗಿ ಹಿಮವತ್ಪರ್ವತಕ್ಕೆ ನಡೆದರು. ಈ ಕಡೆ ಕೃತವರ್ಮನೂ ದ್ವಾರಾವತಿಗೆ ಹೋದನು. ಆಗ-
ಪಿರಿಯಕ್ಕರ|| ಬಿಳಿಯ ತಾವರೆಯೆಸೞೊಳ್ ಮಾಡಿದ ಬೆಳ್ಗೊಡೆ ರಯ್ಯಮಾಗೆಡದ ಕೆಯ್ಯೊಳ್
ಪೊಳೆವ ಚೆಂಬೊನ್ನ ಕಾವಿನ ಚಾಮರಮಮರ್ದಿರೆ ಭೇರಿ ಸಿಂಹಾಸನಮುಂ
ಬೞಿಯೊಳ್ ಜವಂ ಮಿಳಿರೆ ರಾಜ್ಯಚಿಹ್ನಂಗಳ್ವೆರಸಿಂತು ನಡೆತಂದು ರಾಜ್ಯಲಕ್ಷ್ಮಿ
ಬಳೆದ ಸಂತೋಷದಂತಮನೆಯ್ದೆ ಪತ್ತಿದಳ್ ಸಹಜಮನೋಜನಂ ನಾಡೋಜನಂ|| ೧೦೮ ||
ಪದ್ಯ-೧೦೮:ಪದವಿಭಾಗ-ಅರ್ಥ:ಬಿಳಿಯ ತಾವರೆಯೆಸೞೊಳ್ ಮಾಡಿದ ಬೆಳ್ಗೊಡೆ ರಯ್ಯಮಾಗೆ (ಬಿಳಿಯ ತಾವರೆಯ ದಳದಲ್ಲಿ ಮಾಡಿದ ಬಿಳಿಯ ಕೊಡೆಯು ಬಲದ ಕಯ್ಯಲ್ಲಿ ರಮ್ಯವಾಗಿರಲು) ಎಡದ ಕೆಯ್ಯೊಳ್ ಪೊಳೆವ ಚೆಂಬೊನ್ನ ಕಾವಿನ ಚಾಮರಂ ಅಮರ್ದಿರೆ (ಹೊಳೆದ ಹೊಂಬಣ್ಣದ ಚಿನ್ನದ ಕಾವುಳ್ಳ ಚಾಮರವು ಎಡಗಯ್ಯಲ್ಲಿ ಸೇರಿಕೊಂಡಿರಲು,) ಭೇರಿ ಸಿಂಹಾಸನಮುಂ ಬೞಿಯೊಳ್ ಜವಂ ಮಿಳಿರೆ (ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಅಲುಗಾಡುತ್ತಿರಲು) ರಾಜ್ಯಚಿಹ್ನಂಗಳ್ವೆರಸಿಂತು ನಡೆತಂದು (ರಾಜ್ಯಚಿಹ್ನೆಗಳೊಡಗೂಡಿ ಬಂದು,) ರಾಜ್ಯಲಕ್ಷ್ಮಿ ಬಳೆದ ಸಂತೋಷದಂತಮನು ಎಯ್ದೆ (ಅಬಿವೃದ್ಧಿಯಾಗುತ್ತಿದ್ದ ಸಂತೋಷವು ಸಂಪೂರ್ಣವಾಗಲು) ಪತ್ತಿದಳ್ ಸಹಜ ಮನೋಜನಂ ನಾಡೋಜನಂ (ರಾಜ್ಯಲಕ್ಷ್ಮಿಯು ಸಹಜಮನೋಜನೂ ನಾಡೋಜನೂ ಆದ ಅರ್ಜುನನನ್ನು ಸೇರಿದಳು.)
ಪದ್ಯ-೧೦೮:ಅರ್ಥ:ಬಿಳಿಯ ತಾವರೆಯ ದಳದಲ್ಲಿ ಮಾಡಿದ ಬಿಳಿಯ ಕೊಡೆಯು ಬಲದ ಕಯ್ಯಲ್ಲಿ ರಮ್ಯವಾಗಿರಲು, ಹೊಳೆದ ಹೊಂಬಣ್ಣದ ಚಿನ್ನದ ಕಾವುಳ್ಳ ಚಾಮರವು ಎಡಗಯ್ಯಲ್ಲಿ ಸೇರಿಕೊಂಡಿರಲು, ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಅಲುಗಾಡುತ್ತಿರಲು, ರಾಜ್ಯಚಿಹ್ನೆಗಳೊಡಗೂಡಿ ಬಂದು, ಅಬಿವೃದ್ಧಿಯಾಗುತ್ತಿದ್ದ ಸಂತೋಷವು ಸಂಪೂರ್ಣವಾಗಲು ರಾಜ್ಯಲಕ್ಷ್ಮಿಯು ಸಹಜಮನೋಜನೂ ನಾಡೋಜನೂ ಆದ ಅರ್ಜುನನನ್ನು ಸೇರಿದಳು.
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ತ್ರಯೋದಶಾಶ್ವಾಸಂ||
||ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹದಿಮೂರನೆಯ ಆಶ್ವಾಸ.||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ ಸಂಪಾದಿಸಿ

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