ಹದಿನೈದನೆಯ ಸಂಧಿ
ಸಂಪಾದಿಸಿಪದ್ಯ :-:ಸೂಚನೆ :
ಸಂಪಾದಿಸಿ'ತಣ್ಗದಿರನನ್ವಯದ ಪಾರ್ಥನ ತುರಂಗಮದು | ಪೆಣ್ಗುದುರೆಯಾಗಿ ಪೆರ್ಬುಲಿಯಾಗಿ ಪಳಿಯಂತೆ | ಕಣ್ಗೊಳಿಸುವಮಲಾಶ್ವಮಾಗಿಯಾಶ್ಚರ್ಯದಿಂ ಸ್ತ್ರೀರಾಜ್ಯಮಂ ಪೊಕ್ಕುದು ||' |
[ಆವರಣದಲ್ಲಿ ಅರ್ಥ];=
|
ಪದ್ಯ :-:೧ :
ಸಂಪಾದಿಸಿವಿಸ್ತರಿಪೆನಿನ್ನು ಮೇಲ್ಗತೆಯನಾಲಿಸು ನೃಪರ | ಮಸ್ತಕದ ಮೌಳಿ ಜನಮೇಜಯ ಧರಾನಾಥ | ಹಸ್ತಿನಾಪುರಕೆ ಬಂದಸುರಾರಿ ಹಂಸಧ್ವಜನ ದೇಶದಿಂದೆ ತಂದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨ :
ಸಂಪಾದಿಸಿಅಲ್ಲಿಂದ ಮುಂದೆ ನಡೆದುದು ಗ್ರೀಷ್ಮಕಾಲದೊಳ್ | ಸಲ್ಲಲಿತವಾಜಿ ಪಾರಿಪ್ಲವಕ್ಕೆ ಭೂತಲದೊ | ಳೆಲ್ಲಿಯುಂ ಕೆರೆತೊರೆಗಳೊರತೆ ಬರೆತುವು ನೀರ್ನೆಳಲ್ಗಳನರಸಿ ಪಾಂಥರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩ :
ಸಂಪಾದಿಸಿಒಂದುಕಡೆಯೊಳ್ ಸೋವಲೊಂದುಕಡೆಯೊಳ್ ತಮಕೆ| ನಿಂದು ಮರೆಯಾಗಿ ರ್ಪು ದಿನ್ನಿದಂ ಕರಗಿಸುವೆ | ನೆಂದು ಕನಕಾಚಲವನುರಿಪುವನೊ ತರಣಿ ಕಿರಣದೊಳೆನೆ ಬಿಸಲ್ಗರೆಯಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪ :
ಸಂಪಾದಿಸಿಅವನಿಯೊಳ್ ಸಕಲ ಭೂಭೃತ್ಕುಲದ ಸೀಮೆಗಳ | ನವಗಡಿಸಿ ಪೊಕ್ಕು ನಿಖಿಳ ಪ್ರಾಣಿಗಳ್ಗೆತಾ | ಪವನೊದವಿಸುವ ದುರ್ಧರ ಗ್ರೀಷ್ಮರಾಜನ ನೆಗಳ್ದ ಚತುರಂಗಮೆನಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫ :
ಸಂಪಾದಿಸಿಅರವಟ್ಟಿಗೆಯೊಳಿರ್ದು ನೀರೆರೆವ ತರಳೆಯರ | ಬರಿವೇಟಕೆಳಸಿ ತಪಿಸುವ ಪಥಿಕರಂ ಬಯ | ಲ್ದೊರೆಗಾಸೆಯಿಂ ಪರಿದು ಬಳಲುವ ಮೃಗಗಳಂ ಕರುವಾಡದೊಳ್ ದಳದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬:
ಸಂಪಾದಿಸಿಅನುಸಾಲ್ವ ಪ್ರದ್ಯುಮ್ನ ವೃಷಕೇತು ಯೌವನಾ | ಶ್ವನ ತನಯ ನೀಲಧ್ವಜರ್ ನರಂಗಿವರೈವ | ರನುವಿರ್ತಿಗಳ್ ಬಳಿಕ ಹಂಸಧ್ವಜನ ಸಖ್ಯಮಾದುದದಕಿಮ್ಮಡಿಯೆನೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೭:
