ಹದಿನೆಂಟನೆಯ ಸಂಧಿ
ಸಂಪಾದಿಸಿಪದ್ಯ :-:ಸೂಚನೆ:
ಸಂಪಾದಿಸಿಸೂಚನೆ: ಸಾಮ್ರಾಜ್ಯಮಂ ತಾಳ್ದೆಸವ ರಾಘವೇಂದ್ರನಿಂ | ದಾಮ್ರಪ್ರವಾಳದಂತಿರೆ ವಿರಾಜಿಸುತಿರ್ಪ | ತಾಮ್ರಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ದಳು|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೧:
ಸಂಪಾದಿಸಿಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ | ಜಾಪತಿಯ ಕುಶಲವರ ಸಂಗರದ ಕೌತುಕವ | ನಾಪನಿತನೊರೆವೆನಿಕ್ಷ್ವಾಕು ಮೊದಲಾದ ರವಿಕುಲದ ನೃಪರೇಳ್ಗೆಗಳನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨:
ಸಂಪಾದಿಸಿತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್ | ಬಳೆದು ಲಕ್ಷ್ಮಣ ಭರತ ಶತ್ರುಘ್ನರೊಡಗೂಡಿ | ತಳೆದು ಕೌಶಿಕನ ಮಖಮಂ ಕಾದುತಾಟಕಿಯನೊರಸಿ ಮುನಿಸತಿಯಘವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩:
ಸಂಪಾದಿಸಿವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ | ಮೂರ್ಧಾಭೀಷೇಚನಂ ಮಾಡಲನುಗೈಯೆ ನೃಪ | ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪:
ಸಂಪಾದಿಸಿದಂಡಕಾರಣ್ಯದೊಳಿರಲ್ಕೆ ಶೂರ್ಪಣಖೆ ಬಂ | ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ | ಖಂಡಿಸಿ ಕನಕಮೃಗ ವ್ಯಾಜ್ಯದಿಂದೈದೆ ಲಕ್ಷ್ಮಣನಗಲೆ ಕಪಟದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫:
ಸಂಪಾದಿಸಿಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ | ರಥಮಂ ಸಲಿಸಿ ಕರುಣದಿಂದಾಂಜನೇಯನಂ | ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬:
ಸಂಪಾದಿಸಿಧೀಂಕಿಟ್ಟು ಶರಧಿಯಂ ದಾಂಟಿ ಮೇದಿನಿಯ ಸುತೆ | ಗಂಕಿತದ ಮುದ್ರಿಕೆಯನಿತ್ತು ಬೀಳ್ಕೊಂಡು ನಿ | ಶ್ಯಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದಕ್ಷನಂ ಮರ್ದಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೭:
ಸಂಪಾದಿಸಿಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂ | ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ | ಪಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೮:
ಸಂಪಾದಿಸಿರಾವಣನ ಪದಮಂ ವಿಭೀಷಣಂಗೊಲಿದಿತ್ತು | ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ | ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೯:
ಸಂಪಾದಿಸಿವರಪುಷ್ಪಕವನಿಳಿದು ಭರತಶತ್ರುಘ್ನರಂ | ಕರುಣದಿಂ ತೆಗೆದಪ್ಪಿ ಕೌಶಿಕವಸಿಷ್ಠಾದಿ | ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೦:
ಸಂಪಾದಿಸಿಕಯ್ದಳದೊಳೊಯ್ಯನೊಯ್ಯನೆ ಘನಸ್ನೇಹದಿಂ | ಮೆಯ್ದಡವಿ ತನಯನಂ ತಕ್ಕೈಸಿ ಮುಂಡಾಡಿ | ಕಯ್ದುಗಳ ಗಾಯಮಂ ಕಂಡು ಕರಗುತೆ ಮಗನೆ ನಿನ್ನ ಕೋಮಲತನುವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೧:
ಸಂಪಾದಿಸಿಮೇಲೆ ತಾಳ್ದಂ ಶುಭಮುಹೂರ್ತದೊಳ್ ವಾರಿನಿಧಿ | ಮೇರೆಯಾದವನಿಯಂ ಪಟ್ಟಾಭಿಷೇಚನದ | ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೨:
ಸಂಪಾದಿಸಿಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ | ರೂಪಮಯವಾಯ್ತು ಮನೆಯೆಲ್ಲಮುಂ ಶುಕಪಿಕಾ | ಲಾಪಮಯವಾಯ್ತು ವನಮೆಲ್ಲಮುಂ ವರ್ಧಿಪ ಪ್ರಜೆಗಳಿಂ ಸಂಚರಿಸುವ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೩:
ಸಂಪಾದಿಸಿಪಣ್ಗಾಯಿ ಪೂ ತಳಿರ್ ಬೀತ ತರುಲತೆಯಿಲ್ಲ | ತಣ್ಗೊಳಂ ಕರೆಕಾಲ್ಬೆಳೆಗಿಲ್ಲದಿಳೆಯಿಲ್ಲ | ಪೆಣ್ಗಂಡುಗಳೊಳೊರ್ವರುಂ ನಿಜಾಚಾರ ವಿರಹಿತರಾಗಿ ನಡೆವರಿಲ್ಲ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೪:
ಸಂಪಾದಿಸಿಕಾಳಿಂದಿ ಸುರನದಿಗೆ ಕೃಷ್ಣನಮೃತಾಬ್ಧಿಗಳ | ಕಾಳಿ ವಾಣಿಗೆ ಕಳಂಕಿಂದುಮಂಡಲಕೆ ವರ | ಕಾಳಿ ಕಾಪಾಲಿಗೆ ಮದಂ ದೇವಗಜಕೆ ನಂಜಹಿಪತಿಗೆ ತೊಡವಾಗಿರೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೫:
ಸಂಪಾದಿಸಿಸರ್ವಸಂಪತ್ಸಮೃದ್ಧಿಗಳಿಂ ಸ್ವಧರ್ಮದಿಂ | ನಿರ್ವಿಘ್ನಮಾಗಿ ಸಕಲಪ್ರಕೃತಿ ಜಾತಿ ಚಾ | ತುರ್ವಣ್ರ್ಯಮಂ ಬಿಡದೆ ಪೊರೆವಲ್ಲಿ ನೀತಿಶಾಸ್ತ್ರಂಗಳ್ಗೆ ಪಳಿವೊರಿಸದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧6:
ಸಂಪಾದಿಸಿಕಾಂತೆ ಕೇಳಿಕ್ಷ್ವಾಕುವಂಶಮೆನ್ನಲ್ಲಿ ಬಂ | ದಾಂತುದಿಲ್ಲಿಂದೆ ಸಂತತಿ ನಡೆಯದಿರ್ದೊಡೆ ಕು | ಲಾಂತಕಂ ತಾನಾದಪೆಂ ಸಾಕದಂತಿರಲಿ ಮನುಜರ್ಗೆ ಸಂಸಾರದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೭:
ಸಂಪಾದಿಸಿಸಂತಾನಮಂದಾರದೊಳ್ ಪಡೆದತುಳವಿಭವ | ಮಂ ತಳೆದು ನಂದನೋತ್ಸವದಮೃತಪಾನದ | ತ್ಯಂತಸೌಖ್ಯವನೈದಿ ದೇವೇಂದ್ರನಂತೆ ಸುಮ್ಮಾನಮಾಗಿರದೆ ಬರಿದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೮:
ಸಂಪಾದಿಸಿನೀರಿರ್ದ ಕಾಸಾರಕರವಿಂದಮಿಲ್ಲದೊಡೆ | ತಾರಕೆಗಳಿರ್ದ ಗಗನಕೆ ಚಂದ್ರನಿಲ್ಲದೊಡೆ | ಚಾರುಯೌವನಮಿರ್ದ ಪೆಣ್ಗೆನಿಯನಿಲ್ಲದೊಡೆ ಸನ್ನುತಪ್ರಜೆಗಳಿರ್ದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೯:
ಸಂಪಾದಿಸಿಕಾಂತ ನೀಂ ಪೇಳ್ದೊಡೇಂ ಪುತ್ರವತಿಯಹುದು ಜ | ನ್ಮಾಂತರದ ಪುಣ್ಯಮೈಸಲೆ ಪೆಣ್ಗೆ ಮುನ್ನತಾಂ | ನೋಂತುದಲ್ಲದೆ ಬಂದಪುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೦:
ಸಂಪಾದಿಸಿಕಂದನಾಡುವ ಬಾಲಲೀಲೆಯಂ ನೋಡಿ ತೊದ | ಲೊಂದಿದಿನಿವಾತನುರೆ ಕೇಳ್ದು ಮುದ್ದಿನ ಮುದ್ದೆ | ಯಂದದಂಗವನೆತ್ತಿಕೊಂಡು ನಳಿತೋಳ್ಗಳಿಂದಪ್ಪಿ ಕೆಂಗುರುಳ್ಗಳೊಲೆವ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೧:
ಸಂಪಾದಿಸಿತೇಲ್ದೋಸರಿಸಿ ಮೇಲುದಂ ಸೆಳೆವ ಕಮಲಮಂ | ಪೋಲ್ದ ಕಣ್ಗೊನೆಯಿಂದೆ ತಾಯ ಮೊಗಮಂ ನೋಳ್ಪ | ಕಾಲ್ದುದಿಗಳಂ ಬಿದಿರಿ ತಡವರಿಸಿ ಕೈಯ್ಯಿಡುವ ಬಾಲಂಗೆ ಮೋಹದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೨:
ಸಂಪಾದಿಸಿಇಂತು ಸುತರಿಲ್ಲದಾಸರೊಳವರ್ಗಳಿರ್ವರುಂ | ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು | ಸಂತಾನದಭ್ಯುದಯಮಾದಪುದು ಮುಂದೆ ನಿಮಗೆಂದು ಸಂಪ್ರೀತಿಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೩:
ಸಂಪಾದಿಸಿಅರಸಂಚೆ ಸರಸಿಯಂ ಕಲಪಿಕಂ ತಳಿತ ಮಾ | ಮರನಂ ಚಕೋರತತಿ ಚಂದ್ರಿಕೆಯನಳಿಕುಲಂ | ಬಿರಿಮುಗಳನರಗಿಳಿ ಬನಂಗಳಂ ವಿರಹಿಗಳ್ ಕೂರ್ಪರಂ ಸಾರ್ದೆಸೆಯಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೪:
ಸಂಪಾದಿಸಿಮಲ್ಲಿಕಾಸ್ಮಿತರುಚಿರೆ ಕುಂದಕಟ್ಮಲರದನೆ | ಪಲ್ಲವಾಧರೆ ಭೃಂಗಕುಂತಳೆ ಕುಸುಮಗಂಧಿ | ಸಲ್ಲಲಿತಕೋಕಿಲಾಲಾಪೆ ಚಂಪವರ್ಣೆ ಮೃದುಮಧುರ ಕೀರವಾಣಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೫:
ಸಂಪಾದಿಸಿಮೊಡವಿ ಮೂಡಿದ ಮೊಗಂ ಸೊಗಡುಗಂಪೊಗೆದ ಮೈ | ತೊಡವುಗಳ ತೊಡಕಿಲ್ಲದವಯವಂ ಪೂಗಳಂ | ಮುಡಿಯದ ಬಳಲ್ದುರುಬು ನಿಚ್ಚಳದ ಕಣ್ಮಲರ್ ತೊಳಪ ಪಣ ಮಿರುಪ ಕದಪು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೬:
ಸಂಪಾದಿಸಿಸಮುಚಿತ ಸ್ತ್ರೀಧರ್ಮದಿಂದೆ ನಾಲ್ಕನೆಯದಿನ | ದಮಲ ಮಜ್ಜನದಲುಕಾರದೊಳೆಸೆದಳಂದು | ನಿಮಿಷದೊಳ್ ತ್ರಿಜಗಮಂ ಗೆಲ್ಪೆನೆಂದಂಗಜಂ ಮಸೆದಡಾಯುಧವೊ ಮೇಣು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೭:
ಸಂಪಾದಿಸಿಸ್ಫುರದುತ್ಕಟಾಕ್ಷ ಚಂಚಲದಿಂದೆ ಚಾರು ಪೀ | ವರಪಯೋಧರದಿಂದೆ ಪರಿವೃತ ಸುಮೇಖಲಾ | ತರಳ ಸತ್ಕಲ ಕಿಂಕಿಣೀ ಘನಸ್ವರದಿಂದೆಸೆವ ಕಂಕಣಂಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೮:
ಸಂಪಾದಿಸಿಮಂದಗಮನೆಯ ಮಂದಹಾಸದ ವಿಲಾಸಮಂ | ಕುಂದರದನೆಯ ಕುಂದದವಯವದ ಸೌಂದರ್ಯ | ದಂದಮಂ ವಕ್ರಕುಂತಳೆಯ ವಕ್ರಾವಲೋಕನದ ಭಾವದ ಬಗೆಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೯:
ಸಂಪಾದಿಸಿನೊಸಲೊಳಾ ರಾಜಿಸುವ ತಿಲಕದಿಂದಲಕದಿಂ | ಮಿಸುಪ ಮೈ ನಸುದೋರ್ಪ ವಸನದಿಂ ದಶನದಿಂ | ಪಸರಿಪೆಳನಗೆಯ ತೆಳ್ಗದಪಿನಿಂ ಪದಪಿನಿಂದಮರ್ದ ಪೊಂದುಡುಗೆಯಿಂದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೦:
ಸಂಪಾದಿಸಿಪಜ್ಜಳಿಪ ರತ್ನ ಪ್ರದೀಪಂಗಳಿಂದೆ ಪೊಸ | ಬಜ್ಜರದ ಮಣಿಮಂಚದಿಂದಂಚೆದುಪ್ಪುಳಿನ | ಸಜ್ಜುಕದಲರ್ಗಳಿಂದೆಸೆವ ಮೇಳ್ವಾಸಿನಿಂ ರಾಜೋಪಭೋಗ್ಯಮಾದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೧:
ಸಂಪಾದಿಸಿಸಾಗರದ ನಡುವೆ ಫಣಿತಲ್ಪದೊಳ್ ಸಿರಿಯೊಡನೆ | ಭೋಗಿಸುವ ತೆರದಿಂ ಮಿಥಿಳೇಂದ್ರಸುತೆಯ ಸಂ | ಭೋಗದಿಂ ರಘುಕುಲ ಲಲಾಮನೆಸೆದಂ ಮನುಜಲೀಲೆಗಿದು ಸಾರ್ಥಮೆನಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೨:
ಸಂಪಾದಿಸಿಬೆಂಗೊಡದೆ ಮೋಸವೋಗದೆ ತವಕಮುಡುಗಿ ಪೆರ | ಪಿಂಗದೆ ವಿಘಾತಿಗಳುಕದೆ ಕೈಮರೆಯದೆ ಚದು | ರಿಂಗದೆ ನೆಗಳ್ದ ಪುಳಕಂ ಬಿಡದೆ ತಳ್ತಳ್ಕರಡಗದಲಸಿಕೆದೋರದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೩:
ಸಂಪಾದಿಸಿಇಂತೆಸೆವ ಸಮರತಿಯ ಸೊಬಗಿನಿಂದಮವರೀರ್ವ | ರುಂ ತೊಳಗುತಿರೆ ಬಳಿಕ ವರವಿಷ್ಣು ನಕ್ಷತ್ರ | ದಂತದೊಳ್ ವೈದೇಹಿಗಾಯ್ತು ಗರ್ಭಾದಾನ ಮದರ ಫಲಮಂ ನೋಡಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೪:
ಸಂಪಾದಿಸಿಸಣ್ಣನಡು ಬಳೆಯೆ ತಿವಳಿಗಳಡಗೆ ತೆಳ್ಯಾಸೆ | ನುಣ್ಣಗೆ ಪೊಗರ್ವಡೆಯೆ ಚೂಚಕದ ಕಪ್ಪುಣ್ಮೆ | ತಿಣ್ನಮೊಲೆ ಬಿಣ್ಪಡರೆ ಕಾಲ್ಮಂದಗತಿಗಲಸೆ ನಗೆಮೊಗಂ ಬೆಳ್ಪುದೋರೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೫:
ಸಂಪಾದಿಸಿಬೆಳ್ದಾವರೆಯೊಳೆರಗಿದಳಿಕುಲಂ ಗಗನಾಗ್ರ | ದೊಳ್ದಿನದಿನಕೆ ಬೆಳೆವ ಚಂದ್ರಕಲೆ ಕನಕಾದ್ರಿ | ಯೊಳ್ದಿಟ್ಟಿಗೊಳಿಸುವಸಿತಾಂಬುಜಂ ರಾರಾಜಿಸುವ ತೆರದೊಳಾ ಕಾಂತೆಯ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೬:
ಸಂಪಾದಿಸಿಚಂದ್ರಮುಖಿಯಾದ ವೈದೇಹಿಯ ಜಠರಮೆಂಬ | ಚಂದ್ರಕಾಂತದ ಮಣಿಯ ಮಧ್ಯದೊಳ್ ತವೆ ರಾಮ | ಚಂದ್ರನೆಂಬಖಿಳ ಲೋಕಾನಂದಕರಮಾದ ಸಂಪೂರ್ಣ ಕಲೆಗಳುಳ್ಳ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೭:
ಸಂಪಾದಿಸಿಕಾಂಚನಲತಾ ಕೋಮಲಾಂಗಿ ಗರ್ಭಿಣಿಯಾದ | ಲಾಂಛನವನಿನಕುಲಾಧೀಶ್ವರಂ ಕಂಡು ರೋ | ಮಾಂಚನದ ಹರ್ಷದಿಂ ನಾಲ್ಕನೆಯ ತಿಂಗಳೊಳ್ ವಿಭವದಿಂ ಭೂಸುರರ್ಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೯:
ಸಂಪಾದಿಸಿಉತ್ಸವಕೆ ಬಂದನಿಬರೆಲ್ಲರಂ ಶರಣಜನ | ವತ್ಸಲಂ ಸತ್ಕರಿಸಿ ಬೀಳ್ಕೊಟ್ಟು ರಾಜಸಂ | ಪತ್ಸುಖದೊಳಿರ್ವನಿತರೊಳ್ ಬಳಿಕ ಸೀತೆ ನಿಜಕಾಂತನೇಕಾಂತಕೈದಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೦:
ಸಂಪಾದಿಸಿಆ ಕ್ಷಿತಿಜೆ ಬಯಕೆಯಂ ಬಿನ್ನೈಸೆ ಕೇಳ್ದು ನಗು | ತಾಕ್ಷೇಪದಿಂದೆ ಕಳುಹುವನಾಗಿ ಸಂತೈಸಿ | ರಾಕ್ಷಸಾಂತಕ ನಿರಲ್ಕೊಂದಿರುಳ್ ಕನಸುಗಂಡೇಳುತೆ ವಸಿಷ್ಠನೊಡನೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೧:
ಸಂಪಾದಿಸಿಎನೆ ಕನಸಿದೊಳ್ಳಿತಲ್ಲೆಂದದಕೆ ಶಾಂತಿಯಂ | ಮುನಿವರ ವಸಿಷ್ಠಂ ನೆಗಳ್ಚಿದಂ ಬಳಿಕ ಮನ | ದನುತಾಪದಿಂ ಪ್ರಜೆಯ ನಾರೈವುದಂ ಮರೆದೆರಡು ಮೂರುದಿವಸಮಿರ್ದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೨:
ಸಂಪಾದಿಸಿನಿಂದಿಸರಲೇ ಪ್ರಜೆಗಳಿನ್ನೆಗಂ ತನ್ನ ಗುಣ | ಕೊಂದಿಸರಲೇ ಪಳಿವನಮಲತರ ಕೀರ್ತಿಯಂ | ಕಂದಿಸರಲೇ ದೂಸರಿಂದೆ ಭುಜವಿಜಯ ಪ್ರತಾಪ ತೇಜವನಿಳೆಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೩:
ಸಂಪಾದಿಸಿದೇವ ನಿನ್ನಂ ಪೆಸರಿಸಿದನೀಶನಾದಪಂ | ಸೇವಿಸಿದವಂ ಚತುರ್ಮುಖನಾಗಲುಳ್ಳವಂ | ಕಾವುದೆಂದೈದೆ ಮರೆಹೊಕ್ಕವಂ ಜಗದೊಳಾಚಂದ್ರಾರ್ಕಮಾಗಿ ಬಾಳ್ವಂ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೪:
ಸಂಪಾದಿಸಿಏನಾದೊಡಂ ಕಟಕಿಯಾಗಿರ್ಪುದೀಮಾತು | ಭಾನುವಂ ಕಾವಳಂ ಮುಸುಕಲೇನೆನಲೆನ್ನ | ಧೀನವಾದರಸುತನಕಾವುದೂಣೆಯವೆಂಬರೆಂದು ರಘುಪತಿ ಕೇಳಲು|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೫:
ಸಂಪಾದಿಸಿಏಳಂಜಬೇಡಿನ್ನು ಮಾಜದಿರ್ ತನ್ನಾಣೆ | ಹೇಳೆಂದು ರಘುಕುಲಲಲಾಮನೊತ್ತಾಯದಿಂ | ಕೇಳಲವನೆಂದನವಧರಿಸೊರ್ವ ಮಡಿವಾಳಿ (ಮಡಿವಳಂ) ಮಲಿನಮಂ ತೊಳೆವನಾಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೬:
ಸಂಪಾದಿಸಿಪೆಂಡತಿ ತವರ್ಮನೆಗೆ ಮುಳಿದು ಪೇಳದೆ ಪೋದ | ಚಂಡಿತನಕವಳ ತಾಯ್ತಂದೆಗಳ್ ಕಳುಹಬಂ | ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೭:
ಸಂಪಾದಿಸಿಎಂದು ಬಿನ್ನೈಸೆ ಕೇಳ್ದಾತನಂ ಕಳುಹಿ ರಘು | ನಂದನಂ ಬಂಧನಕ್ಕೊಳಗಾದ ಮತ್ತಗಜ | ದಂದದಿಂ ನಿಜಶಿರವನೊಲೆದು ಮೂಗಿನಮೇಲೆ ಬೆರಳಿಟ್ಟು ಮೌನದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೮:
ಸಂಪಾದಿಸಿಓಲಗಂಗುಡದೆ ಬಾಗಿಲ್ಗೆ ಬಂದಖಿಳ ಭೂ | ಪಾಲರಂ ಕರೆಸಿ ಕಾಣಿಸಿಕೊಳದೊಳಗೆ ಚಿಂ | ತಾಲತಾಂಗಿಯ ಕೇಳಿಗೆಡೆಗೊಟ್ಟು ರಾಜೇಂದ್ರನಿರೆ ಕೇಳ್ದು ಭೀತಿಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೯:
ಸಂಪಾದಿಸಿಎದ್ದು ಕುಳ್ಳಿರ್ದು ಕರುಣಾಳುಗಳ ಬಲ್ಲಹಂ | ಮುದ್ದುಗೈದನುಜರಂ ಕರೆದಿಳೆಯೊಳಿಂದೆನಗೆ | ಪೊದ್ದಿದಪವಾದಮಂ ನೀವರಿದುದಿಲ್ಲಕಟ ಸಾಕಿನ್ನು ನೆರವಿಗಳೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೦:
ಸಂಪಾದಿಸಿಇವಳಯೋನಿಜೆ ರೂಪ ಗುಣ ಶೀಲ ಸಂಪನ್ನೆ | ಭುವನಪಾವನೆ ಪುಣ್ಯಚರಿತೆ ಮಂಗಳ ಮಹೋ | ತ್ಸವೆ ಪತಿವ್ರತೆಯೆಂಬುದು ಬಲ್ಲೆನಾದೊಡಂ ನಿಂದೆಗೊಳಗಾದಬಳಿಕ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೧:
ಸಂಪಾದಿಸಿಕಲಿಯುಗದ ವಿಪ್ರರಾಚಾರವಂ ಬಿಡುವಂತೆ | ಹಲವುಮಾತೇನಿನ್ನು ಸೀತೆಯಂ ಬಿಟ್ಟೆನೆನೆ | ಬಲುಗರಮಿದೆತ್ತಣದೊ ಕಾರುಣ್ಯನಿಧಿಗೆನುತೆ ನಡನಡುಗಿ ಭೀತಿಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೨:
ಸಂಪಾದಿಸಿಭಯಶೋಕದಿಂದೆ ಗದ್ಗದಿತ ಕಂಠದೊಳಶ್ರು | ನಯನದೊಳ್ ತುಳಕೆ ಭರತಂಕರೆವ ಕಪಿಲೆಯಂ | ನಯವಿದರ್ ಪೊಡೆದಡವಿಗಟ್ಟುವರೆ ಪಾವಕನೊಳರಸಿಯಂ ಪುಗಿಸಿದಂದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೩:
ಸಂಪಾದಿಸಿಅದನೆಲ್ಲಮಂ ಮರೆದು ಹುಲುಮನುಜ ರಜಕನಾ | ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ | ಹದನಾವುದಕಟ ಗುರುಲಘುವಿನಂತರವನೆಣಿಸದೆ ಬರಿದೆ ಮೂಢರಂತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೪:
ಸಂಪಾದಿಸಿತಮ್ಮ ನೀನಾಡಿದಂತವನಿಸುತೆ ನಿರಜೆಯಹು | ದುಮ್ಮಳಿಸಬೇಡ ಸೈರಿಸಲಾರೆ ನೀದೂಸ | ರಂ ಮಹಿಯೊಳುಳಿದರೆಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೫:
ಸಂಪಾದಿಸಿಕಾಯಸುಖಕೋಸುಗಂ ಕೃತಧರ್ಮಮಂ ಬಿಡುವವೊ | ಲಾಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು | ವಾಯದಪವಾದಕಿಂತರಸಿಯಂ ತೊರೆಯಬೇಕೆಂಬರೇ ಕರುಣಮಿಲ್ಲದೆ (ನಿಷ್ಕರುಣದಿಂದೆ) || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೬:
ಸಂಪಾದಿಸಿಬಿಡುವೆರಂತಿಕ್ಷ್ವಾಕು ವಂಶದವರರಸಿಯಂ | ನುಡಿವರೆಂತಿಳೆಯೊಳಾರಾದೊಡಂ ದೂಸರಂ | ಪಡೆವರೆಂತಮಲ ಸತ್ಮೀರ್ತಿಯಂ ಬುದ್ಧಿ ವೇಳ್ವುದಕೊಡೆಯರಿಲ್ಲವಾಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೭:
ಸಂಪಾದಿಸಿಅರಸ ಕೇಳನುಜರಾಡಿದ ನುಡಿಗೆ ತಲೆವಾಗಿ | ತರಣಿಕುಲ ತಿಲಕನೊಯ್ಯನೆ ದೈನ್ಯಭಾವದಿಂ | ತರಹರಿಸಬಾರದಪವಾದ ಹೃಛ್ಛೂಲಮಂ ತನಗೆ ಜಾನಕಿಯನುಳಿದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೮:
ಸಂಪಾದಿಸಿತಮ್ಮ ಬಾ ನೀನಿಂದುವರೆಗೆ ನಾನೆಂದಮಾ | ತಮ್ಮೀರಿದವನಲ್ಲ ಕೆಲಬಲವನಾರಯ್ಯು | ತಮ್ಮರುಗದಿರು ತನ್ನ ಕೊರಳಿಗಿದೆ ಖಡ್ಗಮಲ್ಲದೊಡೀಗ ಜಾನಕಿಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೯:
ಸಂಪಾದಿಸಿಎನೆ ರಾಘವೇಂದ್ರ ನಿನ್ನಾಜ್ಞೆಯಂ ಮೀರಲ್ಕೆ | ತನಗೆ ರೌರವಮಪ್ಪುದೆಂದುದಂ ಮಾಡಲ್ಕೆ | ಜನನಿಯಂ ಕೊಂದುಗ್ರಗತಿಯಪ್ಪುದೇಗೈವೆನೆಂದು ಕಡುಶೋಕದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬೦:
ಸಂಪಾದಿಸಿಅಣ್ಣದೇವನೊಳಿಡಿದ ವಾತ್ಸಲ್ಯಮೆಂಬ ಬ | ಲ್ಗಣ್ಣಿಯೊಳ್ ಕಟ್ಟುವಡೆದಲ್ಲೆನಲರಿಯದೆ ನಿ | ರ್ವಿಣ್ಣಭಾವದೊಳಂದು ಲಕ್ಷ್ಮಣನಂ ತುರಗ ಸಾರಥಿಕೇತನಂಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬೧:
ಸಂಪಾದಿಸಿತಾಯಿ ನೀನೆತಕೆಳಿಸಿದೆ ನಿನ್ನನೀಗ ರಘು | ರಾಯಂ ತಪೋವನಕೆ ಕಳುಹಿ ಬರಹೇಳಿದಂ | ಪ್ರೀಯಮುಳ್ಳೊಡೆ ರಥಂ ಪಣ್ಣಿ ಬಂದಿದೆಕೊ ಬಿಜಯಂಗೈವುದೆಂದು ಮರುಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬೨:
ಸಂಪಾದಿಸಿಅಂಬುಜಾನನೆ ಬಳಿಕ ಪಯಣಮಂ ನಿಶ್ಚೈಸಿ | ನಂಬಿದರಭೀಷ್ಟಮಂ ಸಲಿಸುವ ಕೃಪಾಳು ತಾ | ನೆಂಬುದಂ ಕಾಣಿಸಿದನಿಂದೆನ್ನ ಕಾಂತನೆನಗೆಂದು ಕೌಸಲೆಗೆ ಪೇಳ್ದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬೩:
ಸಂಪಾದಿಸಿಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯ | ರ್ಗಗುರು ಚಂದನ ಕುಂಕುಮಾನುಲೇಪನಗಳಂ | ಬಗೆಬಗೆಯ ದಿವ್ಯಾಂಬರಗಳಂ ವಿವಿಧ ಮಣಿಭೂಷಣಸುವಸ್ತುಗಳನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬೩:
ಸಂಪಾದಿಸಿಅಗ್ರಜಂ ತರಿಸಂದು (ತರಿಸೆಂದು) ತನ್ನೊಳಾಡಿದ ಕಜ್ಜ | ದುಗ್ರಮಂ ಬನಕೆ ಪೋದಪೆನೆಂಬ ದೇವಿಯ ಸ | ಮಗ್ರಸಂತೋಷಮಂ ಕಂಡು ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು || |
[ಆವರಣದಲ್ಲಿ ಅರ್ಥ];=
|
ಹೋಗಿ
ಸಂಪಾದಿಸಿನೋಡಿ
ಸಂಪಾದಿಸಿಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.