ಸಂಪಾದಿಸಿಹಯಮುತ್ತರಾಭಿಮುಖಮಾಗಿ ಪಾರಿಪ್ಲವ ಧ | ರೆಯೊಳೈದಿ ಪೆಣ್ಗುದುರೆಯಾಗಿ ಪುಲಿಯಾಗಿ ವಿ | ಸ್ಮಯದಿಂದೆ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದೆ ಮುನ್ನಿನಂತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೮:
ಸಂಪಾದಿಸಿಧರಣಿಪತಿ ಕೇಳಾದೊಡಿನ್ನು ಪೂರ್ವದೊಳಿಂದು | ಧರನಂ ಮನೋಭಾವದಿಂದರ್ಚಿಸುವೆನೆಂದು | ಗಿರಿತನುಜೆ ತಪಕೆ ಪುಣ್ಯಾರಣ್ಯಮಾವುದೆಂದರಸಿಕೊಂಡೈತರಲ್ಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೯:
ಸಂಪಾದಿಸಿಲಸದಮಲರತ್ನ ಸೋಪಾನದಿಂ ಮೀನದಿಂ | ಬಿಸವಿನಾಸ್ವಾದಿಸುವ ಚಕ್ರದಿಂ ನಕ್ರದಿಂ | ದೆಸೆದೆಸೆಗೆ ಬಿರ್ವ ತನಿಗಂಪಿನಿಂ ತಂಪಿನಿಂ ತೊಳಪ ಹಿಮಕರಕಾಂತದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೦:
ಸಂಪಾದಿಸಿತಳದೊಳೊಪ್ಪುವ ಪಸುರೆಸಳ ರೋಚಿಯಿಂ ನಡುವೆ | ತೊಳಪ ಕೆಂದಳದ ದೀಧಿತಿಯಿಂದೆ ಮೇಲೆ ಕಂ | ಗೊಳಿಪ ಹೊಂಗೇಸರದ ಕಾಂತಿಯಿಂದೆರಗುವ ಸಿತಾಳಿಯ ಮರೀಚಿಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೧:
ಸಂಪಾದಿಸಿನಿರುತಂ ಕುಮುದಶೋಭಿ ನೈರುತ್ಯದಂತೆ ವಾ | ನರಸೈನ್ಯದಂತೆ ಕಮಲೋದರೋದ್ಭಾಸಿ ಭಾ | ಸುರ ಶುಕ್ಲಪಕ್ಷದಂತಹಿತಲ್ಪದಂತೆ ಕವಿಸೇವಿತಂ ಗಗನದಂತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೨:
ಸಂಪಾದಿಸಿವನಮಾಲಿಯಂದದಿಂ ಪದ್ಮಿ ಪದ್ಮಿಯವೋಲ್ ಭು | ವನಕುಕ್ಷಿ ಭವನಕುಕ್ಷಿಯ ತೆರದೆ ಹಂಸಲೋ | ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ರಿಯವೊಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೩:
ಸಂಪಾದಿಸಿಅಳಿಯ ವರ್ಗವನಾದರಿಸುತೆ ಮಿತ್ರ ಸ್ನೇಹ | ದೊಳೆ ಸಂದು ಸುತರಂಗಲೀಲೆಯಂ ಲಾಲಿಸುತೆ| ಕುಲಸದಭ್ಯುದಯಮಂ ನೆಲೆಗೆಯ್ದು ಕಾಂತಾನುಕೂಲರಮಣೀಯಮಾಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೪:
ಸಂಪಾದಿಸಿಕಳಹಂಸಮಾಕೀರ್ಣಮಾಗಿರ್ದು ಕಾಳೆಗದ | ಕಳನಲ್ಲ ವಿಷಭರಿತಮಾಗೆರ್ದು ಸರ್ಪಸಂ | ಕುಳಮಲ್ಲ ಕುಮುದಯುತಮಾಗಿರ್ದು ಖಳರಂತರಂಗದಾಲಾಪಮಲ್ಲ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೫:
ಸಂಪಾದಿಸಿಆ ಸರಸ್ತಟದಲ್ಲಿ ಕಲ್ಪಿಸಿದಳಾಶ್ರಮ ನಿ | ವಾಸಮಂ ಭಕ್ತಿಯಿಂ ಭಜಿಸಿದಳಗೇಂದ್ರಜೆ ಸು | ಧಾಸೂತಿಮೌಳಿಯಂ ಮೆಚ್ಚಿದಂ ಶಂಭು ವರಮಂ ಕೊಟ್ಟನಿಲ್ಲಿ ನಿನ್ನ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೬:
ಸಂಪಾದಿಸಿಇಂದುಮೌಳಿಯ ಪದಧ್ಯಾನಮಂ ಮಾಡುವಾ | ನಂದಮಿನ್ನೇತರತಿಶಯಮೋ ಶಿವನರೆಮೈಯೊ | ಳೊಂದಿರ್ದಸೌಖ್ಯಮಂ ಮರೆದು ಪಾರ್ವತಿ ತಪಸ್ವಿನಿಯಾಗಿ ತಿಳಿಗೊಳದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೭:
ಸಂಪಾದಿಸಿಬೀಸದು ಬಿರುಸುಗಾಳಿ ಬಿಸಿಯ ಬಿಸಿಲವನಿಯಂ | ಕಾಸದು ದವಾಗ್ನಿ ಪುಲ್ಗಳೊಳೊಂದನಾದೊಡಂ | ಬೇಸದು ಮುಗಿಲ್ಗಳತಿಭರದಿಂ ಸಿಡಿಲ್ಮಿಂಚುಗಳ ಕೂಡೆ ಪೆರ್ಮಳೆಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೮:
ಸಂಪಾದಿಸಿಅಂಚೆಗಳುಡುಗವು ಮಳೆಗಾಲದೊಳ್ ಕೋಗಿಲೆಗ | ಳಿಂಚರವನುಳಿದಿರವು ಮಾಗಿಯೊಳ್ ಬೇಸಗೆಯೊ | ಳಂ ಚಿಗುರಿದೆಳವುಲ್ ಮೃಗಂಗಳ್ಗೆ ಬೀಯದಗಲದು ಚಕ್ರಮಿಥುನಮಿರುಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೯:
ಸಂಪಾದಿಸಿಕಾಡಾನೆಗಳ್ ಕೇಸರಿಗಳ ಮರಿಗಳ್ಗೆ ಮೊಲೆ | ಯೂಡುವುವು ಪುಲ್ಲೆಗಳ್ ಪೆರ್ಬುಲಿಗಳೊಳ್ ಸರಸ | ವಾಡುವುವು ಪಾವು ಮುಂಗುಲಿಗಳೊಡಗೂಡುವುವು ಮೂಷಕಂ ಮೇಲೆ ಬಿದ್ದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೦:
ಸಂಪಾದಿಸಿಪರಿಚರ್ಯೆಯಂ ಮಾಡುವುವು ಕೋಡಗಂಗಳಿ | ರ್ದರಗಿಳಿಗಳಾಡುವುವು ಕೂಡೆ ಸರಸೋಕ್ತಿಯಂ | ಬರಿಕೈಗಳಂ ನೀಡಿ ಪಣ್ಗಾಯಲರ್ಗಳಂ ದಂತಿಗಳ್ ಕುಡುತಿರ್ಪುವು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೧:
ಸಂಪಾದಿಸಿಅಷ್ಟ ಯೋಗಿನಿಯರಣಿಮಾದಿಗಳ್ ವಿನುತ ಚೌ | ಷಷ್ಟಿಕಲೆಗಳ್ ಸಪ್ತಮಾತೃಗಳ್ ಜಗದೊಳು | ತ್ಕೃಷ್ಟನದಿಗಳ್ ದಿವಾರಾತ್ರಿಗಳ್ ತಿಥಿತಾರಕಾಪ್ಸರೋವಿಸರಂಗಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೨:
ಸಂಪಾದಿಸಿಆ ವನದೆಒಳೆಸಗಿದಳ್ ಪಾವನಚರಿತ್ರನ ಕೃ | ಪಾವನಧಿಯಂ ವಿಶ್ವಭಾವನನ (ಸಂಭಾವನನ) ಭಕ್ತಸಂ | ಜೀವನನ ತ್ರಿಜಗಮಂ ಕಾವನ ಸುವಾಂಛಿತವನೀವನ ಹಿಮಾಂಶುಧರನ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೩:
ಸಂಪಾದಿಸಿನಿಜನಿರ್ಮಲಿತರೂಪನಂ ಪೂರ್ವಪೂರ್ವನಂ | ಗಜ ದಾನವ ಧ್ವಂಸಿಯಂ ಕಾಲಕಾಲನಂ | ರಜನೀಶ ಕೋಟೀರನಂ ಭಕ್ತಭಕ್ತನಂ ಬಹಳ ತೇಜೋಮಯನನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೪:
ಸಂಪಾದಿಸಿಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ | ಬಗೆಬಗೆಯ ಬಿರಿಮುಗಳ ಮಂಜರಿಯ ಗುಗ್ಳುಳದ | ಪೊಗೆಯ ಧೂಪದ ಬಹಳವರ್ತಿಗಳ ಕರ್ಪೂರ ನೀರಾಜನದ ಕಂಪಿನ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೫:
ಸಂಪಾದಿಸಿಮೋಕ್ಷದಾಯಕಿ ಸಕಲಮಂತ್ರನಾಯಕಿ ಮಾಯೆ | ಸಾಕ್ಷಾಜ್ಜಗನ್ಮಾತೆ ನಿಜಶಕ್ತಿ ತಾನೆಂಬ | ದಾಕ್ಷಾಯಣಿಗೆ ತಪಮಿದೇಕೆಂದು ಪಂಕಜಭವಾದಿ ನಿರ್ಜರಮುಖ್ಯರು | |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೬:
ಸಂಪಾದಿಸಿಹೈಮವತಿಯಂ ಕಾಣುತಭಿವಂದಿಸದೆ ಖಳಂ | ಕೈಮಾಡುವಂಗಜನ ಪೂಗೋಲ ಗಾಯದಿಂ | ಮೈಮರೆದು ಕಾತರಿಸಿ ಮುಂದುಗೆಟ್ಟೆದೆಯಾರಿ ಬೇಟದ ಕಟಕಿಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೭:
ಸಂಪಾದಿಸಿಬೆಂದುಪೋದಂ ದಾನವಂ ಬಳಿಕ ದೇವಿ ಖತಿ | ಯಿಂದ ನುಡಿದಳ್ ಶಾಪರೂಪದಿಂದೀ ವನ | ಕ್ಕಿಂದು ಮೊದಲಾಗಿ ಪುರುಷಪ್ರಾಣಿಗಳ್ ಪೊಕ್ಕೊಡಾಗಲೇ ಸ್ತ್ರೀತ್ವಮವಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೮:
ಸಂಪಾದಿಸಿತನ್ನನರ್ಚಿಸಿದರ್ಗಭೀಷ್ಟಮಂ ಕುಡುವ ಸಂ | ಪನ್ನೆ ವರಗೌರಿ ತಪದಿಂದೊಲಿಸಲೀಶಂ ಪ್ರ | ಸನ್ನನಾದಂ ಕೆಲವುಕಾಲದಿಂ ಮೇಲೆ ಬಿಜಯಂಗೈದಳುತ್ಸವದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೯:
ಸಂಪಾದಿಸಿರಾಜೇಂದ್ರ ಕೇಳಾಗಳಾ ವನಕೆ ಪೊಕ್ಕಲ್ಲಿ | ರಾಜಿಸುವ ತಇಳಿಗೊಳದ ನೀರ್ಗುಡಿದು ಫಲುಗುಣ | ವಾಜಿ ಪೊರಮಟ್ಟು ಬಂದಾಗಳದು ಪೆಣ್ಗುದುರೆಯಾಗಿರ್ದುದೇವೇಳ್ವೆನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೦:
ಸಂಪಾದಿಸಿಎಣಿಕೆಗೊಳುತಿರ್ದನಾ ಪಾರ್ಥನಂದಿತ್ತ ಹಿಂ | ದಣ ಕೃತಯುಗದ ಮೊದಲ ಕಾಲದೊಳ್ ಸಕಲ ಧಾ | ರಿಣಿಯ ತೀರ್ಥಂಗಳಂ ಬಳಸಿ ಬರುತಕೃತವ್ರಣಾಖ್ಯ ಭೂಸುರನೋರ್ವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೧:
ಸಂಪಾದಿಸಿತನ್ನ ಕಾಲ್ವಿಡಿದು ನಡುನೀರ್ಗೆಳೆವಜಂತುವಿದು | ಪನ್ನಗನೋ ಮೇಣಸುರಮಾಯೆಯೋ ಜಲದೊಳು | ತ್ಪನ್ನಮತ್ಸ್ಯವೊ ಮಹಾಗ್ರಾಹಮೋ ಶಿವಶಿವಾ ದುಷ್ಟಭಾವಿತಮಾಯ್ತಲಾ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೨:
ಸಂಪಾದಿಸಿಮಡುವಿನೊಳು ಮಡವಿಡಿದ ನೆಗಳಂ ಬಲಾತ್ಕರಿಸಿ | ಬಿಡಿಸಿಕೊಂಡೊಡಮುರಿದು ತಡಿಗಡರಿ ಕೋಪದಿಂ | ನುಡಿದನುದಕಸ್ಥಮಾಗಿರ್ದ ದೇವತೆಗಳ್ಗೆ ದುಷ್ಟಭಾವದ ಜಲಮಿದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೩:
ಸಂಪಾದಿಸಿಎಂದಾದುದಾ ಕೃತವ್ರಣನ ಶಾಪಮಾ ಸರಿಸಿ | ಗಂದುಮೊದಲಾಗಿ ಭೀಕರಮೆನಿಸುತಿರ್ಪುದಿಳೆ | ಗೊಂದು ಜೀವಿಗಳುಮುದುಕಮನೋಲ್ಲವದರೊಳುಗ್ರ ವ್ಯಾಘ್ರಮಪ್ಪ ಭಯಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೪:
ಸಂಪಾದಿಸಿನೃಪನ ಹಯಮೇಧವಿನ್ನೆಂತಹುದೊ ಮೂಜಗದೊ | ಳಪಹಾಸಕೆಡೆಯಾದುದಾರ ಶಾಪದ ಫಲವೊ | ವಿಪರೀತಮಿದು ಶಿವಶಿವಾಯೆನುತ ನಡುನಡುಗಿ ಪಾರ್ಥನತಿಭೀತಿಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೫:
ಸಂಪಾದಿಸಿಭಯನಿವಾರಣ ಸಕಲಸೃಷ್ಟಿಕಾರಣ ಜಗ | ನ್ಮಯ ಜನಾರ್ದನ ದುಷ್ಟದೈತ್ಯಮರ್ದನ ನತಾ | ಶ್ರಯ ಧರಾಧರ ಕಮಲಸಂಭವೋದರ ಘನಶ್ಯಾಮ ಯದುಕುಲಲಲಾಮ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೬:
ಸಂಪಾದಿಸಿಪುಷ್ಕರ ಗದಾ ಶಂಖ ಚಕ್ರ ಶೋಭಿತ ಕರಚ | ತುಷ್ಕದಿಂ ಶ್ರೀವತ್ಸ ಕೌಸ್ತುಭಾಭರಣದಿಂ | ನಿಷ್ಕಳಂಕೇಂದುಮಂಡಲ ಸದೃಶ ವದನದಿಂದ ನವಪೀತವಾಸದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೭:
ಸಂಪಾದಿಸಿನಿನ್ನೊಂದು ಪೆಸರ ಪೋಲ್ವೆಯೊಳಂದಜಾಮಿಳಂ | ತನ್ನ ಪಾತಕಕೋಟಿಯಂ ಪರಿಹರಿಸಿಕೊಂಡ | ನಿನ್ನು ನೀನೆಂದು ನಂಬಿರ್ದ ನಿಜಶರಣರ್ಗೆ ಭಯಮುಂಟೆಮೂಜಗದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೮:
ಸಂಪಾದಿಸಿಅದ್ಭುತವ್ಯಾಘ್ರಮಾದಶ್ವಮಂ ಕಾಣುತೆ ಮ | ಹದ್ಭಯದೊಳಸುರಾರಿಯಂ ಪಾರ್ಥನಿಂತೆಂದು | ಸದ್ಭಾವದಿಂ ಪ್ರಾರ್ಥಿಪನ್ನಗಂ ದೈವವಶದಿಂ ತನ್ನ ತಾನೆ ಬಳಿಕ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೯:
ಸಂಪಾದಿಸಿಆಟವಿಕನೊಂದೊಂದು ಬಹುರೂಪಮಂ ತಾಳ್ದು | ನಾಟಕವನಾಡಿ ಮುನ್ನಿನ ತನ್ನ ರೂಪದಿಂ | ನೋಟಕರ ಕಣ್ಗೆ ಕಾಣಿಸುವಂತೆ ಪೆಣ್ಗುದುರೆಯಾಗಿ ಪುಲಿಯಾಗಿ ಮತ್ತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೦:
ಸಂಪಾದಿಸಿಸೇವ್ಯಮಾಗಿರ್ದುದೆಂದಿನವೋಲ್ ತುರಂಗಂ ಮ | ಹಾ ವ್ಯಾಘ್ರರೂಪಡಗಿತಸುರಾರಿ ಭಕ್ತ ರ | ಕ್ಷಾ ವ್ಯಸನಿಯೆಂಬುದಂ ಕಾಣಿಸಿದನಡಿಗಡಿಗೆ ಕಟಕದ ಸಮಸ್ತ ಜನರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೧:
ಸಂಪಾದಿಸಿಬಳಿಕ ಪಾರಿಪ್ಲವ ಧರಿತ್ರಿಯಿಂದಾ ಹಯಂ | ತಳರ್ದುದತಿವೇಗದಿಂ ಬಹಳ ದೇಶಂಗಳಂ | ಕೆಳೆಕಳೆದು ಬರಿಯ ವನಿತಾಮಯದ ರಾಜ್ಯದೊಳಸೀಮೆಗುತ್ಸಾಹದಿಂದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೨:
ಸಂಪಾದಿಸಿರಾಯ ಕೇಳಾರಾಜ್ಯದೊಳ್ ಬರಿಯ ನಾರಿಯರ್ | ಪ್ರಾಯತೆಯರಾಗಿ ಮಧುಪಾನಮತ್ತೆಯರಾಗಿ | ಕಾಯಜ ಕಲಾಕೋವಿದೆಯರಾಗಿ ರೂಫ ಲಾವಣ್ಯ ವಿಲಸಿತೆಯರಾಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೩:
ಸಂಪಾದಿಸಿಅಲ್ಲಿಗೈದಿದ ಪುರುಷರೋರ್ವರುಂ ಜೀವಿಸುವು | ದಿಲ್ಲ ಬಂದಾತನಂ ಕಂಡು ಲಲಿತಾಂಗಿಯರ್ || ಚೆಲ್ಲೆಗಂಗಳ ನೋಟಮಂ ಬೀರಿ ಸವಿವೇಟಮಂ ತೋರಿ ಮಿಗೆ ಸೊಗಸುವ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೪:
ಸಂಪಾದಿಸಿಸಮರತಿಯೊಳೊಮ್ಮೆ ಬೆರಸಿದ ಬಳಿಕ ವಿಷಯದಾ | ಭ್ರಮೆಯಿಂದೆ ಮಗ್ನರಾಗಿಹರಾ ಪುರುಷರಲ್ಲಿ | ರಮಿಸುವರವರ ಕೂಡೆ ನಾನಾಪ್ರಕಾರದಿಂದಾ ಪಂಕರುಹಮುಖಿಯರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೫:
ಸಂಪಾದಿಸಿವಿಧವಿಧದೊಳೆಸೆವ ಕುಸುಮೋತ್ಕರದ ಪರಿಮಳದ | ಮಧುರಾಸವಕೆ ತಮ್ಮ ಮುಖವಾಸದೊಳ್ಗಂಪಿ | ನಧರದಿನಿದಂ ಬೆರಸುವಂತೆ ಮೊಗಮಿಟ್ಟು ಪೊಂಬಟ್ಟಲೊಳ್ ಸವಿದು ಮಿಕ್ಕ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೬:
ಸಂಪಾದಿಸಿಪೊಂಬಟ್ಟಲೋಳ್ ತೀವಿದಾಸವದ ರುಚಿಗಿರ್ವ | ರುಂ ಬಿಡದೆ ಮೊಗಮಿಟ್ಟಿರಲ್ಕದರೊಳೆಸೆವ ಪಡಿ | ಬಿಂಬದಾನನದ ಭಾವಂಗಳಂ ಕಾಣುತನ್ಯೋನ್ಯಸಂಪ್ರೀತಿಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೭:
ಸಂಪಾದಿಸಿಕವಿಸುವರ್ ಮೋಹನವನೆಸೆವ ರತಿಕೇಳಿಯೋಳ್ | ಸವಿಸುವರ್ ಚೆಂದುಟಿಯ ತನಿರಸವನಾಸರಂ | ತವಿಸುವರ್ ಬಲ್ಮೊಲೆಯೊಳೊತ್ತಿ ಬಿಗಿಯಪ್ಪಿ ದನಿಗೈವ ಪಾರಿವದಂತಿರೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೮:
ಸಂಪಾದಿಸಿಮರಣಮಹುದೆಂದರಿದು ನಡುವೆ ಮುರಿದೊಲ್ಲದನ | ಚರಣಕೆರಗುವರೊಡಂಬಡಿಸುವರ್ ದೈನ್ಯದಿಂ | ಕರುಣ ಭಾವಂಗಳಂ ತೋರುವರ್ ಮೀರಿದೊಡೆ ಚೀರುವರ್ ಘಾತಿಸುವರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೯:
ಸಂಪಾದಿಸಿಅಚ್ಚಸಂಪಗೆಯಲರ್ಗೆರಗಿದಾರಡಿಯಂತೆ | ಮೆಚ್ಚಿ ಮಡಿವಂ ಮಾಸಮಾತ್ರ ಮಾಗಲ್ಕವಂ | ಕಿಚ್ಚಿನೊಳ್ ಪುಗುವಳವಳಲ್ಲದೊಡೆ ಗರ್ಭಮಂ ಧರಿಸಿ ಪೆಣ್ಣಂ ಪಡೆವಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೦:
ಸಂಪಾದಿಸಿವಿಷಕನ್ನಿಕೆಯರಿವರ್ ಕಂಡಮಾತ್ರದೊಳಾಕ | ರುಷಣಮಂ ಮಾಡುವರ್ ಬೆರಸಿದೊಡೆ ಪುರುಷನಾ | ಯುಷವನಪಹರಿಪರಿದು ನಿಶ್ಚಯಂ ನೀವಿಲ್ಲಿ ಮರೆದಾದೊಡಂ ಮನದೊಳು || |
[ಆವರಣದಲ್ಲಿ ಅರ್ಥ];=
|
ಹೋಗಿ
ಸಂಪಾದಿಸಿನೋಡಿ
ಸಂಪಾದಿಸಿಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.